ಮಂಗಳೂರಿನಲ್ಲಿ ಮುಖ್ಯ ನೀರು ಸರಬರಾಜು ಕೊಳವೆ ಹಾನಿ – ನಾಳೆ ನವೆಂಬರ್ 19ರವರೆಗೆ ನೀರು ವ್ಯತ್ಯಯ ಸಾಧ್ಯತೆ
ಮಂಗಳೂರು ಮಹಾನಗರ ಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ (80 MLD) ರೇಚಕ ಸ್ಥಾವರದಿಂದ ನಗರಕ್ಕೆ ನೀರು ಪೂರೈಸುವ 1,100 ಮಿ.ಮೀ. ವ್ಯಾಸದ ಪ್ರಮುಖ ಕೊಳವೆ ಹಾನಿಯಾಗಿದ್ದು ನಿನ್ನೆ ನವೆಂಬರ್ 17ರಂದು ಸೋಮವಾರ ಬೆಳಗಿನ ಜಾವ ಪಡೀಲ್ ಸಮೀಪದ ಕಣ್ಣೂರು ಪ್ರದೇಶದಲ್ಲಿ ಸಂಭವಿಸಿದೆ. ಘಟನೆ ಬಳಿಕ ಮಹಾನಗರ ಪಾಲಿಕೆ ತುರ್ತು ದುರಸ್ತಿ ಕಾರ್ಯಗಳನ್ನು ಆರಂಭಿಸಿದೆ. ದುರಸ್ತಿ ಕಾರ್ಯಗಳು ನಾಳೆ ನವಂಬರ್ 19ರಂದು ಬುಧವಾರ ಬೆಳಿಗ್ಗೆ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದ್ದು, ಸಂಜೆ ವೇಳೆಗೆ ನೀರು ಸರಬರಾಜು ಯಥಾಸ್ಥಿತಿಗೆ […]













