November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ ವರ್ಗಾವಣೆ

ರಾಜ್ಯದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ ಅದೇಶ ಹೊರಬಿದ್ದಿದ್ದು, ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ ರವರು ಬೈಂದೂರು ಪೊಲೀಸ್ ಠಾಣೆಗೆ ವರ್ಗಾವಣೆ ಆಗಿದ್ದಾರೆ. ಮೂಲತಃ ಸಾಗರ ತಾಲೂಕಿನವರಾದ ಅವರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಅನೇಕ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಈ ಹಿಂದೆ ಬೆಳ್ತಂಗಡಿಯಿಂದ ವರ್ಗಾವಣೆ ಆಗಿ ಬಂದಿದ್ದ ಅವರು ಕಳೆದ ಎರಡು ವರ್ಷಗಳಿಂದ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು.

Uncategorized

ಹಸಿರು ಕನಸಿನ ಪ್ರಕೃತಿಗಾಗಿ ದೇಲಂತಬೆಟ್ಟು ಯುವ ಹೃದಯಗಳ ಹಾದಿ

ಯುವಜನರ ಹಸಿರು ಚಳವಳಿ — “ಗ್ರೀನ್ ಹಾರ್ಟ್ 2025” ಕಾರ್ಯಕ್ರಮದೊಂದಿಗೆ ಪರಿಸರ ಸಂರಕ್ಷಣೆಗೆ ಬದ್ಧತೆ ಗಿಡ ನೆಟ್ಟ ಕೈಗಳು – ಭೂಮಿಗೆ ಜೀವ ತುಂಬಿದ ಹೃದಯಗಳು ಭಾರತೀಯ ಯುವ ಸಂಚಲನ (ICYM) ಸಂತ ಪೌಲರ ದೇವಾಲಯ, ದೇಲಂತಬೆಟ್ಟು ಘಟಕದ ವತಿಯಿಂದ “ಗ್ರೀನ್ ಹಾರ್ಟ್ 2025 – Heartbeat of Nature” ಎಂಬ ವಿಶೇಷ ಪರಿಸರ ಸಂರಕ್ಷಣಾ ಚಳವಳಿ ಅಕ್ಟೋಬರ್ 5ರಂದು ಭಾನುವಾರ ಬೆಳಿಗ್ಗೆ 11ರಿಂದ ಸಂಜೆ 3.30ರವರೆಗೆ ಉತ್ಸಾಹಭರಿತವಾಗಿ ನಡೆಯಿತು. ಗಿಡ ನೆಟ್ಟ ಕೈಗಳು – ಭೂಮಿಗೆ […]

News

ಮಗ ಆಸ್ಪತ್ರೆಗೆ ದಾಖಲು — ಜನರ ನೋವಿಗೆ ಸ್ಪಂದಿಸಿದ ಶಾಸಕ ಅಶೋಕ್ ರೈ

ಸ್ವಂತ ನೋವನು ಮರೆತು ಜನರ ಅಹವಾಲು ಆಲಿಸಿದ ಜನಪ್ರಿಯ ಶಾಸಕ ಅಕ್ಟೋಬರ್ 6ರಂದು ಸೋಮವಾರ ಶಾಸಕ ಅಶೋಕ್ ರೈರವರು ಎಂದಿನಂತೆ ತಮ್ಮ ಕಚೇರಿಗೆ ಹಾಜರಾಗಿ, ನೂರಾರು ಜನರಿಂದ ಅಹವಾಲುಗಳನ್ನು ಸ್ವೀಕರಿಸಿ ಅವರ ಸಂಕಷ್ಟಗಳನ್ನು ಆಲಿಸಿದರು. ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 7:15 ರವರೆಗೆ ಕಚೇರಿಯಲ್ಲೇ ಇದ್ದ ಅವರು, ಅನೇಕ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಅಧಿಕಾರಿಗಳಿಗೆ ಕರೆಮಾಡಿ ಪರಿಹಾರ ಕ್ರಮ ಕೈಗೊಂಡರು. ತಮ್ಮ ಬಳಿಗೆ ಬಂದ ಪ್ರತಿಯೊಬ್ಬರನ್ನೂ ಆತ್ಮೀಯವಾಗಿ ಮಾತಾಡಿ ಪ್ರೋತ್ಸಾಹಿಸಿದರು. ಆದರೆ ಈ ದಿನ ಅವರ ಮನಸ್ಸಿನಲ್ಲಿ […]

