November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಅಬ್ದುಲ್ ರಹಿಮಾನ್ ಎಂಬವರ ಕೊಲೆ ಪ್ರಕರಣದ ಮೂವರು ಆರೋಪಿಗಳ ಸೆರೆ

ಪಿಕಪ್ ಚಾಲಕ ಅಬ್ದುಲ್ ರೆಹಮಾನ್ ಯಾನೆ ರಹೀಂ ಅವರ ಕೊಲೆ ಪ್ರಕರಣದಲ್ಲಿ ಆರೋಪಿಗಳ ಶೀಘ್ರ ಪತ್ತೆಗಾಗಿ ಬಂಟ್ವಾಳ ಪೊಲೀಸ್ ಉಪಾಧೀಕ್ಷಕರನ್ನು ಪ್ರಕರಣದ ತನಿಖಾಧಿಕಾರಿಯನ್ನಾಗಿ ನೇಮಿಸಿ 5 ತನಿಖಾ ತಂಡಗಳನ್ನು ರಚಿಸಿ ಆರೋಪಿಯ ಪತ್ತೆ ಕಾರ್ಯವನ್ನು ನಡೆಸಲಾಗಿದೆ. ಆದರಂತೆ ಮೇ 29ರಂದು ಗುರುವಾರ ಬಂಟ್ವಾಳ ಕಳ್ಳಿಗೆ ಗ್ರಾಮದ ಕನಪಾಡಿ ಎಂಬಲ್ಲಿ ದೀಪಕ್, ಪ್ರಥ್ವಿರಾಜ್ ಹಾಗೂ ಚಿಂತನ್ ಎಂಬ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು ಅವರ ವಿಚಾರಣೆಯನ್ನು ನಡೆಸಲಾಗುತ್ತದೆ. ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. ವಶಕ್ಕೆ ಪಡೆಯಲಾಗಿರುವ ಆರೋಪಿಗಳ ವಿವರ […]

News

ಮಂಗಳೂರು ನಗರ ಪೊಲೀಸ್ ಕಮಿಷನರ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ವರ್ಗಾವಣೆ

ನೂತನ ಕಮಿಷನರ್ ಆಗಿ ಸುಧೀರ್ ಕುಮಾರ್ ರೆಡ್ಡಿ ಹಾಗೂ ನೂತನ ಎಸ್ಪಿಯಾಗಿ ಡಾ. ಅರುಣ್ ಕೆ. ನೇಮಕ ಮಂಗಳೂರು ನಗರ ನೂತನ ಪೊಲೀಸ್ ಆಯುಕ್ತರಾಗಿ ಸುಧೀರ್ ಕುಮಾರ್ ರೆಡ್ಡಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಯಾಗಿ ಡಾ. ಅರುಣ್ ಕೆ. ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಇಂದು ಮೇ 29ರಂದು ಗುರುವಾರ ಆದೇಶ ಹೊರಡಿಸಿದೆ. ಸುಧೀರ್ ಕುಮಾರ್ ರೆಡ್ಡಿ ಇದುವರೆಗೂ ಬೇಹುಗಾರಿಕಾ ಇಲಾಖೆಯ ಡಿ.ಐ.ಜಿ. ಆಗಿದ್ದರು. ಇವರು ವರ್ಗಾವಣೆಯಾಗಿರುವ ಅನುಪಮ್ ಅಗ್ರವಾಲ್ ರವರ ಸ್ಥಾನಕ್ಕೆ ಮಂಗಳೂರು […]

