November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮತಾಂತರ ವಿರೋಧಿ ಕಾಯ್ದೆ ರದ್ದತಿಗೆ ಆಗ್ರಹ: ಮೇ 30ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕ್ರೈಸ್ತ ಸಂಘಟನೆಗಳ ಬೃಹತ್ ಪ್ರತಿಭಟನೆ

ಸಂಪೂರ್ಣ ಬೆಂಬಲವನ್ನು ಘೋಷಿಸಿದ ‘ಡಯೋಸಿಸ್ ಆಫ್ ಆಲ್ ಪ್ರೊಟೆಸ್ಟೆಂಟ್ ಚರ್ಚಸ್’ (DAPC) ಕರ್ನಾಟಕದ ಮತಾಂತರ ವಿರೋಧಿ ಕಾಯ್ದೆಯನ್ನು ರದ್ದುಪಡಿಸುವಂತೆ ಒತ್ತಾಯಿಸಿ ಹಾಗೂ ಕ್ರೈಸ್ತ ಸಮುದಾಯದ ಮೇಲಾಗುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ ಬರುವ ಮೇ 30ರಂದು ಬೆಳಿಗ್ಗೆ 11:00 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ವಿವಿಧ ಕ್ರೈಸ್ತ ಪಂಗಡಗಳು ಮತ್ತು ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಬೃಹತ್ ಶಾಂತಿಯುತ ಪ್ರತಿಭಟನೆ ಆಯೋಜಿಸಲಾಗಿದೆ. ಈ ಮಹಾ ಪ್ರತಿಭಟನೆಗೆ ‘ಡಯೋಸಿಸ್ ಆಫ್ ಆಲ್ ಪ್ರೊಟೆಸ್ಟೆಂಟ್ ಚರ್ಚಸ್’ (DAPC) ತನ್ನ ಸಂಪೂರ್ಣ ಬೆಂಬಲವನ್ನು ಘೋಷಿಸಿದೆ. ಈ ಕುರಿತು […]

News

ಕೋರ್ಟ್ ಆವರಣದಲ್ಲೇ ಕುಸಿದು ಬಿದ್ದ ಯುವ ವಕೀಲ ಹೃದಯಾಘಾತದಿಂದ ಸಾವು

ಗಂಗಾವತಿ ನ್ಯಾಯಾಲಯ ಆವರಣದಲ್ಲಿ ಯುವ ವಕೀಲರೊಬ್ಬರು ದಿಢೀರ್ ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟ ದುರ್ಘಟನೆ ನಡೆದಿದೆ. ಕನಕಗಿರಿ ತಾಲೂಕಿನ ಚಿಕ್ಕಮಾದಿಹಾಳ ಗ್ರಾಮದ ನಿವಾಸಿಯಾಗಿದ್ದ 26 ವರ್ಷದ ಯುವ ವಕೀಲ ಕನಕೇಶ್ ಮುರುಡಿ ಮೃತಪಟ್ಟವರು. ಎಂದಿನಂತೆ ನ್ಯಾಯಾಲಯದ ಕಲಾಪಗಳಿಗೆ ಆಗಮಿಸಿದ್ದ ಕನಕೇಶ್ ಅವರು ಕೋರ್ಟ್ ಆವರಣದಲ್ಲಿ ಇದ್ದ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅಲ್ಲಿದ್ದ ಸಹೋದ್ಯೋಗಿ ವಕೀಲರು ಅವರನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರೂ, ಮಾರ್ಗ ಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಮೃತ ಕನಕೇಶ್ ಅವರು ಹಿರಿಯ […]

News

SSLC ಮರುಮೌಲ್ಯಮಾಪನದಲ್ಲಿ ಮಿಂಚಿದ ಬಂಟ್ವಾಳದ SVS ಟೆಂಪಲ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಧ್ರುವಿ

620 ಅಂಕದೊಂದಿಗೆ ತಾಲೂಕು ಟಾಪರ್ ಪಟ್ಟಿಗೆ ಸೇರ್ಪಡೆ ಬಂಟ್ವಾಳ ತಾಲೂಕಿನ SVS ಟೆಂಪಲ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಧ್ರುವಿ ಮರುಮೌಲ್ಯಮಾಪನದ ಬಳಿಕ ಎರಡು ಅಂಕಗಳ ಹೆಚ್ಚಳ ಪಡೆದು ತಾಲೂಕಿನ ಪ್ರಥಮ ಸ್ಥಾನಿಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾಳೆ. 2025-26ನೇ ಸಾಲಿನ SSLC ಪರೀಕ್ಷೆಯಲ್ಲಿ ಆರಂಭದಲ್ಲಿ 618 ಅಂಕಗಳನ್ನು ಪಡೆದಿದ್ದ ಧ್ರುವಿ, ರಾಜ್ಯ ಮಟ್ಟದಲ್ಲಿ 8ನೇ ಸ್ಥಾನ ಪಡೆದಿದ್ದರು. ಆದರೆ ಕನ್ನಡ ವಿಷಯದಲ್ಲಿ ನಿರೀಕ್ಷಿತ ಅಂಕ ಸಿಗದ ಹಿನ್ನೆಲೆಯಲ್ಲಿ ಉತ್ತರ ಪತ್ರಿಕೆಯ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಮರುಮೌಲ್ಯಮಾಪನದ ಫಲಿತಾಂಶ ಇದೀಗ […]