News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೆಲಿಂಜ ಹಾಗೂ ವೀರಕಂಭ ಒಕ್ಕೂಟದ ವಾರ್ಷಿಕೋತ್ಸವ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ.) ವಿಟ್ಲ ಇದರ ಕಲ್ಲಡ್ಕ ವಲಯದ ಕೆಲಿಂಜ ಹಾಗೂ ವೀರಕಂಭ ಒಕ್ಕೂಟದ 20ನೇ ವಾರ್ಷಿಕೋತ್ಸವವು ಅಕ್ಟೋಬರ್ 5ರಂದು ಭಾನುವಾರ ಕೆಲಿಂಜ ಶ್ರೀಕೇತನ ಸಭಾಭವನದಲ್ಲಿ ಕೆಲಿಂಜ ಒಕ್ಕೂಟ ಅಧ್ಯಕ್ಷ ದಯಾನಂದ ಗೌಡರವರ ಅಧ್ಯಕ್ಷತೆಯಲ್ಲಿ ಜರಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾಡಿದ ಹಿಂದೂ ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷ  ಕೊರಗಪ್ಪ  ಗೌಡ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಯಶಸ್ವಿ ಕಾರ್ಯಕ್ರಮಗಳು ನಡೆಯುತಿದ್ದು  ಶ್ರೀನಿಕೇತನ ಸಭಾಭವನ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ  ಗ್ರಾಮಾಭಿವೃದ್ಧಿ […]

News

ಮಂಗಳೂರು ಧರ್ಮಕ್ಷೇತ್ರದ ಸಿಟಿ ವಲಯದ 8ನೇ ತರಗತಿಯ ಮಕ್ಕಳಿಗೆ ಶಿಸ್ತು, ಆತ್ಮವಿಶ್ವಾಸದ ಪಾಠ

ಮಕ್ಕಳ ಜೀವನ ಮೌಲ್ಯ ಬೆಳೆಸುವ ‘ಜೀವನ್ ದಿಶಾ’ ಶಿಬಿರ ಮಂಗಳೂರು ಧರ್ಮಕ್ಷೇತ್ರದ ಸಿಟಿ ವಲಯಕ್ಕೆ ಸೇರಿರುವ 12 ಚರ್ಚ್‌ಗಳ 8ನೇ ತರಗತಿಯ ಕ್ರೈಸ್ತ ಶಿಕ್ಷಣದ ಮಕ್ಕಳಿಗಾಗಿ ಒಂದು ದಿನದ ‘ಜೀವನ್ ದಿಶಾ’ ಶಿಬಿರವು ವಾಮಂಜೂರಿನ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಭವ್ಯವಾಗಿ ನಡೆಯಿತು. ವಾಮಂಜೂರು ಚರ್ಚ್‌ನ ಸಹಾಯಕ ಧರ್ಮಗುರು ವಂದನೀಯ ಫಾದರ್ ಜೀವನ್ ಶೈಲೇಶ್ ಲೋಬೊ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳ ಭವಿಷ್ಯ ಜೀವನದ ದೃಷ್ಟಿಯಿಂದ ಶಿಸ್ತು, ಆತ್ಮವಿಶ್ವಾಸ, ಜವಾಬ್ದಾರಿತನ ಹಾಗೂ ಸಮಾಜಸೇವಾ ಮನೋಭಾವ […]

News

ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಕ್ಷೇತ್ರ ಕಲೆ ಕಾರಣಿಕದ ನೆಲೆ – ದಯಾನಂದ  ಕತ್ತಲ್ ಸಾರ್

ಚಂದ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ತಾಯಿ ದುರ್ಗಾಮಾತೆಗೆ ಅತ್ಯಂತ ಪ್ರೀತಿಯ ಸೇವೆಯಾಗಿರುವ ಪಿಲಿನಲಿಕೆ ಸೇವೆಯನ್ನು ಹೇಮಂತ್‌ ಕೆದ್ದೇಲುರವರು ಉತ್ತಮ ರೀತಿಯಲ್ಲಿ ಆಯೋಜಿಸಿದ್ದಾರೆ. ಕಲಾಸೇವೆಯನ್ನು ಅರ್ಪಿಸುವುದಲ್ಲದೆ, ತುಳುನಾಡಿನ ಸಂಸ್ಕೃತಿ ಆಚರಣೆಯನ್ನು ಉಳಿಸಿ, ಬೆಳೆಸಿ, ಹತ್ತಾರು ಜನಕ್ಕೆ ಪರಿಚಯಿಸುವ ಕಾರ್ಯವನ್ನೂ ಮಾಡಿದ್ದಾರೆ ಎಂದು ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರು ತುಳು ವಿಧ್ವಾಂಸಾರದ ದಯಾನಂದ ಕತ್ತಲ್ ಸಾರ್ ಹೇಳಿದರು. ಅವರು ಚಂದ್ಕೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ನಡೆದ ಪಿಲಿನಲಿಕೆ ಕಾರ್ಯಕ್ರಮದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ, […]

