November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ತುಂಬೆ ಫಾದರ್ ಮುಲ್ಲರ್ ಕಾಲೇಜ್ ಆಫ್ ನರ್ಸಿಂಗ್ ನಲ್ಲಿ ಮಕ್ಕಳ ನರ್ಸಿಂಗ್ ಕುರಿತು ‘ಪೀಡಿಯಾಕಾನ್-2025’ ಪ್ರಾದೇಶಿಕ ಸಮ್ಮೇಳನ – ಪತ್ರಿಕಾಗೋಷ್ಠಿ

ತುಂಬೆ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನ ವತಿಯಿಂದ ಸ್ವಿಫ್ಟ್ ಹ್ಯಾಂಡ್ಸ್-ಸೇಫ್‌ಗಾರ್ಡಿಂಗ್ ಲಿಟಲ್ ಲೈವ್ಸ್ ಎಂಬ ಧ್ಯೇಯದಡಿ ಪೀಡಿಯಾಕಾನ್-2025 ಎಂಬ ಪ್ರಾದೇಶಿಕ ಸಮ್ಮೇಳನವನ್ನು ಮೇ 24ರಂದು ಬೆಳಗ್ಗೆ 9ರಿಂದ ಕಾಲೇಜಿನ ಫ್ಲೋರೆನ್ಸ್ ನೈಂಟಿಗೇಲ್ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದು, ಮಕ್ಕಳ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ನರ್ಸ್ ಗಳ ಕೌಶಲ್ಯವೃದ್ಧಿಗೆ ಈ ಸಮ್ಮೇಳನ ಪೂರಕವಾಗಲಿದೆ ಎಂದು ಮಂಗಳೂರು ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಶನ್ಸ್ ನಿರ್ದೇಶಕ ವಂದನೀಯ ಫಾದರ್ ರಿಚ್ಚರ್ಡ್ ಅಲೋಶಿಯಸ್ ಕುವೆಲ್ಲೊ ಹೇಳಿದರು. ಅವರು ತುಂಬೆ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನಲ್ಲಿ ಸಮ್ಮೇಳನದ […]

News

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ: ದುರಂತ ಸಂಭವಿಸಿ 15 ವರ್ಷಗಳಾದರೂ ಸುರಕ್ಷತಾ ಪಟ್ಟಿ ಇನ್ನೂ ನಿರ್ಮಾಣವಾಗಿಲ್ಲ

ಪುನರಾವರ್ತಿತ ಶಿಫಾರಸುಗಳು ಮತ್ತು ಎಚ್ಚರಿಕೆಗಳ ಹೊರತಾಗಿಯೂ, ಮಂಗಳೂರು ವಿಮಾನ ನಿಲ್ದಾಣದಲ್ಲಿ ನಿರ್ಣಾಯಕ ಸುರಕ್ಷತಾ ಕ್ರಮಗಳು ಇನ್ನೂ ಅನಿಶ್ಚಿತತೆಯಲ್ಲಿವೆ, ದಿನಾಲೂ ಸಾವಿರಾರು ಪ್ರಯಾಣಿಕರು ಅದೇ ಅಪಾಯಗಳಿಗೆ ಗುರಿಯಾಗುತ್ತಾರೆ. 15 ವರ್ಷಗಳ ಹಿಂದೆ ಮೇ 22ರಂದು ಅಪಘಾತಕ್ಕೀಡಾಗಿ 158 ವಿಮಾನ ಪ್ರಯಾಣಿಕರನ್ನು ಬಲಿ ಪಡೆದ ದುರಂತವು; ಮಂಗಳೂರು ನಿಲ್ದಾಣದಲ್ಲಿ ನಡೆದ ನಂತರ – ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು 280 ಎಕ್ರೆ ಹೆಚ್ಚುವರಿ ಭೂಮಿಯನ್ನು ಮೂಲ ಸುರಕ್ಷತಾ ಕ್ರಮಗಳನ್ನು ನಿರ್ಮಿಸಲು ಕೋರಿತ್ತು. ದುರಂತದ ನಂತರ ಶಿಫಾರಸು ಮಾಡಲಾದ ಅಗತ್ಯ ಸುರಕ್ಷತಾ […]

