November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿದ ಮಂಗಳೂರು ಹೊಯ್ಸಳ – 5 ಪೊಲೀಸರು

ಆಟೋ ಬಾಡಿಗೆ ವಿಚಾರದಲ್ಲಿ ಇಡೀ ಮಂಗಳೂರು ಮಹಾನಗರ ಪಾಲಿಕೆ ಪ್ರದೇಶದಲ್ಲಿ ಪ್ರತಿದಿನ ಏರಿದ ಸ್ವರದಲ್ಲಿ ಚರ್ಚೆ, ಗಲಾಟೆ, ಹಾಗೂ ಕೈ ಕೈ ಮಿಲಾಯಿಸಿ ಜಗಳ ಆಡುವುದು ಇತ್ತೀಚೆಗೆ ಸರ್ವೇಸಾಮಾನ್ಯವಾಗಿ ಹೋಗಿದೆ. ಇಂತಹದೇ ಒಂದು ಜಗಳವು ಏಪ್ರಿಲ್ 20ರಂದು ಆದಿತ್ಯವಾರ ರಾತ್ರಿ 11 ಗಂಟೆಗೆ ವೆನ್ಲಾಕ್ ಆಸ್ಪತ್ರೆಯ ಪಕ್ಕದಲ್ಲಿ ನಡೆದಿದ್ದು, ಈ ಬಗ್ಗೆ ಆಸ್ಪತ್ರೆಯಿಂದ ಪೊಲೀಸರ ಹೊಯ್ಸಳದ 112ಕ್ಕೆ ದೂರು ಬಂತು. ಪೊಲೀಸರು ಕೂಡಲೇ ಸ್ಥಳಕ್ಕೆ ತಲುಪಿ ಬಾಡಿಗೆ ವಿಚಾರದಲ್ಲಿ ಜಗಳ ಮಾಡಿಕೊಂಡಿದ್ದ ಇಬ್ಬರು ಯುವಕರ ಜಗಳವನ್ನು ನಿಲ್ಲಿಸಿ, ಅವರಿಗೆ […]

News

ಬೀಗ ಹಾಕಿದ ಮನೆಯಿಂದ ಚಿನ್ನಾಭರಣ ಹಾಗೂ ಹಣ ದರೋಡೆ – ಪ್ರಕರಣ ದಾಖಲು

ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ, ಕೊಲ್ಪೆದಬೈಲು, ಮಾಲಾಡಿ ಗ್ರಾಮ ಮತ್ತು ಅಂಚೆ, ಬೆಳ್ತಂಗಡಿಯಲ್ಲಿನ ವಸಂತಿ ಹೆಗ್ಡೆ ಇವರ ಮನೆಯ ಮುಂದಿನ ಬಾಗಿಲಿಗೆ ಹಾಕಿರುವ ಬೀಗದ ಕೊಂಡಿಯನ್ನು ಕಳ್ಳರು ಮುರಿದು ಮನೆಯೊಳಗೆ ಪ್ರವೇಶಿಸಿದ್ದಾರೆ. ಕೋಣೆಯ ಕಪಾಟುಗಳಲ್ಲಿದ್ದ ಚಿನ್ನಾಭರಣಗಳನ್ನು ಹಾಗೂ ನಗದು ರೂಪಾಯಿ 30,000/- ಹಣವನ್ನು ಕಳ್ಳರು ಕಳವು ಮಾಡಿದ್ದಾರೆ. 58 ವರ್ಷದ ವಸಂತಿ ಹೆಗ್ಡೆಯವರು ತಮ್ಮ ಮಗ ಹಾಗೂ ಸೊಸೆ ಜೊತೆಗೆ ಎಪ್ರಿಲ್ 20ರಂದು ಮಧ್ಯಾಹ್ನ ಬೆಳ್ತಂಗಡಿಗೆ ಹೋಗಿದ್ದರು. ಸಂಜೆ ವಾಪಸ್ ಮನೆಗೆ ಬರುವಾಗ ಕಳ್ಳತನ ಆದದ್ದು ಬೆಳಕಿಗೆ […]

