ಪ್ರಯಾಣ ಉಚಿತವಾದರೂ ‘ಶಕ್ತಿ ಯೋಜನೆ’ಯ ಫಲಾನುಭವಿಗಳು ಟಿಕೆಟ್ ಪಡೆಯಲೇಬೇಕು
ಟಿಕೆಟ್ ಇಲ್ಲದೆ ಪ್ರಯಾಣಿಸಿದ ಫಲಾನುಭವಿಗಳಿಂದ 7.32ಲಕ್ಷ ದಂಡ ಸಂಗ್ರಹ ಕರ್ನಾಟಕದಾದ್ಯಂತ ‘ಶಕ್ತಿ ಯೋಜನೆ’ಯ ಭಾಗವಾಗಿ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅರ್ಹರಾಗಿದ್ದಾರೆ. ಆದರೆ, ಉಚಿತ ಎಂಬ ಒಂದೇ ಕಾರಣಕ್ಕೆ ಟಿಕೆಟ್ ಪಡೆಯದೆ ಸರಕಾರಿ ಬಸ್ಸುಗಳಲ್ಲಿ ಪ್ರಯಾಣಿಸುವವರಿಗೆ ಈಗ KSRTCಯಿಂದ ಭಾರಿ ದಂಡ ವಿಧಿಸಲಾಗುತ್ತಿದೆ. KSRTC ಏಪ್ರಿಲ್ ತಿಂಗಳೊಂದರಲ್ಲೇ 3,780 ಟಿಕೆಟ್ ರಹಿತ ಪ್ರಯಾಣಿಕರಿಂದ 7.32 ಲಕ್ಷ ರೂಪಾಯಿ ದಂಡವನ್ನು ಸಂಗ್ರಹಿಸಿದೆ. ಅಷ್ಟೇ ಅಲ್ಲದೆ ಟಿಕೆಟ್ ರಹಿತ ಪ್ರಯಾಣಿಕರ ವಿರುದ್ಧ ಶಿಸ್ತು ಕ್ರಮವನ್ನು ಪ್ರಾರಂಭಿಸಲಾಗಿದೆ. ಶಕ್ತಿ ಯೋಜನೆಯ […]













