November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕ್ರಿಕೆಟ್ ಮೈದಾನದ ಜಗಳ ಕೊಲೆಯಲ್ಲಿ ಅಂತ್ಯ  – ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್‌ಗೆ ಚಾಕು ಇರಿತ

ಆಟದ ಮೈದಾನದಲ್ಲಿ ಶುರುವಾದ ಸಣ್ಣದೊಂದು ಜಗಳ, ರಾತ್ರಿಯಾಗುವಷ್ಟರಲ್ಲಿ ಭೀಕರ ಕೊಲೆಯಲ್ಲಿ ಅಂತ್ಯವಾಗಿರುವ ಆಘಾತಕಾರಿ ಘಟನೆ ಕಾಸರಗೋಡು ಜಿಲ್ಲೆಯ ಮಾರ್ಪನಡ್ಕದಲ್ಲಿ ನಡೆದಿದೆ. ಕ್ರಿಕೆಟ್ ಆಡುವಾಗ ಉಂಟಾದ ದ್ವೇಷಕ್ಕೆ ಬ್ಯಾಂಕ್ ಸೆಕ್ಯೂರಿಟಿ ನೌಕರರೊಬ್ಬರು ಬಲಿಯಾಗಿದ್ದಾರೆ. ಮೈದಾನದಲ್ಲಿ ಶುರುವಾದ ಕಿಡಿ: ಮೇ 17ರಂದು ಭಾನುವಾರ ಸಂಜೆ ಕುಂಬ್ಡಾಜೆ ಪಂಚಾಯತ್ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟ ನಡೆಯುತ್ತಿತ್ತು. ಈ ವೇಳೆ ಆಟಗಾರರ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆದಿದೆ. ಅಲ್ಲಿಗೆ ಮುಗಿಯಬೇಕಿದ್ದ ಜಗಳ, ರಾತ್ರಿಯ ವೇಳೆಗೆ ತಾರಕಕ್ಕೇರಿದೆ. ಬ್ಯಾಂಕ್ ಮುಂಭಾಗದಲ್ಲೇ ಚಾಕು ಇರಿತ: […]

News

ಮಂಗಳೂರು ಪ್ರೆಸ್ ಕ್ಲಬ್ ಗೌರವ ಸನ್ಮಾನ – ಐವರು ಹಿರಿಯ ಪತ್ರಕರ್ತರು ಪ್ರಶಸ್ತಿಗೆ ಆಯ್ಕೆ

ಮಂಗಳೂರು ಪ್ರೆಸ್ ಕ್ಲಬ್‌ನ 2025-26ನೇ ಸಾಲಿನ ಪ್ರತಿಷ್ಠಿತ ‘ಮಂಗಳೂರು ಪ್ರೆಸ್ ಕ್ಲಬ್ ಗೌರವ ಸನ್ಮಾನ’ಕ್ಕೆ ಮಾಧ್ಯಮ ರಂಗದ ಐವರು ಹಿರಿಯ ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ. ಪತ್ರಿಕೋದ್ಯಮದಲ್ಲಿ ಸುದೀರ್ಘ ಹಾಗೂ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಈ ಗೌರವಕ್ಕೆ ಗುರುತಿಸಲಾಗಿದೆ. ಪ್ರಶಸ್ತಿ ಪುರಸ್ಕೃತರ ವಿವರ: ಈ ಬಾರಿಯ ಗೌರವ ಸನ್ಮಾನಕ್ಕೆ ಆಯ್ಕೆಯಾದ ಹಿರಿಯ ಪತ್ರಕರ್ತರ ವಿವರ ಹೀಗಿದೆ: ಬಾಲಸುಬ್ರಹ್ಮಣ್ಯ ಕಾಯಾರ (ಹಿರಿಯ ಪತ್ರಕರ್ತರು) ರಾಮಣ್ಣ ವೈ (ವಿಜಯ ಕರ್ನಾಟಕ) ಹರ್ಷ (ಡೆಕ್ಕನ್ ಹೆರಾಲ್ಡ್) ರೇಮಂಡ್ ಡಿಕೂನಾ (ಪಿಂಗಾರ) ಆರ್.ಎಂ. […]

News

ಮೇ 20 ರಂದು ದೇಶಾದ್ಯಂತ ಮೆಡಿಕಲ್ ಶಾಪ್ ಬಂದ್ – ಇ-ಫಾರ್ಮಸಿ ವಿರೋಧಿಸಿ ದಕ್ಷಿಣ ಕನ್ನಡದಲ್ಲೂ ಔಷಧ ಅಂಗಡಿಗಳು ಸ್ಥಗಿತ!

