November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಧರ್ಮಸ್ಥಳದಲ್ಲಿ ದೇವರ ದರ್ಶನ ಮಾಡಿ ಬರುವಷ್ಟರಲ್ಲಿ 7 ಲಕ್ಷದ ಚಿನ್ನ ನಾಪತ್ತೆ – ಪ್ರಕರಣ ದಾಖಲು

ಆಂಧ್ರಪ್ರದೇಶದ ನೆಲ್ಲೂರಿನ 47ವರ್ಷ ಪ್ರಾಯದ ಜೆ. ಲತಾ ಎಂಬವರು ಧರ್ಮಸ್ಥಳದಲ್ಲಿ ದೇವರ ದರ್ಶನ ಮಾಡಲು ಬಾಡಿಗೆ ಇನ್ನೋವಾ ಕಾರಿನಲ್ಲಿ ಮೇ 2ರಂದು ನೆಲ್ಲೂರಿನಿಂದ ಹೊರಟು ಮೇ 3ರಂದು ಧರ್ಮಸ್ಥಳ ತಲುಪಿದ್ದರು. ದೇವರ ದರ್ಶನಕ್ಕೆ ಹೋಗುವ ಮೊದಲು ಜೆ. ಲತಾ ಅವರು ಕಾರ್ಯಕ್ರಮಕ್ಕೆ ಎಂದು ಜೊತೆಯಲ್ಲಿ ತಂದಿದ್ದ ಚಿನ್ನಭರಣಗಳಾದ ಬ್ರೇಸ್ ಲೆಟ್, ಚಿನ್ನದ ಚೈನ್, ನೆಕ್ಲೇಸ್ ಅನ್ನು ವ್ಯಾನಿಟಿಕ್ ಬ್ಯಾಗ್ ನ ಒಳಗಡೆ ಪ್ಲಾಸ್ಟಿಕ್ ಡಬ್ಬದಲ್ಲಿ ಹಾಕಿ ಬ್ಯಾಗ್ ನಲ್ಲಿ ಇಟ್ಟುಕೊಂಡಿದ್ದರು. ದೇವರ ದರ್ಶನವನ್ನು ಮುಗಿಸಿ ಹೊರಡುವ ಸಮಯದಲ್ಲಿ ಬ್ಯಾಗನ್ನು […]

News

ಸುರತ್ಕಲ್ ನಲ್ಲಿ ಸಾಹಿತ್ಯ ಸಂಭ್ರಮ ಕವಿ ಗೋಷ್ಠಿ

ಕನ್ನಡ ಸಾಹಿತ್ಯ ಪರಿಷತ್ ಸುರತ್ಕಲ್ ಹೋಬಳಿ ಹಾಗೂ ಮಂಗಳೂರು ಘಟಕದ ವತಿಯಿಂದ ಮೇ 4 ರಂದು ಆದಿತ್ಯವಾರ ಇಲ್ಲಿನ ವಿರಾಟ್ ಸಭಾ ಭವನದಲ್ಲಿ ಸಾಹಿತ್ಯ ಸಂಭ್ರಮ ಕವಿ ಗೋಷ್ಠಿಯನ್ನು ನಡೆಸಲಾಯಿತು. ಪ್ರಸಿದ್ಧ ಸಾಹಿತಿ ಡಾ. ಇಂದಿರಾ ಹೆಗಡೆಯವರು ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಎಂ.ಪಿ. ಶ್ರೀನಾಥ ವಹಿಸಿದ್ದರು. ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಪಿ. ದಯಾಕರ್, ಮಂಗಳೂರು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಂಜುನಾಥ ರೇವನ್ಕರ್, ವಿನಯ ಆಚಾರ್ ಸಹಿತ ಇತರ […]