News

ಕಥೊಲಿಕ್ ಉದ್ಯಮಿ, ವೃತ್ತಿಪರ, ಕೃಷಿ ಕ್ಷೇತ್ರದ ಸಾಧಕರಿಗೆ ರಚನಾ ಪ್ರಶಸ್ತಿ ಪ್ರದಾನ

ಕಥೋಲಿಕ್ ಉದ್ಯಮಿ, ವೃತ್ತಿಪರ ಹಾಗೂ ಕೃಷಿ ಕ್ಷೇತ್ರದ ಸಾಧಕರಿಗೆ ನೀಡುವ ರಚನಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮಂಗಳೂರಿನ ಮಿಲಾಗ್ರಿಸ್ ಸಭಾಂಗಣದಲ್ಲಿ ಅಕ್ಟೋಬರ್ 5ರಂದು ಭಾನುವಾರ ನೆರವೇರಿತು. ಸಮಾರಂಭದಲ್ಲಿ ಐವರು ಸಾಧಕರಾದ ವೃತ್ತಿಪರ ಕ್ಷೇತ್ರದಲ್ಲಿ ಮಾಜಿ ಶಾಸಕ ಜೆ.ಆರ್. ಲೋಬೋ, ಉದ್ಯಮ ಕ್ಷೇತ್ರದಲ್ಲಿ ಬೆಂಗಳೂರಿನ ಆಸ್ಟಿನ್ ರೋಚ್, ಕೃಷಿ ಕ್ಷೇತ್ರದಲ್ಲಿ ಮಂಗಳೂರಿನ ಡಾ| ಗಾಡ್ವಿನ್ ರೊಡ್ರಿಗಸ್ ಬೆಳ್ವಾಯಿ, ಅನಿವಾಸಿ ಉದ್ಯಮಿ ದುಬೈಯ ಪ್ರತಾಪ್ ಮೆಂಡೋನ್ಸಾ, ಮಹಿಳಾ ಸಾಧಕಿ ಶೋಭಾ ಮೆಂಡೊನ್ಸಾ ರವರಿಗೆ 2023-25ನೇ ಸಾಲಿನ ರಚನಾ ಪ್ರಶಸ್ತಿ ನೀಡಿ […]

News

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಸಂಭ್ರಮದ ಸವಿ ನೆನಪಿಗಾಗಿ ಅಂಚೆ ಚೀಟಿ ಬಿಡುಗಡೆ

ಅಂಚೆ ಚೀಟಿ ಚಾರಿತ್ರಿಕ ಮಹತ್ವದ ದಾಖಲೆ – ಸುಧಾಕರ ಮಲ್ಯ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಸಂಭ್ರಮದ ಸವಿ ನೆನಪಿಗಾಗಿ ಅಂಚೆ ಇಲಾಖೆಯ ‘ಮೈ ಸ್ಟ್ಯಾಂಪ್’ ಯೋಜನೆಯಡಿ ಅಂಚೆ ಚೀಟಿಯ ಬಿಡುಗಡೆ ಇಂದು ಅಕ್ಟೋಬರ್ 6ರಂದು ಸೋಮವಾರ ಪತ್ರಿಕಾ ಭವನದಲ್ಲಿ ನಡೆಯಿತು. ಭಾರತೀಯ ಅಂಚೆ ಇಲಾಖೆಯ ಹಿರಿಯ ಅಧೀಕ್ಷಕ ಸುಧಾಕರ್ ಮಲ್ಯರವರು ಈ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ಅಂಚೆ ಇಲಾಖೆ ವಿವಿಧ ಸೌಲಭ್ಯಗಳನ್ನು ಸಾರ್ವಜನಿಕರಿಗೆ ನೀಡುವ ಮೂಲಕ ಪತ್ರಕರ್ತರಿಗಾಗಿ […]