News

ಧರ್ಮಸ್ಥಳದಲ್ಲಿ ವ್ಯಸನಮುಕ್ತರ ಸಮ್ಮಿಲನ ಮತ್ತು ಶತದಿನೋತ್ಸವ ಸಮಾರಂಭ

ಮನುಷ್ಯರು ವ್ಯಸನಗಳ ದಾಸರಾಗಬಾರದು. ಚಟಗಳಿಂದಾಗಿ ಹಣ, ಆರೋಗ್ಯ, ಮರ್ಯಾದೆ, ಪ್ರೀತಿ-ವಿಶ್ವಾಸ ಎಲ್ಲವನ್ನೂ ಮದ್ಯವ್ಯಸನಿಗಳು ಕಳೆದುಕೊಳ್ಳುತ್ತಾರೆ. ವ್ಯಸನಮುಕ್ತರು ನರಕವನ್ನು ದಾಟಿ ಬಂದ ನಾಯಕರು ಎಂದು ಶಿರಹಟ್ಟಿ ಭಾವೈಕ್ಯತಾ ಪೀಠದ ಪೂಜ್ಯ ಮಹಾರಾಜ ನಿರಂಜನ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು. ಅವರು ಧರ್ಮಸ್ಥಳದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ ಆಯೋಜಿಸಿದ 2900 ಮಂದಿ ವ್ಯಸನಮುಕ್ತರ ಸಮ್ಮಿಲನ ಮತ್ತು ಶತದಿನೋತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಸರ್ಕಾರ ಮದ್ಯ ಕುಡಿಸಬೇಕು ಎಂದು ಹೇಳಿದರೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು […]

News

ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಬೇಸಿಗೆ ಶಿಬಿರ ಪೂರಕವಾಗವಾಗಲಿದೆ – ಸುದೀಪ್ ಕುಮಾರ್ ಶೆಟ್ಟಿ

ಮಾಣಿ ಗ್ರಾಮ ಪಂಚಾಯತ್ ವತಿಯಿಂದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಬೇಸಿಗೆ ಶಿಬಿರ ಪೂರಕವಾಗವಾಗಲಿದೆ ಎಂದು ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಹೇಳಿದರು. ಮಾಣಿ ಗ್ರಾಮ ಪಂಚಾಯತ್ತಿನ ಅರಿವು ಕೇಂದ್ರದ ವತಿಯಿಂದ ಜರುಗಿದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಕ್ಕಳ ಜ್ಞಾನದ ಬೆಳವಣಿಗೆಯ ದೃಷ್ಟಿಯಿಂದ ಸರಕಾರ ಹಮ್ಮಿಕೊಳ್ಳುತ್ತಿರುವ ಇಂತಹ ಕಾರ್ಯಕ್ರಮ ಶ್ಲಾಘನೀಯ ಎಂದು ಅವರು ಹೇಳಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಿರಿಜಾ ಪ್ರಾಸ್ತಾವಿಕವಾಗಿ […]

News

ಆಸ್ತಿ ನೋಂದಣಿಯಲ್ಲಿ ಮತ್ತೊಂದು ಹೊಸ ನಿಯಮ

ನಿಯಮ ಪಾಲಿಸದಿದ್ದರೆ ಆಸ್ತಿ ವರ್ಗಾವಣೆ ಆಗುವುದಿಲ್ಲ! ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಮತ್ತೊಂದು ಹೊಸ ನಿಯಮವನ್ನು ಜಾರಿಗೆ ತಂದಿದೆ. ಈ ನಿಯಮ ಪಾಲಿಸದೇ ಇದ್ದರೆ, ನಿಮ್ಮ ಪರಭಾರೆ, ಆಸ್ತಿ ವರ್ಗಾವಣೆ ನೋಂದಣಿಯೇ ಆಗುವುದಿಲ್ಲ. ರೂಪಾಯಿ 30 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಆಸ್ತಿ ಖರೀದಿ ನೋಂದಣಿಯ ವೇಳೆ ಮಾರಾಟಗಾರರು ಮತ್ತು ಖರೀದಿದಾರರು ತಮ್ಮ ಪಾನ್ (PAN) ವಿವರವನ್ನು ಸಲ್ಲಿಸುವುದನ್ನು ಕಡ್ಡಾಯ ಮಾಡಲಾಗಿದೆ. ಮುದ್ರಾಂಕ ಆಯುಕ್ತರು ಮೇ 16 ರಂದು ರಾಜ್ಯದ ಎಲ್ಲಾ ಜಿಲ್ಲಾ ನೋಂದಣಾಧಿಕಾರಿಗಳು […]