News

ಬಂಟ್ವಾಳದ ವಕೀಲರ ಸಂಘ (ರಿ.) ಇದರ ಅಧ್ಯಕ್ಷರಾಗಿ ರಿಚರ್ಡ್ ಕೋಸ್ತಾ ಎಂ. ಪುನರ್ ಆಯ್ಕೆ

ಬಂಟ್ವಾಳದ ವಕೀಲರ ಸಂಘ (ರಿ.) ಇದರ 2025-27ನೇ ಸಾಲಿನ ಚುನಾವಣೆಯು ಮೇ 3ರಂದು ಶನಿವಾರ ಸಂಘದ ಕಚೇರಿಯಲ್ಲಿ ನಡೆಯಿತು. ಅಧ್ಯಕ್ಷರಾಗಿ ರಿಚರ್ಡ್ ಕೋಸ್ತಾ ಎಂ.ರವರು 123 ಮತಗಳನ್ನು ಪಡೆದು ಬಹುಮತದಿಂದ ಎರಡನೇ ಬಾರಿಗೆ ಅಧ್ಯಕ್ಷರಾಗಿ ಪುನರ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ದಯಾನಂದ ರೈ, ಪ್ರದಾನ ಕಾರ್ಯದರ್ಶಿಯಾಗಿ ಕೆ. ನರೇಂದ್ರನಾಥ ಭಂಢಾರಿ, ಜೊತೆ ಕಾರ್ಯದರ್ಶಿಯಾಗಿ ಅಕ್ಷತಾ ಶೆಟ್ಟಿ, ಕೋಶಾಧಿಕಾರಿಯಾಗಿ ಜೆಸಿಂತಾ ಕ್ರಾಸ್ತಾರವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ವಕೀಲರಾದ ಎಚ್. ಸತೀಶ್ ರಾವ್ ರವರು ಮುಖ್ಯ ಚುನಾವಣಾಧಿಕಾರಿಯಾಗಿದ್ದು, ಕೆ.ವಿ. ಭಟ್ ಮತ್ತು ಎಂ.ವಿ. […]

News

ಕೋಮುದ್ವೇಷದ ವೀಡಿಯೋ ಪ್ರಸಾರ – ಬೆಳ್ತಂಗಡಿ ಧನುಷ್ ವಿರುದ್ಧ ಪ್ರಕರಣ ದಾಖಲು

ಸಮುದಾಯಗಳ ನಡುವೆ ಕೋಮುದ್ವೇಷ ಉಂಟಾಗಿ ಕಾನೂನು ಸುವ್ಯವಸ್ಥೆಗೆ ದಕ್ಕೆಯಾಗುವಂತಹ ಪ್ರಚೋದನಾತ್ಮಕ ವೀಡಿಯೋವನ್ನು ತಣ್ಣೀರುಪಂಥ ಬೆಳ್ತಂಗಡಿ ನಿವಾಸಿ ಧನುಷ್ ಎಂಬಾತನು ಪ್ರಸಾರ ಮಾಡಿದ್ದನು. ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಆರೋಪಿತನಾದ ಧನುಷ್ ವಿಡಿಯೋ ಪ್ರಸಾರ ಮಾಡಿದ್ದ  ಹಿನ್ನೆಲೆಯಲ್ಲಿ, ಅವನ ವಿರುದ್ಧ ಇಂದು ಮೇ 4ರಂದು ಆದಿತ್ಯವಾರದಂದು ಪುಂಜಾಲಕಟ್ಟೆ ಠಾಣೆಯಲ್ಲಿ ಅ.ಕ್ರ 30/2025 ಕಲಂ: 196(1)(A), 353(1)(C) BNS-2023 ರಂತೆ ಪ್ರಕರಣ ದಾಖಲು ಆಗಿದೆ.

News

ಗಾಯಗೊಂಡ ನೌಶಾದ್ ರನ್ನು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜರವರು ಆಸ್ಪತ್ರೆಯಲ್ಲಿ ಭೇಟಿ – ಪರಿಹಾರದ ಭರವಸೆ

ಮೇ 2ರಂದು ಶುಕ್ರವಾರ ರಾತ್ರಿ 3:30 ಗಂಟೆಗೆ ಕಣ್ಣೂರು ನಿವಾಸಿ ನೌಶಾದ್ ಎಂಬುವರಿಗೆ ಚೂರಿ ಇರಿತದಿಂದ ಗಂಭೀರ ಗಾಯಗಳಾಗಿತ್ತು. ಅವರು ಮಂಗಳೂರಿನ ಯುನಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿದೇಶಿ ಪ್ರವಾಸದಲ್ಲಿದ್ದ MLC ಐವನ್ ಡಿಸೋಜರವರು ಇಂದು ಮೇ 4ರಂದು ಆದಿತ್ಯವಾರ ಮಂಗಳೂರಿಗೆ ಆಗಮಿಸಿದ ದಿನದಂದೇ ಯುನಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನೌಶಾದ್ ರನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿ, ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಸರಕಾರದಿಂದ ಸಿಗುವ ಪರಿಹಾರವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಕೂಡಲೇ ಒದಗಿಸುವಂತೆ ಸಲಹೆ ನೀಡಿದರು. […]

News

SSLC ಪರೀಕ್ಷೆಯಲ್ಲಿ 614 ಅಂಕ ಪಡೆದು ಪುತ್ತೂರಿನ ಸುದಾನ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿನಿ ಶರಲ್ ರೀಮಾ ಮಾರ್ಟಿಸ್

