November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕಾರ್ಡಿನಲ್ ರಾಬರ್ಟ್ ಫ್ರಾನ್ಸಿಸ್ ಪ್ರೆವೋಸ್ಟ್ ಹೊಸ ಪೋಪ್ ‘ಲಿಯೋ XIV’ ಆಗಿ ಆಯ್ಕೆ

ಕ್ಯಾಥೋಲಿಕ್ ಚರ್ಚ್‌ಗೆ ಐತಿಹಾಸಿಕ ಮತ್ತು ಸಂತೋಷದಾಯಕ ಕ್ಷಣದಲ್ಲಿ ಚಿಕಾಗೋದಲ್ಲಿ ಜನಿಸಿದ ಮಿಷನ್ ಮತ್ತು ಸೇವೆಗೆ ಆಳವಾದ ಬದ್ಧತೆಯನ್ನು ಹೊಂದಿರುವ 69 ವರ್ಷ ವಯಸ್ಸಿನ ಕಾರ್ಡಿನಲ್ ರಾಬರ್ಟ್ ಫ್ರಾನ್ಸಿಸ್ ಪ್ರೆವೋಸ್ಟ್, ಪೋಪ್ ಫ್ರಾನ್ಸಿಸ್ ಅವರ ನಂತರ ಹೊಸ ಪೋಪ್ ಆಗಿ ಆಯ್ಕೆಯಾಗಿದ್ದಾರೆ. ಅವರು ಪೋಪ್ ಲಿಯೋ XIV ಎಂಬ ಹೆಸರನ್ನು ಪಡೆದುಕೊಂಡಿದ್ದಾರೆ. ಕಾರ್ಡಿನಲ್ ಪ್ರೊಟೊಡೀಕಾನ್, ಡೊಮಿನಿಕ್ ಮಾಂಬರ್ಟಿ, “ಹ್ಯಾಬೆಮಸ್ ಪಾಪಮ್!” ಎಂದು ಘೋಷಿಸಲು ಸೈಂಟ್ ಪೀಟರ್ಸ್ ಬೆಸಿಲಿಕಾದ ಮಧ್ಯದ ಬಾಲ್ಕನಿಯಲ್ಲಿ ಹೆಜ್ಜೆ ಹಾಕಿದರು. ಹೊಸ ಪೋಪ್ ಹೊರಹೊಮ್ಮಿದರು, ಕೈ […]

News

ನೂತನ ಯಾಜಕ ಸ್ಟ್ಯಾನಿ ಪಿಂಟೊ ಇವರ ಪ್ರಥಮ ಕೃತಜ್ಞತಾ ದಿವ್ಯ ಬಲಿಪೂಜೆ

ಕಾರ್ಮೆಲೈಟ್ ಸಂಸ್ಥೆಗೆ ಸೂರಿಕುಮೇರು ಬೊರಿಮಾರ್ ಚರ್ಚ್ ನಿಂದ ಪ್ರಥಮ ಯಾಜಕ ಚರ್ಚ್ ಉಪಾಧ್ಯಕ್ಷ, ಕಾರ್ಯದರ್ಶಿ ಹಾಗೂ ಆಯೋಗಗಳ ಸಂಯೋಜಕರಿಂದ ಅಭಿನಂದನೆ ಮಂಗಳೂರಿನ ಬಿಕರ್ನಕಟ್ಟೆಯಲ್ಲಿರುವ ಬಾಲಯೇಸು ಪುಣ್ಯ ಕ್ಷೇತ್ರದಲ್ಲಿ ಮೇ 2ರಂದು ಶುಕ್ರವಾರ ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಫ್ರಾನ್ಸಿಸ್ ಸೆರಾವೊ ಇವರಿಂದ ಗುರುದೀಕ್ಷೆ ಪಡೆದ ಫಾದರ್ ಸ್ಟ್ಯಾನಿ ಲಿಸ್ಟನ್ ಪಿಂಟೊ OCD ಇವರು ಮೇ 7ರಂದು ಬುಧವಾರ ಬೆಳಗ್ಗೆ 10:00 ಗಂಟೆಗೆ ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಕುಟುಂಬದ ಸದಸ್ಯರೊಂದಿಗೆ ಪ್ರಥಮ ಕೃತಜ್ಞತಾ […]

