November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಪ್ರೀತಿಯ ನಾಟಕವಾಡಿ ₹50 ಲಕ್ಷದ ಚಿನ್ನದೊಂದಿಗೆ ಪರಾರಿಯಾಗಿದ್ದ ಪೋಕ್ಸೋ ಆರೋಪಿ ರೋಶನ್ ಫೆರ್ನಾಂಡಿಸ್ ಬಂಧನ

ಬೆಳ್ತಂಗಡಿ DYSP ರೋಹಿಣಿ ಸಿ.ಕೆ. ನೇತೃತ್ವದ ತಂಡದಿಂದ ಭರ್ಜರಿ ಕಾರ್ಯಾಚರಣೆ – ಅಪ್ರಾಪ್ತ ಬಾಲಕಿ ಸುರಕ್ಷಿತವಾಗಿ ಪೋಷಕರ ವಶಕ್ಕೆ AICU ರಾಜ್ಯಾಧ್ಯಕ್ಷ ಅಲ್ವಿನ್ ಡಿಸೋಜ ಪಾನೀರ್ ಅವರ ಮನವಿಗೆ ತಕ್ಷಣ ಸ್ಪಂದಿಸಿದ ಪೊಲೀಸ್ ಇಲಾಖೆ ಅಪ್ರಾಪ್ತ ಬಾಲಕಿಯೊಬ್ಬಳನ್ನು ಪ್ರೀತಿಯ ಹೆಸರಿನಲ್ಲಿ ನಂಬಿಸಿ, ಆಕೆಯ ಮನೆಯಿಂದ ಸುಮಾರು ₹50 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ತೆಗೆದುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಬೆಳ್ತಂಗಡಿ ಉಪವಿಭಾಗದ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ. ಬಂಧಿತ ಆರೋಪಿಯನ್ನು ರೋಶನ್ ಫೆರ್ನಾಂಡಿಸ್ ಎಂದು ಗುರುತಿಸಲಾಗಿದೆ. ಈತ ಅಪ್ರಾಪ್ತ ಬಾಲಕಿಯನ್ನು […]

News

ವಾಹನ ಸವಾರರಿಗೆ ಬಂಪರ್ ಆಫರ್ – ಬಾಕಿ ಟ್ರಾಫಿಕ್ ದಂಡ ಪಾವತಿಗೆ 50% ರಿಯಾಯಿತಿ ಘೋಷಣೆ!

ನಿಮ್ಮ ವಾಹನದ ಮೇಲೆ ಸಂಚಾರ ನಿಯಮ ಉಲ್ಲಂಘನೆಯ ಇ-ಚಲನ್ (E-Challan) ಬಾಕಿ ಇದೆಯೇ? ಹಾಗಿದ್ದಲ್ಲಿ ನಿಮಗೊಂದು ಸುವರ್ಣಾವಕಾಶ. ಕರ್ನಾಟಕ ಸರ್ಕಾರದ ವಿಶೇಷ ವಿನಾಯಿತಿಯಡಿ ಮಂಗಳೂರು ನಗರ ಪೊಲೀಸ್ ಇಲಾಖೆಯು ಬಾಕಿ ಇರುವ ಟ್ರಾಫಿಕ್ ದಂಡದ ಮೊತ್ತದಲ್ಲಿ ಭರ್ಜರಿ 50% ರಿಯಾಯಿತಿಯನ್ನು ಪ್ರಕಟಿಸಿದೆ. ಲೋಕ ಅದಾಲತ್ ಹಿನ್ನೆಲೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಈ ರಿಯಾಯಿತಿ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಸವಾರರು ತಮ್ಮ ಬಾಕಿ ಪ್ರಕರಣಗಳನ್ನು ಅರ್ಧ ಬೆಲೆಗೆ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ. ರಿಯಾಯಿತಿಯ ಅವಧಿ ಮತ್ತು ನಿಯಮಗಳು: * ಅವಧಿ: ಈ ವಿಶೇಷ […]

News

ಪುತ್ತೂರಿನಲ್ಲಿ ಜೂನ್ 26ಕ್ಕೆ ಪೊಲೀಸ್ ಇಲಾಖೆಯಿಂದ ‘ಮಾದಕ ದ್ರವ್ಯ ಮುಕ್ತ 5K ಮ್ಯಾರಥಾನ್’ ಆಯೋಜನೆ – ಆನ್‌ಲೈನ್ ನೋಂದಣಿ ಆರಂಭ