News

ನಿವೃತ್ತ ಡಿಜಿಪಿ ಓಂ ಪ್ರಕಾಶ್ ಹತ್ಯೆ ಪ್ರಕರಣ – ಪತ್ನಿ ಪೊಲೀಸ್ ವಶಕ್ಕೆ

ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಓಂ ಪ್ರಕಾಶ್ (68) ಅವರನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದ್ದು, ಘಟನೆ ಸಂಬಂಧ ಅವರ ಪತ್ನಿ ಪಲ್ಲವಿಯನ್ನು ಇಲ್ಲಿನ ಎಚ್‍ಎಸ್‍ಆರ್ ಲೇಔಟ್ ಠಾಣಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಎಪ್ರಿಲ್ 20ರಂದು ರವಿವಾರ ಬೆಂಗಳೂರಿನ ಎಚ್‍ಎಸ್‍ಆರ್ ಬಡಾವಣೆಯಲ್ಲಿರುವ ಅವರ ನಿವಾಸದಲ್ಲಿಯೇ ಓಂ ಪ್ರಕಾಶ್ ಕೊಲೆಯಾಗಿರುವ ಸ್ಥಿತಿಯಲ್ಲಿ ಬಿದ್ದಿದ್ದರು. ಈ ಕುರಿತು ಮೇಲ್ನೋಟಕ್ಕೆ ವಿಚಾರಣೆಗೊಳಪಡಿಸಿದಾಗ ಪತ್ನಿ ಪಲ್ಲವಿ ತಪ್ಪು ಒಪ್ಪಿಕೊಂಡಿದ್ದು, ಆನಂತರ ಆಕೆಯನ್ನು ಠಾಣೆಗೆ ಕರೆತಂದು ಪೋಲಿಸ್ […]

News

ಹಳೇ ಆರೋಪಿಯಿಂದ ಪರಂಗಿಪೇಟೆಯಲ್ಲಿ ಬೀಗ ಮುರಿದು ಕಳ್ಳತನ – ಆರೋಪಿ ನಝೀರ್‌ ಮಹಮ್ಮದ್ ಅಂದರ್

2024ರಲ್ಲಿ ಕಣ್ಣೂರು ಟಿ.ವಿ.ಎಸ್‌. ಶೊರೂಮ್‌ ನ ಗಾಜು ಒಡೆದು ಹಣ ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಹಳೇ ಆರೋಪಿ 26 ವರ್ಷ ಪ್ರಾಯದ ನಝೀರ್‌ ಮಹಮ್ಮದ್‌ ಕಣ್ಣೂರು, ಇವನು ದಿನಾಂಕ ಎಪ್ರಿಲ್ 11/12ರ ಮಧ್ಯರಾತ್ರಿ ಪುದು ಗ್ರಾಮದ ಪರಂಗಿಪೇಟೆಯಲ್ಲಿರುವ ವಿಶ್ವಾಸ ಸಿಟಿ ಸೆಂಟರ್ ನ ವೈಟ್ ಲೈನ್ ಕಿಡ್ಸ್ ವರ್ಲ್ಡ್ ಬಟ್ಟೆ ಅಂಗಡಿಗೆ ನುಗ್ಗಿ ಕಳವುಗೈದ ಘಟನೆಗೆ‌ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 42/2025 ಕಲಂ: 331(4) 305 ಬಿ.ಎನ್‌.ಎಸ್. ರಂತೆ ಪ್ರಕರಣ ದಾಖಲಾಗಿರುತ್ತದೆ. ಇವನನ್ನು […]

News

ರೋಹನ್ ಕಾರ್ಪೊರೇಶನ್ ಸಂಸ್ಥೆಯ ನೂತನ ಯೋಜನೆ ‘ರೋಹನ್ ಇಥೋಸ್’ ಇದರ ಭೂಮಿ ಪೂಜೆ

ಕರಾವಳಿಯ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ರೋಹನ್ ಕಾರ್ಪೊರೇಶನ್ ಸಂಸ್ಥೆಯ ನೂತನ ಯೋಜನೆ ‘ರೋಹನ್ ಇಥೋಸ್’ ಇದರ ಭೂಮಿ ಪೂಜೆಯು ಎಪ್ರಿಲ್ 19ರಂದು ಶನಿವಾರ ನಗರದ ಫಾದರ್ ಮುಲ್ಲರ್ ಆಸ್ಪತ್ರೆ ಬಳಿ ನೆರವೇರಿತು. ಫಾದರ್ ಮುಲ್ಲರ್ ಚಾರಿಟೆಬಲ್ ಸಂಸ್ಥೆಗಳ ನಿರ್ದೇಶಕ ವಂದನೀಯ ಫಾದರ್ ರಿಚ್ಚರ್ಡ್ ಕುವೆಲ್ಲೊರವರು ಆಶೀರ್ವದಿಸಿ ಯೋಜನೆಯು ಯಶಸ್ವಿಯಾಗಿ ಪೂರ್ಣಗೊಂಡು ಜನರ ಬಳಕೆಗೆ ಶೀಘ್ರ ಸಿಗುವಂತಾಗಲಿ ಎಂದರು. ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ಕಳೆದೊಂದು ತಿಂಗಳಲ್ಲೇ ರೋಹನ್ ಸಂಸ್ಥೆಯ ನಾಲ್ಕು ಪ್ರಮುಖ ಯೋಜನೆಗಳಿಗೆ […]