News

ಮಂಗಳೂರು ಧರ್ಮಕ್ಷೇತ್ರದ ಸಂತ ಅಂತೋನಿ ಆಶ್ರಮದಲ್ಲಿ ಜಪಮಾಲೆ ತಿಂಗಳ ಪ್ರಯುಕ್ತ ಭವ್ಯ ಮರಿಯಮ್ಮನವರ 2 ದಿವಸಗಳ ಜಪಾಮಾಲಾ ಪ್ರದರ್ಶನ

ನಿವೃತ್ತ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜರವರಿಂದ ಆಶೀರ್ವಚನ ಹಾಗೂ ಉದ್ಘಾಟನೆ ನಾಳೆ ಅಕ್ಟೋಬರ್ 7 ರಂದು ಮಂಗಳವಾರ ಸಂಜೆ 8 ಗಂಟೆಗೆ ಮುಕ್ತಾಯ ಜಪಮಾಲೆಗೆ ಮೀಸಲಾದ ತಿಂಗಳ ವಿಶೇಷ ಗೌರವವಾಗಿ, ಮಂಗಳೂರು ಧರ್ಮಕ್ಷೇತ್ರದ ಜೆಪ್ಪು ಸಂತ ಅಂತೋನಿ ಆಶ್ರಮವು ಮರಿಯಮ್ಮನವರ ಭಕ್ತಿಯ ಕೇಂದ್ರವಾಗಿ, ಇಂದು ಅಕ್ಟೋಬರ್ 6ರಂದು ಸೋಮವಾರ ಸಂಜೆ ಎರಡು ದಿವಸಗಳ ವಿಶೇಷ ಪ್ರದರ್ಶನವನ್ನು ಆಯೊಜೀಸಿದೆ. ಸಂತ ಅಂತೋನಿ ಆಶ್ರಮದ ವಾರ್ಷಿಕ ಭಕ್ತಿ ಕಾರ್ಯಕ್ರಮಗಳಲ್ಲಿ ಒಂದಾದ ಈ ಕಾರ್ಯಕ್ರಮವನ್ನು, ಜಪಮಾಲೆಯ ಮಾತೆಯ ಮೇಲಿನ ಭಕ್ತರ ಪ್ರೀತಿ […]

News

ಮೈಸೂರು ಧರ್ಮಕ್ಷೇತ್ರದ ನೂತನ ಧರ್ಮಾಧ್ಯಕ್ಷರ ಪ್ರತಿಷ್ಠಾಪನಾ ಹಾಗೂ ಅಧಿಕಾರ ಹಸ್ತಾಂತರ

ನಾಳೆ ಅಕ್ಟೋಬರ್ 7ರಂದು ಮಂಗಳವಾರ ಸಂಜೆ 4:30ಕ್ಕೆ ಮೈಸೂರಿನ ಸಂತ ಜೋಸೆಫ್ ಪ್ರಧಾನ ದೇವಾಲಯದಲ್ಲಿ ಭವ್ಯ ಸಮಾರಂಭ ಮೈಸೂರು ಧರ್ಮಕ್ಷೇತ್ರದ ನೂತನ ಬಿಷಪ್ ಆಗಿ ನೇಮಕಗೊಂಡ ಪರಮಪೂಜ್ಯ ಡಾ. ಫ್ರಾನ್ಸಿಸ್ ಸೆರಾವೋ ಎಸ್‌.ಜೆ. ರವರ ಪ್ರತಿಷ್ಠಾಪನೆ ಮತ್ತು ಅಧಿಕಾರ ಹಸ್ತಾಂತರ ಸಮಾರಂಭ ನಾಳೆ ಅಕ್ಟೋಬರ್ 7ರಂದು ಮಂಗಳವಾರ ಸಂಜೆ 4:30ಕ್ಕೆ ಮೈಸೂರಿನ ಸಂತ ಜೋಸೆಫ್ ಪ್ರಧಾನ ದೇವಾಲಯದಲ್ಲಿ ನಡೆಯಲಿದೆ. ಈ ಭವ್ಯ ಸಮಾರಂಭಕ್ಕೆ ಬೆಂಗಳೂರು ಮಹಾ ಧರ್ಮಕ್ಷೇತ್ರದ ಅತೀ ಗೌರವಾನ್ವಿತ ಆರ್ಚ್‌ ಬಿಷಪ್ ಡಾ. ಪೀಟರ್ ಮಚಾದೊರವರು […]

You cannot copy content of this page