News

ಕಥೊಲಿಕ್ ಸಭಾ ಕೇಂದ್ರೀಯ ನೂತನ ಪದಾಧಿಕಾರಿಗಳಿಂದ ಬಿಷಪ್ ಭೇಟಿ

“ಕಥೊಲಿಕ ಸಮುದಾಯದೊಳಗೆ ಸಾಮಾಜಿಕ ಕಾರ್ಯವನ್ನು ಮಾಡಲು ಸ್ವಯಂಸೇವಕರಾಗಿ ಸಾಮಾಜಿಕ ನ್ಯಾಯಕ್ಕಾಗಿ ಸಲಹೆ ನೀಡುವುದು ಮತ್ತು ನಂಬಿಕೆ ಆಧಾರಿತ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದನ್ನು ಪರಿಗಣಿಸಿ ನೀವು ಸಾಮಾಜಿಕ ಕಾರ್ಯವನ್ನು ಮುಂದುವರಿಸಬೇಕು. ಆಧ್ಯಾತ್ಮಿಕತೆ ಸಂಯೋಜಿಸುವಂತಹ ಸೃಜನಾತ್ಮಕತೆಯ ಅಂಶಗಳ ಮೇಲೆ ಗಮನ ಕೇಂದ್ರೀಕರಿಸಿರಿ. ನಿಮ್ಮ ಕೆಲಸದಲ್ಲಿ ನಮ್ರತೆ, ಕ್ಷಮೆ ಮತ್ತು ಭರವಸೆಯಂತಹ ಕ್ರಿಸ್ತನ ಮೌಲ್ಯಗಳನ್ನು ಅಳವಡಿಸಿಕೊಳ್ಳಿ ಮತ್ತು ದುರ್ಬಲ ವ್ಯಕ್ತಿಗಳು ಮತ್ತು ಸಮುದಾಯಗಳ ಅಗತ್ಯಗಳಿಗೆ ಆದ್ಯತೆ ನೀಡಿ” ಎಂದು ಮಂಗಳೂರು ಧರ್ಮಕ್ಷೇತ್ರದ ಧರ್ಮಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ […]

News

ಕೊಳ್ತಮಜಲು ಅಬ್ದುಲ್‌ ರಹೀಂ ನಿವಾಸಕ್ಕೆ ಹಾಗೂ ಗಾಯಗೊಂಡ ಕಲಂದರ್‌ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ MLC ಐವನ್‌ ಡಿಸೋಜ ಭೇಟಿ

ಕೊಳ್ತಮಜಲು ಅಬ್ದುಲ್‌ ರಹೀಂರವರನ್ನು ಗುಂಪೊಂದು ವ್ಯಾಪಾರ ದೃಷ್ಟಿಯಿಂದ ಕರೆದು ವಂಚನೆ ಮಾಡಿ ಕೊಲೆ ಮಾಡುವ ಮೂಲಕ ಸಮಾಜದಲ್ಲಿ ಮಾಡಿದ ಹೇಯ ಕೃತ್ಯವನ್ನು ವಿಧಾನ ಪರಿಷತ್‌ ಶಾಸಕ ಐವನ್‌ ಡಿಸೋಜರವರು ತೀವ್ರವಾಗಿ ಖಂಡಿಸಿದ್ದಾರೆ. ಇಂದು ಮೇ 29ರಂದು ಗುರುವಾರ ಅವರ ಮನೆಗೆ ಭೇಟಿ ನೀಡಿ ಅವರ ಕುಟುಂಬಸ್ಥರಿಗೆ ಸಾಂತ್ವನ ನೀಡಿದರಲ್ಲದೇ ಇದರ ಹಿಂದೆ ಇರುವ ಶಕ್ತಿಗಳನ್ನು ಯಾವುದೇ ಮುಲಾಜಿಲ್ಲದೇ ಮಟ್ಟಹಾಕಲು ಸರಕಾರವು ಬದ್ದವಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಐವನ್‌ ಡಿಸೋಜರವರು ಸಮಾಜದಲ್ಲಿ ಘಾತುಕ ಶಕ್ತಿಗಳು ಮತ್ತು […]

News

ಬೆಂಗಳೂರಿನ ಪ್ರತಿಷ್ಠಿತ ವಕೀಲ ಕೆ.ಎನ್. ಜಗದೀಶ್ ಕುಮಾರ್ ರವರು ವಕೀಲ ವೃತ್ತಿಯನ್ನು ಮುಂದುವರಿಸಬಹುದು – ಬಾರ್ ಕೌನ್ಸಿಲ್ ಆಫ್ ಇಂಡಿಯಾ ತೀರ್ಪು

