November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ವರದಿಗಳ ಅಗತ್ಯವಿದೆ – ಬದ್ರುದ್ಧೀನ್ ಮಾಣಿ

ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ವರದಿಗಳ ಅಗತ್ಯವಿದೆ ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಬದ್ರುದ್ಧೀನ್ ಮಾಣಿ ತಿಳಿಸಿದ್ದಾರೆ. ಅವರು  ಪತ್ರಿಕಾ ಭವನದಲ್ಲಿ ಇಂದು ಮೇ 24ರಂದು ಶನಿವಾರ 2024ನೆ ಸಾಲಿನ ಪ.ಗೋ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ವಿಜಯವಾಣಿ ಹಿರಿಯ ಉಪಸಂಪಾದಕ ರಾಜೇಶ್ ಶೆಟ್ಟಿ ದೋಟ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಕಾಲ ಕಳೆದಂತೆ ಪತ್ರಿಕೋದ್ಯಮದ    ಸವಾಲುಗಳು  ಭಿನ್ನವಾಗುತ್ತಾ ಸಾಗಿದೆ. ಈಗ ತಂತ್ರಜ್ಞಾನ ಬೆಳೆದಿದೆ ಎಂದರು. ಪದ್ಯಾಣ ಗೋಪಾಲ ಕೃಷ್ಣರಂತಹ ಹಿರಿಯ ಪತ್ರಕರ್ತರನ್ನು […]

News

ತುಂಬೆ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನ ವತಿಯಿಂದ ಪೀಡಿಯಾಕಾನ್ – 2025 ಪ್ರಾದೇಶಿಕ ಸಮ್ಮೇಳನ

ಮಂಗಳೂರು ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಷನ್ಸ್ ಅಧೀನದಲ್ಲಿರುವ ತುಂಬೆ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನ ವತಿಯಿಂದ ಸ್ವಿಫ್ಟ್ ಹ್ಯಾಂಡ್ಸ್-ಸೇಫ್‌ಗಾರ್ಡಿಂಗ್ ಲಿಟಲ್ ಲೈವ್ಸ್ ಎಂಬ ಧ್ಯೇಯದಡಿ ಪೀಡಿಯಾಕಾನ್-2025 ಪ್ರಾದೇಶಿಕ ಸಮ್ಮೇಳನ ಕಾಲೇಜಿನ ಫ್ಲೋರೆನ್ಸ್ ನೈಂಟಿಗೇಲ್ ಸಭಾಂಗಣದಲ್ಲಿ ನಡೆಯಿತು. ಮಕ್ಕಳ ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ನರ್ಸ್ ಗಳ ಕೌಶಲ್ಯ ವೃದ್ಧಿಯ ದೃಷ್ಟಿಯಿಂದ ಆಯೋಜಿಸಿದ್ದ ಈ ಸಮ್ಮೇಳನದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿ ಫಾದರ್ ಮುಲ್ಲರ್ ಹೆಲ್ತ್ ಕೇರ್ ಸಿಮ್ಯುಲೇಶನ್ ಎಜ್ಯುಕೇಶನ್‌ನ ಮುಖ್ಯಸ್ಥ ಡಾ| ಲುಲು ಶರೀಫ್ ಮಹ್ಮೂದ್ ರವರು, ಗರ್ಭಾಶಯದಿಂದ […]

News

ಬೊಂಡಾಲ ಸಚ್ಚಿದಾನಂದ ಶೆಟ್ಟಿಯವರಿಗೆ ಆರ್ಯಭಟ ಪ್ರಶಸ್ತಿ ಪ್ರದಾನ

ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು ತನ್ನ 50ನೇ ವರ್ಷಾಚರಣೆ ಸಂದರ್ಭದಲ್ಲಿ ನಾಡು, ಹೊರನಾಡು ಮತ್ತು ವಿದೇಶಗಳಲ್ಲಿರುವ ವಿವಿಧ ಕ್ಷೇತ್ರಗಳ 74 ಮಂದಿ ಸಾಧಕರನ್ನು ಗುರುತಿಸಿ ಈ ಬಾರಿಯ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಯನ್ನು ನೀಡಿದೆ. ಮೇ 22ರಂದು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಜರಗಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಖ್ಯಾತ ಉದ್ಯಮಿ, ಸಾಮಾಜಿಕ ಮತ್ತು ಶಿಕ್ಷಣ ಕ್ಷೇತ್ರದ ಸಾಧಕ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಅವರು 2025 ಸಾಲಿನ ಆರ್ಯಭಟ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಬೊಂಡಾಲ ಸರಕಾರಿ ಶಾಲೆಯನ್ನು […]

