November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಾಜಿ ಸೈನಿಕರಿಂದ ಗುತ್ತಿಗೆ ನವೀಕರಿಸಲು ಪುತ್ತೂರು ಶಾಸಕ ಅಶೋಕ್ ರೈಯವರಿಗೆ ವಿನಂತಿ ಪತ್ರ

ಕರ್ನಾಟಕದ ವಿವಿಧ ಭಾಗಗಳಲ್ಲಿ ಕರ್ನಾಟಕ ರಾಜ್ಯ ವಿಪತ್ತು ಸ್ಪಂದನಾ ಪಡೆಯ ವಿಪತ್ತು ನಿರ್ವಹಣೆ ಹಾಗೂ ರಕ್ಷಣಾ ಕಾರ್ಯಗಳಿಗೆ ಗುತ್ತಿಗೆ ಆಧಾರದ ಮೇರೆಗೆ ಕಾರ್ಯನಿರ್ವಹಿಸುವ ಮಾಜಿ ಸೈನಿಕರ ಕೆಲಸವು ಇದೇ ವರ್ಷದ ಮೇ 22ರಂದು ಮುಕ್ತಾಯಗೊಂಡಿದೆ. ಆದರೆ ಎರಡು ತಿಂಗಳಾದರೂ ಕೂಡ ಇದನ್ನು ನವೀಕರಿಸಿಲ್ಲ. ಆದುದರಿಂದ ಈ ಕೆಲಸವನ್ನು ಮಾಡುವ ಸುಮಾರು 12 ಜನ ಮಾಜಿ ಸೈನಿಕರು ಇದನ್ನು ನವೀಕರಣಗೊಳಿಸಲು ಸಂಬಂಧಪಟ್ಟ ಸರಕಾರದ ಅಧಿಕಾರಿಗಳ ಗಮನಕ್ಕೆ ತರುವಂತೆ ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ಲಿಖಿತ ಪತ್ರ ಒಂದನ್ನು […]

News

SIT ತನಿಖೆಯಿಂದ ಸತ್ಯ ಹೊರಗೆ ಬರಲಿ, ಗೊಂದಲ‌ ನಿವಾರಣೆಯಾಗಲಿ – ಶಾಸಕ ಅಶೋಕ್ ರೈ

ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡ (SIT) ರಚಿಸಿರುವುದನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈಯವರು ಸ್ವಾಗತಿಸಿದ್ದಾರೆ. ಇದು ಸರ್ಕಾರದ ದಿಟ್ಟ ಹಾಗೂ ಜನಪರ ಕ್ರಮವಾಗಿದೆ ಎಂದು ಅವರು ಬಣ್ಣಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಈ ಪ್ರಕರಣದ ಸತ್ಯಾಸತ್ಯತೆಯನ್ನು ಹೊರಗೆಳೆಯಲು SIT ರಚಿಸಬೇಕೆಂಬ ಜನರ ಆಗ್ರಹಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ […]

News

ಕಥೊಲಿಕ ಕ್ರೈಸ್ತರಿಗಾಗಿ ಜೀವನ ಸಂಗಾತಿಯನ್ನು ಹುಡುಕಲು ವಾಮಂಜೂರಿನಲ್ಲಿ ”ಮೀಟ್ ಆ್ಯಂಡ್ ಗ್ರೀಟ್” ಕಾರ್ಯಕ್ರಮ

ಕಥೊಲಿಕ ಯುವಜನರಿಗೆ ಮದುವೆಯ ಸಂಬಂಧಗಳನ್ನು ಅನ್ವೇಷಿಸಲು ಮತ್ತು ಮದುವೆಯ ಸಾಧ್ಯತೆಗಳನ್ನು ಹೆಚ್ಚಿಸುವ ಕಾರ್ಯಕ್ರಮವನ್ನು ವಾಮಂಜೂರಿನ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಮಂಗಳೂರು ಧರ್ಮಕ್ಷೇತ್ರದ ಫ್ಯಾಮಿಲಿ ಲೈಫ್ ಸೇವಾ ಕೇಂದ್ರ, ಮಿಷನರಿ ಫ್ಯಾಮಿಲೀಸ್ ಆಫ್ ಕ್ರೈಸ್ಟ್ (MFC) ಮತ್ತು ಕಥೊಲಿಕ್ ಕನೆಕ್ಟ್ ಮ್ಯಾಟ್ರಿಮೊನಿ ಜಂಟಿಯಾಗಿ ಆಯೋಜಿಸಿತ್ತು. 350ಕ್ಕೂ ಹೆಚ್ಚು ಮದುವೆಯಾಗದಿರುವ ಒಂಟಿ ಹುಡುಗ ಹಾಗೂ ಹುಡುಗಿಯರು ಕಥೊಲಿಕ್ ನಂಬಿಕೆ ಮತ್ತು ಮೌಲ್ಯಗಳಲ್ಲಿ ಬೇರೂರಿರುವ ಅರ್ಥಪೂರ್ಣ ಸಂಬಂದಗಳನ್ನು ಬೆಳೆಸಲು ರಚಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮವನ್ನು ಮುನ್ನಡೆಸಿದ ಎಮ್ಸೆಸ್ ಮಾಲ್ಕಮ್ […]

