November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಧರ್ಮಸ್ಥಳದ ಯುವತಿ ಪಂಜಾಬ್ ನಲ್ಲಿ ನಿಗೂಢ ಸಾವು

ಸ್ಪೇಸ್ ಜೆಟ್ ಕಂಪನಿ ಉದ್ಯೋಗಿ ಧರ್ಮಸ್ಥಳದ 22 ವರ್ಷ ಪ್ರಾಯದ ಅಕಾಂಕ್ಷ ಎಸ್.ಎನ್. ಪಂಜಾಬ್ ನಲ್ಲಿ ನಿಗೂಢವಾಗಿ ಸಾವಿಗೀಡಾಗಿದ್ದಾರೆ. ಧರ್ಮಸ್ಥಳ ಗ್ರಾಮದ ಬೊಳಿಯಾರುನ ಅಕಾಂಕ್ಷ ಎಲ್.ಪಿ.ಯು. ಕಾಲೇಜು ಪಂಜಾಬ್ ಪಗುವಾರ ಜಲಂದರ್‌ನಲ್ಲಿ ಕಲಿತು ಸ್ಪೇಸ್ ಜೆಟ್ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದರು. ಪಂಜಾಬ್‌ನ ಎಲ್.ಪಿ.ಯು. ಪಗ್ವಾಡ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದಿದ್ದ ಈಕೆ ಆರು ತಿಂಗಳ ಹಿಂದೆಯಷ್ಟೇ ಏರೋಸ್ಪೇಸ್ ಇಂಜಿನಿಯರ್ ಆಗಿ ದೆಹಲಿಯಲ್ಲಿ ಉದ್ಯೋಗ ಮಾಡುತ್ತಿದ್ದರು. ಜಪಾನ್‌ಗೆ ಉದ್ಯೋಗಕ್ಕೆ ಹೋಗುವ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, ಪಂಜಾಬ್ ಎಲ್.ಪಿ.ಯು. ಪಗ್ವಾಡ […]

News

ಕರುಂಬಿತ್ತಿಲ್ ಶಿಬಿರ ರಜತ ಮಹೋತ್ಸವ ಆಚರಣೆ

ಮೇ 20 ರಿಂದ ಮೇ 25 ರವರೆಗೆ  ಕರುಂಬಿತ್ತಿಲ್  ಶಿಬಿರ ಕರುಂಬಿತ್ತಿಲ್ ಎಂಬ ಪ್ರಶಾಂತ ವಾತಾವರಣದಲ್ಲಿ ಪ್ರತೀ ಮೇ ತಿಂಗಳಲ್ಲಿ ಒಂದು ಪುಟ್ಟ ಸಂಗೀತ ಲೋಕವೇ ಸೃಷ್ಟಿಯಾಗುತ್ತದೆ. ಮನೆಯ ಸುತ್ತಮುತ್ತಲೂ ಸಂಗೀತದ ವಾತಾವರಣವೇ, ಮೂಲೆಮೂಲೆಗಳಲ್ಲೂ ಸಂಗೀತವು ಮಾರ್ದನಿಸುತ್ತದೆ. ಕಳೆದ 25 ವರ್ಷಗಳಿಂದ, ಅಂದರೆ, 2000 ನೇ ವರ್ಷದಿಂದ  ಧರ್ಮಸ್ಥಳದ ನಿಡ್ಲೆ ಎಂಬ ಪುಟ್ಟ ಗ್ರಾಮದಲ್ಲಿ ‘ಕರುಂಬಿತ್ತಿಲ್ ಶಿಬಿರ’ ಎನ್ನುವ ಹೆಸರಿನಲ್ಲಿ ಪ್ರತಿ ವರ್ಷವೂ ಸಂಗೀತ ಶಿಬಿರವು ನಡೆಯುತ್ತಿದೆ. ಈ ಬಾರಿಯ ಶಿಬಿರವು ಮೇ 20 ರಿಂದ ಮೇ […]

News

ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದಲ್ಲಿ 2025-26ರಿಂದ ಕಾನೂನು ಶಿಕ್ಷಣ ಆರಂಭ

ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಲಾ ಅಡಿಯಲ್ಲಿ ಕಾನೂನು ಶಿಕ್ಷಣವನ್ನು 2025-26ನೇ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಲು ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅಡ್ವಕೇಟ್ ಆಕ್ಟ್ 1961 ರ ಸೆಕ್ಷನ್ 7 (1) (ಐ) ರ ಅಡಿಯಲ್ಲಿ ಅನುಮೋದನೆಯನ್ನು ನೀಡಲಾಗಿದೆ. ಈ ಶೈಕ್ಷಣಿಕ ಕಾರ್ಯಕ್ರಮವನ್ನು 2025-26 ಮತ್ತು 2026-27ರ ಶೈಕ್ಷಣಿಕ ವರ್ಷಗಳಿಗೆ ಅನುಮೋದಿಸಲಾಗಿದೆ ಮತ್ತು ಕಾನೂನು ಶಿಕ್ಷಣ ನಿಯಮಗಳು-2008 ರ ನಿಯಮಗಳು ಮತ್ತು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಹೊರಡಿಸಿದ ಎಲ್ಲಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ […]

News

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡಗಳು ನೆಲಸಮ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರ ಸುತ್ತೋಲೆ ರಾಜ್ಯದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಹಾಗೂ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸಿದ್ದವರಿಗೆ ಸರ್ಕಾರ ಬಿಗ್ ಶಾಕ್ ನೀಡಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಸರ್ಕಾರ, ಸಾರ್ವಜನಿಕ ಸ್ವತ್ತಿನ ಹಾಗೂ ಮತ್ತಿತರ ಸಾರ್ವಜನಿಕ ಹಿತಾಸಕ್ತಿಯುಳ್ಳ ಸ್ವತ್ತಿನಲ್ಲಿ ನಿರ್ಮಾಣ ಮಾಡಿರುವಂತ ಕಟ್ಟಡ ನೆಲ ಸಮಗೊಳಿಸಲು ಎಲ್ಲಾ ಗ್ರಾಮ ಪಂಚಾಯತ್, ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಗಳಿಗೆ ಸೂಚಿಸಿದೆ. ಈ ಕುರಿತಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರು ಸುತ್ತೋಲೆ […]

News

ಅಪರಿಚಿತರಿಂದ ತಲವಾರು ಹಲ್ಲೆ – ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲು

SP ಹಾಗೂ ಪಶ್ಚಿಮ ವಲಯ DIGP ಹಲ್ಲೆ ನಡೆದ ಸ್ಥಳಕ್ಕೆ ಭೇಟಿ ಮೇ 16ರಂದು ಶುಕ್ರವಾರ ಸಾಯಂಕಾಲ ಸುಮಾರು 7.45 ಗಂಟೆಗೆ ಯಾಸಿರ್ ಅರಾಫತ್ ಅವರ ಕ್ಯಾಂಟೀನಿಗೆ ಬಂದ ದೂರದ ಸಂಬಂಧಿ, ಅಬ್ದುಲ್ ಹಮೀದ್ ತಂಪು ಪಾನೀಯ ಕುಡಿದು ಮೊಬೈಲ್ ನಲ್ಲಿ ಮಾತನಾಡಿಕೊಂಡಿದ್ದರು. ಆಗ ಬೈಕಿನಲ್ಲಿ ಅಲ್ಲಿಗೆ ಬಂದ ಇಬ್ಬರು ಅಪರಿಚಿತರು, ಅವರುಗಳ ಪೈಕಿ ಓರ್ವ ತಾನು ತಂದಿದ್ದ ತಲವಾರಿನಿಂದ ಅಬ್ದುಲ್ ಹಮೀದ್ ರವರಿಗೆ ಹಲ್ಲೆ ನಡೆಸಿರುತ್ತಾನೆ. ತಲವಾರಿನಿಂದ ಕಡಿದ ಪರಿಣಾಮ ಎಡಕೈಗೆ ಗಂಬೀರ ಗಾಯವಾಗಿರುತ್ತದೆ. ಗಾಯಗೊಂಡ ಅಬ್ದುಲ್ […]

News

ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ವಾರ್ಷಿಕ ಸಭೆ ಮತ್ತು ನೂತನ ಸಮಿತಿ ರಚನೆ

