November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

‘ಟ್ಯಾಬ್ಲೆಟ್ ಆರೀಫ್’ ಕೊಲೆ ಪ್ರಕರಣ – ಸಿಸಿಬಿ ಬಲೆಯಲ್ಲಿ ಮತ್ತೊಬ್ಬ ಆರೋಪಿ

‘ಟೊಪ್ಪಿ ನೌಫಾಲ್‘ ಸಹೋದರನ ಬಂಧನ ಇಡೀ ಕರಾವಳಿಯನ್ನೇ ಬೆಚ್ಚಿಬೀಳಿಸಿದ್ದ ಉಚ್ಚಿಲ್ ಮುಳ್ಳುಗುಡ್ಡೆಯ ‘ಟ್ಯಾಬ್ಲೆಟ್ ಆರೀಫ್’ ಅಲಿಯಾಸ್ ಆರೀಫ್ ಹುಸೈನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮತ್ತೊಬ್ಬ ಪ್ರಮುಖ ಆರೋಪಿಯನ್ನು ಹೆಡೆಮುರಿಕಟ್ಟಿದ್ದಾರೆ. ಮೃತ ರೌಡಿಶೀಟರ್ ‘ಟೊಪ್ಪಿ ನೌಫಾಲ್’ ಸಹೋದರನಾಗಿರುವ ಪಡೀಲ್ ನಿವಾಸಿ 21 ವರ್ಷ ಪ್ರಾಯದ ಮೊಹಮ್ಮದ್ ಇಬ್ರಾಹಿಂ ಸಿನಾನ್ ಅಲಿಯಾಸ್ ಚಿನ್ನು ಬಂಧಿತ ಆರೋಪಿ. ಮೇ 25 ರಂದು ಸಿಸಿಬಿ ಪೊಲೀಸರು ಈತನನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಪ್ಲಾನ್ ಮಾಡಿದ್ದು […]

News

ಸಾವಿರಾರು ಜೀವಗಳಿಗೆ ಬೆಳಕಾದ ಸೇವಾಮೂರ್ತಿ ವಂದನೀಯ ಮೊನ್ಸಿಂಜೊರ್ ಲೆಸ್ಲಿ ಎಫ್. ಶೆಣೊಯ್ ಅಸ್ತಂಗತ

ಬಡವರ ಕಣ್ಣೀರೊರೆಸಿದ ಕರುಣಾಮಯ ಯಾಜಕ   ಅಂತ್ಯಕ್ರಿಯೆಯು ಮೇ 27ರಂದು ಬುಧವಾರ 3:00 ಗಂಟೆಗೆ ಮಂಗಳೂರಿನ ಉರ್ವ ಚರ್ಚ್ ನಲ್ಲಿ ನಡೆಯಲಿದೆ   ಮಂಗಳೂರು ಉರ್ವಾದ ಹೆಮ್ಮೆಯ ಧಾರ್ಮಿಕ ಗುರು, ದಾನಶೂರ, ಶಿಕ್ಷಣಪ್ರೇಮಿ ಹಾಗೂ ಮಾನವತೆಯ ನಿಸ್ವಾರ್ಥ ಸೇವಕನಾಗಿ ಗುರುತಿಸಿಕೊಂಡಿದ್ದ ವಂದನೀಯ ಮೊನ್ಸಿಂಜೊರ್ ಲೆಸ್ಲಿ ಎಫ್. ಶೆಣೊಯ್ ಅವರು ಮೇ 24ರಂದು ಭಾನುವಾರ ತಮ್ಮ 79ನೇ ವಯಸ್ಸಿನಲ್ಲಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರ ಅಗಲಿಕೆ ಕರಾವಳಿ ಕ್ರೈಸ್ತ ಸಮುದಾಯಕ್ಕೆ ಮಾತ್ರವಲ್ಲ, ಸಾವಿರಾರು ಬಡವರು, ವಿದ್ಯಾರ್ಥಿಗಳು […]

News

ದೀಪಕ್ ಜಿ. ಅವರಿಗೆ ಮಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ ಪ್ರದಾನ – ಪತ್ರಕರ್ತರು ಸಮಾಜದ ಸ್ವಾಸ್ಥ್ಯ ರಕ್ಷಕರು ಎಂದ MLC ಐವನ್ ಡಿಸೋಜ

