November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಅಂಬ್ಲಮೊಗರು ಗ್ರಾಮದ ಭೂ ಹಗರಣದ ಬಗ್ಗೆ ಸಮಗ್ರ ತನಿಖೆಯಾಗಲಿ – ಸುನಿಲ್ ಕುಮಾರ್ ಬಜಾಲ್

ಬಡ ರೈತರ ಕ್ರಷಿಭೂಮಿಯ ಅಕ್ರಮ ಸ್ವಾಧೀನದ ವಿರುದ್ಧ ಉಳ್ಳಾಲ ತಹಶೀಲ್ದಾರ್ ಕಚೇರಿಯೆದುರು ಪ್ರತಿಭಟನೆ ಬಡ ಗೇಣಿದಾರರ ಭೂಮಿಯನ್ನು ಮಾಲೀಕರಿಂದ ನೇರವಾಗಿ ಖರೀದಿ ಮಾಡಿ ಗೇಣಿದಾರರಿಗಾದ ಅನ್ಯಾಯದ ವಿರುದ್ಧ, ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿರುವುದರ ವಿರುದ್ಧ ಹಾಗೂ ಪಂಚಾಯತ್ ನಿಂದ ನಿರ್ಮಿಸಲ್ಪಟ್ಟಿದ್ದ ರಸ್ತೆಯ ಅತಿಕ್ರಮಣದ ವಿರುದ್ಧ ಅಂಬ್ಲಮೊಗರು ಗ್ರಾಮದ ನಾಗರೀಕರು ಕೃಷಿಭೂಮಿ ಸಂರಕ್ಷಣಾ ಹೋರಾಟ ಸಮಿತಿಯ ನೇತ್ರತ್ವದಲ್ಲಿ ಅಕ್ಟೋಬರ್ 23ರಂದು ಗುರುವಾರ ಉಳ್ಳಾಲ ತಹಶೀಲ್ದಾರ್ ಕಚೇರಿಯೆದುರು ಪ್ರತಿಭಟನೆಯನ್ನು ನಡೆಸಲಾಯಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಅಂಬ್ಲಮೊಗರು ಮುನ್ನೂರು ಬೆಳ್ಮ ಗ್ರಾಮದ […]

News

ಮಂಗಳೂರಿನ SCS ಆಸ್ಪತ್ರೆಯ 38 ವರ್ಷಗಳ ಸಂಭ್ರಮಾಚರಣೆ

ಫುಜಿಫಿಲ್ಮ್ ಜಪಾನ್‍ನ 128 ಸ್ಲೈಸ್ ಕಾರ್ಡಿಯಕ್ ಸಿಟಿ ಸ್ಕ್ಯಾನ್‍, ಆಧುನಿಕ ರೇಡಿಯಾಲಜಿ ವಿಭಾಗ ಮತ್ತು NABL ಮಾನ್ಯತೆ ಪಡೆದ ಪ್ರಯೋಗಾಲಯದ ಉದ್ಘಾಟನೆ ಮಂಗಳೂರಿನ SCS ಆಸ್ಪತ್ರೆಯ 38 ವರ್ಷಗಳ ಶ್ರೇಷ್ಠ ನಿಸ್ವಾರ್ಥ ಸೇವೆಯ ಸಂಭ್ರಮಾಚರಣೆ ಮತ್ತು ಫುಜಿಫಿಲ್ಮ್ ಜಪಾನ್‍ನ 128 ಸ್ಲೈಸ್ ಕಾರ್ಡಿಯಕ್ ಸಿಟಿ ಸ್ಕ್ಯಾನ್‍, ಆಧುನಿಕ ರೇಡಿಯಾಲಜಿ ವಿಭಾಗ ಮತ್ತು ಎನ್‍ಎಬಿಎಲ್ ಮಾನ್ಯತೆ ಪಡೆದ ಪ್ರಯೋಗಾಲಯದ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಸಂಸದ ಕ್ಯಾಪ್ಟನ್  ಬ್ರಿಜೇಶ್  ಚೌಟರವರು ಉದ್ಘಾಟಿಸಿ ಹೃದಯದ ಆರೈಕೆಯ ಹೊಸ ಯುಗಕ್ಕೆ […]