ಆರಂತೋಡು ಗ್ರಾಮದಲ್ಲಿ ವಿವಿಧ ಕ್ಷೆತ್ರದಲ್ಲಿ ಸಮಾಜ ಸೇವೆಯನ್ನು ನಡೆಸುತ್ತಾ ಬರುವ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ನ ವಾರ್ಷಿಕ ಸಭೆ ಮತ್ತು ನೂತನ ಸಮಿತಿ ರಚನೆಯು ಪಟೇಲ್ ಕಾಂಪ್ಲೆಕ್ಸ್ ನಲ್ಲಿ ಕ್ಲಬ್ ನ ಅಧ್ಯಕ್ಷರಾದ ಅಸ್ಲಾಂ ಪಟೇಲ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ವೇದಿಕೆಯಲ್ಲಿ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಗೌರವಾಧ್ಯಕ್ಷ ಮುಕ್ತರ್ ಪಟೇಲ್ ಮಾತನಾಡಿ ಕ್ಲಬ್ ನ ಉದ್ದೇಶ ಹಾಗೂ ಸಾಮಾಜಿಕ ಕಾರ್ಯಕ್ರಮದ ಬಗ್ಗೆ ಸಲಹೆ ಸೂಚನೆಯನ್ನು ನೀಡಿದರು. ನಂತರ ನೂತನ ಸಮಿತಿ ರಚನೆ ಮಾಡಲಾಯಿತು. ಗೌರವಾಧ್ಯಕ್ಷ […]

News

ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯ ನೂತನ ಕಚೇರಿ ‘ಪ್ರಜಾ ಸೌಧ’ ಲೋಕಾರ್ಪಣೆ

ದಕ್ಷಿಣ ಕನ್ನಡ ಜಿಲ್ಲಾಡಳಿತ, ಕಂದಾಯ ಇಲಾಖೆ, ಗೃಹ ಮಂಡಳಿ ಹಾಗೂ ಮಂಗಳೂರು ಸ್ಟಾರ್ಟ್ ಸಿಟಿ ವತಿಯಿಂದ ಒಟ್ಟು 75 ಕೋಟಿ ರೂಪಾಯಿ ವೆಚ್ಚದಲ್ಲಿ ಪಡೀಲ್‌ನಲ್ಲಿ ನಿರ್ಮಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ‘ಪ್ರಜಾಸೌಧ’ವನ್ನು ಮೇ 16ರಂದು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ನಾವೆಲ್ಲರೂ ಕನ್ನಡ ನಾಡಿನಲ್ಲಿ ಇರುವವರು. ಕನ್ನಡ ನಮ್ಮ ಅಧಿಕೃತ ಭಾಷೆ. ಕನ್ನಡಕ್ಕೆ ಮೊದಲ ಆದ್ಯತೆಯೊಂದಿಗೆ ತುಳುಭಾಷೆಗೆ ಅಧಿಕೃತ ಸ್ಥಾನಮಾನ ನೀಡುವ ಬಗ್ಗೆ ಪರಿಶೀಲನೆ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯದ ಎಲ್ಲಾ ಜನರಿಗೂ […]

News

ಬಡವರ ಏಳಿಗೆಗೆ ಸದಾ ಬದ್ಧ – ಸಿಎಂ ಸಿದ್ಧರಾಮಯ್ಯ

ಎಲ್ಲ ಜಾತಿ, ಧಮ೯ದವರ ಬಡವರನ್ನು ಸರಕಾರ ಮೇಲಕ್ಕೆತ್ತಲು ಸರಕಾರ ಹಲವಾರು ಕಾಯ೯ಕ್ರಮಗಳನ್ನು ಜಾರಿಗೆ ತಂದಿದೆ. ಇದರ ಬಗ್ಗೆ ಏನೇ ಟೀಕೆಗಳು ಬಂದರೂ ಸರಕಾರ ಯೋಜನೆಗಳನ್ನು ಮುಂದುವರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಅವರು ಮೇ 16ರಂದು ಶುಕ್ರವಾರ ಉಳ್ಳಾಲ ಸೈಯ್ಯದ್ ಮದನಿ ದಗಾ೯ ಉರೂಸ್ ಕಾಯ೯ಕ್ರಮದಲ್ಲಿ ಸಾಮಾಜಿಕ ಭಾವೈಕ್ಯತಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ದೇವರಾಜ ಅರಸು ನಂತರ ಕನಾ೯ಟಕದಲ್ಲಿ 5 ವಷ೯ ಪೂಣ೯ಗೊಳಿಸಿದ ಮುಖ್ಯಮಂತ್ರಿ ಎಂಬ ಕೀತಿ೯ ತನಗೆ ಹೆಮ್ಮೆ ಇದೆ. ಇದನ್ನು ಜನತೆಯ ಏಳಿಗೆಗೆ […]

