November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕ್ರಿಶ್ಚಿಯನ್ ಜಗದ್ಗುರು ಪೋಪ್ ಫ್ರಾನ್ಸಿಸ್ ರವರಿಗೆ ಮಂಗಳೂರಿನಲ್ಲಿ ಅರ್ಪಿಸಿದ ಸರ್ವಧರ್ಮ ಶ್ರದ್ಧಾಂಜಲಿ

ಮಂಗಳೂರು ಧರ್ಮಕ್ಷೇತ್ರದ ವತಿಯಿಂದ ಕಥೊಲಿಕರ ಪರಮೋಚ್ಛ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರಿಗೆ ಶ್ರದ್ಧಾಂಜಲಿ ಸಭೆ ಇಂದು ಎಪ್ರಿಲ್ 25ರಂದು ಶುಕ್ರವಾರ ನಗರದ ಮಿಲಾಗ್ರಿಸ್ ಚರ್ಚ್ ವಠಾರದಲ್ಲಿ ನಡೆಸಲಾಯಿತು. ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾರವರು ಶ್ರದ್ದಾಂಜಲಿ ಅರ್ಪಿಸಿ ಮಾತನಾಡಿ, ಪೋಪ್ ಫ್ರಾನ್ಸಿಸ್ ರವರು ಜಗತ್ತಿಗೆ ಬೆಳಕಾಗಿದ್ದಾರೆ. ಮಕ್ಕಳು, ಯುವಕರು, ಬಡವರು, ದೀನರು ಮತ್ತು ವಲಸಿಗರಿಗೆ ಹತ್ತಿರವಾಗಿದ್ದರು. ಪೋಪ್ ಫ್ರಾನ್ಸಿಸ್ ನಮಗೆ ಸಹೋದರತ್ವವನ್ನು ಕಲಿಸಿದ್ದಾರೆ ಎಂದು ಹೇಳಿದರು. ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ […]

News

ಕ್ರಿಮಿನಲ್ ಆರೋಪ ಹೊತ್ತ ಸರ್ಕಾರಿ ನೌಕರರ ಉದ್ಯೋಗಕ್ಕೆ ಕಂಟಕ – ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

ಸರಕಾರಿ ನೌಕರರಾಗಿ ನೇಮಕಗೊಳ್ಳಲು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರಬಾರದು ಎಂಬ ನಿಯಮವಿದೆ. ಅದೇ ರೀತಿಯ ಆರೋಪ ಹೊತ್ತ ಸರಕಾರಿ ನೌಕರರನ್ನು ವಜಗೊಳಿಸಲು ಯಾವುದೇ ಅಡ್ಡಿ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕರ್ನಾಟಕ ಹೈಕೋರ್ಟಿನ ನ್ಯಾಯಮೂರ್ತಿ ಶ್ರೀ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ ಶ್ರೀ ರಾಮಚಂದ್ರ ಹುದ್ದಾರ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ. ಬೆಂಗಳೂರು ನಗರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರ ಕಚೇರಿಯ ದ್ವಿತೀಯ ದರ್ಜೆ ಸಹಾಯಕ (ಎಸ್.ಡಿ.ಎ.) ಆಗಿ ಸೇವೆ ಸಲ್ಲಿಸಿ […]

News

ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ವ್ಯಾಟಿಕನ್ ಗೆ

ಭಾರತ ಸರಕಾರದ ಪರವಾಗಿ ಸಂತಾಪ ಸೂಚಿಸಲು ಹಾಗೂ ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು, ಭಾರತದ ಅಧಿಕೃತ ಪ್ರತಿನಿಧಿಯಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಏಪ್ರಿಲ್ 25 ಹಾಗೂ 26ರಂದು ವ್ಯಾಟಿಕನ್ ಸಿಟಿಯಲ್ಲಿ ಇರುತ್ತಾರೆ. ಏಪ್ರಿಲ್ 26 ರಂದು, ವ್ಯಾಟಿಕನ್ ಸಿಟಿಯ ಸೈಂಟ್ ಪೀಟರ್ಸ್ ಸ್ಕ್ವೇರ್‌ನಲ್ಲಿ ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆಯ ಬಲಿಪೂಜೆಯಲ್ಲಿ ವಿಶ್ವದಾದ್ಯಂತದ ಗಣ್ಯರ ಜೊತೆಗೆ ರಾಷ್ಟ್ರಪತಿ ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ. ಪೋಪ್ ಫ್ರಾನ್ಸಿಸ್ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ […]