ಆನ್‌ಲೈನ್ ಮೂಲಕ ನಿಯಮಬಾಹಿರವಾಗಿ ಔಷಧಿಗಳನ್ನು ಮಾರಾಟ ಮಾಡುತ್ತಿರುವುದನ್ನು ವಿರೋಧಿಸಿ ಅಖಿಲ ಭಾರತ ಔಷಧ ವ್ಯಾಪಾರಸ್ಥರ ಸಂಘವು ಮೇ 20 ರಂದು ದೇಶಾದ್ಯಂತ ಔಷಧ ವ್ಯಾಪಾರ ಬಂದ್‌ಗೆ ಕರೆ ನೀಡಿದೆ. ಕೇಂದ್ರ ಸಂಘಟನೆಯ ಮಾರ್ಗದರ್ಶನದಲ್ಲಿ ಅಂದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತವೂ ಔಷಧ ವ್ಯಾಪಾರಸ್ಥರು ಮುಷ್ಕರ ನಡೆಸಲಿದ್ದಾರೆ ಎಂದು ದ.ಕ. ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ಅರುಣ್ ಶೆಟ್ಟಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿಸ್ತೃತ ಮಾಹಿತಿ ನೀಡಿದ ಅವರು, ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಮತ್ತು ಇ-ಫಾರ್ಮಸಿಗಳು ಯಾವುದೇ ವೈದ್ಯಕೀಯ […]

News

ಧರ್ಮಾಧ್ಯಕ್ಷರಾಗಿ 30 ವರ್ಷಗಳ ಸೇವೆ – ನಿವೃತ್ತ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ ಅವರಿಗೆ ಜೆಪ್ಪುವಿನಲ್ಲಿ ಭವ್ಯ ಸನ್ಮಾನ

ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಬಿಷಪ್, ‘ಜನರ ಬಿಷಪ್’ ಎಂದೇ ಖ್ಯಾತರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಧರ್ಮಾಧ್ಯಕ್ಷರಾಗಿ ದೀಕ್ಷೆ ಸ್ವೀಕರಿಸಿದ 30ನೇ ವಾರ್ಷಿಕೋತ್ಸವವನ್ನು ಜೆಪ್ಪುವಿನ ಸಂತ ಜೋಸೆಫ್ ಚರ್ಚ್‌ನಲ್ಲಿ ಅತ್ಯಂತ ಭಕ್ತಿ ಮತ್ತು ಸಡಗರದಿಂದ  ಆಚರಿಸಲಾಯಿತು. ಮಂಗಳೂರು ಧರ್ಮಕ್ಷೇತ್ರದ ಇತಿಹಾಸದಲ್ಲೇ ಅತೀ ಹೆಚ್ಚು ಕಾಲ ಸೇವೆ ಸಲ್ಲಿಸಿದ ಎರಡನೇ ಧರ್ಮಾಧ್ಯಕ್ಷರೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಬಿಷಪ್ ಅಲೋಶಿಯಸ್ ಅವರ ಮೂರು ದಶಕಗಳ ಸುದೀರ್ಘ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಸೇವೆಯನ್ನು ಈ ಸಂದರ್ಭದಲ್ಲಿ ಕೃತಜ್ಞತೆಯೊಂದಿಗೆ […]

News

ಮಣಿಪುರದಲ್ಲಿ ಪಾಸ್ಟರ್‌ಗಳ ಕ್ರೂರ ಹತ್ಯೆ – ಪ್ರೊಟೆಸ್ಟಂಟ್ ಕ್ರೈಸ್ತರ ಮಹಾಸಭಾ (DAPC) ತೀವ್ರ ಖಂಡನೆ

ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಇತ್ತೀಚೆಗೆ ಪಾಸ್ಟರ್‌ಗಳು ಮತ್ತು ಅವರ ಸಂಗಾತಿಯ ಮೇಲೆ ನಡೆದ ಕ್ರೂರ ಹತ್ಯೆಯನ್ನು ಭಾರತದಲ್ಲಿನ ‘ಡಯೋಸಿಸ್ ಆಫ್ ಆಲ್ ಪ್ರೊಟೆಸ್ಟೆಂಟ್ ಚರ್ಚ್’ (DAPC) ಮತ್ತು ‘ಪ್ರೊಟೆಸ್ಟಂಟ್ ಕ್ರೈಸ್ತರ ಮಹಾಸಭಾ’ ಅತ್ಯಂತ ತೀವ್ರವಾಗಿ ಖಂಡಿಸಿವೆ. ವರದಿಗಳ ಪ್ರಕಾರ, ಚುರಾಚಾಂದ್‌ಪುರದಲ್ಲಿ ಆಯೋಜಿಸಲಾಗಿದ್ದ ಕ್ರೈಸ್ತ ಸಭೆಯನ್ನು ಮುಗಿಸಿ ಹಿಂದಿರುಗುತ್ತಿದ್ದ ಚರ್ಚ್ ನಾಯಕರ ವಾಹನಗಳ ಮೇಲೆ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಅಡಗಿಕುಳಿತು ಈ ಭೀಕರ ದಾಳಿ ನಡೆಸಿದ್ದಾರೆ. ಮಾನವೀಯತೆ ಮೇಲಿನ ದಾಳಿ – ಮೆಟ್ರೋಪಾಲಿಟನ್ ಆರ್ಚ್‌ಬಿಷಪ್ ಕಳವಳ: ಈ ಘಟನೆಯ ಕುರಿತು […]