ಸಮಾಜದಲ್ಲಿ ಶಾಂತಿ ಮತ್ತು ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ಅತ್ಯಂತ ಹಿರಿದಾಗಿದೆ. ಅತ್ಯಂತ ಪ್ರಾಮಾಣಿಕತೆ ಹಾಗೂ ಬದ್ಧತೆಯಿಂದ ಕೆಲಸ ಮಾಡುವ ಮಾಧ್ಯಮ ಪ್ರತಿನಿಧಿಗಳಿಗೆ ರಕ್ಷಣೆ ನೀಡುವುದು ಸರ್ಕಾರದ ಕರ್ತವ್ಯ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ತಿಳಿಸಿದ್ದಾರೆ. ನಗರದ ರೆಡ್ ಕ್ರಾಸ್ ಶತಮಾನೋತ್ಸವ ಕಟ್ಟಡದ ‘ಪ್ರೇರಣಾ ಸಭಾಂಗಣ’ದಲ್ಲಿ ಆಯೋಜಿಸಲಾಗಿದ್ದ “ಮಂಗಳೂರು ಪ್ರೆಸ್ ಕ್ಲಬ್ ದಿನಾಚರಣೆ”ಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಯಾವುದೇ ಘಟನೆ ನಡೆದರೂ ಪೊಲೀಸರಷ್ಟೇ ವೇಗವಾಗಿ ಸ್ಥಳಕ್ಕೆ ಧಾವಿಸುವ ಪತ್ರಕರ್ತರು, ಸಾರ್ವಜನಿಕರಿಗೆ ತಪ್ಪು […]

News

ಬೋಳಾ ಚರ್ಚ್‌ನಲ್ಲಿ ಹೊಸ ಕೊಂಕಣಿ ಚಿತ್ರಕ್ಕೆ ಅದ್ಧೂರಿ ಚಾಲನೆ

ಪ್ರಾರ್ಥನೆ ಹಾಗೂ ಆಶೀರ್ವಚನ ಸಲ್ಲಿಸಿದ ಚರ್ಚ್ ಪ್ರಧಾನ ಧರ್ಮಗುರು ಫಾದರ್ ರೆಜಿನಾಲ್ಡ್ ಡಿಸೋಜ ನಾಯಕ ನಟನಾಗಿ ಮಂಗಳೂರು ಧರ್ಮಕ್ಷೇತ್ರದ ICYM ಕೇಂದ್ರೀಯ ಅಧ್ಯಕ್ಷ ವಿಜಯ್ ಅಶ್ವಿನ್ ಕಾರ್ಡೋಜ ಬೋಳಾದ ಸೈಂಟ್ ಲಾರೆನ್ಸ್ ಚರ್ಚ್ ನಲ್ಲಿ ಮೇ 22ರಂದು ಶುಕ್ರವಾರ ಹೊಸ ಕೊಂಕಣಿ ಚಲನಚಿತ್ರದ ಮುಹೂರ್ತ ಹಾಗೂ ಆಶೀರ್ವಾದ ಸಮಾರಂಭವು ಅತ್ಯಂತ ಶ್ರದ್ಧಾಭಕ್ತಿ, ಸಂಭ್ರಮ ಮತ್ತು ಸಡಗರದ ವಾತಾವರಣದಲ್ಲಿ ನೆರವೇರಿತು. ಧಾರ್ಮಿಕ ಭಾವನೆಗಳೊಂದಿಗೆ ಆರಂಭವಾದ ಈ ಕಾರ್ಯಕ್ರಮ ಚಿತ್ರರಂಗ ಮತ್ತು ಯುವಜನರ ವಲಯದಲ್ಲಿ ವಿಶೇಷ ಕುತೂಹಲ ಮೂಡಿಸಿತು. ಕಾರ್ಯಕ್ರಮದ […]

