November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕಟಪಾಡಿಯಲ್ಲಿ ‘ಆಶಾವಾದಿ’ ಸಾಹಿತ್ಯ ಸಂಭ್ರಮ – ಪುಸ್ತಕ ಬಿಡುಗಡೆ, ಕವಿಗೋಷ್ಠಿ, ಹಿರಿಯ ಸಾಹಿತಿಗಳಿಗೆ ಸನ್ಮಾನ

ಆಶಾವಾದಿ ಪ್ರಕಾಶನದ ವತಿಯಿಂದ ಕಟಪಾಡಿಯ ಕ್ಯಾಥರಿನ್ ರೊಡ್ರಿಗಸ್ ಅವರ ಮನೆಯಂಗಳದಲ್ಲಿ ಪುಸ್ತಕ ಬಿಡುಗಡೆ, ಹಿರಿಯ ಸಾಹಿತಿಗಳ ಸನ್ಮಾನ, ಕೊಂಕಣಿ ಕವಿಗೋಷ್ಠಿ ಹಾಗೂ ರಸಪ್ರಶ್ನೆ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ನಡೆಯಿತು. ಸಿಂತಿಯಾ, ಫ್ರೀಡಾ ಹಾಗೂ ತಂಡದವರ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಸ್ವೀನಿ ರೊಡ್ರಿಗಸ್ ಸ್ವಾಗತಿಸಿದರು. ಕೊಂಕಣಿ ಪ್ರಶಸ್ತಿ ವಿಜೇತ ಕವಿ, ಲೇಖಕ ಹಾಗೂ ವಿಮರ್ಶಕ ಆಂಡ್ರ್ಯೂ ಎಲ್. ಡಿಕೂನ್ಹಾ, ಬಹುಭಾಷಾ ಲೇಖಕ ಮುದ್ದು ಮೂಡುಬೆಳ್ಳೆ, ಆಗ್ನೆಲ್ ರೊಡ್ರಿಗಸ್ ದುಬೈ, ಕ್ಯಾಥರಿನ್ ರೊಡ್ರಿಗಸ್ ಹಾಗೂ ಆಶಾವಾದಿ ಪ್ರಕಾಶಕ ವಲ್ಲಿ ಕ್ವಾಡ್ರಸ್ […]

News

ಸೆಪ್ಟೆಂಬರ್ 19ರಂದು ಕಾಞಂಗಾಡ್‌ನಲ್ಲಿ ಶ್ರೀ ಅವಧೂತಾನಂದ ಸ್ವಾಮೀಜಿ ಅನುಭವ ಕಥನದ ಪುಸ್ತಕ ಬಿಡುಗಡೆ

ಕಾಸರಗೋಡು: ಕಾಞಂಗಾಡ್‌ನ ಹೊಸದುರ್ಗದಲ್ಲಿರುವ ಭಗವಾನ್ ಶ್ರೀ ನಿತ್ಯಾನಂದ ಆಶ್ರಮದಲ್ಲಿ ಸೆಪ್ಟೆಂಬರ್ 19ರಂದು ಶನಿವಾರ ಬೆಳಿಗ್ಗೆ 10:45ಕ್ಕೆ ಪೂಜ್ಯ ಶ್ರೀ ಅವಧೂತಾನಂದ ಸ್ವಾಮೀಜಿ ಅವರ ಜೀವನ, ಅನುಭವ ಹಾಗೂ ಸೇವಾ ಕಾರ್ಯಗಳನ್ನು ಒಳಗೊಂಡ ಪುಸ್ತಕದ ಬಿಡುಗಡೆ ಸಮಾರಂಭ ನಡೆಯಲಿದೆ. ಮುಂಬೈಯ ಸ್ವಾಮಿ ಅವಧೂತಾನಂದ ಟ್ರಸ್ಟ್ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಕೃತಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ. ಬೆಳಿಗ್ಗೆ 10:45ರಿಂದ ಮಧ್ಯಾಹ್ನ 1ರವರೆಗೆ ನಡೆಯುವ ಸಮಾರಂಭದಲ್ಲಿ ದೀಪ ಪ್ರಜ್ವಲನ, ವೇದಘೋಷ ಹಾಗೂ ಪುಸ್ತಕ ಬಿಡುಗಡೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು […]