News

ನಾಳೆ ಅಕ್ಟೋಬರ್ 24ರಂದು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ 

ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ ನಾಳೆ ಅಕ್ಟೋಬರ್ 24ರಂದು ಶುಕ್ರವಾರ ಧರ್ಮಸ್ಥಳದಲ್ಲಿ ನೌಕರವೃಂದದವರು, ಊರಿನ ನಾಗರಿಕರು, ಭಕ್ತರು ಹಾಗೂ ಅಭಿಮಾನಿಗಳ ಉಪಸ್ಥಿತಿಯಲ್ಲಿ ನೆರವೇರಲಿದೆ. ಭಗವಾನ್‌ ಚಂದ್ರನಾಥಸ್ವಾಮಿ ಬಸದಿ ಹಾಗೂ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆಯಲಿವೆ. ಊರಿನ ನಾಗರಿಕರು, ಭಕ್ತರು ಹಾಗೂ ಅಭಿಮಾನಿಗಳು ಪೂಜ್ಯ ಹೆಗ್ಗಡೆಯವರಿಗೆ ಶ್ರದ್ಧಾ-ಭಕ್ತಿಯಿಂದ ಗೌರವಾರ್ಪಣೆ ಮಾಡುವರು. ಸಭಾ ಕಾರ್ಯಕ್ರಮ: ಸಂಜೆ 4:00 ಗಂಟೆಯಿಂದ ನಡೆಯುವ ಸಮಾರಂಭದಲ್ಲಿ ತುಮಕೂರಿನ ಸಿದ್ಧಗಂಗ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿಯವರು ಆಶೀರ್ವಚನ […]

News

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗಾಗಿ ಬಂಟ್ವಾಳದಲ್ಲಿ ವಕೀಲರ ಪೋಸ್ಟ್‌ಕಾರ್ಡ್ ಚಳವಳಿ

ಮಂಗಳೂರಿನಲ್ಲಿ ಹೈಕೋರ್ಟ್ ಪೀಠವನ್ನು ಸ್ಥಾಪಿಸಬೇಕೆಂದು ಆಗ್ರಹಿಸಿ ಬಿ. ಸಿ. ರೋಡ್ ನಲ್ಲಿ ಇಂದು ಅಕ್ಟೋಬರ್ 23ರಂದು ಗುರುವಾರ ಬಂಟ್ವಾಳ ವಕೀಲರ ಸಂಘ (ರಿ.) ಮತ್ತು ಸಾರ್ವಜನಿಕರ ಸಹಯೋಗದಲ್ಲಿ ಪೋಸ್ಟ್‌ಕಾರ್ಡ್ ಚಳವಳಿ ನಡೆಯಿತು. ಬಂಟ್ವಾಳದ ಹಿರಿಯ ವಕೀಲರು ಹಾಗೂ ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಪಿ. ಜಯರಾಮ್ ರೈ ಅವರು ಈ ಚಳವಳಿಗೆ ಚಾಲನೆ ನೀಡಿದರು. ದಕ್ಷಿಣ ಕನ್ನಡ ಜಿಲ್ಲಾ ವಕೀಲರ ಸಂಘದ ಜಿಲ್ಲಾಧ್ಯಕ್ಷರು ಹಾಗೂ ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷರಾದ ರಿಚರ್ಡ್ ಕೊಸ್ತಾರವರು ಮಾತನಾಡಿ “ದಕ್ಷಿಣ ಕನ್ನಡ, […]

News

ಚಿಕಿತ್ಸೆಗೆ ಬಂದ ಯುವತಿಗೆ ಲೈಂಗಿಕ ಕಿರುಕುಳ – ಚರ್ಮರೋಗ ತಜ್ಞ ಪ್ರವೀಣ್ ರೊಡ್ರಿಗಸ್ ಬಂಧನ

ಚಿಕಿತ್ಸೆ ಪಡೆಯಲು ಬಂದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಚರ್ಮರೋಗ ತಜ್ಞನನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನ ಖಾಸಗಿ ಕ್ಲಿನಿಕ್‌ನಲ್ಲಿ ನಡೆದಿದೆ. ಬಂಧಿತ ವೈದ್ಯರನ್ನು ಪ್ರವೀಣ್ ರೊಡ್ರಿಗಸ್ ಎಂದು ಗುರುತಿಸಲಾಗಿದ್ದು, ಅವರು ಖಾಸಗಿ ಚರ್ಮರೋಗ ತಜ್ಞರಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು 21 ವರ್ಷದ ಯುವತಿ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, “ನಾನು ಅಕ್ಟೋಬರ್ 18 ರಂದು ಚರ್ಮದ ಸೋಂಕು ಸಂಬಂಧ ಚಿಕಿತ್ಸೆ ಪಡೆಯಲು ಖಾಸಗಿ ಕ್ಲಿನಿಕ್‌ಗೆ ಹೋದೆ. ಚಿಕಿತ್ಸೆ ನೀಡುವ […]