News

SKSSF ವತಿಯಿಂದ ಆತೂರಿನಲ್ಲಿ ಸಾಮೂಹಿಕ ವಿವಾಹ

ರಾಮಕುಂಜ ಬದ್ರಿಯಾ ಜುಮಾ ಮಸೀದಿ ಆತೂರು ಹಾಗೂ SKSSF ಆತೂರು ಶಾಖೆ ಇದರ ವತಿಯಿಂದ 2 ಬಡ ಸಹೋದರಿಯರ ಸಾಮೂಹಿಕ ವಿವಾಹ ಕಾರ್ಯಕ್ರಮವು ಮೇ 18ರಂದು ಆತೂರು ಸುಲ್ತಾನುಲ್ ಹಿಂದ್ ವೇದಿಕೆಯಲ್ಲಿ ನಡೆಯಿತು. ಉಸ್ತಾದ್ ಉಸ್ಮಾನ್ ಫೈಝಿ ತೋಡರು ನಿಖಹ್ ಗೆ ನೇತೃತ್ವ ನೀಡಿ ಸಂದೇಶ ಭಾಷಣ ಮಾಡಿದರು. ಅಸ್ಸಯ್ಯದ್ ಮುಹಮ್ಮದ್ ಜುನೈದ್ ಜಿಫ್ರಿ ತಂಗಳ್ ಆತೂರುರವರು ಕಾರ್ಯಕ್ರಮದ ಉದ್ಘಾಟನೆಯ ಮೂಲಕ ದುಆಗೆ ನೇತೃತ್ವ ನೀಡಿದರು. ಅಹಮದ್ ಕುಂಞಿರವರು ಅಧ್ಯಕ್ಷತೆ ವಹಿಸಿದರು. ಮುಹಮ್ಮದ್ ಮುಸ್ಲಿಯಾರ್ ಮುಂದೊಳೆ ಮುಖ್ಯ […]

News

ಕಿಯಾ ಮೋಟರ್ಸ್ ಇಂಡಿಯಾ ಇವರ ನೂತನ  ಕಿಯಾ ಕಾರೆನ್ಸ್ ಕ್ಲಾವಿಸ್ ಕಾರು ಮಾರುಕಟ್ಟೆಗೆ

ದೇಶದ ಪ್ರಖ್ಯಾತ ಅಟೋಮೊಬೈಲ್ ಕಂಪನಿ ಕಿಯಾ ಮೋಟರ್ಸ್ ಇಂಡಿಯಾ ಇವರ ನೂತನ ಕಿಯಾ ಕಾರೆನ್ಸ್ ಕ್ಲಾವಿಸ್ ಕಾರನ್ನು ಕಿಯಾ ಇಂಡಿಯಾದ ಕರಾವಳಿ ಕರ್ನಾಟಕ ಮತ್ತು ಕೊಡಗು ಜಿಲ್ಲೆಯ ಪ್ರಥಮ ಅಧಿಕೃತ ಡೀಲರ್ ಎ.ಆರ್.ಎಂ. ಮೋಟರ್ಸ್‌ ನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ರಮಾನಾಥ ಎಂಟರ್‌ಪ್ರೈಸಸ್ ಇದರ ವ್ಯವಸ್ಥಾಪಕ ನಿರ್ದೇಶಕರು ಪ್ರಸನ್ನ ಹಾಗೂ ಕಿಯಾ ಕಾರೆನ್ಸ್ ಕ್ಲಾವಿಸ್ ಕಾರಿನ ಗ್ರಾಹಕರಾದ ಮಹಮ್ಮದ್ ರಶೀದ್‌ರವರು ನೂತನ ಕಾರನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಎ.ಆರ್.ಎಂ. ಮೋಟರ್ಸ್‌ನ ಎಂ.ಡಿ. […]

News

ಕಾರಿನಲ್ಲಿ ಆಡವಾಡುತ್ತಿದ್ದಾಗ ಉಸಿರುಗಟ್ಟಿ ನಾಲ್ಕು ಮಕ್ಕಳ ಧಾರುಣ ಅಂತ್ಯ

ಆಂಧ್ರಪ್ರದೇಶದ ದ್ವಾರಪುಡಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ನಗುಮೊಗದ ನಾಲ್ಕು ಪುಟ್ಟ ಮಕ್ಕಳಾದ ಉದಯ್ (8), ಮುದ್ದು ಚಾರುಮತಿ (8), ಚಿಣ್ಣರಾಣಿ ಚರಿಷ್ಮಾ (6) ಮತ್ತು ಪುಟಾಣಿ ಮನಸ್ವಿ (6), ಆಟವಾಡುತ್ತಾ ಕಾರಿನೊಳಗೆ ಸೇರಿ, ವಿಧಿಯ ಕ್ರೂರತೆಗೆ ಬಲಿಯಾಗಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ರಜೆಯ ಸಂಭ್ರಮದಲ್ಲಿದ್ದ ನಾಲ್ಕು ಮಕ್ಕಳು ಮೇ 18ರಂದು ಭಾನುವಾರ ಬೆಳಿಗ್ಗೆ ತಿಂಡಿ ಮುಗಿಸಿ ನಲಿಯುತ್ತಾ ಮನೆಯಿಂದ ಹೊರಬಂದಿದ್ದವು. ಅವರ ನಗು, ಚಿಲಿಪಿಲಿ ಮಾತುಗಳು ಇಡೀ ಪರಿಸರವನ್ನೇ ಬೆಳಗಿದ್ದವು. ಆಟವಾಡುತ್ತಾ ಗ್ರಾಮದ ಮಹಿಳಾ ಮಂಡಲ ಕಚೇರಿ […]