News

ಬಂಟ್ವಾಳ ಕಂಚಿನಡ್ಕ ಬಳಿ ಲಾರಿಗಳ ನಡುವೆ ಅಪಘಾತ – ಬಿಸಿ ಜಲ್ಲಿ ಮಿಶ್ರಿತ ಡಾಮಾರು ಬಿದ್ದು ಚಾಲಕ ಸಾವು

ಕಂಚಿನಡ್ಕ ಪದವು ಎಂಬಲ್ಲಿ ಕೆಂಪು ಕಲ್ಲುಗಳನ್ನು ಸಾಗಿಸುತ್ತಿದ್ದ ಲಾರಿ ಸಜಿಪನಾಡು ಕಡೆಗೆ ಹೋಗುತ್ತಿದ್ದಾಗ ಹಿಂದಿನಿಂದ ಬಿಸಿ ಬಿಟುಮಿನ್ ಸಾಗಿಸುವ ಲಾರಿ ಚಾಲಕನ ನಿರ್ಲಕ್ಷ್ಯತನದ ಚಾಲನೆಯಿಂದಾಗಿ ಡಿಕ್ಕಿ ಹೊಡೆದು ಲಾರಿ ಚಾಲಕ ಸಾವನ್ನಪ್ಪಿದ ಘಟನೆ ನಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಲಾರಿ ಚಾಲಕನ ಮೇಲೆ ಬಿಸಿ ಜಲ್ಲಿ ಮಿಶ್ರಿತ ಡಾಮಾರು ಬಿದ್ದ ಪರಿಣಾಮ ಸಾವನಪ್ಪಿದ ಘಟನೆ ಬಂಟ್ವಾಳ ತಾಲೂಕಿನ ಕಂಚಿನಡ್ಕ ಬಳಿ ನಡೆದಿದೆ. ಮೃತರನ್ನು ಸಜೀಪನಡು ಗೋಳಿಪಡ್ಪು ನಿವಾಸಿ 45 ವರ್ಷ ಪ್ರಾಯದ ರಫೀಕ್ ಎಂದು ಗುರುತಿಸಲಾಗಿದೆ. ಲಾರಿಯಲ್ಲಿದ್ದ […]

News

ಕೋಮುದ್ವೇಷದ ಭಾಷಣ – ಆರೋಪಿ ಭರತ್ ವಿರುದ್ಧ ಪ್ರಕರಣ ದಾಖಲು

ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಸಬಾ ಗ್ರಾಮದಲ್ಲಿ ಕೋಮುದ್ವೇಶವನ್ನುಂಟು ಮಾಡುವಂತಹ ಭಾಷಣ ಮಾಡಿದ ಪ್ರಕರಣವು ಬೆಳಕಿಗೆ ಬಂದಿದೆ. ಮೇ 15ರಂದು ಸಂಜೆ ಪುತ್ತೂರು ತಾಲೂಕಿನ ಕಸಬಾ ಗ್ರಾಮದ ಬೈಪಾಸ್ ರಸ್ತೆಯಲ್ಲಿರುವ ಜೈನ ಭವನದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಆರೋಪಿತನಾದ ಭರತ್ ಕುಂಮ್ಡೇಲು ಎಂಬಾತನು ಕೋಮು ದ್ವೇಷವನ್ನು ಉಂಟುಮಾಡುವಂತಹ ಭಾಷಣವನ್ನು ಮಾಡಿರುವುದಾಗಿದೆ. ಆರೋಪಿಯ ಕೋಮು ದ್ವೇಷದ ಮಾತುಗಳಿಂದ ಸಾರ್ವಜನಿಕ ನೆಮ್ಮದಿಗೆ ಭಂಗ ಉಂಟಾಗುವ ಸಾಧ್ಯತೆಗಳಿರುವುದರಿಂದ ಆರೋಪಿತನ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ.35/2025 ಕಲಂ-196,353(2) BNS […]

You cannot copy content of this page