November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸಾಹಿತ್ಯ ಸಂಭ್ರಮ – ಮೇ 10ರಂದು ವಲ್ಲಿ ವಗ್ಗ ಅವರ ‘ವಿಂಚ್ಣಾರ್ ಕಾಣಿಯೊ’ ಕೃತಿ ಲೋಕಾರ್ಪಣೆ

ಕೊಂಕಣಿ ಸಾಹಿತ್ಯ ಲೋಕದ ಹಿರಿಯ ಸಾಹಿತಿ ವಲ್ಲಿ ವಗ್ಗ (ವಲೇರಿಯನ್ ಡಿಸೋಜ) ಅವರ ಬಹುನಿರೀಕ್ಷಿತ ನೂತನ ಕೃತಿ ‘ವಿಂಚ್ಣಾರ್ ಕಾಣಿಯೊ’ ಬಿಡುಗಡೆಗೆ ಸಜ್ಜಾಗಿದೆ. ಈ ಪುಸ್ತಕ ಲೋಕಾರ್ಪಣೆ ಸಮಾರಂಭವು ಇದೇ ಮೇ 10ರಂದು ಭಾನುವಾರ ಸಂಜೆ 5:00 ಗಂಟೆಗೆ ಮಂಗಳೂರಿನ ಸೈಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ‘ಸಹೋದಯ’ ಸಭಾಂಗಣದಲ್ಲಿ ಜರುಗಲಿದೆ. ಸಮಾರಂಭದ ವಿವರಗಳು: ಈ ಕಾರ್ಯಕ್ರಮದಲ್ಲಿ ನಾಡಿನ ಗಣ್ಯರು ಭಾಗವಹಿಸಲಿದ್ದು, ಸಾಹಿತ್ಯಿಕ ಮೆರುಗನ್ನು ನೀಡಲಿದ್ದಾರೆ: * ಮುಖ್ಯ ಅತಿಥಿಗಳು: ಅತೀ ವಂದನೀಯ ಡಾ. ಪ್ರವೀಣ್ ಮಾರ್ಟಿಸ್, ಎಸ್.ಜೆ. […]

News

ಮುಕ್ಕ ಚೇಳ್ಯಾರು ಸಂತ ಜೋಸೆಫ್ ಪ್ರಾರ್ಥನಾ ಮಂದಿರದ ದಶಮಾನೋತ್ಸವ ಹಾಗೂ ವಾರ್ಷಿಕೋತ್ಸವ ಸಂಭ್ರಮ

“ಪ್ರಾರ್ಥನಾ ಮಂದಿರಗಳು ಮನುಷ್ಯರಲ್ಲಿ ಪ್ರೀತಿಯನ್ನು ಬಿತ್ತಬೇಕು” – ಡಾ| ಗಣೇಶ್ ಅಮಿನ್ ಸಂಕಮಾರ್ ಕಥೋಲಿಕ ತೈಲಾಗಾರ ನಿರ್ವಸಿತರ ಅಭಿವೃದ್ಧಿ ಸಮಿತಿ (ರಿ.) ಮುಕ್ಕ ಚೇಳ್ಯಾರು ಇದರ ಆಶ್ರಯದಲ್ಲಿ, ಎಂ.ಆರ್.ಪಿ.ಎಲ್. ಕಾಲನಿಯಲ್ಲಿರುವ ಸಂತ ಜೋಸೆಫರ ಪ್ರಾರ್ಥನಾ ಮಂದಿರದ ದಶಮಾನೋತ್ಸವ ಮತ್ತು ಸಂತ ಜೋಸೆಫರ ವಾರ್ಡಿನ ವಾರ್ಷಿಕೋತ್ಸವವು ಮೇ 2ರಂದು ಶನಿವಾರ ಅತ್ಯಂತ ವಿಜ್ರಂಭಣೆಯಿಂದ ಜರುಗಿತು. ಪವಿತ್ರ ಬಲಿ ಪೂಜೆ ಮತ್ತು ಧಾರ್ಮಿಕ ವಿಧಿ ವಿಧಾನಗಳು: ಬೆಳಿಗ್ಗೆ 10:30ಕ್ಕೆ ಪವಿತ್ರ ಬಲಿ ಪೂಜೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸುರತ್ಕಲ್ ಸಂತ ಮದರ್ […]