News

ದಯೆಯಿಂದಲೇ ಪರಸ್ಪರ ಉನ್ನತಿಗೇರಲು ಭಕ್ತಾಧಿಗಳಿಗೆ ಕರೆ ನೀಡಿದ ಫಾದರ್ ನವೀನ್ ಪ್ರಕಾಶ್ ಡಿಸೋಜ

ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಈಸ್ಟರ್ ಹಬ್ಬ ಆಚರಣೆ ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಚರ್ಚ್ ಧರ್ಮಗುರು ವಂದನೀಯ ಫಾದರ್ ನವೀನ್ ಪ್ರಕಾಶ್ ಡಿಸೋಜ, ಅತಿಥಿ ಧರ್ಮಗುರುಗಳಾದ ವಂದನೀಯ ಫಾದರ್ ಮ್ಯಾಕ್ಸಿಂ ಡಾಯಾಸ್ ಹಾಗೂ ವಂದನೀಯ ಫಾದರ್ ಲ್ಯಾನ್ಸಿ ಡಾಯಾಸ್ ನೇತೃತ್ವದಲ್ಲಿ ಈಸ್ಟರ್ ಹಬ್ಬದ ದಿವ್ಯ ಬಲಿ ಪೂಜೆ ನಡೆಯಿತು.  ಯೇಸಕ್ರಿಸ್ತನ ಪುನರ್ ಜನ್ಮವನ್ನು ಸಾರುವ ಈಸ್ಟರ್ ಹಬ್ಬವನ್ನು ಬಹಳ ಭಕ್ತಿಯಿಂದ ಆಚರಿಸಲಾಯಿತು.   ಚರ್ಚ್ ಹಾಗೂ ಚರ್ಚ್ ವಠಾರದ ಎಲ್ಲಾ ವಿದ್ಯುತ್ ದೀಪಗಳನ್ನು […]

News

ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಶೃದ್ಧಾಭಕ್ತಿಯಿಂದ ಶುಭ ಶುಕ್ರವಾರ ಆಚರಣೆ

ಆಧುನಿಕ ಜೀವನದಲ್ಲಿ ನಾವು ಕ್ರಿಸ್ತನಿಗೆ ಯಾವ ರೀತಿಯ ಶಿಲುಬೆಯನ್ನು ನೀಡುತ್ತೇವೆ – ಫಾದರ್ ವಿಜಯ್ ಮಚಾದೊ ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಇಂದು ಎಪ್ರಿಲ್ 18ರಂದು ಶೃದ್ಧಾಭಕ್ತಿಯಿಂದ ಶುಭ ಶುಕ್ರವಾರದ ಆಚರಣೆಯನ್ನು ಮಾಡಲಾಯಿತು. ಪ್ರಧಾನ ಧರ್ಮಗುರುಗಳಾಗಿ ಮಂಗಳೂರು ಧರ್ಮಕ್ಷೇತ್ರದ ಮಂಗಳ ಜ್ಯೋತಿಯ ನಿರ್ದೇಶಕ ವಂದನೀಯ ಫಾದರ್ ವಿಜಯ್ ಮಚಾದೊ ಆಗಮಿಸಿದ್ದರು. ಆಧುನಿಕ ಜೀವನದಲ್ಲಿ ನಾವು ಕ್ರಿಸ್ತನಿಗೆ ಯಾವ ರೀತಿಯ ಶಿಲುಬೆಯನ್ನು ನೀಡುತ್ತೇವೆ? ನೈಜ ಜೀವನದಲ್ಲಿ ಒಂದೇ ಕುಟುಂಬದ ಅಣ್ಣ – ತಮ್ಮ, ಅಕ್ಕ – ತಂಗಿಯರಲ್ಲಿ […]

