ಜನರ ಹಕ್ಕುಗಳ ನಿರಾಕರಣೆಯಾದಾಗ ಹೋರಾಟಕ್ಕಿಳಿಯುವುದೇ ನಿಜವಾದ ನಾಯಕತ್ವ – ಬಂಟ್ವಾಳ SDPI ಸಭೆಯಲ್ಲಿ ಶಾಕಿರ್ ಅಳಕೆಮಜಲ್ ಕರೆ
“ನಿಜವಾದ ನಾಯಕತ್ವವು ಕೇವಲ ಅಧಿಕಾರ ಅಥವಾ ಹುದ್ದೆಗಳಿಗೆ ಸೀಮಿತವಾಗಿರಬಾರದು. ಸಾಮಾನ್ಯ ಜನರಿಗೆ ಅವರ ಹಕ್ಕುಗಳು ನಿರಾಕರಣೆಯಾದಾಗ, ನ್ಯಾಯ ಮತ್ತು ಸಮಾನತೆಗಾಗಿ ನಿರಂತರವಾಗಿ ಹೋರಾಡುವುದೇ ನಾಯಕರ ಮೊದಲ ಜವಾಬ್ದಾರಿಯಾಗಬೇಕು,” ಎಂದು ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲ್ ತಿಳಿಸಿದ್ದಾರೆ. ಬಿ.ಸಿ. ರೋಡ್ ಕೈಕಂಬದಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯ ಅಸೆಂಬ್ಲಿ ಪ್ರತಿನಿಧಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕ್ಷೇತ್ರಾಧ್ಯಕ್ಷ ಶಾಹುಲ್ ಹಮೀದ್ ಎಸ್.ಎಚ್. […]