News

ಮಂಗಳೂರಿನ ಪಿಲಿಕುಳದಲ್ಲಿ ಸಾಕಷ್ಟು ಲೋಪದೋಷಗಳನ್ನು ಪತ್ತೆ ಹಚ್ಚಿದ ಲೋಕಾಯುಕ್ತ ಪೊಲೀಸರು

ಲೋಕಾಯುಕ್ತ ಕೇಂದ್ರ ಕಚೇರಿಗೆ ಸಮಗ್ರ ವರದಿ ರವಾನೆ ? ಮಂಗಳೂರು ಲೋಕಾಯುಕ್ತ ಕಚೇರಿಯ ಅಧಿಕಾರಿಗಳು ಮೇ 23ರಂದು ಶುಕ್ರವಾರ ದಿಡೀರ್ ಪಿಲಿಕುಳಕ್ಕೆ ಭೇಟಿ ನೀಡಿ ಅಲ್ಲಿ ತಪಾಸಣೆ ನಡೆಸಿದ್ದಾರೆ. ತಪಾಸಣೆ ನಡೆಸಿರುವಾಗ ಬಹಳಷ್ಟು ಲೋಪ ದೋಷಗಳನ್ನು ಪತ್ತೆ ಹಚ್ಚಿದ್ದಾರೆ. 1️. ಲೀಸಿಗೆ ಕೊಟ್ಟ ಹಲವು ಸಂಸ್ಥೆಗಳಿಂದ ಪಿಲಿಕುಳ ಪ್ರಾಧಿಕಾರವು ತೆರಿಗೆ ಹಣ ಸಂಗ್ರಹಿಸದೇ ಇರುವುದು ಕಂಡು ಬಂದಿದೆ. 2️. ಮೃಗಾಲಯದ ನಿರ್ವಹಣೆಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲು ಆದೇಶವಾಗಿದ್ದರೂ ಕೂಡ, ಪಿಲಿಕುಳ ಪ್ರಾಧಿಕಾರವು ಹಸ್ತಾಂತರಿಸದೆ ವಿಳಂಬ ಧೋರಣೆ ಮಾಡಿರುವುದು […]

News

ಕುತ್ಲೂರು ಶಾಲಾ ಮಕ್ಕಳಿಗೆ ನೋಟ್ ಬುಕ್ ಹಾಗೂ ಕಲಿಕಾ ಸಾಮಾಗ್ರಿ ವಿತರಣೆ

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಪತ್ರಕರ್ತರು ಗ್ರಾಮ ವಾಸ್ತವ್ಯ ಮಾಡಿರುವ  ಕುತ್ಲೂರು ಸರಕಾರಿ ಶಾಲಾ ಮಕ್ಕಳಿಗೆ  ಬಿಎಎಸ್ಎಫ್ ಇಂಡಿಯಾ ಲಿಮಿಟೆಡ್ ನ ಸಿಎಸ್ಆರ್  ನಿಧಿಯಿಂದ ನೋಟ್ ಬುಕ್, ಕಲಿಕಾ ಸಾಮಾಗ್ರಿ ವಿತರಣಾ  ಹಾಗೂ ಶಾಲಾ ಮಕ್ಕಳ ಬ್ಯಾಂಡ್ ಸೆಟ್ ಸಮವಸ್ತ್ರ ವಿತರಣಾ ಕಾರ್ಯಕ್ರಮ ನಗರದ ಪತ್ರಿಕಾ ಭವನದಲ್ಲಿ ಇಂದು ಮೇ 23ರಂದು ಶುಕ್ರವಾರ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಡಾ. ರಾಜೇಂದ್ರ ಶಾಲಾ […]

News

ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್‌ಗೆ ನೂತನ ಧರ್ಮಗುರುಗಳಾಗಿ ಫಾದರ್ ಪ್ಯಾಟ್ರಿಕ್ ಸಿಕ್ವೇರಾ ನೇಮಕ