News

ವಿಟ್ಲ ವಲಯದ ಶ್ರೇಷ್ಠಗುರು ಫಾದರ್ ಐವನ್ ಮೈಕಲ್ ರೊಡ್ರಿಗಸ್‌ ಅವರಿಗೆ ಮಿಲಾಗ್ರಿಸ್ ಚರ್ಚ್ ನಲ್ಲಿ ಭವ್ಯ ಸ್ವಾಗತ – ಪ್ರಧಾನ ಧರ್ಮಗುರುಗಳಾಗಿ ಅಧಿಕಾರ ಸ್ವೀಕಾರ

ಜನಮನ ಗೆದ್ದ ಧರ್ಮಗುರು ಮಿಲಾಗ್ರಿಸ್ ಚರ್ಚ್‌ನ ನಾಯಕತ್ವಕ್ಕೆ ಸರಳತೆ, ಮೃದು ಸ್ವಭಾವ ಮತ್ತು ಜನಸ್ನೇಹಿ ಧೋರಣೆಯಿಂದ ಭಕ್ತರ ಮನಸ್ಸು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಿಟ್ಲ ವಲಯದಲ್ಲಿ ಶ್ರೇಷ್ಠ ಧರ್ಮಗುರು, ಸಮಾಜಮುಖಿ ಚಿಂತಕ ಹಾಗೂ ಕಥೊಲಿಕ್ ಸಭಾದ ಆದ್ಯಾತ್ಮಿಕ ನಿರ್ದೇಶಕರಾಗಿ ಜನಮನ ಗೆದ್ದಿದ್ದ ಅತೀ ವಂದನೀಯ ಫಾದರ್ ಐವನ್ ಮೈಕಲ್ ರೊಡ್ರಿಗಸ್ ಅವರು ಇದೀಗ ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಐತಿಹಾಸಿಕ ಮಿಲಾಗ್ರಿಸ್ ಚರ್ಚ್‌ನ ನೂತನ ಪ್ರಧಾನ ಧರ್ಮಗುರುಗಳಾಗಿ ಅಧಿಕಾರ ಸ್ವೀಕರಿಸಿದರು. ಮೇ 19ರಂದು ಸೋಮವಾರ ನಡೆದ ಭವ್ಯ ಸಮಾರಂಭದಲ್ಲಿ […]

News

ಮೆಡಿಕಲ್ ಬಂದ್ – ಸಾರ್ವಜನಿಕರಿಗೆ ತೊಂದರೆಯಾಗದಂತೆ ಮಂಗಳೂರಿನಲ್ಲಿ ಪರ್ಯಾಯ ವ್ಯವಸ್ಥೆ; ಈ ನಂಬರ್‌ಗಳಿಗೆ ಕರೆ ಮಾಡಿ

ಆನ್‌ಲೈನ್ ಮೂಲಕ ಔಷಧಿಗಳ ಮಾರಾಟವನ್ನು ವಿರೋಧಿಸಿ ನಾಳೆ ಮೇ 20ರಂದು ಬುಧವಾರ ಮೆಡಿಕಲ್ ಅಂಗಡಿಗಳ ಬಂದ್‌ಗೆ ಕರೆ ನೀಡಲಾಗಿದೆ. ಆದರೆ, ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮತ್ತು ರೋಗಿಗಳಿಗೆ ತುರ್ತು ಔಷಧಿಗಳ ಕೊರತೆಯಾಗದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಸಹಾಯಕ ಔಷಧ ನಿಯಂತ್ರಕರ ಕಚೇರಿ ವಿಶೇಷ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿದೆ. ಬಂದ್ ದಿನದಂದು ಜಿಲ್ಲೆಯ ಹಲವು ಪ್ರಮುಖ ಫಾರ್ಮಸಿಗಳು ಮತ್ತು ಆಸ್ಪತ್ರೆಯ ಒಳಗಿನ ಔಷಧಿ ಅಂಗಡಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ತೆರೆದಿರುವ ಪ್ರಮುಖ ಔಷಧಿ ಕೇಂದ್ರಗಳು: ಬಂದ್‌ನಿಂದ ವಿನಾಯಿತಿ ಪಡೆದು […]