ಮಾದಕ ದ್ರವ್ಯಗಳ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧದ ಅಂತರಾಷ್ಟ್ರೀಯ ದಿನದ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಹಾಗೂ ಪುತ್ತೂರು ಉಪ ವಿಭಾಗದ ವತಿಯಿಂದ ಬೃಹತ್ “ಫಿಟ್ ಇಂಡಿಯಾ – ಮಾದಕ ದ್ರವ್ಯ ಮುಕ್ತ – ಮ್ಯಾರಥಾನ್ 5K” ಅನ್ನು ಹಮ್ಮಿಕೊಳ್ಳಲಾಗಿದೆ. ಬರುವ ಜೂನ್ 26ರಂದು ಶುಕ್ರವಾರ ಬೆಳಿಗ್ಗೆ ಖಾರಾರೂಢ 6:00 ಗಂಟೆಗೆ ಪುತ್ತೂರಿನ ಐತಿಹಾಸಿಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಈ ಜಾಗೃತಿ ಓಟಕ್ಕೆ ಚಾಲನೆ ಸಿಗಲಿದೆ. ಮ್ಯಾರಥಾನ್ ಸಾಗುವ ಹಾದಿ: […]

News

ತುಳುನಾಡು ಕೋಳಿ ಸಾಕಾಣಿಕೆ ರೈತರ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ – ಸಮಸ್ಯೆಗಳ ವಿರುದ್ಧ ಒಕ್ಕೊರಲಿನ ಹೋರಾಟಕ್ಕೆ ಬೆಳ್ತಂಗಡಿಯಲ್ಲಿ ನಾಂದಿ!

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೋಳಿ ಸಾಕಾಣಿಕೆ ರೈತರ ಹಿತರಕ್ಷಣೆಗಾಗಿ ಹೋರಾಡುತ್ತಿರುವ ‘ತುಳುನಾಡು ಕೋಳಿ ಸಾಕಾಣಿಕೆ ರೈತರ ಒಕ್ಕೂಟ’ದ ಮಹತ್ವದ ಮಹಾಸಭೆಯು ಇತ್ತೀಚೆಗೆ ಬೆಳ್ತಂಗಡಿಯ ಶ್ರೀ ಗುರು ನಾರಾಯಣ ಸಭಾಭವನದಲ್ಲಿ ಯಶಸ್ವಿಯಾಗಿ ಜರುಗಿತು. ಈ ಸಭೆಯಲ್ಲಿ ಒಕ್ಕೂಟದ ಮುಂಬರುವ ದಿನಗಳ ಕಾರ್ಯಯೋಜನೆಗಳ ಬಗ್ಗೆ ಚರ್ಚಿಸಲಾಗಿದ್ದು, ಕೇಂದ್ರ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ರೈತರ ಹಿತರಕ್ಷಣೆಗೆ ಕಠಿಣ ನಿರ್ಣಯ: ಪ್ರಸ್ತುತ ಕೋಳಿ ಸಾಕಾಣಿಕೆದಾರರು ಎದುರಿಸುತ್ತಿರುವ ಹತ್ತಾರು ಜ್ವಲಂತ ಸಮಸ್ಯೆಗಳ ಕುರಿತು ಸಭೆಯಲ್ಲಿ ಗಂಭೀರವಾದ ಸಮಾಲೋಚನೆ […]

News

ಅನಾಥರ ಬಾಳಿಗೆ ಆಸರೆಯಾದ ‘ಸ್ನೇಹಾಲಯ’ದ ಸೇವೆಗೆ ಸಂಗೀತದ ಸಾಥ್

ಇಂದು ಜೂನ್ 21ರಂದು ಕೆವಿನ್ ಮಿಸ್ಕಿತ್ ಅವರಿಂದ ಭವ್ಯ ರಸಮಂಜರಿ ಕಾರ್ಯಕ್ರಮ ಕಳೆದ 17 ವರ್ಷಗಳಿಂದ ಮಾನಸಿಕ ಅಸ್ವಸ್ಥರು, ಅನಾಥರು ಹಾಗೂ ಸಮಾಜದ ತಳಮಟ್ಟದ ಜನರ ರಕ್ಷಣೆ ಮತ್ತು ಪುನರ್ವಸತಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಕಾಸರಗೋಡಿನ ಮಂಜೇಶ್ವರದ ಪ್ರಸಿದ್ಧ ಸಂಸ್ಥೆ ‘ಸ್ನೇಹಾಲಯ ಚ್ಯಾರಿಟೇಬಲ್ ಟ್ರಸ್ಟ್’ ತನ್ನ ವಿವಿಧ ಜನಸೇವಾ ಯೋಜನೆಗಳ ಧನಸಹಾಯಾರ್ಥವಾಗಿ ಬೃಹತ್ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಿದೆ. ಇಂದು ಜೂನ್ 21ರಂದು ಭಾನುವಾರ ಸಂಜೆ 6:00 ಗಂಟೆಗೆ ಮಂಗಳೂರಿನ ಪ್ರಸಿದ್ಧ ಟೌನ್ ಹಾಲ್‌ನಲ್ಲಿ ಈ ಸಾಂಸ್ಕೃತಿಕ ಹಾಗೂ […]