News

ಕಾಶ್ಮೀರದ ಪಹಲ್ಗಾಮ್‌ ನಲ್ಲಿ ಅಮಾಯಕ ನಾಗರಿಕರ ಕೊಲೆ ಮಾನವತೆಗೆ ಕಳಂಕ – ಮಂಗಳೂರು ಬಿಷಪ್‌ ಖಂಡನೆ

ಪ್ರವಾಸಕ್ಕಾಗಿ ಕಾಶ್ಮೀರಕ್ಕೆ ತೆರಳಿದ್ದ ಯಾವುದೇ ತಪ್ಪೆಸಗದ ಅಮಾಯಕ ನಾಗರಿಕರನ್ನು ಹತ್ಯೆ ಮಾಡಿದ ಉಗ್ರಗಾಮಿಗಳ ಕೃತ್ಯ ಅತ್ಯಂತ ಖಂಡನೀಯ. ಈ ಕೃತ್ಯವು ಎಲ್ಲರ ಹೃದಯ ಹಾಗೂ ಮನಸ್ಸನ್ನು ಕಲಕುವಂಥದ್ದು. ಇದೊಂದು ಹೇಯ ಕೃತ್ಯ. ಅಮಾಯಕರನ್ನು ಕೊಂದು ಅನೇಕ ಕುಟುಂಬಗಳನ್ನೇ ಅವರು ನಾಶ ಮಾಡಿದ್ದಾರೆ. ಇದನ್ನು ನಾನು ಖಡಾಖಂಡಿತವಾಗಿ ಖಂಡಿಸುತ್ತೇನೆ. ಭಾರತವು ಎಲ್ಲಾ ವರ್ಗದ ಜನರಿಗೆ ಸಹಬಾಳ್ವೆ ನಡೆಸಲು ಇರುವ ದೇಶ. ಕೆಲವೇ ಕೆಲವು ಭಯೋತ್ಪಾದಕರಿಂದ ದೇಶ ನಾಶವಾಗದು. ಪ್ರಾಣ ಕಳೆದುಕೊಂಡವರಿಗೆಲ್ಲರಿಗೂ ದೇವರು ಚಿರಶಾಂತಿ ನೀಡಲಿ. ಗಾಯಗೊಂಡವರು ಬೇಗನೆ ಗುಣಮುಖರಾಗಲಿ. […]

News

ಸಂತ  ಫಿಲೋಮಿನಾ ಕಾಲೇಜಿನಲ್ಲಿ    ‘ಬಿಜಾಥಾನ್ 2025’ – ಯುವ ಉದ್ಯಮಿಗಳ ಪ್ರತಿಭೆಗೆ ವೇದಿಕೆ

ಸಂತ ಫಿಲೋಮಿನಾ ಕಾಲೇಜಿನ ಬ್ಯುಸಿನೆಸ್ ಅಡ್ಮಿನಿಸ್ಟ್ರೇಶನ್ ವಿಭಾಗವು ಬಿಜಾಥಾನ್ 2025 ಎಂಬ ವಿಶಿಷ್ಟ ವಿದ್ಯಾರ್ಥಿ ಮೇಳವನ್ನು ಯಶಸ್ವಿಯಾಗಿ ಆಯೋಜಿಸಿತು. ಕಾಲೇಜಿನ ಬಿಬಿಎ ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ನಡೆಸಲಾದ ಈ ಉತ್ಸವವು ವಿದ್ಯಾರ್ಥಿಗಳಲ್ಲಿ ತಾಳ್ಮೆ, ವಿಶ್ಲೇಷಣಾ ಶಕ್ತಿ ಮತ್ತು ತಂತ್ರಮತಿಯನ್ನು ಅಳವಡಿಸಿಕೊಂಡು ಹೊಸ ವಿಷಯಗಳನ್ನು ಅನುಭವದ ಮೂಲಕ ಕಲಿಯುವಂತಾಗಿಸಿತು. ಈ ಮೇಳವು ಬಿಸಿನೆಸ್ ಡಿಬೇಟ್, ಕೋರ್ಪೊರೇಟ್ ರೋಲ್ ಪ್ಲೇ, ಟ್ರೆಜರ್ ಹಂಟ್, ಬಿಸಿನೆಸ್ ಕ್ವಿಜ್, ಮ್ಯಾಡ್ ಅಡ್ಸ್ ಮುಂತಾದ ಸ್ಪರ್ಧಾತ್ಮಕ ಕಾರ್ಯಕ್ರಮಗಳನ್ನು ಒಳಗೊಂಡಿತ್ತು. ವಿಶೇಷವಾಗಿ ಗಮನ ಸೆಳೆದ ಕಾರ್ಯಕ್ರಮವಾದ ಬಿಜಾಥಾನ್ನಲ್ಲಿ […]