News

ಸೂರಿಕುಮೇರು ಚರ್ಚ್ ಧರ್ಮಗುರುಗಳ ಸ್ಪಷ್ಟೀಕರಣ ಸಂಪೂರ್ಣ ಸುಳ್ಳು

‘ಕರಾವಳಿ ಸುದ್ದಿ’ ವರದಿಗೆ ಹೆದರಿ ತೇಪೆ ಹಚ್ಚುವ ಕೆಲಸಕ್ಕೆ ಇಳಿದರಾ ಫಾದರ್ ಪ್ಯಾಟ್ರಿಕ್ ಸಿಕ್ವೇರಾ? ಬಿಷಪ್‌ ಅವರಿಗೆ ಲಿಖಿತ ದೂರು ನೀಡುತ್ತಿದ್ದಂತೆ ಫಾ. ಸಿಕ್ವೇರಾ ಒಂದೇ ಕುಟುಂಬದ ಇಬ್ಬರನ್ನು ಹುದ್ದೆಯಿಂದ ವಜಾ ಮಾಡಿದ್ದು ಯಾಕೆ?   ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್‌ನ ICYM BORIMAR ಘಟಕದ ಚುನಾವಣಾ ಅಕ್ರಮದ ಕುರಿತು ‘ಕರಾವಳಿ ಸುದ್ದಿ’ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸತ್ಯ ವರದಿಯನ್ನು ಸಹಿಸಲಾಗದೆ, ತನ್ನ ತಪ್ಪುಗಳನ್ನು ಮರೆಮಾಚಲು ಚರ್ಚ್ ಧರ್ಮಗುರು ಫಾದರ್ ಪ್ಯಾಟ್ರಿಕ್ ಸಿಕ್ವೇರಾ ಅವರು ಸುಳ್ಳಿನ ಸರಮಾಲೆಯನ್ನೇ ಪೋಣಿಸಿದ್ದಾರೆ […]

News

ಮಂಗಳೂರು ಪ್ರೆಸ್ ಕ್ಲಬ್ ದಿನಾಚರಣೆ – ದೀಪಕ್ ಬೆಳ್ತಂಗಡಿಯವರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ

ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ‘ಪ್ರೆಸ್ ಕ್ಲಬ್ ದಿನಾಚರಣೆ’ಯು ಮೇ 24ರಂದು ಬೆಳಿಗ್ಗೆ 10 ಗಂಟೆಗೆ ರೆಡ್ ಕ್ರಾಸ್ ಶತಮಾನೋತ್ಸವ ಭವನದ ಪ್ರೇರಣಾ ಸಭಾಂಗಣದಲ್ಲಿ ಜರುಗಲಿದೆ. ಈ ವಿಶೇಷ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ ಅವರು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ, 2025ನೇ ಸಾಲಿನ ‘ಮಂಗಳೂರು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ’ಗೆ ಭಾಜನರಾಗಿರುವ ಖ್ಯಾತ ಸಮಾಜ ಸೇವಕ ದೀಪಕ್ ಜಿ. ಬೆಳ್ತಂಗಡಿ ಅವರಿಗೆ ಮಂಗಳೂರು ನಗರ ಪೊಲೀಸ್ ಕಮಿಷನರೆಟ್‌ನ ಉಪ ಪೊಲೀಸ್ ಆಯುಕ್ತರಾದ (DCP) […]

News

ಅಪ್ರಾಪ್ತರಿಗೆ ಬೈಕ್ ನೀಡಿದ ಮಾಲೀಕರಿಗೆ ತಲಾ 25,000 ರೂಪಾಯಿ ದಂಡ ವಿಧಿಸಿದ ನ್ಯಾಯಾಲಯ

ಅಪ್ರಾಪ್ತ ವಯಸ್ಕರಿಗೆ ದ್ವಿಚಕ್ರ ವಾಹನಗಳನ್ನು ಚಲಾಯಿಸಲು ನೀಡಿದ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ, ವಾಹನಗಳ ಮಾಲೀಕರಿಗೆ ಮಾನ್ಯ ನ್ಯಾಯಾಲಯವು ತಲಾ 25,000 ರೂಪಾಯಿಗಳ ದಂಡ ವಿಧಿಸಿ ಆದೇಶ ಹೊರಡಿಸಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಪ್ರಕರಣದ ಹಿನ್ನೆಲೆ: ಬಂಟ್ವಾಳ ಸಂಚಾರ ಠಾಣಾ ಪೊಲೀಸರು ಇತ್ತೀಚೆಗೆ ನಡೆಸಿದ ವಾಹನ ತಪಾಸಣೆಯ ವೇಳೆ ಎರಡು ಪ್ರತ್ಯೇಕ ನಿಯಮ ಉಲ್ಲಂಘನೆಗಳು ಪತ್ತೆಯಾಗಿದ್ದವು. ಮೊದಲನೆಯದಾಗಿ, ಕಳೆದ ಏಪ್ರಿಲ್ 6ರಂದು ಮೆಲ್ಕಾರ್ ಎಂಬಲ್ಲಿ ಅಪ್ರಾಪ್ತ ಬಾಲಕನೊಬ್ಬ KA-19-HT-9694 ನೋಂದಣಿಯ ದ್ವಿಚಕ್ರ ವಾಹನ ಚಲಾಯಿಸುತ್ತಿರುವುದು ಕಂಡುಬಂದಿತ್ತು. ಎರಡನೆಯದಾಗಿ, […]