ಶುಭ ಹಾರೈಸಿದ ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಪುತ್ತೂರಿನ ಸುದಾನ ಶಾಲೆಯ ವಿದ್ಯಾರ್ಥಿನಿ ಶರಲ್ ರೀಮಾ ಮಾರ್ಟಿಸ್ SSLC ಪರೀಕ್ಷೆಯಲ್ಲಿ 614 ಅಂಕ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿ ಪುತ್ತೂರಿನ ಸುದಾನ ಆಂಗ್ಲ ಮಾಧ್ಯಮ ಶಾಲೆಗೆ ಕೀರ್ತಿಯನ್ನು ತಂದು ಕೊಟ್ಟಿದ್ದಾಳೆ. ಇವಳು ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಇದರ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸ್ಟೀವನ್ ಪ್ರಕಾಶ್ ಮಾರ್ಟಿಸ್ ಹಾಗೂ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿ – ಪೆರಾಜೆ ಇಲ್ಲಿನ ಶಿಕ್ಷಕಿ […]

News

ಮಾಣಿ‌ ಪೆರಾಜೆಯ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸ್ವಸ್ತಿ ಎಸ್. ಭಟ್ ರಾಜ್ಯಕ್ಕೆ 8ನೇ ಸ್ಥಾನ

ಬಂಟ್ವಾಳ ತಾಲೂಕಿನ ಮಾಣಿ‌ ಪೆರಾಜೆಯ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆ ಈ‌ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ‌ ಸಾಧನೆ ಮಾಡಿದ್ದು ಶಾಲಾ ವಿದ್ಯಾರ್ಥಿನಿ ಸ್ವಸ್ತಿ ಎಸ್. ಭಟ್ 618 ಅಂಕಗಳಿಸಿ ಶಾಲೆಗೆ ಮೊದಲಸ್ಥಾನಿಯಾಗಿದ್ದು, ರಾಜ್ಯಕ್ಕೆ 8ನೇ ಸ್ಥಾನಿಯಾಗಿದ್ದಾಳೆ. ಉಳಿದಂತೆ ವಿದ್ಯಾರ್ಥಿಗಳಾದ ವೈಷ್ಣವಿ 615, ನಿವ್ಯಾ ರೈ 608, ಮಹಮ್ಮದ್ ತಝೀಮ್ ಇಕ್ಬಾಲ್ 608, ಲೊಯ್ಲಿನ್ ಪಾಯ್ಸ್ 607, ಸೌರಭ್ ಪ್ರಭು 606  ಹಾಗೂ ಆರನ್ ಪಾಯ್ಸ್ 600 ಅಂಕ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.  ಶಾಲೆಯಿಂದ ಪರೀಕ್ಷೆಗೆ ಹಾಜರಾದವರ […]

News

ಮಂಗಳೂರು ಇಂದು ಸಹಜ ಸ್ಥಿತಿಗೆ

ಸುಹಾಸ್ ಶೆಟ್ಟಿ ಹತ್ಯೆ ಹಿನ್ನೆಲೆ ಮೇ 2ರಂದು ಶುಕ್ರವಾರ ಮಂಗಳೂರು ಬಂದ್ ಆಗಿತ್ತು. ಇಂದು ಮೇ 3ರಂದು ಶನಿವಾರ ಮಂಗಳೂರು ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಸಹಜ ಸ್ಥಿತಿಗೆ ತಲುಪಿದೆ. ನಿನ್ನೆ ಸಂಜೆಯಿಂದಲೇ ಮಂಗಳೂರಿನ ವಿವಿಧೆಡೆಗಳಲ್ಲಿ ಕೆಲವೊಂದು ಅಂಗಡಿಗಳು ತೆರೆದಿದ್ದವು. ಶುಕ್ರವಾರ ಬಂದ್ ನ ಸರಿಯಾದ ಮಾಹಿತಿ ಇಲ್ಲದ ಕಾರಣ ಸಾಕಷ್ಟು ಜನರು ತೊಂದರೆಗೀಡಾಗಿದ್ದರು. ಸಂಜೆ ವೇಳೆ ಅಲ್ಲಲ್ಲಿ ತೆರೆದಿರುವ ಅಂಗಡಿಗಳಿಗೆ ಜನರು ಅಗತ್ಯ ವಸ್ತುಗಳಿಗಾಗಿ ಮುಗಿಬಿದ್ದ ದೃಶ್ಯ ಕಂಡು ಬಂದಿತ್ತು. ಇಂದು ಬೆಳಗ್ಗಿನಿಂದಲೇ ಸರ್ಕಾರಿ […]

You cannot copy content of this page