ಮೇ 25ರಂದು ಆದಿತ್ಯವಾರ ಅಧಿಕಾರ ಸ್ವೀಕಾರ ಮಂಗಳೂರು ಧರ್ಮಕ್ಷೇತ್ರದ ಸೂರಿಕುಮೇರು ಬೊರಿಮಾರ್ ಧರ್ಮಕೇಂದ್ರಕ್ಕೆ ನೂತನ  ಧರ್ಮಗುರುಗಳಾಗಿ ವಂದನೀಯ ಫಾದರ್ ಪ್ಯಾಟ್ರಿಕ್ ಸಿಕ್ವೇರಾರವರನ್ನು ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾರವರು ನೇಮಿಸಿದ್ದಾರೆ. ವಂದನೀಯ ಫಾದರ್ ಪ್ಯಾಟ್ರಿಕ್ ಸಿಕ್ವೇರಾರವರು ಬೋಂದೆಲ್, ಪಕ್ಷಿಕೆರೆ ಮತ್ತು ಕುಲಶೇಕರ ಚರ್ಚ್ ಗಳಲ್ಲಿ ಸಹಾಯಕ ಧರ್ಮಗುರುಗಳಾಗಿ ಹಾಗೂ ಪ್ರಸ್ತುತ ಬೆಳ್ಳೂರು ಚರ್ಚ್ ನಲ್ಲಿ ಪ್ರಧಾನ ಧರ್ಮಗುರುಗಳಾಗಿ ಸೇವೆಯನ್ನು ಸಲ್ಲಿಸಿದ್ದಾರೆ. 132 ವರ್ಷಗಳ ಇತಿಹಾಸವಿರುವ ಸಂತ ಜೋಸೆಫರ ದೇವಾಲಯಕ್ಕೆ 27ನೇ ಧರ್ಮಗುರುಗಳಾಗಿ […]

News

ಮಿಫ್ತಾಉಲ್ ಉಲೂಂ ಮದ್ರಸಾದಲ್ಲಿ ಅದ್ದೂರಿಯಾಗಿ ನಡೆದ ಬೇಸಿಗೆ ರಜಾ ಶಿಬಿರ – 2025

ಮಾಣಿ ಇಲ್ಲಿನ ಸೂರಿಕುಮೇರು ಬದ್ರಿಯಾ ಜುಮ್ಮಾ ಮಸೀದಿ ಅಧೀನದ ಮಿಫ್ತಾಉಲ್ ಉಲೂಂ ಮದ್ರಸಾದಲ್ಲಿ ಆರು ದಿನಗಳ ಬೇಸಿಗೆ ರಜಾ ಶಿಬಿರ – 2025 ಎಂಬ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ವಿದ್ಯಾರ್ಥಿಗಳಲ್ಲಿ ಮತ್ತಷ್ಟು ಹುಮ್ಮಸ್ಸು ಹೆಚ್ಚಿಸುವ ಉದ್ದೇಶದಿಂದ ಈ ಶಿಬಿರವನ್ನು ನಡೆಸಲಾಯಿತು. ಶಿಬಿದವನ್ನು ಅಧ್ಯಕ್ಷ ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ ಉದ್ಘಾಟಿಸಿದರು, ಹಸೈನಾರ್ ಸ‌ಅದಿ ಪೆರ್ಲ, ನಾಸಿರ್ ಸ‌ಅದಿ ನೇರಳಕಟ್ಟೆ, ಹನೀಫ್ ಸ‌ಅದಿ ಸೆರ್ಕಳ, ಮುಸ್ತಫಾ ಸ‌ಅದಿ ರಿಯಾದ್, ತರಗತಿಗಳನ್ನು ನಡೆಸಿಕೊಟ್ಟರು. ಶಿಬಿರದಲ್ಲಿ ಮೋಟಿವೇಶನ್ ಸಹಿತ ವಿವಿಧ […]

