ಮೊಗರ್ನಾಡ್ ಚರ್ಚ್ 250ನೇ ವರ್ಷದ ಜುಬಿಲಿ ಆಚರಣೆ ಪ್ರಯುಕ್ತ ಭವ್ಯ ಪಾದಯಾತ್ರೆ
ಪೂರ್ವಜರ ಆತ್ಮಕ್ಕಾಗಿ ಪ್ರಾರ್ಥನೆ ಸಲ್ಲಿಸಿ ಅವರ ಆದರ್ಶ ಪಾಠಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು – ಫಾದರ್ ಹೆರಿ ಡಿಸೋಜ ಮಂಗಳೂರು ಧರ್ಮಕ್ಷೇತ್ರದ ಮೊಗರ್ನಾಡ್ ದೇವಮಾತಾ ಚರ್ಚ್ ತನ್ನ 250ನೇ ವರ್ಷದ ಜ್ಯುಬಿಲಿ ಆಚರಣೆಯ ಅಂಗವಾಗಿ ಭವ್ಯ ಯಾತ್ರಿಕ ಪಾದಯಾತ್ರೆಯನ್ನು ನವಂಬರ್ 2ರಂದು ಭಾನುವಾರ ಆಯೋಜಿಸಿತು. ಮಧ್ಯಾಹ್ನ 3.00 ಗಂಟೆಗೆ ಮೊಗರ್ನಾಡ್ ಚರ್ಚ್ ನಿಂದ ಆರಂಭಗೊಂಡ ಪಾದಯಾತ್ರೆ ಮೊಡಂಕಾಪು ಬಾಲ ಏಸುವಿನ ಚರ್ಚ್ ತನಕ ಮೆರವಣಿಗೆಯ ರೂಪದಲ್ಲಿ ನಡೆಯಿತು. ಈ ಪಾದಯಾತ್ರೆಯಲ್ಲಿ ಗ್ಲೋರಿಯಾ, ಜೆರುಜಲೆಮ್, ರಿಜೋಯ್ಸ್, ಬೆತ್ಲೆಹೆಮ್ ಮತ್ತು ಹೊಸನ್ನಾ […]













