November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕಥೊಲಿಕ್ ಸಭಾ ವಿಟ್ಲ ಘಟಕದ ವತಿಯಿಂದ ವಿಟ್ಲ ಶೋಕ ಮಾತಾ ಚರ್ಚ್‌ನಲ್ಲಿ ”ಸೀನಿಯರ್ ಸಿಟಿಜನ್” ದಿನ ಸಂಭ್ರಮದಿಂದ ಆಚರಣೆ

ಹಿರಿಯರು ಇಂದಿನ ಪೀಳಿಗೆಗೆ ಪ್ರೇರಣೆ – ಫಾದರ್ ಐವನ್ ಮೈಕಲ್ ರೊಡ್ರಿಗಸ್ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ವಿಟ್ಲ ಘಟಕದ ವತಿಯಿಂದ, ಮಂಗಳೂರು ಧರ್ಮಕ್ಷೇತ್ರದ ವಿಟ್ಲ ಶೋಕ ಮಾತಾ ಚರ್ಚ್ ನಲ್ಲಿ ”ಸೀನಿಯರ್ ಸಿಟಿಜನ್ ದಿನ 2025” ನ್ನು ಅಕ್ಟೋಬರ್ 5ರಂದು ಭಾನುವಾರ ವಿಟ್ಲ ಚರ್ಚ್ ನ ಕಿರಿಯ ಸಭಾಂಗಣದಲ್ಲಿ ಭಕ್ತಿ, ಕೃತಜ್ಞತೆ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಈ ಕಾರ್ಯಕ್ರಮವು ವಿಟ್ಲ ಚರ್ಚ್ ವ್ಯಾಪ್ತಿಗೆ ಒಳಪಟ್ಟ 70 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರ ಗೌರವಕ್ಕಾಗಿ ಆಯೋಜಿಸಲಾಯಿತು. ಕಾರ್ಯಕ್ರಮಕ್ಕೆ […]

News

ತೀರ್ಥಹಳ್ಳಿ ಗೋಪಾಲಾಚಾರ್ಯರಿಗೆ ಅರ್ಕುಳ ಪ್ರಶಸ್ತಿ ಪ್ರದಾನ

ಕಲಾಭಿಮಾನಿಗಳ ಪ್ರೀತಿಯೇ ದೊಡ್ಡ ಆಸ್ತಿ – ಗೋಪಾಲ ಆಚಾರ್ಯ   ಶ್ರೀ ಜಗದ್ಗುರು ಅಯ್ಯ ಸ್ವಾಮಿ ಮಠ ಆಲಂಗಾರು ಮೂಡಬಿದಿರೆ ಪುನರ್ ನಿರ್ಮಾಣ ಜೀರ್ಣೋದ್ಧಾರದ ಪ್ರಯುಕ್ತ ನಡೆದ ಶ್ರೀ ಗುರು ಮತ್ತು ವಿಶ್ವಕರ್ಮ ಯಜ್ಞದ ಶುಭಾವಸರದಲ್ಲಿ ಅಲಂಗಾರಿನ ಪಾಲ್ಕೆ ಬಾಬುರಾಯ ಆಚಾರ್ಯ ವೇದಿಕೆಯಲ್ಲಿ ಗೇರುಕಟ್ಟೆಯ ಅರ್ಕುಳ ಸುಬ್ರಾಯ ಆಚಾರ್ಯ ಪ್ರತಿಷ್ಠಾನದಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಡಗುತಿಟ್ಟಿನ ಪ್ರಸಿದ್ಧ ಕಲಾವಿದ ತೀರ್ಥಹಳ್ಳಿ ಗೋಪಾಲ ಆಚಾರ್ಯ ಇವರಿಗೆ ಅರ್ಕುಳ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀಮಠದ ಜೀರ್ಣೋದ್ಧಾರ […]

News

ಬೆಳ್ತಂಗಡಿ ಕಿಲ್ಲೂರಿನಲ್ಲಿ ಅಕ್ಟೋಬರ್ 12ರಂದು ಬೃಹತ್ ಉಚಿತ ಆರೋಗ್ಯ ತಪಾಸಣೆ, ದಂತ ಚಿಕಿತ್ಸೆ ಮತ್ತು ರಕ್ತದಾನ ಶಿಬಿರ

ಸುನ್ನಿ ಮ್ಯಾನೇಜ್ ಮೆಂಟ್ ಅಸೋಯೇಷನ್ ಮುರ ರೀಜಿನಲ್ & ಸುನ್ನಿ ಜಮಾತುಲ್ ಮುಹಲಿಮಿನ್ ಮುರ ರೇಂಜ್ ವತಿಯಿಂದ ಎಂ.ಜೆ.ಎಂ. ಕಿಲ್ಲೂರು, ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ & ಕೆ.ಎಂ.ಸಿ. ಆಸ್ಪತ್ರೆ ಜ್ಯೋತಿ ವೃತ್ತ, ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ಮಂಗಳೂರು ಮತ್ತು ಬ್ಲಡ್ ಸೆಂಟರ್, ಕೆ.ಎಂ.ಸಿ. ಮಂಗಳೂರು ಹಾಗೂ ಬೆನಕ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಉಜಿರೆ ಇವರ ಜಂಟಿ ಸಹಯೋಗದೊಂದಿಗೆ ಬೃಹತ್ ಉಚಿತ ಆರೋಗ್ಯ ತಪಾಸಣೆ, ದಂತ ಚಿಕಿತ್ಸೆ ಮತ್ತು ರಕ್ತದಾನ ಶಿಬಿರ ಅಕ್ಟೋಬರ್ 12 ಭಾನುವಾರದಂದು ಕಿಲ್ಲೂರು […]