News

ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಮೂಲಭೂತ ಸೌಕರ್ಯ ಒದಗಿಸಲು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ MLC ಐವನ್ ಡಿಸೋಜ

ಕರಾವಳಿ ಕರ್ನಾಟಕದ ಜನರ ದಶಕಗಳ ಬೇಡಿಕೆಯಾಗಿರುವ ಹೈಕೋರ್ಟ್ ಸಂಚಾರಿ ಪೀಠವನ್ನು ಮಂಗಳೂರಿನಲ್ಲಿ ಸ್ಥಾಪಿಸುವ ಪ್ರಕ್ರಿಯೆಗೆ ವೇಗ ನೀಡುವ ನಿಟ್ಟಿನಲ್ಲಿ, ಹೋರಾಟ ಸಮಿತಿಯ ಸಂಚಾಲಕ ಹಾಗೂ ಶಾಸಕ MLC ಐವನ್ ಡಿಸೋಜ ಅವರು ಇಂದು ಮೇ 15ರಂದು ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಾದ ದರ್ಶನ್ ಹೆಚ್.ವಿ. ಅವರನ್ನು ಭೇಟಿ ಮಾಡಿ ವಿಸ್ತೃತ ಚರ್ಚೆ ನಡೆಸಿದರು. ಕಡಿಮೆ ವೆಚ್ಚದಲ್ಲಿ ಶೀಘ್ರ ನ್ಯಾಯದ ಗುರಿ: ಕರಾವಳಿ ಭಾಗದ ಜನರು ಸಣ್ಣಪುಟ್ಟ ಕಾನೂನು ಹೋರಾಟಗಳಿಗೂ ಬೆಂಗಳೂರಿಗೆ ಅಲೆಯುವುದನ್ನು ತಪ್ಪಿಸಲು ಹಾಗೂ ಕಡಿಮೆ ಖರ್ಚಿನಲ್ಲಿ, […]

News

ICYM BORIMAR ಸಂಘಟನೆಯಲ್ಲಿ ‘ಕುಟುಂಬ ರಾಜಕಾರಣ’?: ಯಾರಿಗೂ ತಿಳಿಸದೇ ಒಳಗಿಂದೊಳಗೆ ಚುನಾವಣೆ ನಡೆಸಿದ ಸಚೇತಕ! ಭುಗಿಲೆದ್ದ ಆಕ್ರೋಶ

ಮಂಗಳೂರು ಧರ್ಮಾಧ್ಯಕ್ಷರಿಗೆ ಲಿಖಿತ ದೂರು ನೀಡಿದ ಚರ್ಚ್ ಹಿಂದಿನ ಪಾಲನಾ ಸಮಿತಿ ಕ್ರೈಸ್ತ ಯುವಜನರ ಪ್ರತಿಷ್ಠಿತ ಸಂಘಟನೆಯಾದ ICYM ಬೊರಿಮಾರ್ (BORIMAR) ಘಟಕದಲ್ಲಿ ಸಚೇತಕನು (ANIMATOR) ಧರ್ಮಕ್ಷೇತ್ರದ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ, ಏಕಪಕ್ಷೀಯವಾಗಿ ರಹಸ್ಯ ಚುನಾವಣೆ ನಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ. ಒಂದೇ ಕುಟುಂಬದ ಸದಸ್ಯರಿಗೆ ಸಂಘಟನೆಯ ಪ್ರಮುಖ ಹುದ್ದೆಗಳನ್ನು ತನಗೆ ಬೇಕಾದವರಿಗೆ ಕೊಡುವ ಸಲುವಾಗಿ, ಪ್ರಾಮಾಣಿಕವಾಗಿ ನಿಷ್ಟಾವಂತ ಸೇವೆ ನೀಡುವ ಇತರ ಯಾವುದೇ ಸದಸ್ಯರಿಗೆ ಚುನಾವಣೆ ನಡೆಸುವ ಮಾಹಿತಿ ನೀಡದೆ ಒಳಗಿಂದೊಳಗೆ ತಮಗೆ ಬೇಕಾದವರನ್ನು […]