ಕಾನೂನಿನ ಮುಖಾಂತರ ಅನ್ಯಾಯದ ವಿರುದ್ಧ ಹೋರಾಟಕ್ಕೆ ಸಿಕ್ಕ ಜಯ ಅನ್ಯಾಯದ ವಿರುದ್ಧ ಹೋರಾಟ ನಡೆಸಿ ದೊಡ್ಡ ದೊಡ್ಡ ತಿಮಿಂಗಿಲಗಳಿಗೆ ಕೆಂಗಣ್ಣಾಗಿದ್ದ ಬೆಂಗಳೂರಿನ ಪ್ರಸಿದ್ಧ ಪ್ರತಿಷ್ಠಿತ ವಕೀಲ ಕೆ.ಎನ್. ಜಗದೀಶ್ ಕುಮಾರ್ ರವರು ಯಾವುದೇ ನಿಗದಿತ ಅಥವಾ ಅಪೇಕ್ಷಿತ ಶೈಕ್ಷಣಿಕ ಅರ್ಹತೆ ಇಲ್ಲದೇ ರಾಜ್ಯ ಬಾರ್ ಕೌನ್ಸಿಲ್ ನಲ್ಲಿ ವಕೀಲರಾಗಿ ದಾಖಲಾಗಿದ್ದಾರೆ. ಅವರು ಮಾಡಿದ ಪಿಯುಸಿ ಅಂದರೆ ಪದವಿಪೂರ್ವ ವಿದ್ಯಾಭ್ಯಾಸ ರಾಜಸ್ಥಾನದ ಶಿಕ್ಷಣ ಮಂಡಳಿಯಿಂದ ಅನುಮತಿ ಪಡೆದಿಲ್ಲ. ಆದುದರಿಂದ ಅವರು ಪದವಿ ಹಾಗೂ ಕಾನೂನು ಕೋರ್ಸಿಗೆ ಪ್ರವೇಶ ಪಡೆಯಲು ಅರ್ಹರಲ್ಲ […]

News

ಮಂಗಳೂರು ಗಣಿ ಇಲಾಖೆ ಉಪನಿರ್ದೇಶಕರ ಲಂಚ ಸ್ವೀಕಾರ – ರೆಡ್ ಹ್ಯಾಂಡ್ ಆಗಿ ಬಲೆಗೆ

ಅಧಿಕಾರಿ ಕೃಷ್ಣವೇಣಿ ಹಾಗೂ ಸಿಬ್ಬಂದಿ ಲೋಕಾಯುಕ್ತ ಪೊಲೀಸ್ ವಶಕ್ಕೆ ಉಳ್ಳಾಲ ತಾಲೂಕು ಇರಾ ಗ್ರಾಮದ ಸರ್ವೇ ನಂಬರ್ 279/5 ರಲ್ಲಿನ 35 ಸೆಂಟ್ಸ್ ಪ್ರದೇಶದಲ್ಲಿ ಲಭ್ಯವಿರುವ ಕಟ್ಟಡ ಕಲ್ಲು ತೆಗೆಯಲು ದೃಢೀಕರಣ ಪತ್ರ ನೀಡಬಹುದೆಂದು ಉಳ್ಳಾಲ ತಹಶೀಲ್ದಾರರು ಮಾರ್ಚ್ 21ರಂದು ವರದಿಯನ್ನು ನೀಡಿದ್ದರು. ಈ ವರದಿಯನ್ನು ಉಲ್ಲೇಖಿಸಿ ಮಂಗಳೂರು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಪಿರ್ಯಾದುದಾರರು ಅರ್ಜಿ ಸಲ್ಲಿಸಿದ್ದರೂ ಅವರು ಅನುಮತಿ ನೀಡಿರಲಿಲ್ಲ. ಇದರ ಬಗ್ಗೆ ವಿಚಾರಿಸಲು ಗಣಿ ಇಲಾಖೆ ಕಚೇರಿಗೆ ಪಿರ್ಯಾದುದಾರರು  ಮೇ 28ರಂದು ತೆರಳಿದ್ದು, […]