News

ಡಿಜಿಟಲ್ ಒತ್ತಡದ ನಡುವೆ ಮಾನಸಿಕ ಸಮತೋಲನ ಅಗತ್ಯ – ಆಡ್ಯಾರ್‌ನ ಸೈಂಟ್ ಲೂರ್ಡ್ಸ್ ಸಂಸ್ಥೆಯಲ್ಲಿ ಸಮ್ಮೇಳನ

ಇಂದಿನ ವೇಗದ ಡಿಜಿಟಲ್ ಜಗತ್ತಿನಲ್ಲಿ ಯುವಜನತೆ ಎದುರಿಸುತ್ತಿರುವ ಮಾನಸಿಕ ಸವಾಲುಗಳು ಮತ್ತು ಒತ್ತಡ ನಿರ್ವಹಣೆಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಡ್ಯಾರ್‌ನ  ಸೈಂಟ್ ಲೂರ್ಡ್ಸ್ ಇನ್ಸ್ಟಿಟ್ಯೂಶನ್ಸ್ ವತಿಯಿಂದ ವಿಶೇಷ ಸಂಸ್ಥಾ ಮಟ್ಟದ ಸಮ್ಮೇಳನ ಯಶಸ್ವಿಯಾಗಿ ಜರುಗಿತು. ಸಂಸ್ಥೆಯ ಮಾನಸಿಕ ಆರೋಗ್ಯ ಶುಶ್ರೂಷಾ ವಿಭಾಗದ ನೇತೃತ್ವದಲ್ಲಿ ನಡೆದ ಈ ಸಮ್ಮೇಳನವು ‘ಡಿಜಿಟಲ್ ಯುಗದಲ್ಲಿ ಯುವ ಒತ್ತಡ ಮತ್ತು ಮಾನಸಿಕ ಆರೋಗ್ಯ’ ಎಂಬ ವಿಷಯದ ಮೇಲೆ ಬೆಳಕು ಚೆಲ್ಲುವಲ್ಲಿ ಯಶಸ್ವಿಯಾಯಿತು. ದ್ವಿತೀಯ ವರ್ಷದ ಜಿಎನ್ಎಂ (GNM) ಮತ್ತು ತೃತೀಯ ವರ್ಷದ […]

News

ಕಿರಿಯ ವಯಸ್ಸಿನಲ್ಲೇ ರಾಷ್ಟ್ರೀಯ ಮನ್ನಣೆ – ಗಾಯಕಿ ರಿಶಾಲ್ ಮೆಲ್ಬಾ ಕ್ರಾಸ್ತಾಗೆ ‘ಸಾಧನ ಶ್ರೀ ರಾಷ್ಟ್ರ ಪ್ರಶಸ್ತಿ’ ಗೌರವ

ಕಲೆ ಮತ್ತು ಸಾಹಿತ್ಯದ ಪೋಷಣೆಗೆ ಹೆಸರಾದ ‘ಕಥಾ ಬಿಂದು ಪ್ರಕಾಶನ’ ವತಿಯಿಂದ ಮುಂಬೈನಲ್ಲಿ ಆಯೋಜಿಸಲಾಗಿದ್ದ 10ನೇ ಆವೃತ್ತಿಯ ‘ಕನ್ನಡ ಕಂಪು’ ಕಾರ್ಯಕ್ರಮದಲ್ಲಿ ಉದಯೋನ್ಮುಖ ಗಾಯಕಿ ರಿಶಾಲ್ ಮೆಲ್ಬಾ ಕ್ರಾಸ್ತಾ ಅವರಿಗೆ ಪ್ರತಿಷ್ಠಿತ ‘ಸಾಧನ ಶ್ರೀ ರಾಷ್ಟ್ರ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು. ಕೇವಲ 18ನೇ ವಯಸ್ಸಿನಲ್ಲಿಯೇ ರಾಷ್ಟ್ರೀಯ ಮಟ್ಟದ ಈ ಅತ್ಯುನ್ನತ ಪ್ರಶಸ್ತಿಗೆ ಭಾಜನರಾಗಿರುವ ರಿಶಾಲ್, ಸಂಗೀತ ಕ್ಷೇತ್ರದಲ್ಲಿನ ತಮ್ಮ ಅಪ್ರತಿಮ ಸಾಧನೆಯ ಮೂಲಕ ನಾಡಿಗೆ ಹೆಮ್ಮೆ ತಂದಿದ್ದಾರೆ. ಗಣ್ಯರ ಮೆಚ್ಚುಗೆ: ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಂಟ್ಸ್ ಸಂಘ ಮುಂಬೈ […]

