ವೈದ್ಯಕೀಯದಲ್ಲಿ ಕಲಿಕೆಗೆ ಬಿಡುವಿಲ್ಲ – ಕಣಚೂರು ಹಾಜಿ ಡಾ. ಮೋನು
ಸ್ಥಳೀಯ ನಾಟೇಕಲ್ಲಿನ ಕಣಚೂರು ಆಯುರ್ವೇದ ಕಾಲೇಜು ಆಸ್ಪತ್ರೆ ಗಳ ಆಯುರ್ವೇದ ಸಪ್ತಾಹದ ಅಂಗವಾಗಿ ಸೆಪ್ಟೆಂಬರ್ 26ರ ಶುಕ್ರವಾರ ವೈದ್ಯರಿಗಾಗಿ ವೈದ್ಯಕೀಯ ಉಪನ್ಯಾಸವು ನಡೆಯಿತು. ಆಯುರ್ವೇದದಲ್ಲಿ ತುರ್ತು ಚಿಕಿತ್ಸೆಯ ಕುರಿತಾಗಿ ಪುತ್ತೂರಿನ ಸುಶೃತ ಆಸ್ಪತ್ರೆಯ ಡಾ. ರವಿಶಂಕರ ಪೆರುವಾಜೆಯವರು ಸುದೀರ್ಘವಾಗಿ ತುರ್ತು ನಿರ್ವಹಣೆಯ ಕುರಿತಾಗಿ ಸಚಿತ್ರ ಮಾಹಿತಿ ನೀಡಿದರು. ಇದೇ ವೇಳೆ ಮಣಿಪಾಲ ವಾಸ್ತವ್ಯದ ಉಡುಪಿ ಆಯುರ್ವೇದ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಶಾರೀರ ರಚನಾ ಶಾಸ್ತ್ರದ ನಿಪುಣ ಡಾ. ಗಿರಿಧರ ಕಂಠಿ ಇವರನ್ನು ಹೂ ಹಾರ ಫಲ ಪುಷ್ಪ […]