News

ಪೋಕ್ಸೋ ಪ್ರಕರಣದ ಆರೋಪಿಗೆ ಷರತ್ತುಬದ್ಧ ಜಾಮೀನು ಮಂಜೂರು

ಪುತ್ತೂರಿನ ಕಜೆ ಲಾ ಚೇಂಬರ್ ಇದರ ಪ್ರಖ್ಯಾತ ವಕೀಲರಾದ ಮಹೇಶ್ ಕಜೆ ಅವರು ಮಂಡಿಸಿದ ವಾದ ಪೋಕ್ಸೋ (POCSO) ಪ್ರಕರಣದಡಿ ಬಂಧಿತನಾಗಿದ್ದ ಜಾರ್ಖಂಡ್ ಮೂಲದ ಆರೋಪಿ ರೇ ಮುಂಡ ಎಂಬಾತನಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ಪ್ರಕರಣದ ಹಿನ್ನೆಲೆ: ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಐವರ್ಣಾಡು ಗ್ರಾಮದ ಪಾಲೇಪ್ಪಾಡಿಗೆ ತನ್ನದೇ ಊರಿನ ಅಪ್ರಾಪ್ತ ಬಾಲಕಿಯನ್ನು ಕರೆದುಕೊಂಡು ಬಂದು ಲೈಂಗಿಕವಾಗಿ ಬಳಸಿಕೊಂಡಿದ್ದ ಆರೋಪ ರೇ ಮುಂಡ ಎಂಬಾತನ […]

News

ಸಮಾಜಕ್ಕೊಂದು ಮಾದರಿ: ಮಂಗಳೂರಿನಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ‘ಯುನೈಟೆಡ್ ಹೋಮ್ಸ್’ ಆಶ್ರಯ ತಾಣ ಲೋಕಾರ್ಪಣೆ!

ಬಿಜೈಯ ‘ಯುನೈಟೆಡ್ ಫ್ರೆಂಡ್ಸ್ ಟ್ರಸ್ಟ್’ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಹಾಗೂ ಸೂರಿಲ್ಲದ 10 ಕುಟುಂಬಗಳಿಗಾಗಿ ಅಬ್ಬೆಟ್ಟುವಿನಲ್ಲಿ ನಿರ್ಮಿಸಲಾದ ‘ಯುನೈಟೆಡ್ ಹೋಮ್ಸ್’ ವಸತಿ ಸಮುಚ್ಚಯವನ್ನು ಮೇ 17ರಂದು ಭಾನುವಾರ ಅದ್ಧೂರಿಯಾಗಿ ಉದ್ಘಾಟಿಸಲಾಯಿತು. ಬಿಜೈ ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್‌ನ ಪ್ರಧಾನ ಧರ್ಮಗುರುಗಳಾದ ವಂದನೀಯ ಡಾ. ಜೆ.ಬಿ. ಸಲ್ಡಾನ್ಹಾ ಅವರು ನೂತನ ಕಟ್ಟಡವನ್ನು ಆಶೀರ್ವದಿಸಿದರು. ದೈಜಿವರ್ಲ್ಡ್ ಮೀಡಿಯಾದ ಸಂಸ್ಥಾಪಕ ವಾಲ್ಟರ್ ನಂದಳಿಕೆ ಮತ್ತು ದಾನಿ ಮೈಕಲ್ ಡಿಸೋಜ ಅವರ ಪ್ರತಿನಿಧಿ ಸ್ಟೀವನ್ ಪಿಂಟೊ ಜಂಟಿಯಾಗಿ ನಾಮಫಲಕವನ್ನು ಅನಾವರಣಗೊಳಿಸಿದರು. ಇದೇ ವೇಳೆ […]

News

ರಾಜ್ಯಸಭಾ ಚುನಾವಣೆ – ಕಾಂಗ್ರೆಸ್‌ನಿಂದ ಕ್ರಿಶ್ಚಿಯನ್ ಅಲ್ಪಸಂಖ್ಯಾತರಿಗೆ ಟಿಕೆಟ್? ಮಂಗಳೂರಿನಿಂದ ನವೀನ್ ಡಿಸೋಜ ಹೆಸರು ಮುಂಚೂಣಿಗೆ!

ಮುಂದಿನ ತಿಂಗಳು ತೆರವಾಗಲಿರುವ ಕರ್ನಾಟಕದ ನಾಲ್ಕು ರಾಜ್ಯಸಭಾ ಸ್ಥಾನಗಳ ಪೈಕಿ, ಕಾಂಗ್ರೆಸ್ ಸುಲಭವಾಗಿ ಗೆಲ್ಲಬಹುದಾದ ಮೂರು ಸ್ಥಾನಗಳ ಹಂಚಿಕೆ ಕುರಿತು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗಳು ಆರಂಭವಾಗಿವೆ. ಈ ಪೈಕಿ ಒಂದು ಸ್ಥಾನವನ್ನು ಕ್ರಿಶ್ಚಿಯನ್ ಅಲ್ಪಸಂಖ್ಯಾತ ಸಮುದಾಯಕ್ಕೆ ಮೀಸಲಿಡಲು ಹೈಕಮಾಂಡ್ ಗಂಭೀರ ಚಿಂತನೆ ನಡೆಸಿದ್ದು, ಮಂಗಳೂರಿನ ಹಿರಿಯ ಕಾಂಗ್ರೆಸ್ ಮುಖಂಡ ನವೀನ್ ಡಿಸೋಜ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ರಾಜ್ಯಸಭೆಯ ಒಟ್ಟು ನಾಲ್ಕು ಸ್ಥಾನಗಳಿಗೆ ಜೂನ್ 18ರಂದು ಚುನಾವಣೆ ನಡೆಯಲಿದ್ದು, ಜೂನ್ 8ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ […]