News

ಬ್ಯಾರಿ ಜಾನಪದ ಕಥೆಗಳ ಇಂಗ್ಲಿಷ್ ಅನುವಾದಿತ ಕೃತಿ ಬಿಡುಗಡೆ

ನಾಡಿನ ಬೇರೆ ಬೇರೆ ಲೇಖಕ-ಲೇಖಕಿಯರು ಬ್ಯಾರಿ ಭಾಷೆಯಲ್ಲಿ ಬರೆದ ಜಾನಪದ ಕತೆಗಳ ಸಂಕಲನ “ಚನ್ನನ”ದ ಇಂಗ್ಲಿಷ್ ಅನುವಾದಿತ ಕೃತಿ ’The Fakir’s Daughter and other Beary Folktales” ಅನ್ನು ಮಂಗಳೂರು ನಗರದ ಸೈಂಟ್ ಅಲೋಶಿಯಸ್ ಡೀಮ್ಡ್ ವಿಶ್ವ ವಿದ್ಯಾನಿಲಯ ಅಡ್ಮಿನ್ ಬ್ಲಾಕ್‌ನ ಸಭಾಂಗಣದಲ್ಲಿ ಮೇ 21ರಂದು ಬುಧವಾರ ಬಿಡುಗಡೆಗೊಳಿಸಲಾಯಿತು. ಸೈಂಟ್ ಅಲೋಶಿಯಸ್ ಡೀಮ್ಡ್ ವಿವಿಯ ಉಪಕುಲಪತಿ ವಂದನೀಯ ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ಕೃತಿಯನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ಭಾಷೆ ಮತ್ತು ಸಾಂಸ್ಕ್ರತಿಕ ಅಧ್ಯಯನ […]

News

ಮಂಗಳೂರು ವಿಮಾನ ದುರಂತ – ಜಿಲ್ಲಾಡಳಿತ ಶ್ರದ್ಧಾಂಜಲಿ

2010ರಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದ  ವಿಮಾನ  ದುರಂತ ಘಟನೆಯ ಸ್ಮರಣಾರ್ಥ ಇಂದು ಮೇ 22ರಂದು ಗುರುವಾರ ಜಿಲ್ಲಾಡಳಿತದ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಸಲಾಯಿತು. ನಗರದ ಕೂಳೂರು – ತಣ್ಣೀರುಬಾವಿ ರಸ್ತೆಯಲ್ಲಿ ವಿಮಾನ ದುರಂತದಲ್ಲಿ ಅಗಲಿದವರ ಸ್ಮರಣೆಗಾಗಿ ನಿರ್ಮಿಸಿರುವ ಪಾರ್ಕ್‍ನಲ್ಲಿ ಸ್ಮಾರಕಕ್ಕೆ ಪ್ರಭಾರ ಜಿಲ್ಲಾಧಿಕಾರಿ ಡಾ. ಆನಂದ್ ಕೆ. ರವರು ಗೌರವ ಸಲ್ಲಿಸಿದರು. ಮಂಗಳೂರು ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಪಿಲಿಕುಳ ಪ್ರಾಧಿಕಾರದ ಆಯುಕ್ತ ಅರುಣ್ ಕುಮಾರ್ ಶೆಟ್ಟಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಾರ್ವಜನಿಕರು ಕೂಡ ಆಗಮಿಸಿ […]

News

ಬಂಟ್ವಾಳ ನ್ಯಾಯಾಧೀಶರಾದ ಭಾಗ್ಯಮ್ಮರವರಿಗೆ ಗೌರವಾಭಿನಂದನೆ ಹಾಗೂ ಬೀಳ್ಕೊಡುಗೆ ಸಮಾರಂಭ

ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ ಬಂಟ್ವಾಳ ಇಲ್ಲಿ ಕರ್ತವ್ಯ ನಿರ್ವಹಿಸಿದ ನ್ಯಾಯಧೀಶರಾದ ಭಾಗ್ಯಮ್ಮರವರಿಗೆ ಹುಣಸೂರು ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿದ್ದು ಈ ನಿಟ್ಟಿನಲ್ಲಿ ವಕೀಲರ ಸಂಘ (ರಿ.) ಬಂಟ್ವಾಳ ಇವರ ವತಿಯಿಂದ ಗೌರವಾಭಿನಂದನೆ ಮತ್ತು ಬೀಳ್ಕೊಡುಗೆ ಸಮಾರಂಭ ಇಂದು ಮೇ 22ರಂದು ಗುರುವಾರ ನ್ಯಾಯಾಲಯದಲ್ಲಿ ನಡೆಯಿತು. ಭಾಗ್ಯಮ್ಮರವರು ಮೂರು ವರ್ಷಗಳ ಕಾಲ ಸಲ್ಲಿಸಿದ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಈ ವೇಳೆ ತನ್ನನ್ನು ಸನ್ಮಾನಿಸಿದ ಬಾರ್ ಅಸೋಸಿಯೇಷನ್ ಗೆ ನ್ಯಾಯಧೀಶೆ ಭಾಗ್ಯಮ್ಮ ಧನ್ಯವಾದ ಸಲ್ಲಿಸಿದರು. ವಕೀಲರ ಸಂಘ (ರಿ.) ಬಂಟ್ವಾಳದ […]

You cannot copy content of this page