News

ಮೂರು ವರ್ಷದ ಮಗನ ಜೊತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ

ಪತಿಯ ಕಿರುಕುಳದಿಂದ ಬೇಸತ್ತ ಮಹಿಳೆಯೊಬ್ಬಳು ತನ್ನ ಮೂರು ವರ್ಷದ ಮಗನ ಜೊತೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೀಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದ ಚೆನ್ನಮ್ಮ ದೇವಿ ದೇವಸ್ಥಾನದ ಹತ್ತಿರ ನಡೆದಿದೆ. ಮೃತಳನ್ನು 21ವರ್ಷ ಪ್ರಾಯದ ಫಾತಿಮಾ ಹಾಗೂ ಆಕೆಯ ಪುತ್ರ 3 ವರ್ಷ ಪ್ರಾಯದ ಅಬ್ದುಲ್ ಎಂದು  ತಿಳಿದುಬಂದಿದೆ. ಫಾತಿಮಾ ಪತಿ ಮಸ್ತಾನ್ ಸಾಬ್ ನೀಡಿರುವ ಕಿರುಕುಳವೇ ತನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಎಂದು ಆರೋಪಿಸಿದ್ದಾರೆ. ಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ […]

News

ಪುತ್ತಿಲ ಕೈಯಲ್ಲಿ ಕತ್ತಿ – ಪೊಲೀಸ್ ಇಲಾಖೆ ಸ್ಪಷ್ಟನೆ

ತಪ್ಪು ಪ್ರಚಾರ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ – ಪೊಲೀಸ್ ವರಿಷ್ಠಾಧಿಕಾರಿಗಳು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಅಕ್ಟೋಬರ್ 22ರಂದು ಬುಧವಾರ ಮುಂಜಾನೆ ಜಾನುವಾರುಗಳ ರಕ್ಷಣೆಗಾಗಿ ಸ್ಥಳೀಯರು ಮತ್ತು ಪೊಲೀಸ್ ಸಿಬ್ಬಂದಿ ಸಂಪೂರ್ಣ ಸಹಕಾರ ನೀಡಿದ ಘಟನೆ ನಡೆದಿದೆ. ಒಟ್ಟು 12 ಜಾನುವಾರಗಳಲ್ಲಿ ಒಂದೇ ಜಾನುವಾರು ಸತ್ತಿದ್ದು, ಇತರ ಪ್ರತಿ ಜಾನುವಾರಿನ ಸಾವು ತಪ್ಪಿಸಲು ಸ್ಥಳೀಯರು ಮತ್ತು ಪೊಲೀಸ್ ಅಧಿಕಾರಿಗಳು ಕೈಜೋಡಿಸಿದ್ದಾರೆ. ಅರುಣ್ ಕುಮಾರ್ ಪುತ್ತಿಲ ಸ್ಥಳಕ್ಕೆ ಬಂದು ಪೊಲೀಸರು ಜಾನುವಾರಗಳನ್ನು ಸುರಕ್ಷಿತವಾಗಿ […]

News

ಪೋಷಕರಿಗೆ ಕರೆ ಮಾಡಿದ ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ ವಸತಿ ಶಾಲೆಯ ಶಿಕ್ಷಕನ ಬಂಧನ

ಗುರು ತಿಪ್ಪೇಸ್ವಾಮಿ ದೇವಸ್ಥಾನದ ಅಧೀನದ ವೇದ ಅಧ್ಯಯನ ಶಾಲೆಯ ಶಿಕ್ಷಕ ವೀರೇಶ್ ಹಿರೇಮಠ ಎಂಬವರು, ವಿದ್ಯಾರ್ಥಿಯೊಬ್ಬ ಪೋಷಕರಿಗೆ ಕರೆ ಮಾಡಿದಕ್ಕಾಗಿ ಆತನನ್ನು ನೆಲಕ್ಕೆ ತಳ್ಳಿ ಎಲ್ಲೆಂದರಲ್ಲಿ ಮನಬಂದಂತೆ ಒದ್ದಿದ್ದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ಶಿಕ್ಷಕನನ್ನು ಬಂಧಿಸಿದ್ದಾರೆ. ಈ ವಿಡಿಯೋ ವೈರಲ್ ಆದ ಬಳಿಕ ನಾಪತ್ತೆಯಾಗಿದ್ದ ಈತನನ್ನು ಪೊಲೀಸರು ಕಲಬುರಗಿಯಲ್ಲಿ ಬಂಧಿಸಿದ್ದಾರೆ. ಬಳಿಕ ತಡರಾತ್ರಿ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದಾಗ ನ್ಯಾಯಾಧೀಶರು 2 ದಿನ ನ್ಯಾಯಾಂಗ ಬಂಧನಕ್ಕೆ ವಿಧಿಸಿದ ಹಿನ್ನೆಲೆಯಲ್ಲಿ ವೀರೇಶ್‌ನನ್ನು ಚಿತ್ರದುರ್ಗ ಜೈಲಿಗೆ […]