News

ಸಂತ ಆಗ್ನೆಸ್ ಕಾಲೇಜಿನಲ್ಲಿ ಪರಿಸರ ಸಂರಕ್ಷಣೆ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ

ಪವಿತ್ರ ಭೂದೃಶ್ಯಗಳ ಸಂರಕ್ಷಣೆಗೆ ಸ್ಥಳೀಯ ಪರಂಪರೆಯ ಜ್ಞಾನವೇ ದಾರಿದೀಪ ಮಂಗಳೂರು: ಭಾರತದ ಸ್ಥಳೀಯ ಸಮುದಾಯಗಳು ತಲೆತಲಾಂತರಗಳಿಂದ ಅನುಸರಿಸಿಕೊಂಡು ಬಂದಿರುವ ಸಾಂಪ್ರದಾಯಿಕ ಪರಿಸರ ಸಂರಕ್ಷಣಾ ಪದ್ಧತಿಗಳು ಇಂದಿನ ಪರಿಸರ ಸವಾಲುಗಳಿಗೆ ಪರಿಣಾಮಕಾರಿ ಪರಿಹಾರಗಳನ್ನು ನೀಡಬಲ್ಲವು ಎಂದು ತಜ್ಞರು ಅಭಿಪ್ರಾಯಪಟ್ಟರು. ಮಂಗಳೂರಿನ ಸಂತ ಆಗ್ನೆಸ್ ಕಾಲೇಜು (ಸ್ವಾಯತ್ತ), ವತಿಯಿಂದ “Sacred Landscape: Ecological Sanctuaries of India’s Indigenous Heritage” ಎಂಬ ವಿಷಯದ ಕುರಿತು ಸೆಪ್ಟೆಂಬರ್ 10ರಂದು ಗುರುವಾರ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಯಿತು. ವಿಚಾರ ಸಂಕಿರಣದಲ್ಲಿ ಭಾರತದ ಸ್ಥಳೀಯ ಸಮುದಾಯಗಳ […]

News

Japanese Delegation from Kyoto Kagaku Visits Father Muller Charitable Institutions

A delegation from Kyoto Kagaku, Japan, visited the Father Muller Charitable Institutions (FMCI) on Monday, September 7, 2026. The delegation comprised Toshiyuki Takayama, President of Kyoto Kagaku, and Takao Kinouchi, General Manager – Overseas Sales. The delegates were warmly welcomed, and Dr Rithesh Joseph Dcunha, Associate Professor in Anesthesiology and Head of Healthcare Simulation Education, […]

News

ದಕ್ಷಿಣ ಕನ್ನಡ ಕಾಂಗ್ರೆಸ್‌ಗೆ ನೂತನ ಸಾರಥಿ – ಪದ್ಮರಾಜ್ ಆರ್. ಪೂಜಾರಿ ಜಿಲ್ಲಾಧ್ಯಕ್ಷರಾಗಿ ಆಯ್ಕೆ

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಪದ್ಮರಾಜ್ ಆರ್. ಪೂಜಾರಿ ಅವರನ್ನು ಆಯ್ಕೆ ಮಾಡಲಾಗಿದೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ವಿವಿಧ ಜಿಲ್ಲೆಗಳ ಕಾಂಗ್ರೆಸ್ ಅಧ್ಯಕ್ಷರ ಪಟ್ಟಿಯನ್ನು ಪ್ರಕಟಿಸಿದ್ದು, ಅದರಂತೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಪದ್ಮರಾಜ್ ಆರ್. ಪೂಜಾರಿ ಅವರನ್ನು ನೇಮಕ ಮಾಡಲಾಗಿದೆ. ಈ ನೇಮಕಾತಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದೆ. ಪದ್ಮರಾಜ್ ಆರ್. ಪೂಜಾರಿ ಅವರು ಇನ್ನು ಮುಂದೆ ದಕ್ಷಿಣ […]