News

ಕೊಳತ್ತಮಜಲು ರಹಿಮಾನ್ ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಶೀಘ್ರ ಬಂಧಿಸಿ – AICU ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್

ಬಂಟ್ವಾಳದ ಕೊಳತ್ತಮಜಲು ಅಬ್ದುಲ್ ರಹಿಮಾನ್ ಎಂಬ ಯುವಕನನ್ನು ಮೇ 27ರಂದು ಮಂಗಳವಾರ ದುಷ್ಕರ್ಮಿಗಳು ವ್ಯವಸ್ಥಿತ ಹಾಗೂ ಪೂರ್ವ ಯೋಜಿತವಾಗಿ ಹತ್ಯೆ ಮಾಡಿದ್ದು, ಹತ್ಯೆಯ ಸಂಚುದಾರರು ಈ ಹಿಂದೆಯೇ ಬಹಿರಂಗವಾಗಿ ಘೋಷಿಸಿದ್ದು ಪೊಲೀಸರು ಕೂಡಲೇ ಹತ್ಯೆಯಲ್ಲಿ ಭಾಗಿಯಾದ ನೇರ ಮತ್ತು ಪರೋಕ್ಷ ಕೃತ್ಯದಾರರನ್ನು ಬಂಧಿಸಬೇಕಿದೆ. ಅಮಾಯಕ ವ್ಯಕ್ತಿಯ ಹತ್ಯೆ ಖಂಡನೀಯ. ಹತ್ಯೆದಾರರು ಈ ಕೊಲೆಯನ್ನು ಮತೀಯ ದ್ವೇಷದಿಂದ ಕೊಲೆ ಮಾಡಿದ್ದಾರೆ. ಅಬ್ದುಲ್ ರಹಿಮಾನ್ ಎಂಬ ವ್ಯಕ್ತಿ ಯಾರಿಂದಲೂ ದ್ವೇಷಕ್ಕೆ ಗುರಿಯಾಗಿದ್ದ ವ್ಯಕ್ತಿ ಅಲ್ಲ. ಮರಳು ಸಾಗಣಿಕೆ ಪೂರೈಸಲು ಬರ […]

News

ಜೂನ್ ಮೊದಲನೇ ವಾರದಿಂದ ಕಲ್ಲಡ್ಕ ಫ್ಲೈ ಓವರ್ ಸಂಚಾರಕ್ಕೆ ಮುಕ್ತ – ಕ್ಯಾಪ್ಟನ್ ಬ್ರಿಜೇಶ್ ಚೌಟ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಖಡಕ್ ಸೂಚನೆ ನಿರೀಕ್ಷೆಗೂ ಮೊದಲೇ ಮಳೆಗಾಲ ಪ್ರಾರಂಭವಾಗಿದ್ದು, ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬಿ.ಸಿ. ರೋಡ್‌-ಅಡ್ಡಹೊಳೆ ಚತುಷ್ಪಥ ಕಾಮಗಾರಿ ಅಂತಿಮ ಹಂತದ ಪ್ರಗತಿಯಲ್ಲಿರುವ ಕಾರಣ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಲ್ಲಡ್ಕ ಫ್ಲೈಓವರ್‌ ಸೇರಿದಂತೆ ಕೆಲವೆಡೆ ವಾಹನಗಳ ಸುಗಮ ಸಂಚಾರಕ್ಕೆ ರಸ್ತೆಯನ್ನು ತೆರವುಗೊಳಿಸಿ ಅನುಕೂಲ ಮಾಡಿಕೊಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಿರುವುದಾಗಿ ಸಂಸದ ಕ್ಯಾಪ್ಟನ್ ಬ್ರಿಜೇಶ್‌ ಚೌಟ ಹೇಳಿದ್ದಾರೆ. ಮುಂಗಾರು ಚುರುಕುಗೊಂಡಿರುವ ಕಾರಣ ಮಂಗಳೂರು-ಬೆಂಗಳೂರು ಹೆದ್ದಾರಿಯಲ್ಲಿ ಬಿ.ಸಿ. ರೋಡ್‌-ಅಡ್ಡಹೊಳೆ […]