News

“ನನ್ನ ಪ್ಲಾಸ್ಟಿಕ್ – ನನ್ನ ಜವಾಬ್ದಾರಿ” ಕಥೊಲಿಕ್ ಸಭಾ ದೇಲಂತಬೆಟ್ಟು ಘಟಕದ ಮಹಾ ಆಂದೋಲನ

ಪ್ಲಾಸ್ಟಿಕ್ ತ್ಯಾಜ್ಯವನ್ನು ಉಪಯೋಗಿಸಿ ಪರಿಸರ ಪ್ರೇಮಿ ಆಸನಗಳ ನಿರ್ಮಾಣ ಮಾಡುವ ವಿಶಿಷ್ಟ ಯೋಜನೆ ಚರ್ಚ್ ಧರ್ಮಗುರು ರಿಚರ್ಡ್ ಡಿಸೋಜರವರ  ಮಾರ್ಗದರ್ಶನ ಹಾಗೂ ಪ್ರೋತ್ಸಾಹದಲ್ಲಿ ಪ್ಲಾಸ್ಟಿಕ್ ಮುಕ್ತ ಧರ್ಮ ಕೇಂದ್ರ ದೇಲಂತಬೆಟ್ಟು ಸಂತ ಪೌಲರ ದೇವಾಲಯದ ಧರ್ಮಗುರು ವಂದನೀಯ ಫಾದರ್ ರಿಚರ್ಡ್ ಡಿಸೋಜರವರ ಮಾರ್ಗದರ್ಶನ ಹಾಗೂ ಪ್ರೋತ್ಸಾಹದಲ್ಲಿ ಎಲ್ಲರಿಗೂ ಮಾದರಿಯಾಗುವಂತೆ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ದೇಲಂತಬೆಟ್ಟು ಘಟಕದ ವತಿಯಿಂದ “ನನ್ನ ಪ್ಲಾಸ್ಟಿಕ್ – ನನ್ನ ಜವಾಬ್ದಾರಿ”ಎಂಬ ಆಂದೋಲನವು 2025 ಅಕ್ಟೋಬರ್ 2 ರಿಂದ ಡಿಸೆಂಬರ್ 31ರ […]

News

ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ ಅಕ್ಟೋಬರ್ 12 ರಂದು ವಾರ್ಷಿಕ ಹಬ್ಬದ ಸಂಭ್ರಮ

ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್ ರವರಿಂದ ಪತ್ರಿಕಾ ಪ್ರಕಟನೆ ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ ಅಕ್ಟೋಬರ್ 12ರಂದು ಭಾನುವಾರ ವಾರ್ಷಿಕ ಹಬ್ಬವನ್ನು (ಸಾಂತ್ ಮಾರಿ) ಧಾರ್ಮಿಕ ಭಾವನೆ ಮತ್ತು ಉತ್ಸವಮಯ ವಾತಾವರಣದಲ್ಲಿ ವಿಜೃಂಭಣೆಯಿಂದ ಆಚರಿಸಲು ಸಿದ್ಧತೆಗಳು ನಡೆಯುತ್ತಿವೆ. ಆ ದಿನ ಬೆಳಿಗ್ಗೆ 10 ಗಂಟೆಗೆ ಮಂಗಳೂರು ಧರ್ಮಕ್ಷೇತ್ರದ ವಿಶ್ರಾಂತ ಬಿಷಪ್ ಅತೀ ವಂದನೀಯ ಡಾ. ಎಲೋಶಿಯಸ್ ಪಾವ್ಲ್ ಡಿಸೋಜರವರು ಬಲಿ ಪೂಜೆಯ ನೇತೃತ್ವ ವಹಿಸಿ ಭಕ್ತರನ್ನು ಆಶೀರ್ವದಿಸಲಿದ್ದಾರೆ. ಪಾಲ್ದಾನೆ […]

News

CITU ನೂತನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಬಿ. ಎಂ. ಭಟ್, ಪ್ರಧಾನ ಕಾರ್ಯದರ್ಶಿಯಾಗಿ ಸುನಿಲ್ ಕುಮಾರ್ ಬಜಾಲ್ ಸರ್ವಾನುಮತದಿಂದ ಆಯ್ಕೆ