News

ಪೆರುವಾಯಿ ಧರ್ಮಕೇಂದ್ರಕ್ಕೆ ಒಳಪಟ್ಟ ಫಾತಿಮಾ ಮಾತಾ ಸಭಾಭವನ ಲೋಕಾರ್ಪಣೆ

ಎಲ್ಲರ ಸಹಕಾರ ಅನ್ಯೋನ್ಯತೆಯಿಂದ ಸುಂದರ ಸಭಾಭವನ ನಿರ್ಮಾಣ – ಬಿಷಪ್ ಪೀಟರ್ ಪಾವ್ಲ್ ಮಂಗಳೂರು ಧರ್ಮಕ್ಷೇತ್ರದ ವಿಟ್ಲ ವಲಯದ ಪೆರುವಾಯಿ ಫಾತಿಮಾ ಮಾತೆಗೆ ಸಮರ್ಪಿಸಲ್ಪಟ್ಟ ಧರ್ಮಕೇಂದ್ರಕ್ಕೆ ಒಳಪಟ್ಟ ಅಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಫಾತಿಮಾ ಮಾತಾ ಸಮುದಾಯ ಭವನ ಮೇ 5ರಂದು ಸೋಮವಾರ ಲೋಕಾರ್ಪಣೆಗೊಂಡಿತು. ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ದಿವ್ಯ ಕೃತಜ್ಞತಾ ಬಲಿಪೂಜೆಯನ್ನು ನಡೆಸಿ ನೂತನ ಸಭಾಭವನವನ್ನು ಉದ್ಘಾಟಿಸಿ ಆಶೀರ್ವದಿಸಿದರು. ಎಲ್ಲರ ಸಹಕಾರ ಅನ್ಯೋನ್ಯತೆಯಿಂದ ಸುಂದರ ಸಭಾಭವನ ನಿರ್ಮಾಣಗೊಂಡು […]

News

ಮಾಣಿ ಇಲ್ಲಿನ ಲಕ್ಕಪ್ಪಕೋಡಿಯಲ್ಲಿ ನೂತನ ರುದ್ರಭೂಮಿಯ ಲೋಕಾರ್ಪಣೆ

ಮಾಣಿ ಗ್ರಾಮ ಪಂಚಾಯತ್ ವತಿಯಿಂದ ನಿರ್ಮಾಣ ಹುಟ್ಟು ಅಕಸ್ಮಿಕ ಸಾವು ನಿಶ್ಚಿತ. ಹುಟ್ಟು ಸಾವಿನ ಮಧ್ಯೆ ನಾವು ಮಾಡಿದ ಪುಣ್ಯದ ಕೆಲಸ ನಮ್ಮನ್ನು ಕಾಪಾಡುತ್ತದೆ. ಇದೂ ಒಂದು ಮೂಲಭೂತ ಸೌಕರ್ಯದ ಭಾಗವಾಗಿದೆ. ಈಗಿನ ಕಾಲಘಟ್ಟದಲ್ಲಿ ರುದ್ರಭೂಮಿಯ ಅವಶ್ಯಕತೆ ಬಹಳಷ್ಟಿದೆ. ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆರವರು ಹೇಳಿದರು. ಅವರು ಮೇ 2ರಂದು ಮಾಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಲಕ್ಕಪ್ಪಕೋಡಿ ಎಂಬಲ್ಲಿ ಗ್ರಾಮ ಪಂಚಾಯತ್ ವತಿಯಿಂದ ನೂತನವಾಗಿ ನಿರ್ಮಿಸಿದ ಹಿಂದೂ ರುದ್ರಭೂಮಿಯ ಲೋಕಾರ್ಪಣೆ ಬಳಿಕ […]

News

ಕುಲಶೇಖರ ಚರ್ಚ್ ಬಳಿಯ ಅಂಗಡಿ ಹಿಂಭಾಗದಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

