ಕಾಲೇಜು ವಿದ್ಯಾರ್ಥಿಗಳಿಗೆ MDMA ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ
18 ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತು ವಶ ಸುರತ್ಕಲ್ ಪರಿಸರದಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತುವಾದ MDMA ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕಾಪು ನಿವಾಸಿ 38 ವರ್ಷ ಪ್ರಾಯದ ಝಕಾರಿಯಾ ಮತ್ತು ಉಡುಪಿಯ 23 ವರ್ಷ ಪ್ರಾಯದ ಮಿಥುನ್ ಪೂಜಾರಿ ಎಂದು ಗುರುತಿಸಲಾಗಿದೆ. ಕಾರ್ಯಾಚರಣೆಯ ವಿವರ: * ಖಚಿತ ಮಾಹಿತಿ: ಫೆಬ್ರವರಿ 27ರಂದು ಶುಕ್ರವಾರ ಸುರತ್ಕಲ್ ಠಾಣಾ ವ್ಯಾಪ್ತಿಯ ಮುಕ್ಕಾದ ವೇಯಿಂಗ್ ಬ್ರಿಡ್ಜ್ ಬಳಿ […]