News

ಶಿಕ್ಷಣ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿದ್ದ ಆದರ್ಶ ಶಿಕ್ಷಕ, ಪ್ರಗತಿಪರ ಕೃಷಿಕ ಕೃಷ್ಣ ಭಟ್ಟ ಎಸ್. ಇನ್ನಿಲ್ಲ

ಮಾಣಿ ಕರ್ನಾಟಕ ಪ್ರೌಢ ಶಾಲೆಯ ನಿವೃತ್ತ ಹಿಂದಿ ಅಧ್ಯಾಪಕರು ದೈಗೋಳಿ ಸಮೀಪದ ಸುಣ್ಣಂಗುಳಿ ಮನೆತನದವರಾದ, ನಿವೃತ್ತ ಹಿಂದಿ ಶಿಕ್ಷಕ 80ವರ್ಷ ಪ್ರಾಯದ ಕೃಷ್ಣ ಭಟ್ಟ ಎಸ್. ಅವರು ವಯೋಸಹಜ ಅನಾರೋಗ್ಯದಿಂದ ಮೇ 1ರಂದು ಶುಕ್ರವಾರ ನಿಧನರಾಗಿದ್ದಾರೆ. ವಿಟ್ಲ ಸಮೀಪದ ಕೊಡಪದವು ದಿವಾಣದಲ್ಲಿ ನೆಲೆಸಿದ್ದ ಅವರು, ತಮ್ಮ ಸರಳತೆ ಮತ್ತು ಕರ್ತವ್ಯನಿಷ್ಠೆಯ ಮೂಲಕ ಜನಮಾನಸದಲ್ಲಿ ಉಳಿದಿದ್ದರು. ಗೌರವಪೂರ್ಣ ನುಡಿ ನಮನ: ಕೃಷ್ಣ ಭಟ್ಟರು ಮಾಣಿಯ ಕರ್ನಾಟಕ ಹೈಸ್ಕೂಲ್‌ನಲ್ಲಿ ದೀರ್ಘಕಾಲ ಹಿಂದಿ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು […]

News

ಸುರತ್ಕಲ್ ಕೊಲೆ ಮತ್ತು ದರೋಡೆ ಪ್ರಕರಣ – 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ರಾಜಸ್ಥಾನ ಮೂಲದ ಆರೋಪಿಯ ಬಂಧನ

ಕಳೆದ ಹನ್ನೆರಡು ವರ್ಷಗಳ ಹಿಂದೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟುವಿನಲ್ಲಿ ನಡೆದಿದ್ದ ವೃದ್ಧೆಯ ಭೀಕರ ಕೊಲೆ ಮತ್ತು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಳೆದ 6 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಸುರತ್ಕಲ್ ಪೊಲೀಸರು ಹಾಸನದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದ ಹಿನ್ನೆಲೆ: 2014 ಫೆಬ್ರವರಿ 8ರಂದು ಕುಳಾಯಿ ಹೊಸಬೆಟ್ಟುವಿನ ನಿವಾಸಿ ಸುಮತಿ ಪ್ರಭು ಎಂಬವರನ್ನು ಅವರ ನಿವಾಸದಲ್ಲೇ ಕುತ್ತಿಗೆ ಸೀಳಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಹಂತಕರು ಅವರ ಮೈಮೇಲಿದ್ದ ಸುಮಾರು 192 ಗ್ರಾಂ (24 […]

News

ಜಮೀನು ಮತ್ತು ಮನೆಯ ಹಂಚಿಕೆ ತಕರಾರು – ಕಾರ್ಕಳದಲ್ಲಿ ಅಣ್ಣನ ಪ್ರಾಣ ತೆಗೆದ ತಮ್ಮ!