News

5 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಲತಾ ಮಾರಿಯಾ ಬಂಧನ

ಮಂಗಳೂರು: ಕಾವೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮನೆ ಕೆಲಸದವರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 5 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ 44 ವರ್ಷ ಪ್ರಾಯದ ಲತಾ ಮಾರಿಯಾಳನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಕಾವೂರು ಪೊಲೀಸ್ ಠಾಣಾ ಅ.ಕ್ರ. 33/2019, ಕಲಂ 381 ಐಪಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಂಗಳೂರಿನ ಮಾನ್ಯ ಹಿರಿಯ ಸಿಜೆ ಮತ್ತು ಸಿಜೆಎಂ ನ್ಯಾಯಾಲಯದ LPC No.05/2024 ಪ್ರಕರಣದಲ್ಲಿ ಲತಾ ಮಾರಿಯಾ ಅವರ ವಿರುದ್ಧ ದಸ್ತಗಿರಿ ವಾರಂಟ್ ಹೊರಡಿಸಲಾಗಿತ್ತು. ಬಳಿಕ ಅವರು ನ್ಯಾಯಾಲಯಕ್ಕೆ ಹಾಜರಾಗದೆ […]

News

ಸೇವಾ ಕಾರ್ಯಗಳಿಗೆ ಸೈಂಟ್ ಮಿಲಾಗ್ರಿಸ್ ಸಂಸ್ಥೆಯ ಕೊಡುಗೆ ಶ್ಲಾಘನೀಯ – ಶಾಸಕ ವೇದವ್ಯಾಸ್ ಕಾಮತ್

ವಿದ್ಯಾರ್ಥಿಗಳಿಗೆ ಅಗತ್ಯ ವಸ್ತುಗಳ ವಿತರಣೆ ಮಂಗಳೂರು: ಅಗತ್ಯವಿರುವವರಿಗೆ ನೆರವು ನೀಡುವ ಮೂಲಕ ಮಾನವೀಯ ಸೇವೆಯಲ್ಲಿ ತೊಡಗಿರುವ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಕಾರ್ಯ ಶ್ಲಾಘನೀಯವಾಗಿದ್ದು, ಇಂತಹ ಸಮಾಜಮುಖಿ ಸೇವಾ ಕಾರ್ಯಗಳು ನಿರಂತರವಾಗಿ ಮುಂದುವರಿಯಬೇಕು ಎಂದು ಮಂಗಳೂರು ದಕ್ಷಿಣ ಶಾಸಕರಾದ ಡಿ. ವೇದವ್ಯಾಸ್ ಕಾಮತ್ ಹೇಳಿದರು. ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಕಾರವಾರ ಇದರ ಉರ್ವಾ ಶಾಖೆಯ ಆಶ್ರಯದಲ್ಲಿ ಸೆಪ್ಟೆಂಬರ್ 2ರಂದು ಮಂಗಳೂರಿನ ಚೇತನಾ ಬಾಲ ವಿಕಾಸ ಕೇಂದ್ರದಲ್ಲಿ ನಡೆದ ಅಗತ್ಯ ವಸ್ತುಗಳ ವಿತರಣಾ […]

News

ಕಬಡ್ಡಿ–ತ್ರೋಬಾಲ್‌ನಲ್ಲಿ ಹಯಾತುಲ್ ಇಸ್ಲಾಂ ಶಾಲೆಯ ಭರ್ಜರಿ ಸಾಧನೆ – ತಾಲೂಕು ಮಟ್ಟಕ್ಕೆ ತಂಡಗಳ ಆಯ್ಕೆ

ಗೂಡಿನಬಳಿ ಹಯಾತುಲ್ ಇಸ್ಲಾಂ ಆಂಗ್ಲ ಮಾಧ್ಯಮ ಶಾಲೆಯ ಕ್ರೀಡಾ ಪ್ರತಿಭೆ ಮತ್ತೊಮ್ಮೆ ಗಮನ ಸೆಳೆದಿದ್ದು, ಶಾಲೆಯ ಕಬಡ್ಡಿ ಹಾಗೂ ತ್ರೋಬಾಲ್ ತಂಡಗಳು ವಲಯ ಮಟ್ಟದ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಪಡೆದು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿವೆ. ಶಾಲಾ ಶಿಕ್ಷಣ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಮತ್ತು ಸರಕಾರಿ ಪ್ರೌಢಶಾಲೆ, ಸುಜೀರು ಇವರ ಜಂಟಿ ಆಶ್ರಯದಲ್ಲಿ ನಡೆದ ವಲಯ ಮಟ್ಟದ 14 ಮತ್ತು 17ರ […]