News

ಮಂಗಳೂರಿನಲ್ಲಿ ಕರಾವಳಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ; ಸಂಘ-ಸಂಸ್ಥೆಗಳೊಂದಿಗೆ MLC ಐವನ್ ಡಿಸೋಜ ಸಮಾಲೋಚನೆ

ಕರಾವಳಿ ಕರ್ನಾಟಕದ ಹಲವು ವರ್ಷಗಳ ದೀರ್ಘಕಾಲದ ಬೇಡಿಕೆಯಾದ ‘ಹೈಕೋರ್ಟ್ ಸಂಚಾರಿ ಪೀಠ’ ಸ್ಥಾಪನೆಗೆ ಸಂಬಂಧಿಸಿದಂತೆ, ಹೋರಾಟ ಸಮಿತಿಯ ಸಂಚಾಲಕ ಹಾಗೂ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಅವರ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರ ಸಮಾಲೋಚನಾ ಸಭೆ ಜರುಗಿತು. ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಸೋಸಿಯೇಶನ್ ಸೇರಿದಂತೆ ಕರಾವಳಿಯ ನೂರಾರು ಸಂಘಟನೆಗಳು ಹೈಕೋರ್ಟ್ ಪೀಠ ಸ್ಥಾಪನೆಗಾಗಿ ನಿರಂತರವಾಗಿ ಮನವಿ ನೀಡುತ್ತಾ ಬಂದಿದ್ದವು. ಈ ಹಿಂದೆ MLC ಐವನ್ ಡಿಸೋಜ ಅವರ ನೇತೃತ್ವದಲ್ಲಿ ಹೋರಾಟ ಸಮಿತಿಯನ್ನು ರಚಿಸಿ, ಹಲವು […]

News

INTERNATIONAL NURSES DAY 2026 celebrated at Father Muller

International Nurses Day 2026 was celebrated with great zeal at Father Muller Medical College Hospital on May 12. The celebration was based on the theme “Our Nurses, Our Future- Empowered Nurses Save Lives,” emphasizing the importance of empowered and dedicated nurses in strengthening healthcare services. The program commenced with a prayer song followed by the […]

News

ವಿಟ್ಲ ಪೊಲೀಸರ ಮೇಲೆ ಕಾರು ಚಲಾಯಿಸಿ ಪರಾರಿಯಾಗಲು ಯತ್ನ – ಇಬ್ಬರು ಜಾನುವಾರು ಕಳ್ಳಸಾಗಣೆದಾರರ ವಿರುದ್ಧ ಪ್ರಕರಣ ದಾಖಲು, ಓರ್ವ ವಶಕ್ಕೆ

ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಪಿಕ್‌ಅಪ್ ವಾಹನವನ್ನು ತಡೆಯಲು ಯತ್ನಿಸಿದ ಪೊಲೀಸರ ಮೇಲೆಯೇ ಕಾರು ಚಲಾಯಿಸಿ, ಪ್ರಾಣಾಪಾಯ ಉಂಟುಮಾಡಲು ಯತ್ನಿಸಿದ ಆಘಾತಕಾರಿ ಘಟನೆ ಬಂಟ್ವಾಳ ತಾಲೂಕಿನ ಕೊಳ್ನಾಡು ಪಂಜರಕೋಡಿ ಎಂಬಲ್ಲಿ ಮೇ 21ರಂದು ಗುರುವಾರ ಬೆಳಿಗ್ಗೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ವಿಟ್ಲ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಮತ್ತೊಬ್ಬನಿಗಾಗಿ ಬಲೆ ಬೀಸಿದ್ದಾರೆ. ಘಟನೆಯ ವಿವರ: ಅಕ್ರಮ ಗೋ ಸಾಗಾಟದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸ್ ಉಪ ನಿರೀಕ್ಷಕರಾದ ರಾಮಕೃಷ್ಣ ಅವರಿಗೆ ಖಚಿತ […]

You cannot copy content of this page