ಅಪಸ್ಮಾರದಿಂದ ಬಳಲುತ್ತಿದ್ದ ಹಾಗೂ ಸ್ಕ್ರ್ಯಾಪ್ ಸಂಗ್ರಹಿಸುತ್ತಿದ್ದ ಶಕ್ತಿನಗರ ನಿವಾಸಿ 46 ವರ್ಷ ಪ್ರಾಯದ ಸುರೇಂದ್ರ ಎಂಬವರ ಕೊಳೆತ ಸ್ಥಿತಿಯಲ್ಲಿದ್ದ ಶವ ಕುಲಶೇಖರ ಚರ್ಚ್ ಬಳಿಯ ಅಂಗಡಿಯೊಂದರ ಹಿಂದೆ ಪತ್ತೆಯಾಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಅಂಗಡಿಯ ಹಿಂಭಾಗದಲ್ಲಿರುವ ಶೌಚಾಲಯದ ಬಳಿ ಕೊಳೆತ ಸ್ಥಿತಿಯಲ್ಲಿ ಆತನ ಶವ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಕದ್ರಿ ಪೊಲೀಸರು ಭೇಟಿ ನೀಡಿದ್ದು, ಸಹಾಯಕ ಪೊಲೀಸ್ ಆಯುಕ್ತ ಪ್ರತಾಪ್ ಸಿಂಹ ಥೋರಟ್ ಕೂಡ ಪರಿಶೀಲನೆ ನಡೆಸಿದ್ದಾರೆ.ತನಿಖೆ ನಡೆಯುತ್ತಿದೆ.

News

ನಾಳೆ ಮೇ 7ರಂದು ಸೂರಿಕುಮೇರು ಚರ್ಚ್ ನಲ್ಲಿ ನೂತನ ಧರ್ಮಗುರು ಫಾದರ್ ಸ್ಟ್ಯಾನಿ ಪಿಂಟೊ ಇವರ ಪ್ರಥಮ ಕೃತಜ್ಞತಾ ದಿವ್ಯ ಬಲಿಪೂಜೆ

ಮಂಗಳೂರಿನ ಬಿಕರ್ನಕಟ್ಟೆಯಲ್ಲಿರುವ ಬಾಲಯೇಸು ಪುಣ್ಯ ಕ್ಷೇತ್ರದಲ್ಲಿ ಮೇ 2ರಂದು ಶುಕ್ರವಾರ ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಫ್ರಾನ್ಸಿಸ್ ಸೆರಾವೊ ಇವರಿಂದ ಗುರುದೀಕ್ಷೆ ಪಡೆದ ಫಾದರ್ ಸ್ಟ್ಯಾನಿ ಲಿಸ್ಟನ್ ಪಿಂಟೊ OCD ಇವರು ನಾಳೆ ಮೇ 7ರಂದು ಬುಧವಾರ ಬೆಳಗ್ಗೆ 10:00 ಗಂಟೆಗೆ ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಕುಟುಂಬದ ಸದಸ್ಯರೊಂದಿಗೆ ಪ್ರಥಮ ಕೃತಜ್ಞತಾ ಬಲಿಪೂಜೆಯನ್ನು ನಡೆಸಲಿರುವರು. ಈ ಪವಿತ್ರ ಕಾರ್ಯಕ್ರಮಕ್ಕೆ ಮಂಗಳೂರು ಧರ್ಮಕ್ಷೇತ್ರದ ಧರ್ಮಗುರುಗಳು, ಕಾರ್ಮೆಲೈಟ್ ಸಂಸ್ಥೆಯ ಧರ್ಮಗುರುಗಳು, ವಿವಿಧ ಧರ್ಮಕ್ಷೇತ್ರದ ಧರ್ಮಗುರುಗಳು, […]

News

ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ PSI

ಬೆಂಗಳೂರು ನಗರದ ಕೆಂಪೇಗೌಡನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಆರೋಪಿಗಳ ಪರವಾಗಿ ವರದಿ ಸಲ್ಲಿಸಲು 1 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಠಾಣೆಯ PSI ಮತ್ತು PI ಅನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಆವಲಹಳ್ಳಿ ನಿವಾಸಿ ಕೇಶವಮೂರ್ತಿ ವಿರುದ್ಧ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಅವರ ಹೆಸರನ್ನು ಕೈಬಿಡಲು PI ಶಿವಾಜಿ ರಾವ್ ಮತ್ತು PSI ಶಿವಾನಂದ ಜಿ. 6 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಕೇಶವಮೂರ್ತಿರವರು ಲೋಕಾಯಕ್ತ ಪೊಲೀಸರಿಗೆ ದೂರು ನೀಡಿದ್ದರು. ಲೋಕಾಯುಕ್ತ […]