News

ಯೇಸುವಿನಂತೆ ನಮ್ರತೆ ಹಾಗೂ ಪ್ರೀತಿಯಿಂದ ಸೇವೆ ಸಲ್ಲಿಸಲು ಕರೆ ನೀಡಿದ ಮಂಗಳೂರು ಬಿಷಪ್

ಇಂದು ಕಾಸರಗೋಡಿನ ಬೋವಿಕ್ಕಾನಾ ಚರ್ಚ್ ನಲ್ಲಿ ಬಿಷಪ್ ರಿಂದ ಶುಭ ಶುಕ್ರವಾರ ಹಾಗೂ ನಾಳೆ ಶನಿವಾರ ಮಂಗಳೂರಿನಲ್ಲಿರುವ ರೊಸಾರಿಯೊ ಕಥೆದ್ರಲ್ ನಲ್ಲಿ ಈಸ್ಟರ್ ಹಬ್ಬದ ಆಚರಣೆ ಪರಸ್ಪರ ಸೇವಾ ಮನೋಭಾವ ಹಾಗೂ ವಿದೇಯತೆಯಿಂದ ಬಾಳಲು ಕರೆ ನೀಡುವ ಪವಿತ್ರ ಸಂಸ್ಕರಣೆಯಾದ ಆಯ್ದ 12 ಮಂದಿಯ ಪಾದ ತೊಳೆಯುವ ಮೂಲಕ ಏಸುಕ್ರಿಸ್ತರು ತಮ್ಮ 12 ಮಂದಿ ಶಿಷ್ಯರೊಂದಿಗೆ ನಡೆಸಿದ ಕೊನೆಯ ಭೋಜನ ಹಾಗೂ ಪಾದ ತೊಳೆಯುವ ಧಾರ್ಮಿಕ ವಿಧಿಯಲ್ಲಿ –  ಮಂಗಳೂರು ಬಿಷಪ್ ಅತೀ ವಂದನೀಯ ಡಾ| ಪೀಟರ್ […]

News

ಹೊರರಾಜ್ಯದ ಯುವತಿ ಮೇಲೆ ಪರಿಚಯಿಸ್ಥರಿಂದಲೇ ಗ್ಯಾಂಗ್ ರೇಪ್ ಶಂಕೆ – ಮೂವರ ಬಂಧನ

ಏಪ್ರಿಲ್ 16 ಹಾಗೂ 17ರ ಮದ್ಯದ ರಾತ್ರಿಯಲ್ಲಿ ಹೊರರಾಜ್ಯದ ಯುವತಿ ಮೇಲೆ ನಡೆದಿದೆ ಎನ್ನಲಾದ ಗ್ಯಾಂಗ್ ರೇಪ್ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತ ಅನುಪಮ ಅಗರ್ವಾಲ್ ಮಾತನಾಡಿ ಒಂದು ಹುಡುಗಿ ಮೇಲೆ ಹಲ್ಲೆ ಮಾಡಿದ್ದಾರೆ, ಅವಳು ಕೂಗಾಡುತ್ತಿದ್ದಾಳೆಂದು ರಾತ್ರಿ ಸುಮಾರು 1.30ಕ್ಕೆ 112 ಸಂಖ್ಯೆಗೆ ಕರೆ ಬಂದಿದೆ. ಆಕೆಗೆ ಹಲ್ಲೆ ಮಾಡಿದ್ದಾರೆ ಎಂಬ ದೂರು ಸ್ವೀಕೃತವಾಗಿದೆ. ತಕ್ಷಣವೇ ಹೊಯ್ಸಳ ಘಟನಾ ಸ್ಥಳಕ್ಕೆ ತೆರಳಿ ಯುವತಿಯನ್ನು ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಅವಳು ಮಾತನಾಡುವ ಸ್ಥಿತಿಯಲ್ಲಿರದ […]

News

Rohan Ethos – Launching on 19th April 2025

Rohan Corporation proudly unveils its latest residential masterpiece, Rohan Ethos, in the prestigious locale of Kankanady, Next to Father Muller Hospital, Father Muller Road, Mangaluru. Set to launch on 19th April 2025, this project epitomizes timeless elegance and contemporary sophistication, offering a harmonious blend of modern architecture and beautiful surroundings. Designed for discerning individuals, Rohan […]

You cannot copy content of this page