News

ಜಾನುವಾರು ಅಕ್ರಮ ಸಾಗಣೆ ವೇಳೆ ಪೊಲೀಸರ ಮೇಲೆ ಕೊಲೆಯತ್ನ – ಆರೋಪಿಯ ಕಾಲಿಗೆ ಗುಂಡು

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಅಕ್ಟೋಬರ್ 22ರಂದು ಬುಧವಾರ ಬೆಳಗ್ಗೆ ನಡೆದಿದೆ. ಕೇರಳದ ಕಾಸರಗೋಡು ಮೂಲದವನಾದ ಆರೋಪಿ 40 ವರ್ಷ ಪ್ರಾಯದ ಅಬ್ದುಲ್ಲಾ, ಐಚರ್ ವಾಹನದಲ್ಲಿ ಸುಮಾರು 10 ಜಾನುವಾರುಗಳನ್ನು ಸಾಗಿಸುತ್ತಿದ್ದನು. ಆತನೇ ವಾಹನದ ಚಾಲಕನಾಗಿದ್ದನು ಹಾಗೂ ಇನ್ನೊಬ್ಬ ಸಹಚರನೂ ವಾಹನದಲ್ಲಿದ್ದನು. ಪೊಲೀಸರು ವಾಹನವನ್ನು ತಪಾಸಣೆಗಾಗಿ ನಿಲ್ಲಿಸಲು ಸೂಚಿಸಿದಾಗ ಆರೋಪಿಯು ನಿಲ್ಲಿಸದೆ ವೇಗವಾಗಿ ಚಲಿಸಿಕೊಂಡು ಹೋಗಿದ್ದಾನೆ. ಸುಮಾರು 10 ಕಿಲೋ ಮೀಟರ್‌ಗಳಷ್ಟು ದೂರ […]

News

ಪೆರುವಾಯಿ ಫಾತಿಮಾ ಮಾತಾ ಸಮುದಾಯ ಭವನದಲ್ಲಿ ವಿಟ್ಲ ವಲಯದ “ವೈಸಿಎಸ್ ದ್ವಿತೀಯ ಸಮಾವೇಶ – 2025”

ಯುವ ಶಕ್ತಿ ಒಂದು ಉತ್ತಮ ಅಮೂಲ್ಯ ಹಾಗೂ ಆಕರ್ಷಕ ಶಕ್ತಿ – ಫಾದರ್ ನವೀನ್ ಪ್ರಕಾಶ್ ಪಿಂಟೊ ಜಿಯಾ ಮಿನೇಜಸ್ ರವರಿಂದ ವಿದ್ಯಾರ್ಥಿಗಳಿಗೆ ತರಬೇತಿ ಮಂಗಳೂರು ಧರ್ಮಕ್ಷೇತ್ರದ ಸಂತ ಜೋನ್‌ ಪಾವ್ಲ್ ದ್ವಿತೀಯ ವಿಟ್ಲ ವಲಯದ ವೈಸಿಎಸ್‌ ಸಂಘಟನೆಯ 2025 ನೇ ಸಾಲಿನ ದ್ವಿತೀಯ ಸಮಾವೇಶವು ಅಕ್ಟೋಬರ್ 19ರಂದು ಭಾನುವಾರ ಪೆರುವಾಯಿ ಫಾತಿಮಾ ಮಾತಾ ಸಮುದಾಯ ಭವನದಲ್ಲಿ ನಡೆಯಿತು. ವಿಟ್ಲ ವಲಯದ ಶ್ರೇಷ್ಠ ಗುರು ಅತೀ ವಂದನೀಯ ಫಾದರ್ ಐವನ್ ಮೈಕಲ್ ರೊಡ್ರಿಗಸ್ ಹಾಗೂ ವಲಯದ ಎಲ್ಲಾ […]

You cannot copy content of this page