November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

Temporary Profession at Rosa Mystica Novitiate — 2025

The Temporary Profession of three newly vested novices Sr Renisha Menezes, Sr Chandrika and Sr Sofiya Rodrigues from Rosa Mystica Novitiate, Kinnikambla, was held on the 22nd of April 2025. at 10:00 a.m. The solemn occasion was marked with a Eucharistic Celebration, officiated by Rev. Fr Joseph Martis Parish Priest of Derebail Parish and concelebrated by Rev. […]

News

ಕಣಚೂರು ಸಂಸ್ಥೆಯಿಂದ ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಸಿಪಿಆರ್ ಮತ್ತು ಪ್ರಥಮ ಚಿಕಿತ್ಸೆ ತರಬೇತಿ 

ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಎಪ್ರಿಲ್ 22ರಂದು ಮಂಗಳವಾರ ಕಣಚೂರು ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸಸ್ ಸಂಸ್ಥೆಯಿಂದ ಸಿಪಿಆರ್ (ಕಾರ್ಡಿಯೊ ಪಲ್ಮನರಿ ರಿಸಸಿಟೇಶನ್) ಮತ್ತು ಪ್ರಥಮ ಚಿಕಿತ್ಸೆಯ ತರಬೇತಿಯನ್ನು ನೀಡಲಾಯಿತು. ಕೌಶಲ್ಯ ಸಬಲೀಕರಣದ  ಈ ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ| ಪಿ.ಎಲ್. ಧರ್ಮ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಜಯರಾಜ್ ಅಮೀನ್ ಉಪಸ್ಥಿತರಿದ್ದರು. ಕಣಚೂರು ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಡಾ| ರೋಹನ್ ಮೋನಿಸ್ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದು, ಮೆಡಿಸಿನ್ ವಿಭಾಗದ ಡಾ| ಶ್ರೀನಿವಾಸ್ ಮತ್ತು ಡಾ| […]

News

ಕರಿಂಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವದ ಗೊನೆ ಮುಹೂರ್ತ

ಬಂಟ್ವಾಳ ತಾಲೂಕು ನೆಟ್ಲಮುಡ್ನೂರು ಹಾಗೂ ಅನಂತಾಡಿ ಉಭಯ ಗ್ರಾಮಗಳಿಗೆ ಸಂಬಂದಪಟ್ಟ ಇತೀಹಾಸ ಪ್ರಸಿದ್ಧ ಕರಿಂಕ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದ ವರ್ಷಾವಧಿ ಜಾತ್ರೆಯು ಬ್ರಹ್ಮ ಶ್ರೀ ವೇ.ಮೂ. ನಿಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿವರ್ಯರ ನೇತೃತ್ವದಲ್ಲಿ ಮೇ 01ರಿಂದ ಗುರುವಾರ ರಾತ್ರಿ ಹಾಗೂ ಮೇ 02ನೇ ಶುಕ್ರವಾರದಂದು ವೈಭವದಿಂದ ನಡೆಯಲಿದ್ದು ಅದರ ಪೂರ್ವಭಾವಿಯಾಗಿ ನಡೆಯುವ ಗೊನೆ ಕಡಿಯುವ ಮೂಹೂರ್ತವನ್ನು ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ರಾಮಚಂದ್ರ ಭಟ್ ಇವರು ಇಂದು ಬೆಳಿಗ್ಗೆ 9.45ರ ಸುಮುಹೂರ್ತದಲ್ಲಿ ನಡೆಯಿತು. ಈ ಸಂದರ್ಭದಲ್ಲಿ […]