News

ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಸಮಿತಿ ಪುನರ್ ರಚನೆ 

ಅಧ್ಯಕ್ಷರಾಗಿ ಜಿ.ಎಂ. ಉಸ್ತಾದ್, ಪ್ರಧಾನ ಕಾರ್ಯದರ್ಶಿಯಾಗಿ ಯೂಸುಫ್ ಸಯೀದ್ ಪುತ್ತೂರು, ಕೋಶಾಧಿಕಾರಿಯಾಗಿ ಅರಿಯಡ್ಕ ಅಬ್ದುಲ್ ರಹ್ಮಾನ್ ಹಾಜಿ ಆಯ್ಕೆ ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲೆಯ ಸಮಿತಿ ಪುನರ್ ರಚನಾ ಸಭೆಯು ಎಪ್ರಿಲ್ 22ರಂದು ಮಂಗಳವಾರ ದಾರುಲ್ ಹುದಾ ಎಜುಕೇಶನ್ ಸೆಂಟರ್ ತಂಬಿನಮಕ್ಕಿ ಬೆಳ್ಳಾರೆಯಲ್ಲಿ  ನಡೆದ ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಈಸ್ಟ್ ಜಿಲ್ಲಾಧ್ಯಕ್ಷರಾದ ಅರಿಯಡ್ಕ ಅಬ್ದುಲ್ ರಹ್ಮಾನ್ ಹಾಜಿರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಸದಸ್ಯರಾದ ಅಸಯ್ಯಿದ್ […]

News

ಪಹಲ್ಗಾಮಿನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿದ ಕಥೊಲಿಕ್ ಸಭಾ ಕೇಂದ್ರೀಯ ಅಧ್ಯಕ್ಷ ಹಾಗೂ AICU ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್

ಪಹಲ್ಗಾಮಿನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಮೃತರಿಗೆ ಸಂತಾಪ ಸೂಚಿಸುತ್ತೇವೆ. ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಕಥೊಲಿಕ್ ಸಭಾ ಕೂಡ ಜೊತೆಗಿರಲಿದೆ. ಭಾರತದ ಪ್ರತಿ ಜನರಿಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಭಯೋತ್ಪಾದನೆ ದಾಳಿ ಕ್ರೂರ ಅಪರಾಧ. ಇದಕ್ಕೆ ಯಾವುದೇ ಸಮರ್ಥನೆ ಇಲ್ಲ. ಭಯೋತ್ಪಾದಕರನ್ನು ನಿರ್ಮೂಲನೆ ಗೊಳಿಸುವ ಮೂಲಕ, ದೇಶದ ಜನರಿಗೆ ಭದ್ರತೆ ನೀಡುವ ಕಾರ್ಯವನ್ನು ಕೇಂದ್ರ ಸರ್ಕಾರ ಸಮರ್ಥವಾಗಿ ನಿರ್ವಹಿಸಬೇಕು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಧರ್ಮದ ಹೆಸರಿನಲ್ಲಿ ಭಯೋತ್ಪಾದಕ ದಾಳಿ ನಡೆದಿರುವುದು ನಿಜಕ್ಕೂ ಕೆಟ್ಟ ಬೆಳವಣಿಗೆ. ಇದನ್ನು ಸಹಿಸಲು ಸಾಧ್ಯವೇ […]

