ಕೊಂಕಣಿ ಸಾಹಿತ್ಯದ ‘ದರ್ಜಿ’ ವಲ್ಲಿ ವಗ್ಗ – ಕವಿ ಮೆಲ್ವಿನ್ ರೊಡ್ರಿಗಸ್ ಶ್ಲಾಘನೆ
“ಭಿನ್ನಾಭಿಪ್ರಾಯಗಳಿರುವ ಲೇಖಕರನ್ನು ಒಗ್ಗೂಡಿಸಿ, ಸಂಬಂಧಗಳನ್ನು ದಾರದಲ್ಲಿ ಪೋಣಿಸುವ ದರ್ಜಿಯಂತೆ ಕಾರ್ಯನಿರ್ವಹಿಸುತ್ತಿರುವ ವಲ್ಲಿ ವಗ್ಗ ಅವರು ಕೊಂಕಣಿ ಸಾಹಿತ್ಯ ಲೋಕದ ದೊಡ್ಡಣ್ಣನಿದ್ದಂತೆ,” ಎಂದು ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಪ್ರಖ್ಯಾತ ಕವಿ ಮೆಲ್ವಿನ್ ರೊಡ್ರಿಗಸ್ ಅಭಿಪ್ರಾಯಪಟ್ಟರು. ನಗರದ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಸಹೋದಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ, ಹಿರಿಯ ಸಾಹಿತಿ ವಲ್ಲಿ ವಗ್ಗ (ವಲೇರಿಯನ್ ಡಿಸೊಜ) ಅವರ ಆಯ್ದ ಕಥೆಗಳ ಸಂಕಲನ ‘ವಿಂಚ್ಣಾರ್ ಕಾಣಿಯೊ‘ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು. ವರದಿಯ […]













