ಜುಲೈ 1ರಿಂದ ಪಾಸ್‌ಪೋರ್ಟ್ ದುಬಾರಿ! ಜೂನ್ 30ರೊಳಗೆ ಅರ್ಜಿ ಸಲ್ಲಿಸಿದರೆ ಹೆಚ್ಚುವರಿ ಶುಲ್ಕದಿಂದ ತಪ್ಪಿಸಿಕೊಳ್ಳಬಹುದು
ವಿದೇಶ ಪ್ರವಾಸ ಅಥವಾ ಉದ್ಯೋಗಕ್ಕಾಗಿ ಹೊಸ ಪಾಸ್‌ಪೋರ್ಟ್ ಪಡೆಯಲು ಯೋಜಿಸುತ್ತಿರುವವರಿಗೆ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಮಹತ್ವದ ಮಾಹಿತಿ ನೀಡಿದೆ. ಪಾಸ್‌ಪೋರ್ಟ್ (ತಿದ್ದುಪಡಿ) ನಿಯಮಗಳು-2026 ಅಡಿಯಲ್ಲಿ ಹೊಸ ಪಾಸ್‌ಪೋರ್ಟ್, ತತ್ಕಾಲ್ ಹಾಗೂ ಇತರೆ ಸಂಬಂಧಿತ ಸೇವೆಗಳ ಶುಲ್ಕವನ್ನು ಪರಿಷ್ಕರಿಸಿ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಪರಿಷ್ಕೃತ ಶುಲ್ಕಗಳು ಇದೇ ಜುಲೈ 1ರಿಂದ ಜಾರಿಗೆ ಬರಲಿವೆ. ಹೀಗಾಗಿ, ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಉದ್ದೇಶಿಸಿರುವವರು ಜೂನ್ 30ರೊಳಗೆ ಅರ್ಜಿ ಸಲ್ಲಿಸಿದರೆ ಹೆಚ್ಚುವರಿ ಶುಲ್ಕ ಪಾವತಿಸುವುದನ್ನು ತಪ್ಪಿಸಿಕೊಳ್ಳಬಹುದು. 18 ವರ್ಷ […]