News

ಕಾಶ್ಮೀರ ಭಯೋತ್ಪಾದಕ ದಾಳಿ – ರಾಜ್ಯ ದಾರಿಮಿ ಉಲಮಾ ಒಕ್ಕೂಟ ಖಂಡನೆ 

ಕಾಶ್ಮೀರ ರಾಜ್ಯದ ಪಹಲ್ಗಾಂ ಪ್ರವಾಸಿ ತಾಣಕ್ಕೆ ಬೇಟಿ ನೀಡಿದ ನಾಗರಿಕರ ಮೇಲೆ ನಡೆದ ರಾಕ್ಷಸೀಯ ಭಯೋತ್ಪಾದಕ ದಾಳಿಯನ್ನು ಕರ್ನಾಟಕ ರಾಜ್ಯ ದಾರಿಮಿ ಉಲಮಾ ಒಕ್ಕೂಟ ಅತ್ಯುಗ್ರವಾಗಿ ಖಂಡಿಸುತ್ತಿದೆ. ನರ ರಾಕ್ಷಸ ಭಯೋತ್ಪಾದಕರ ಹುಟ್ಟಡಗಿಸಲು ಸರಕಾರಗಳು ಇಚ್ಚಾ ಶಕ್ತಿ ಪ್ರದರ್ಶಿಸ ಬೇಕೆಂದು ಒಕ್ಕೂಟ ಆಗ್ರಹಿಸುತ್ತಿದೆ. ಪ್ರಜೆಗಳಿಗೆ ಸುರಕ್ಷತೆ ನೀಡ ಬೇಕಾದದ್ದು ಸರಕಾರಗಳ ಆದ್ಯ ಕರ್ತವ್ಯವಾಗಿದೆ‌.ಸುಮಾರು ಐನೂರರಷ್ಟು ಪ್ರವಾಸಿಗರಿದ್ದ ಜಾಗದಲ್ಲಿ ಪೋಲೀಸರ ಕಾವಲು ಇಲ್ಲದೇ ಇದ್ದದ್ದು ಆಡಳಿತದ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆಯಾದರೂ ಈ ವಿಷಮ ಘಟ್ಟದಲ್ಲಿ ಪರಸ್ಪರ ಟೀಕಾ ಪ್ರಹಾರಗಳನ್ನು […]

News

Perpetual Profession at Rosa Mystica Convent

The Perpetual Profession of three Tertians was held on 23rd April 2025 at Rosa Mystica convent, Kinnikambla. The Holy Eucharist was officiated by Rev. Dr Peter Paul Saldanha Bishop of Mangalore Diocese and con-celebrated by eight Priests. Sr Melisha Suvaries, Sr Monica Fernandes and Sr Vinitha Gonsalves, marched towards the altar of God along with […]

News

ಮಂಗಳೂರು ಧರ್ಮಕ್ಷೇತ್ರದ ವತಿಯಿಂದ ಪೋಪ್ ಫ್ರಾನ್ಸಿಸ್ ಸ್ಮರಣಾರ್ಥ ಶ್ರದ್ಧಾಂಜಲಿ ಸಭೆಗೆ ಕರೆ 

ಕಿಸ್ತರ ಶಾಂತಿಯಲ್ಲಿ ವಿಶ್ರಾಂತಿ ಪಡೆದ ಕಥೊಲಿಕ ಕ್ರೈಸ್ತ ಸಮುದಾಯದ ಪರಮಪೂಜ್ಯ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರ ಸ್ಮರಣಾರ್ಥ ಏಪ್ರಿಲ್ 25ರಂದು ಶುಕ್ರವಾರ ಸಂಜೆ 5:00 ಘಂಟೆಗೆ ಮಂಗಳೂರಿನ ಮಿಲಾಗ್ರಿಸ್ ಚರ್ಚ್ ನಲ್ಲಿ ಪೋಪ್ ಅವರಿಗಾಗಿ ವಿಶೇಷ ಪ್ರಾರ್ಥನೆ ಹಾಗೂ ಬಲಿಪೂಜೆಯನ್ನು ನಡೆಸಲಾಗುವುದು. ಬಳಿಕ ಚರ್ಚ್ ಮೈದಾನದಲ್ಲಿ ಶೋಕ ಸಭೆಯು ನಡೆಯಲಿರುವುದು. ಮಂಗಳೂರು ಧರ್ಮಕ್ಷೇತ್ರ ಶೋಕ ವ್ಯಕ್ತಪಡಿಸುವ ಜೊತೆಗೆ ದೇವರ ಶಾಶ್ವತ ವಿಶ್ರಾಂತಿಗೆ ಕರೆಯಲ್ಪಟ್ಟ ಪೋಪ್ ಫ್ರಾನ್ಸಿಸ್ ರವರ ಜೀವನವನ್ನು ಪ್ರೇರಣೆಯಾಗಿ ಮುಂದುವರಿಸಲು ನಾವು ಒಟ್ಟಾಗೋಣ. ಸಮಸ್ತ ಜನರಿಗೆ ಭರವಸೆಯ […]

You cannot copy content of this page