News

‘ಮುಖವಾಡಗಳಿಲ್ಲದೆ ಬಾಳಿದವರು ಕೆ.ಪಿ. ಪೂರ್ಣಚಂದ್ರ ತೇಜಸ್ವಿ’ – ದೇರ್ಲ

‘ಕೊರೊನೋತ್ತರ ಸಂದರ್ಭದಲ್ಲಿ ಜಗತ್ತು ಬದಲಾಗಿದೆ. ನಮ್ಮೊಳಗಿನ ಸಂಯಮ, ತಾಳ್ಮೆ, ಸಹನೆ ಎಲ್ಲವೂ ಕಳೆದುಹೋಗಿ ಕೇಳುವ, ಭಾವಿಸುವ ದಿನ ಮರೆಯಾಗುತ್ತಿರುವ ಕ್ಷಣದಲ್ಲಿ ನಮ್ಮ ಮನದೊಳಗೆ ತೇಜಸ್ವಿಯನ್ನು ಬಿತ್ತುವ ಕಾರ್ಯವಾಗಬೇಕಿದೆ’ ಎಂದು ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾದ ಡಾl ನರೇಂದ್ರ ರೈ ದೇರ್ಲ ಅವರು ಹೇಳಿದರು. ಅವರು ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಕನ್ನಡ ಸಂಘ ಮತ್ತು ಕನ್ನಡ ವಿಭಾಗಗಳ ಸಹಯೋಗದಲ್ಲಿ ನಡೆದ ‘ಪೂರ್ಣಚಂದ್ರ ತೇಜಸ್ವಿ ಮತ್ತು ವಿದ್ಯಾರ್ಥಿ ಓದುಗರು’ ಎಂಬ ವಿಷಯದ ಬಗ್ಗೆ ಅತಿಥಿ ಉಪನ್ಯಾಸವನ್ನು ನೀಡಿ ಮಾತನಾಡಿದರು. ವಿದ್ಯಾರ್ಥಿಗಳು […]

News

ನಾಪತ್ತೆಯಾಗಿದ್ದ ಪ್ರೇಮಿಗಳಿಬ್ಬರು ಸರ್ಕಾರಿ ITI ಅರಣ್ಯದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ನಾಪತ್ತೆಯಾಗಿದ್ದ ಪ್ರೇಮಿಗಳಿಬ್ಬರು ಹರಪನಹಳ್ಳಿ ಪಟ್ಟಣದ ಹೊರವಲಯದ ಅನಂತನಹಳ್ಳಿ ಸರ್ಕಾರಿ ITI ಎದುರಿಗಿರುವ ಅರಣ್ಯ್ದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಜಿಟ್ಟಿನಕಟ್ಟೆ ಗ್ರಾಮದ ಮದ್ದನಸ್ವಾಮಿ 18ವರ್ಷ ಪ್ರಾಯದ ಮದ್ದನಸ್ವಾಮಿ ಮತ್ತು ಬಂಡ್ರಿ ಗ್ರಾಮದ 18ವರ್ಷ ಪ್ರಾಯದ ದೀಪಿಕಾ ನೇಣಿಗೆ ಶರಣಾದ ಪ್ರೇಮಿಗಳು. ಒಂದೇ ಮರದ ಕೊಂಬೆಗೆ ಇಬ್ಬರೂ ನೇಣುಬಿಗಿದುಕೊಂಡಿದ್ದಾರೆ. ಮದ್ದನಸ್ವಾಮಿ ಹಾಗೂ ದೀಪಿಕಾ ಹರಪನಹಳ್ಳಿ ಸರ್ಕಾರಿ ಪಿಯು ಕಾಲೇಜ್ ನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದರು. ಇವರಿಬ್ಬರು ಪಿಯುಸಿ ಫಿಲಿತಾಂಶ ಬಂದ ದಿನದಿಂದ ನಾಪತ್ತೆಯಾಗಿದ್ದರು. ಇಬ್ಬರೂ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ […]

News

ಬಂಟ್ವಾಳ ತಾಲೂಕಿನ ಇತಿಹಾಸದಲ್ಲೇ ಮೊದಲ ಬಾರಿಗೆ ಎಪ್ರಿಲ್ 25 ರಿಂದ 27ರ ತನಕ ಅಂತರಾಷ್ಟ್ರೀಯ ಡಾಡ್ಜ್ ಬಾಲ್ ಪಂದ್ಯಾಟ

ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ವಿದ್ಯಾನಗರ ಪೆರಾಜೆ ಮಾಣಿ ಇಲ್ಲಿ ಆಯೋಜನೆ ಸರ್ವರನ್ನೂ ಸ್ವಾಗತಿಸಿದ ಬಾಲವಿಕಾಸ ಪರಿವಾರ – ಪತ್ರಿಕಾ ಗೋಷ್ಠಿ ರಾಷ್ಟ್ರಮಟ್ಟ ಮತ್ತು ಅಂತರಾಷ್ಟ್ರೀಯ ಮಟ್ಟದ ಡಾಡ್ಜ್‌ಬಾಲ್ ಚಾಂಪಿಯನ್‌ಶಿಪ್ 2025 ಹಾಗೂ ಮೂರನೇ ರಾಜ್ಯಮಟ್ಟದ ಕರ್ನಾಟಕ ಡಾಡ್ಜ್‌ಬಾಲ್ ಚಾಂಪಿಯನ್‌ಶಿಪ್ ಇದೇ ಎಪ್ರಿಲ್ 25ರಿಂದ 27ರ ತನಕ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ವಿದ್ಯಾನಗರ ಪೆರಾಜೆ ಮಾಣಿ ಇಲ್ಲಿಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಆಯೋಜಕರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಡಾಡ್ಜ್‌ಬಾಲ್ ಚಾಂಪಿಯನ್‌ಶಿಪ್ 2025 […]

News

ಸೂರಿಕುಮೇರು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ವಿಜೃಂಭಣೆಯ ಸ್ವಲಾತ್ ವಾರ್ಷಿಕ ಕಾರ್ಯಕ್ರಮ

ಅಹ್ಲ್ ಸುನ್ನತ್ ವಲ್ ಜಮಾ‌ಅತ್ ಮಾತ್ರ ಅಲ್ಲಾಹನ ಬಳಿ ಸ್ವೀಕರಿಸಲ್ಪಡುತ್ತದೆ. ನೂತನ ವಾದದೊಂದಿಗೆ ಸೇರಿ ಈಮಾನ್ ಕಳೆದುಕೊಳ್ಳಬೇಡಿ – ಉಲಮಾಗಳಿಂದ ಎಚ್ಚರಿಕೆಯ ಸಂದೇಶ ಮಾಣಿ ಇಲ್ಲಿನ ಬದ್ರಿಯಾ ಜುಮ್ಮಾ ಮಸೀದಿ ಸೂರಿಕುಮೇರು ಇದರ ಸ್ವಲಾತ್ ವಾರ್ಷಿಕ ಮತ್ತು ಮತ ಪ್ರಭಾಷಣ ಕಾರ್ಯಕ್ರಮವು ಎಪ್ರಿಲ್ 19ರಂದು ಶನಿವಾರ ಹಾಗೂ 20ರಂದು ಆದಿತ್ಯವಾರ ನಡೆಯಿತು. ಪ್ರಮುಖ ವಾಗ್ಮಿಗಳಾದ ರಫೀಕ್ ಸ‌ಅದಿ ದೇಲಂಪಾಡಿ ಮತ್ತು ಹನೀಫ್ ನಿಝಾಮಿ ಮೊಗ್ರಾಲ್ ರವರು ಇಸ್ಲಾಂ ಧರ್ಮದಲ್ಲಿ ನೂತನವಾದಿಗಳು ಮತ್ತು ಪರಂಪರಾಗತ ಇಸ್ಲಾಂ ಧರ್ಮ ಎಂಬ […]

News

MLC ಐವನ್ ಡಿಸೋಜ ಹಾಗೂ ಕಥೊಲಿಕ್ ಸಭಾ ಕೇಂದ್ರಿಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ರವರಿಂದ ಬಿಷಪ್ಸ್ ಹೌಸ್ ನಲ್ಲಿ ಪೋಪ್ ರವರಿಗೆ ಅಂತಿಮ ನಮನ

ಕ್ರಿಶ್ಚಿಯನ್ನರ ಪರಮೋಚ್ಚ ಜಗದ್ಗುರು ಪೋಪ್ ಫ್ರಾನ್ಸಿಸ್ ರವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಇಂದು ಎಪ್ರಿಲ್ 21ರಂದು ಸೋಮವಾರ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ರವರು ಮಂಗಳೂರು ಧರ್ಮಕ್ಷೇತ್ರದ ಪರವಾಗಿ ಸಂತಾಪ ವ್ಯಕ್ತಪಡಿಸಿದರು. ಕೊಡಿಯಾಲ್ ಬೈಲಿನಲ್ಲಿರುವ ಬಿಷಪ್ಸ್ ಹೌಸ್‌ಗೆ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಹಾಗೂ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರಿಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ತೆರಳಿ ಪೋಪ್ ರವರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ […]