News

Preliminary Yoga Practice Session Conducted at S.C.S. Hospital Ahead of International Yoga Day

As part of the preparations for the upcoming International Yoga Day celebrations, SCS Hospital organized a two-day preliminary yoga practice session on 13-05-2026 and 14-05-2026 at the hospital premises to promote awareness about the importance of yoga and encourage regular practice among the public. The programme was inaugurated in the presence of distinguished dignitaries. The […]

News

ಬಿಕರ್ನಕಟ್ಟೆ ಪುಣ್ಯಕ್ಷೇತ್ರದಲ್ಲಿ ನಾಲ್ವರು ಕಾರ್ಮೆಲೈಟ್ ಡೀಕನ್‌ ಅವರಿಗೆ ಪವಿತ್ರ ಗುರುದೀಕ್ಷೆ  

ದೈವಿಕ ಉತ್ಸಾಹದೊಂದಿಗೆ ಸುಸಂದೇಶ ಸಾರಲು ಬಿಷಪ್‌ ಸಲ್ಡಾನ್ಹಾ ಕರೆ ಮಂಗಳೂರಿನ ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ಮೇ 14ರಂದು ಗುರುವಾರ ನಡೆದ ಭವ್ಯ ಸಮಾರಂಭದಲ್ಲಿ ನಾಲ್ವರು ಕಾರ್ಮೆಲೈಟ್ ಡೀಕನ್ ಅವರು ಪವಿತ್ರ ಗುರುದೀಕ್ಷೆಯನ್ನು ಸ್ವೀಕರಿಸುವ ಮೂಲಕ ಪ್ರಭು ಯೇಸುವಿನ ಸೇವೆಯಲ್ಲಿ ತಮ್ಮನ್ನು ಸಮರ್ಪಿಸಿಕೊಂಡರು. ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಪರಮ ಪೂಜ್ಯ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ವಂದನೀಯ ಆಲ್ವಿನ್ ಡಿಸೋಜ, ವಂದನೀಯ ಲೋಯ್ ಜಾಕ್ಸನ್ ಕ್ರಾಸ್ತಾ, ವಂದನೀಯ ಎಲ್ಸ್ಟನ್ ಮೊಂತೇರೊ ಮತ್ತು ವಂದನೀಯ […]

News

ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವಿಳಂಬ – ವಿಟ್ಲ ಬಾನಿನಲ್ಲಿ ವಿಮಾನಗಳ ಸುತ್ತಾಟ, ಆತಂಕಗೊಂಡ ಜನತೆ!

ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಮತ್ತು ಸುತ್ತಮುತ್ತಲ ಪ್ರದೇಶದ ಆಕಾಶದಲ್ಲಿ ಇಂದು ಮೇ 14ರಂದು ಗುರುವಾರ ಎರಡು ವಿಮಾನಗಳು ಸತತವಾಗಿ 12 ಸುತ್ತುಗಳನ್ನು ಹಾಕಿದ್ದು, ಸ್ಥಳೀಯರಲ್ಲಿ ಕೆಲಕಾಲ ತೀವ್ರ ಆತಂಕ ಮತ್ತು ಕುತೂಹಲಕ್ಕೆ ಕಾರಣವಾಯಿತು. ಮಧ್ಯಾಹ್ನದ ವೇಳೆಗೆ ಎರಡು ವಿಮಾನಗಳು ಒಂದಾದ ಮೇಲೊಂದರಂತೆ ವಿಟ್ಲ ಪರಿಸರದ ಬಾನಿನಲ್ಲಿ ವೃತ್ತಾಕಾರವಾಗಿ ಹಾರಾಟ ನಡೆಸುತ್ತಿರುವುದು ಕಂಡುಬಂದಿತು. ಇತ್ತೀಚಿನ ಜಾಗತಿಕ ವಿದ್ಯಮಾನಗಳಿಂದಾಗಿ ಯುದ್ಧದ ಭೀತಿಯಲ್ಲಿದ್ದ ಜನರಿಗೆ, ಈ ಹಠಾತ್ ಬೆಳವಣಿಗೆ ಮತ್ತಷ್ಟು ಗಾಬರಿ ಹುಟ್ಟಿಸಿತ್ತು. ಜನರು ಗುಂಪು ಗುಂಪಾಗಿ ಆಕಾಶದತ್ತ ನೋಡುತ್ತಾ […]

You cannot copy content of this page