News

ಯುಎಇ ಯುನೈಟೆಡ್ ಲೊರೆಟ್ಟೊ ಫ್ರೆಂಡ್ಸ್ ನೂತನ ಸಾರಥಿ – ಅಧ್ಯಕ್ಷರಾಗಿ ಡೊನಾಲ್ಡ್ ನೊರೊನ್ಹಾ ಆಯ್ಕೆ

ಗಲ್ಫ್ ನಾಡಿನಲ್ಲಿ ಸಮಾಜ ಸೇವೆ ಮತ್ತು ಸಂಸ್ಕೃತಿಯ ರಕ್ಷಣೆಯಲ್ಲಿ ಮುಂಚೂಣಿಯಲ್ಲಿರುವ ‘ಯುಎಇ ಯುನೈಟೆಡ್ ಲೊರೆಟ್ಟೊ ಫ್ರೆಂಡ್ಸ್’ (ULF) ಸಂಸ್ಥೆಯ 2026-28ನೇ ಸಾಲಿನ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ನೊರೊನ್ಹಾ ಅಲ್ಲಿಪಾದೆ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸಂಸ್ಥೆಯ ಮಹಾಸಭೆಯಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಗಿ ಜರುಗಿತು. ನೂತನ ಪದಾಧಿಕಾರಿಗಳ ಪಟ್ಟಿ: ಸಂಸ್ಥೆಯ ವಿವಿಧ ಜವಾಬ್ದಾರಿಗಳಿಗೆ ಆಯ್ಕೆಯಾದ ಪ್ರಮುಖರ ವಿವರ ಹೀಗಿದೆ: ಅಧ್ಯಕ್ಷರು – ಡೊನಾಲ್ಡ್ ನೊರೊನ್ಹಾ ಅಲ್ಲಿಪಾದೆ ಪ್ರಧಾನ ಕಾರ್ಯದರ್ಶಿ – […]

News

ICYM BORIMAR ಘಟಕದಲ್ಲಿ ‘ಕುಟುಂಬ ರಾಜಕಾರಣ’ಕ್ಕೆ ಬಿತ್ತು ಬ್ರೇಕ್ – ಒಂದು ಕುಟುಂಬಕ್ಕೆ ಒಂದೇ ಹುದ್ದೆ

ಬಿಷಪ್ ಮತ್ತು ICYM ಕೇಂದ್ರೀಯ ಸಮಿತಿಗೆ ಕೃತಜ್ಞತೆ ಸಲ್ಲಿಸಿದ ಸೂರಿಕುಮೇರು ಚರ್ಚ್ ಭಕ್ತಾಧಿಗಳು ಮಂಗಳೂರು ಧರ್ಮಕ್ಷೇತ್ರದ ಕ್ರೈಸ್ತ ಯುವಜನರ ಪ್ರತಿಷ್ಠಿತ ಸಂಘಟನೆಯಾದ ICYM ಇದರ BORIMAR ಘಟಕದಲ್ಲಿ ನಡೆದ “ರಹಸ್ಯ ಚುನಾವಣೆ” ವಿವಾದದ ಬಳಿಕ, ಒಂದೇ ಕುಟುಂಬದ ಸದಸ್ಯರಿಗೆ ನೀಡಲಾಗಿದ್ದ ಎರಡು ಹುದ್ದೆಗಳಲ್ಲಿ ಒಂದನ್ನು ಹಿಂಪಡೆಯಲಾಗಿದ್ದು, ಇದೀಗ ಒಂದು ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ನೀಡಿದ ಹುದ್ದೆಯನ್ನು ಘೋಷಿಸಲಾಗಿದೆ. ಸಂಘಟನೆಯ ಸಚೇತಕ ಅಶ್ವಿನ್ ಮಿಲ್ಟನ್ ಸಿಕ್ವೇರಾ ಧರ್ಮಕ್ಷೇತ್ರದ ನಿಯಮಗಳನ್ನು ಕಡೆಗಣಿಸಿ, ಸಾರ್ವಜನಿಕ ಮಾಹಿತಿ ನೀಡದೆ ಏಕಪಕ್ಷೀಯವಾಗಿ ಚುನಾವಣೆಯನ್ನು […]

You cannot copy content of this page