ಆರೋಪಿ ಹೆರಾಲ್ಡ್ ಡಿಸೋಜನ ಬಂಧನ ರಕ್ತ ಸಂಬಂಧಕ್ಕಿಂತ ಆಸ್ತಿಯೇ ದೊಡ್ಡದಾಯಿತೇ? ಹೌದು ಎನ್ನುತ್ತದೆ ಕಾರ್ಕಳದ ಹಿರಿಯಂಗಡಿಯಲ್ಲಿ ನಡೆದ ಈ ಘಟನೆ. ಜಮೀನು ಮತ್ತು ಮನೆಯ ಹಂಚಿಕೆ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ, ತಮ್ಮನೊಬ್ಬ ಅಣ್ಣನನ್ನೇ ಹೊಡೆದು ಕೊಂದಿರುವ ಅಮಾನುಷ ಕೃತ್ಯ ಮಿತ್ತಬೆಟ್ಟು ಪ್ರದೇಶದಲ್ಲಿ ನಡೆದಿದೆ. ಘಟನೆಯ ಹಿನ್ನೆಲೆ: ಮೃತರನ್ನು ರಿಚರ್ಡ್ ಡಿಸೋಜ ಎಂದು ಗುರುತಿಸಲಾಗಿದೆ. ರಿಚರ್ಡ್ ಮತ್ತು ಅವನ ಸಹೋದರ ಹೆರಾಲ್ಡ್ ಡಿಸೋಜ ನಡುವೆ ಮಿತ್ತಬೆಟ್ಟುವಿನಲ್ಲಿರುವ ಆಸ್ತಿ ಮತ್ತು ಮನೆಗೆ ಸಂಬಂಧಿಸಿದಂತೆ ದೀರ್ಘಕಾಲದಿಂದ ಮನಸ್ತಾಪವಿತ್ತು. ಮೇ […]

News

ಕಲ್ಲಾಪು–ತೊಕ್ಕೊಟ್ಟು ಪ್ರದೇಶದಲ್ಲಿ ಮ್ಯಾಂಗ್ರೋವ್ ನೆಡುವ ಅಭಿಯಾನ – ಯುವಕರಿಂದ 5000 ಗಿಡಗಳ ನೆಡುವಿಕೆ

ಮಂಗಳೂರು ಧರ್ಮಕ್ಷೇತ್ರದ ICYM ಕೇಂದ್ರೀಯ ಸಮಿತಿಯ ಮುಂದಾಳತ್ವ ಮಂಗಳೂರು ಧರ್ಮಕ್ಷೇತ್ರದ ಭಾರತೀಯ ಕಥೋಲಿಕ ಯುವ ಸಂಚಲನ, ಮಂಗಳೂರು ಅರಣ್ಯ ಇಲಾಖೆ ವಿಭಾಗ ಹಾಗೂ ಐಸಿವೈಎಮ್ ಇಸಿಡಿ, ಸಿಟಿ ಮತ್ತು ಮಂಗಳೂರು ದಕ್ಷಿಣ ವಲಯದ ಸಹಯೋಗದಲ್ಲಿ ಕಲ್ಲಾಪು–ತೊಕ್ಕೊಟ್ಟು ಪರಿಸರದಲ್ಲಿ ಮ್ಯಾಂಗ್ರೋವ್ ಪ್ಲಾಂಟೇಶನ್ ಡ್ರೈವ್ ಯಶಸ್ವಿಯಾಗಿ ನಡೆಯಿತು. ಮೇ 3ರಂದು ಭಾನುವಾರ ಬೆಳಿಗ್ಗೆ 6ರಿಂದ 8.30 ಗಂಟೆಯವರೆಗೆ ನಡೆದ ಈ ಅಭಿಯಾನದಲ್ಲಿ ಯುವಕರು ಉತ್ಸಾಹದಿಂದ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ RFO ರಾಜೇಶ್, ಐಸಿವೈಎಮ್ ಕೇಂದ್ರೀಯ ಸಮಿತಿಯ ನಿರ್ದೇಶಕರಾದ ವಂದನೀಯ […]