News

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ದ್ವೇಷದ ಕೊಲೆಗೆ ಸೂಕ್ತ ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡಿದ MLC ಐವನ್ ಡಿಸೋಜ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ದ್ವೇಷದ ಕೊಲೆಗೆ ಸೂಕ್ತ ಕ್ರಮಕೈಗೊಂಡು ಕೊಲೆಯ ಹಿಂದಿರುವ ಶಕ್ತಿಗಳನ್ನು ಪತ್ತೆ ಹಚ್ಚಿ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಲು ಇಂದು ಮೇ 28ರಂದು ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ಧರಾಮಯ್ಯರವರನ್ನು ವಿಧಾನ ಪರಿಷತ್ತಿನ ಶಾಸಕ ಐವನ್ ಡಿಸೋಜರವರು ಭೇಟಿ ಮಾಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ ಮೇ 27ರಂದು ಮಂಗಳವಾರ ಬಂಟ್ವಾಳದಲ್ಲಿ ನಡೆದ ಅಮಾಯಕ ಪಿಕ್‌ಅಪ್ ವಾಹನ ಚಾಲಕ ಅಬ್ದುಲ್ ರಹೀಂ ನ್ನು ಕೊಲೆ ಮಾಡಲು ಹಿಂದೆ ಇರುವ ಶಕ್ತಿಗಳ ಬಗ್ಗೆ ತನಿಖೆ ನಡೆಸಿ, ಅವರ ಮೇಲೆ […]

News

ಸ್ತ್ರೀ ಸಂಘಟನೆ ತಾಕೊಡೆ ಘಟಕದ ಮುಂದಾಳತ್ವದಲ್ಲಿ ಕೆನರಾ ಕ್ಯಾನ್ಸರ್ ಕೇರ್ ಏಂಜಲ್ ಎಕೌಂಟ್ ಬಗ್ಗೆ ಮಾಹಿತಿ ಶಿಬಿರ

ತಾಕೊಡೆ ಪವಿತ್ರ ಶಿಲುಬೆಯ ದೇವಾಲಯದ ಸಭಾ ಭವನದಲ್ಲಿ ಮೇ 25ರಂದು ಭಾನುವಾರ ಕೆನರಾ ಬ್ಯಾಂಕ್ ವಿದ್ಯಾಗಿರಿ ಶಾಖೆಯ ವತಿಯಿಂದ ಕೆನರಾ ಕ್ಯಾನ್ಸರ್ ಕೇರ್ ಏಂಜಲ್ ಎಕೌಂಟ್ ಹಾಗೂ ಸರಕಾರದಿಂದ ದೊರೆಯುವ ಇತರ ಸೌಲಭ್ಯಗಳ ಕುರಿತು ಮಾಹಿತಿ ಶಿಬಿರವನ್ನು ಏರ್ಪಡಿಸಲಾಯಿತು. ಸ್ತ್ರೀ ಸಂಘಟನೆಯ ಸದಸ್ಯರ ಪ್ರಾರ್ಥನಾ ಗೀತೆಯ ಮೂಲಕ ಸಭಾ ಕಾರ್ಯಕ್ರಮವನ್ನು ಆರಂಭಿಸಲಾಯಿತು. ವೇದಿಕೆಯಲ್ಲಿದ್ದ ಗಣ್ಯರನ್ನು ಹಾಗೂ ಸರ್ವರನ್ನು ಸ್ತ್ರೀ ಸಂಘಟನೆಯ ಅಧ್ಯಕ್ಷೆ ಐವಿ ಕ್ರಾಸ್ತಾ ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯತೆಯನ್ನು ವಹಿಸಿದ ತಾಕೊಡೆ ಚರ್ಚ್‌ ಧರ್ಮಗುರುಗಳಾದ ವಂದನೀಯ ಫಾದರ್ […]

You cannot copy content of this page