ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಕಲ್ಲಡ್ಕ – ಮುಸ್ಲಿಂ ಯುವಕನ ಪರ್ಸ್ ಮರಳಿಸಿ ಪ್ರಾಮಾಣಿಕತೆ ಮೆರೆದ ಹಿಂದೂ ಆಟೋ ಚಾಲಕ!
ರಸ್ತೆಯಲ್ಲಿ ಕಳೆದುಬಿದ್ದಿದ್ದ ನಗದು ಹಾಗೂ ಪ್ರಮುಖ ದಾಖಲೆಗಳಿದ್ದ ಪರ್ಸೊಂದನ್ನು ಅದರ ಅಸಲಿ ವಾರೀಸುದಾರರಿಗೆ ಸುರಕ್ಷಿತವಾಗಿ ಒಪ್ಪಿಸುವ ಮೂಲಕ ಆಟೋ ರಿಕ್ಷಾ ಚಾಲಕರೊಬ್ಬರು ಮಾನವೀಯತೆ ಹಾಗೂ ಪ್ರಾಮಾಣಿಕತೆ ಮೆರೆದ ಶ್ಲಾಘನೀಯ ಘಟನೆ ಕಲ್ಲಡ್ಕದಲ್ಲಿ ನಡೆದಿದೆ. ಒಂದು ಕಾಲದಲ್ಲಿ ಕೋಮು ಸಂಘರ್ಷಗಳ ಕಾರಣಕ್ಕೆ ಸುದ್ದಿಯಾಗುತ್ತಿದ್ದ ಕಲ್ಲಡ್ಕದಲ್ಲಿ, ಹಿಂದೂ ಯುವಕನೊಬ್ಬ ಮುಸ್ಲಿಂ ಯುವಕನಿಗೆ ಪರ್ಸ್ ಮರಳಿಸಲು ಸ್ಥಳೀಯ ಮಸೀದಿಯ ಮುಂಭಾಗವನ್ನೇ ಆಯ್ದುಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದ್ದು, ಕೋಮು ಸೌಹಾರ್ದತೆಗೆ ರಾಯಭಾರಿಯಂತಿದೆ. ಘಟನೆಯ ವಿವರ: ಉಪ್ಪಿನಂಗಡಿ ಸಮೀಪದ ಪೆರ್ನೆಯ ಪ್ರಸಿದ್ಧ ‘ಸತ್ಯಶ್ರೀ […]