News

ವಕೀಲರು, ನೋಟರಿ ವಿರುದ್ಧ ವಿಚಾರಣೆಗೆ ಸರಕಾರದ ಅನುಮತಿ ಅಗತ್ಯ – ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

ಯಾವುದೇ ಲೋಪದೋಷಕ್ಕಾಗಿ ವಕೀಲರು ಅಥವಾ ನೋಟರಿ ವಿರುದ್ಧ ಪ್ರಕರಣಗಳು ದಾಖಲಾಗಿದ್ದರೆ ಅವರನ್ನು ವಿಚಾರಣೆಗೆ ಒಳಪಡಿಸಲು ರಾಜ್ಯ ಅಥವಾ ಕೇಂದ್ರ ಸರ್ಕಾರದ ಅನುಮತಿ ಅಗತ್ಯ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಮಂಗಳೂರಿನ ಪ್ರವೀಣ್ ಕುಮಾರ್ ಅದ್ಯಪಾಡಿ ಮತ್ತು ಈಶ್ವರ ಪೂಜಾರಿ ಎಂಬ ಇಬ್ಬರು ನೋಟರಿಗಳ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಿ ಕರ್ನಾಟಕ ಹೈಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ. ಪೋಕ್ಸೊ ಪ್ರಕರಣವೊಂದರ ಆರೋಪಿಗೆ ಸಹಾಯ ಮಾಡುವ ಉದ್ದೇಶದಿಂದ ಸಂತ್ರಸ್ತೆಯ ವಯಸ್ಸನ್ನು ಕುಶಲತೆಯಿಂದ ತಿದ್ದಿದ ಮತ್ತು ಅದರ ಆಧಾರದಲ್ಲಿ ಪ್ರಮಾಣ […]

News

ರಸ್ತೆ ಹಕ್ಕನ್ನು ಊರ್ಜಿತ ಇಡದೆ ಆಸ್ತಿ ಮಾರಾಟ ಮಾಡದಂತೆ ಖಾಯಂ ತಡೆಯಾಜ್ಞೆ

ಯುವ ನ್ಯಾಯವಾದಿ ರಾಜನಾರಾಯಣ ಮಳಿ ವಾದಿಸಿದ ದಾವೆ ವಿಭಾಗ ಪತ್ರದಲ್ಲಿ ಬಂದಂತಹ ಜಮೀನಿನಲ್ಲಿ ರಸ್ತೆ ಹಕ್ಕನ್ನು ಊರ್ಜಿತ ಇರಿಸಿ ಆ ಬಗ್ಗೆ ಸರಿಯಾದ ವ್ಯವಸ್ಥೆ ಮಾಡದ ವಿನಃ ಜಮೀನನ್ನು ಮಾರಾಟ ಮಾಡಬಾರದು ಎಂಬುದಾಗಿ ಖಾಯಂ ಪ್ರತಿಬಂಧಕ ಆಜ್ಞೆಯನ್ನು ಪುತ್ತೂರಿನ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ನೀಡಿದ್ದಾರೆ. ಪುತ್ತೂರಿನ ಪಡವನ್ನೂರು ಗ್ರಾಮದ ಮೀನಾವು ಮನೆಯ ಸಾಂತಪ್ಪ ರೈಯವರ ಮಕ್ಕಳಾದ ರವಿರಾಜ್ ರೈ ಮತ್ತು ರಾಜೇಶ್ ರೈ ಎಂಬವರು ಗಿರಿಜಾ ಯಾನೆ ಗೀತಾ ಮತ್ತು ಕಿಟ್ಟಣ್ಣರೈ ಎಂಬವರ ವಿರುದ್ಧ ಸಿವಿಲ್ ವ್ಯಾಜ್ಯವನ್ನು […]

You cannot copy content of this page