News

ಬಂಟ್ವಾಳದಲ್ಲಿ ಬರೋಬ್ಬರಿ 42 ಲಕ್ಷ ರೂಪಾಯಿ ಮೌಲ್ಯದ ಎಂಡಿಎಂಎ ಜಪ್ತಿ : ಅಣ್ಣ-ತಮ್ಮನ ಬಂಧನ

ಬಂಟ್ವಾಳ ಗ್ರಾಮಾಂತರ ಠಾಣೆಯ PSI ಮಂಜುನಾಥ ಟಿ. ತಂಡದ ಮಿಂಚಿನ ಕಾರ್ಯಾಚರಣೆ ಬೆಂಗಳೂರಿನಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಬೃಹತ್ ಮೊತ್ತದ ನಿಷೇಧಿತ ಮಾದಕ ವಸ್ತುವನ್ನು ಪತ್ತೆಹಚ್ಚುವಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ. ಸುಮಾರು 42.30 ಲಕ್ಷ ರೂಪಾಯಿ ಮೌಲ್ಯದ ಎಂಡಿಎಂಎ (MDMA) ಸಹಿತ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಯ ವಿವರ: ಮೇ 2ರಂದು ಶನಿವಾರ ಸಂಜೆ ಬೆಂಗಳೂರಿನಿಂದ ಬರುತ್ತಿದ್ದ ಬೊಲೆರೋ ವಾಹನವೊಂದರಲ್ಲಿ ಮಾದಕ ವಸ್ತು ಸಾಗಾಟವಾಗುತ್ತಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯ ಪಿಎಸ್‌ಐ ಮಂಜುನಾಥ […]

News

ಕೊಂಕಣಿ ಸಾಹಿತ್ಯದ ಕಂಪನ್ನು ಪಸರಿಸಲು ‘ವಿಂಚ್ಣಾರ್ ಮೊತಿಯಾಂ’ – ಸಂತ ಅಲೋಶಿಯಸ್ ವಿವಿಯಿಂದ ಹೊಸ ಹೆಜ್ಜೆ

ಸಾಹಿತ್ಯದ ಅಳಿವು-ಉಳಿವು ಓದುಗರ ಆಸಕ್ತಿಯನ್ನು ಅವಲಂಬಿಸಿದೆ – ವಂದನೀಯ ಡಾ. ಪ್ರವೀಣ್ ಮಾರ್ಟಿಸ್ “ಸಾಹಿತ್ಯದ ಅಳಿವು-ಉಳಿವು ಓದುಗರ ಆಸಕ್ತಿಯನ್ನು ಅವಲಂಬಿಸಿದೆ,” ಎಂದು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಉಪ ಕುಲಪತಿ ವಂದನೀಯ ಡಾ. ಪ್ರವೀಣ್ ಮಾರ್ಟಿಸ್ ಅಭಿಪ್ರಾಯಪಟ್ಟಿದ್ದಾರೆ. ವಿಶ್ವವಿದ್ಯಾಲಯದ ಕೊಂಕಣಿ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾದ ‘ವಿಂಚ್ಣಾರ್ ಮೊತಿಯಾಂ’ (ಆಯ್ದ ಮುತ್ತುಗಳು) ಎಂಬ ವಿಡಿಯೊ ಸರಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಕೊಂಕಣಿ ಭಾಷೆಯಲ್ಲಿ ಕ್ಷೀಣಿಸುತ್ತಿರುವ ಓದುವ ಹವ್ಯಾಸಕ್ಕೆ ಮರುಜೀವ ನೀಡುವ ಉದ್ದೇಶದಿಂದ ಈ ವಿನೂತನ […]

You cannot copy content of this page