ಕೇಂದ್ರ ಕಾರ್ಮಿಕ ಸಂಘಟನೆಯಾದ CITU ನ 18ನೇ ದಕ್ಷಿಣ ಕನ್ನಡ ಜಿಲ್ಲಾ ಸಮ್ಮೇಳನವು ಅಕ್ಟೋಬರ್ 5 ಮತ್ತು 6ರಂದು ಎರಡು ದಿನಗಳ ಕಾಲ ಮಂಗಳೂರಿನ ಬೋಳಾರದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು. ಜಿಲ್ಲೆಯ ಕಾರ್ಮಿಕ ವರ್ಗಕ್ಕೆ ಭಾಧಿಸುವ ಹಲವಾರು ಅಂಶಗಳ ಬಗ್ಗೆ ನಿರ್ಣಯಗಳನ್ನು ಕೈಗೊಂಡ ಸಮ್ಮೇಳನವು ಮುಂಬರುವ ದಿನಗಳಲ್ಲಿ ಪ್ರಬಲ ಹೋರಾಟಗಳನ್ನು ರೂಪಿಸಲು ತೀರ್ಮಾನ ಕೈಗೊಂಡಿತು. ಸಮ್ಮೇಳನವು ಮುಂದಿನ ಮೂರು ವರ್ಷಕ್ಕೆ ನೂತನ ಜಿಲ್ಲಾ ಸಮಿತಿಯನ್ನು ಆಯ್ಕೆಗೊಳಿಸಿತು. ನೂತನ ಜಿಲ್ಲಾಧ್ಯಕ್ಷರಾಗಿ ಬಿ. ಎಂ. ಭಟ್, ಪ್ರಧಾನ ಕಾರ್ಯದರ್ಶಿಯಾಗಿ ಸುನಿಲ್ […]

News

ವಿಜ್ಞಾನಿ ಪ್ರೊ. ಪ್ರಶಾಂತ್ ಮಿನೇಜಸ್ ರವರಿಗೆ ಭಾರತ ಸರಕಾರದಿಂದ ಪ್ರತಿಷ್ಠಿತ ‘ವೈಭವ್’ ಫೆಲೋಶಿಪ್ ಪ್ರಶಸ್ತಿ ಪ್ರದಾನ

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನವರು ದಕ್ಷಿಣ ಕನ್ನಡ ಮತ್ತು ಪುತ್ತೂರಿನ ಕಲ್ಲಿಮಾರು ನಿವಾಸಿ, ಹೆಲ್ಡ್ ಹೋಲ್ಡ್ ಸೆಂಟ್ರಮ್ ಬರ್ಲಿನ್ (HZB) ನಲ್ಲಿ ವೇಗವರ್ಧನೆಗಾಗಿ ವಸ್ತು ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಮತ್ತು ಖ್ಯಾತ ವಸ್ತು ರಸಾಯನ ಶಾಸ್ತ್ರಜ್ಞ ಪ್ರೊ. ಪ್ರಶಾಂತ್ ಡಬ್ಲ್ಯೂ ಮಿನೇಜಸ್ ರವರಿಗೆ ಪ್ರತಿಷ್ಠಿತ ವೈಶ್ಚಿಕ್ ಭಾರತೀಯ ವೈಜ್ಞಾನಿಕ (VAIBHAV) ಫೆಲೋಶಿಪ್ ಅವಾರ್ಡ್ 2025 ಪ್ರದಾನ ಮಾಡಲಾಗಿದೆ. ಈ ಫೆಲೋಶಿಪ್ ಅವಾರ್ಡ್‌ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಪ್ರಮುಖ ಕಾರ್ಯಕ್ರಮವಾಗಿದ್ದು, ಇದನ್ನು […]

News

ವಾಲ್ಮೀಕಿಯಂತೆ ಸ್ವಾಭಿಮಾನಿ ಬದುಕು ನಮ್ಮದಾಗಬೇಕು – ಪ್ರತಾಪ್ ಸಿಂಹ ನಾಯಕ್

ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಅವರು ನಮಗೆಲ್ಲ ಆದರ್ಶ ಪ್ರಾಯರು. ಅವರಂತೆ ಸ್ವಾಭಿಮಾನಿ ಬದುಕು ನಮ್ಮದಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದರು. ಅವರು ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಂಯುಕ್ತವಾಗಿ ನೇತ್ರಾವತಿ ಸಭಾಂಗಣದಲ್ಲಿ ಆಯೋಜಿಸಿದ್ದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ  ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆದಿಕವಿ ಮಹರ್ಷಿ ಶ್ರೀ ವಾಲ್ಮೀಕಿಯನ್ನು ನಾವು ಭಾವನಾತ್ಮಕವಾಗಿ ಕಟ್ಟಿಕೊಳ್ಳಬೇಕು. ಅವರ ರಾಮಾಯಣ ಮಹಾಕಾವ್ಯದ ಸಾಧನೆ ಇಡೀ ಜನಾಂಗಕ್ಕೆ ಪ್ರೇರಣೆ […]

You cannot copy content of this page