News

ಜಿಲ್ಲಾಮಟ್ಟದ ಟೇಕ್ವಾಂಡೋದಲ್ಲಿ ರಿಯೋನ್ ಲಸ್ರಾದೊ ಚಿನ್ನದ ಸಾಧನೆ – ರಾಜ್ಯಮಟ್ಟದ ಪಂದ್ಯಾಟಕ್ಕೆ ಆಯ್ಕೆ

ವಿಟ್ಲದ ಪಿಎಂಶ್ರಿ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಟೇಕ್ವಾಂಡೋ ಪಂದ್ಯಾಟದಲ್ಲಿ ಪುತ್ತೂರು ಬೆಥನಿ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿ ರಿಯೋನ್ ಲಸ್ರಾದೊ 41 ಕೆ.ಜಿ. ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಯಾದಗಿರಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಟೇಕ್ವಾಂಡೋ ಪಂದ್ಯಾಟದಲ್ಲಿ ರಿಯೋನ್ ಲಸ್ರಾದೊ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ. ರಿಯೋನ್ ಅವರ ಸಾಧನೆಗೆ ಮಾಧವ ಅಳಿಕೆ ಅವರ ಮಾರ್ಗದರ್ಶನ ಹಾಗೂ ರೋಹಿತ್ ಎಸ್.ಎನ್. ಅವರ ತರಬೇತಿ ಮಹತ್ವದ ಪಾತ್ರ ವಹಿಸಿದೆ. ವಿದ್ಯಾರ್ಥಿಯ ಕ್ರೀಡಾ […]

News

ಜೆಪ್ಪುವಿನ ಸಂತ ಆಂತೋನಿ ಆಶ್ರಮದಲ್ಲಿ ಮೊಂತಿ ಹಬ್ಬ ಸಂಭ್ರಮ – ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ನೇತೃತ್ವದಲ್ಲಿ ವಿಶೇಷ ಬಲಿಪೂಜೆ

ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಜೆಪ್ಪುವಿನ ಸಂತ ಅಂತೋನಿ ಆಶ್ರಮದಲ್ಲಿ ಪವಿತ್ರ ಕನ್ಯಾಮರಿಯಮ್ಮನ ಜನ್ಮದಿನದ ಅಂಗವಾಗಿ ಆಚರಿಸಲಾಗುವ ‘ಮೊಂತಿ ಹಬ್ಬ’ವನ್ನು ಇಂದು ಸೆಪ್ಟೆಂಬರ್ 8ರಂದು ಮಂಗಳವಾರ ಧಾರ್ಮಿಕ ಭಕ್ತಿ ಹಾಗೂ ಸಾಂಪ್ರದಾಯಿಕ ಆಚರಣೆಗಳೊಂದಿಗೆ ನೆರವೇರಿಸಲಾಯಿತು. ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಪರಮ ಪೂಜ್ಯ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಹಬ್ಬದ ವಿಶೇಷ ಬಲಿಪೂಜೆಯ ಪ್ರಧಾನ ಧರ್ಮಗುರುಗಳಾಗಿ ನೇತೃತ್ವ ವಹಿಸಿದರು. ಬಲಿಪೂಜೆಯ ಪ್ರವಚನದಲ್ಲಿ ಮಾತನಾಡಿದ ಬಿಷಪ್ ಸಲ್ಡಾನ್ಹಾ ಅವರು, “ಪವಿತ್ರ ಕನ್ಯಾಮರಿಯಮ್ಮನ ಜೀವನವು ಅಚಲ ನಂಬಿಕೆ, ವಿನಯ […]

You cannot copy content of this page