News

ಜಗದ್ಗುರು ಪೋಪ್ ಫ್ರಾನ್ಸಿಸ್ ಇನ್ನಿಲ್ಲ

ಲ್ಯಾಟಿನ್ ಅಮೆರಿಕದ ಮೊದಲ ಪೋಪ್ ಮತ್ತು ಆಧುನಿಕ ರೋಮನ್ ಕ್ಯಾಥೋಲಿಕ್ ಚರ್ಚ್‌ನಲ್ಲಿ ಪರಿವರ್ತನಾಶೀಲ ವ್ಯಕ್ತಿಯಾಗಿದ್ದ ಜಗದ್ಗುರು ಪೋಪ್ ಫ್ರಾನ್ಸಿಸ್ ಇಂದು ಏಪ್ರಿಲ್ 21ರಂದು ಸೋಮವಾರ ತಮ್ಮ 88 ನೇ ವಯಸ್ಸಿನಲ್ಲಿ ನಿಧನರಾದರು ಎಂದು ವ್ಯಾಟಿಕನ್ ಘೋಷಿಸಿದೆ. ಕಾರ್ಡಿನಲ್ ಕೆವಿನ್ ಫಾರೆಲ್ ಅವರು ವ್ಯಾಟಿಕನ್‌ನ ಅಧಿಕೃತ ಟೆಲಿಗ್ರಾಮ್ ಚಾನೆಲ್ ಮೂಲಕ ಬಿಡುಗಡೆ ಮಾಡಿದ ಹೇಳಿಕೆಯು ಈ ಸುದ್ದಿಯನ್ನು ದೃಢಪಡಿಸಿತು, “ಇಂದು ಬೆಳಿಗ್ಗೆ 7:35 ಕ್ಕೆ ನಿಧನರಾದರು. ಅರ್ಜೆಂಟೀನಾದಲ್ಲಿ ಜನಿಸಿದ ಪೋಪ್ 12 ವರ್ಷಗಳಿಗೂ ಹೆಚ್ಚು ಕಾಲ ಕ್ಯಾಥೋಲಿಕ್ ಚರ್ಚ್ ನ್ನು […]

News

ಬಜ್ಪೆ ಚರ್ಚ್ ನ ಯುವಕ ಜೋಶ್ವಾ ಪಿಂಟೊ ಅಪಘಾತದಲ್ಲಿ ಮೃತ್ಯು

ಏಪ್ರಿಲ್ 20ರಂದು ಈಸ್ಟರ್ ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ಖರೀದಿಸಿ, ಮಂಗಳೂರಿನಿಂದ ತನ್ನ ಮಿತ್ರರೊಡನೆ ಕಾರಲ್ಲಿ ವಾಪಸ್ ಪೆರ್ಮುದೆಗೆ ಬರುವಾಗ, ಆಕಸ್ಮಿಕ ಅವಘಡ ಸಂಭವಿಸಿ ಬಜ್ಪೆ ಚರ್ಚ್ ನ ಯುವಕ 27 ವರ್ಷ ಪ್ರಾಯದ ಜೋಶ್ವಾ ಪಿಂಟೊ ಮೃತಪಟ್ಟಿದ್ದಾರೆ. ತನ್ನ ಕಾರಲ್ಲಿ ಮಿತ್ರರೊಂದಿಗೆ ಬರುವಾಗ ರಸ್ತೆಯಲ್ಲಿನ ಹೊಂಡಕ್ಕೆ ಕಾರು ಬಡಿದು, ನಿಯಂತ್ರಣ ಕಳೆದುಕೊಂಡು ತಿರುವಿನಲ್ಲಿ ಕಾರು ತಲೆಕೆಳಗಾಗಿ ಮಗುಚಿ ಬಿದ್ದು ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ತನ್ನ ಸಮುದಾಯದಲ್ಲಿ ನಿಸ್ವಾರ್ಥ ಸೇವೆ ಮಾಡುವ ಜೋಶ್ವಾ ಪಿಂಟೊ ಬಜ್ಪೆ ಚರ್ಚ್ ನ […]

You cannot copy content of this page