News

ಮೂಡುಬಿದಿರೆಯಲ್ಲಿ ಆಗಸ್ಟ್ 7 ಮತ್ತು 8 ರಂದು ‘ಆಳ್ವಾಸ್ ಪ್ರಗತಿ-2026’ ಬೃಹತ್ ಉದ್ಯೋಗ ಮೇಳ

ಗ್ರಾಮೀಣ ಮತ್ತು ನಗರ ಭಾಗದ ಪ್ರತಿಭಾವಂತ ಯುವಕರಿಗೆ ಉದ್ಯೋಗದ ಕನಸು ನನಸಾಗಿಸುವ ಉದ್ದೇಶದಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ 2026 ಆಗಸ್ಟ್ 7 ಮತ್ತು 8ರಂದು ಮೂಡುಬಿದಿರೆಯ ವಿದ್ಯಾಗಿರಿ ಆವರಣದಲ್ಲಿ 16ನೇ ಆವೃತ್ತಿಯ ‘ಆಳ್ವಾಸ್ ಪ್ರಗತಿ-2026’ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ ತಿಳಿಸಿದ್ದಾರೆ. ಇಂದು ಜೂನ್ 20ರಂದು ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ಹಾಗೂ ವಿಶ್ವಾಸಾರ್ಹ ಉದ್ಯೋಗ ಮೇಳಗಳಲ್ಲಿ […]

News

ಮಂಗಳೂರಿನಲ್ಲಿ ಎರಡು ದಿನಗಳ ‘ಹಲಸು ಮಾವು ಮೇಳ’

ಇಂದು ಜೂನ್ 20 ಮತ್ತು 21 ರಂದು ಕದ್ರಿ ಕಂಬಳ ರಸ್ತೆಯಲ್ಲಿ ವೈಭವದ ‘ಹಲಸು ಮಾವು ಮೇಳ’ ಮಂಗಳೂರಿನ ಕಲ್ಕೂರ ಪ್ರತಿಷ್ಠಾನ ಹಾಗೂ ಸಾವಯವ ಕೃಷಿಕ ಗ್ರಾಹಕ ಬಳಗದ ಜಂಟಿ ಸಹಯೋಗದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ವೈವಿಧ್ಯಮಯ ‘ಹಲಸು ಮಾವು ಮೇಳ’ ಕ್ಕೆ ಚಾಲನೆ ದೊರೆತಿದೆ. ಮಂಗಳೂರಿನ ಕದ್ರಿ ಕಂಬಳ ರಸ್ತೆಯ ಮಲ್ಲಿಕಟ್ಟೆ ಬಳಿ ಇರುವ ‘ಮಂಜುಪ್ರಸಾದ’ ದಲ್ಲಿ ಜೂನ್ 20ರಂದು ಶನಿವಾರ ಮತ್ತು ಜೂನ್ 21ರಂದು ಭಾನುವಾರ ಈ ಮೇಳ ಆಯೋಜನೆಗೊಂಡಿದೆ. ದಿನಂಪ್ರತಿ ಬೆಳಿಗ್ಗೆ […]

News

ನೀಟ್ ಪರೀಕ್ಷೆ – ಮಂಗಳೂರಿನ 12 ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ನಿಷೇಧಿತ ಪ್ರದೇಶ ಘೋಷಣೆ

ದಿನಾಂಕ 21-06-2026 ರಂದು ನಡೆಯಲಿರುವ 2026ನೇ ಸಾಲಿನ ನೀಟ್ (NEET-UG) ಪರೀಕ್ಷೆಯು ಸುಗಮವಾಗಿ, ನ್ಯಾಯಸಮ್ಮತವಾಗಿ ಹಾಗೂ ಶಾಂತಿಯುತವಾಗಿ ನಡೆಯುವ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಒಟ್ಟು 12 ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ಆದೇಶ ಹೊರಡಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಮಂಗಳೂರು ನಗರದ ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರು ಹಾಗೂ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳಾದ ಕೆ. […]

News

Saint Agnes PU College Holds Awareness Drive Against Drug Abuse

Saint Agnes PU College organized an impactful awareness programme on drug abuse for its students, aiming to educate them about the harmful effects of substance abuse and inspire them to make responsible and informed life choices. The session was led by Manasa Hegde, Panel Advocate, District Legal Services Authority (DLSA), who delivered an insightful and […]

News

Nurse Thara Machado of Father Muller, Honoured with Florence Nightingale Award 2026 in Bengaluru

Recognising her outstanding contribution, dedication, and unwavering commitment to the nursing profession, Thara Machado, Assistant Nursing Superintendent at Father Muller Medical College Hospital, Mangaluru, was conferred the prestigious Florence Nightingale Award – 2026 under the Silver Jubilee Best Nursing Officer Category at a grand ceremony held at the Banquet Hall, Vidhana Soudha, Bengaluru. The award was […]

You cannot copy content of this page