News

ಕಥೊಲಿಕ್ ಸಭಾ ಕೇಂದ್ರೀಯ ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ ಇವರಿಗೆ ಹುಟ್ಟೂರಿನ ಬಜ್ಪೆ ಚರ್ಚ್ ನಲ್ಲಿ ಸನ್ಮಾನ

ಚರ್ಚ್ ಧರ್ಮಗುರು ಫಾದರ್ ಕುಟಿನ್ಹೊ ಹಾಗೂ ಭಕ್ತಾಧಿಗಳಿಂದ ಅಭಿನಂದನೆ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಂತೋಷ್ ಡಿಸೋಜ ಬಜ್ಪೆ ಇವರನ್ನು ತನ್ನ ಹುಟ್ಟೂರಿನ ಬಜ್ಪೆಯ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಧರ್ಮ ಕೇಂದ್ರದ ಸರ್ವ ಭಕ್ತಾಧಿಗಳ ಪರವಾಗಿ ಚರ್ಚ್ ಪ್ರಧಾನ ಧರ್ಮಗುರು ವಂದನೀಯ ಡಾ. ರೊನಾಲ್ಡ್ ಕುಟಿನ್ಹೊ ಶಾಲು ಹೊದಿಸಿ, ಹೂಗುಚ್ಚ ನೀಡಿ ಮೇ 18ರಂದು ಭಾನುವಾರ ಪೂಜೆಯ ಬಳಿಕ ಸನ್ಮಾನಿಸಿ ಅಭಿನಂದನೆಗಳನ್ನು ಸಲ್ಲಿಸಿದರು. ಸಂತೋಷ್ ಡಿಸೋಜರವರು ಬಜ್ಪೆ […]

News

ಅನಧಿಕೃತ ಗೂಡಂಗಡಿಗಳನ್ನು ತಕ್ಷಣ ತೆರವುಗೊಳಿಸಲು ಮಂಗಳೂರು ಪಾಲಿಕೆಯ ಆದೇಶ

ತೆರವುಗೊಳಿಸದ ಗೂಡಂಗಡಿಗಳ ಮೇಲೆ ಕ್ರಮ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ ಪಾಲಿಕಾ ಆಯುಕ್ತರು. ಮಂಗಳೂರು ಮಹಾನಗರ ಪಾಲಿಕಾ ವ್ಯಾಪ್ತಿಯಲ್ಲಿ 6 ಲಕ್ಷ ಜನರು ವಾಸಿಸುತ್ತಿದ್ದಾರೆ. ಇದರಿಂದಾಗಿ ವಾಹನ ಜನದಟ್ಟಣೆ ಹಾಗೂ ಜನ ಸಂಚಾರ ಹೆಚ್ಚಿರುವ ಅಪಾಯಕಾರಿ ರಸ್ತೆಯಾಗಿ ಮಾರ್ಪಟ್ಟಿದೆ. ಆದರೂ ರಸ್ತೆಯ ಇಕ್ಕೆಲಗಳಲ್ಲಿ ಅನಧಿಕೃತ ಬೀದಿಬದಿ ವ್ಯಾಪಾರಿಸ್ಥರ ದೊಡ್ಡ ಹಿಂಡೇ ಇದೆ. ಯಾವ ಸರಕಾರ ಬಂದರೂ ಕೂಡ ಇವರ ಎತ್ತಂಗಡಿಯಾಗೊಲ್ಲ. ಬಹಳಷ್ಟು ಬಾರಿ ಪತ್ರಿಕೆ ಹಾಗೂ ಟಿವಿ ಚಾನಲ್ ಗಳಲ್ಲಿ ಈ ವಿಷಯವು ಬಂದರೂ ಮಂಗಳೂರು ಮಹಾನಗರ ಪಾಲಿಕೆಯು […]

You cannot copy content of this page