Uncategorized

ಹಿರಿಯ ಕೊಂಕಣಿ ಸಾಹಿತಿ ಗ್ಲ್ಯಾಡಿಸ್ ರೇಗೋ ನಿಧನ

ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ ಗ್ಲಾಡಿಸ್ ರೇಗೋ ಎಂದೇ ಜನಪ್ರಿಯರಾಗಿದ್ದ ಸಿಂಪ್ರೋಜಾ ಫಿಲೋಮಿನಾ ಗ್ಲ್ಯಾಡಿಸ್ ರೇಗೋ ಅವರು ಜುಲಾಯ್ 21ರಂದು ನಿಧನರಾಗಿದ್ದಾರೆ. ಮಂಗಳೂರಿನ ಬೆಂದೂರಿನಲ್ಲಿ 1945ರಲ್ಲಿ ಜನಿಸಿದ ಗ್ಲ್ಯಾಡಿಸ್ ರೇಗೋರವರು ಕೊಂಕಣಿ ಸಾಹಿತ್ಯ ಕ್ಷೇತ್ರಕ್ಕೆ ಅಗಾಧ ಕೊಡುಗೆ ನೀಡಿರುವ ಬರಹಗಾರ್ತಿಯಾಗಿದ್ದರು. ಅವರು ಕೊಂಕಣಿಯಲ್ಲಿ ನಾಲ್ಕು ಸಣ್ಣ ಕಥಾ ಸಂಕಲನಗಳು, ಜಾನಪದದ ಬಗ್ಗೆ ಆರು ಕೃತಿಗಳು, ಮತ್ತು ಎರಡು ಕಥಾ ಸಂಕಲನಗಳನ್ನು ಬರೆದಿದ್ದಾರೆ. ಸಣ್ಣ ಕಥೆಗಳು, ಜಾನಪದ ಸಾಹಿತ್ಯ, ಜೀವನಚರಿತ್ರೆ, ಮತ್ತು ಸಂಶೋಧನೆ ಒಳಗೊಂಡಂತೆ 27 ಪುಸ್ತಕಗಳನ್ನು ಅವರು ಬರೆದಿದ್ದಾರೆ. […]

News

ಯು.ಇ.ಎ. ಅದ್ಯಕ್ಷರಾಗಿ ಲತೀಫ್ ನೇರಳಕಟ್ಟೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಆಶಿಕ್ ಕುಕ್ಕಾಜೆ ಪುನರಾಯ್ಕೆ

ಯುನೈಟೆಡ್ ಎಂಪವರ್ಮೆಂಟ್ ಅಸೋಸಿಯೇಷನ್ ಬಂಟ್ವಾಳ ವಲಯ ಇದರ ನೂತನ ಅಧ್ಯಕ್ಷರಾಗಿ ಲತೀಫ್ ನೇರಳಕಟ್ಟೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಆಶಿಕ್ ಕುಕ್ಕಾಜೆ ಪುನರಾಯ್ಕೆ ಗೊಂಡಿದ್ದಾರೆ. ಇತ್ತೀಚೆಗೆ ಕಲ್ಲಡ್ಕ – ಕೆ.ಸಿ. ರೋಡ್ ನ ಇಲೆವೆನ್ ಸ್ಟಾರ್ ಹಾಲ್ ನಲ್ಲಿ ನಡೆದ ಅಸೋಸಿಯೇಷನ್ ನ ಬಂಟ್ವಾಳ ವಲಯ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಯು.ಇ.ಎ. ಯ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ್ ಗೋಳ್ತಮಜಲು ಸಭೆಯನ್ನು ಉದ್ಘಾಟಿಸಿದರು, ರಾಜ್ಯ ಸಮಿತಿ ಸದಸ್ಯ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲಾ ಉಸ್ತುವಾರಿ […]

News

ಬಂಟ್ವಾಳ ಗ್ರಾಮಾಂತರ ಠಾಣೆಯ PSI ಖೀರಪ್ಪ ಆತ್ಮಹತ್ಯೆ

ಬಂಟ್ವಾಳ ಗ್ರಾಮಾಂತರ ಠಾಣೆಯ ಕ್ರೈಮ್ ವಿಭಾಗದಲ್ಲಿ PSI ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಇಂದು ಜುಲಾಯ್ 20ರಂದು ಆದಿತ್ಯವಾರ ಸಂಜೆ ಬೆಳಕಿಗೆ ಬಂದಿದೆ. ಮೃತ ಪೊಲೀಸ್ ಅಧಿಕಾರಿಯನ್ನು ಉತ್ತರ ಕನ್ನಡ ಮೂಲದ 54 ವರ್ಷ ಪ್ರಾಯದ ಖೀರಪ್ಪ ಎಂದು ಗುರುತಿಸಲಾಗಿದೆ. ಬಂಟ್ವಾಳ ಪೇಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಅವರು ಅದೇ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಶಿರಸಿ ಠಾಣೆಯಿಂದ ಕಳೆದ 5 ತಿಂಗಳ ಹಿಂದೆ […]

News

ಪಾಲ್ದನೆ ಚರ್ಚ್ ICYM ಘಟಕದಿಂದ ‘ಬುಕ್ ಡ್ರೈವ್’ ಕಾರ್ಯಕ್ರಮ

ಯುವ ಜನರಲ್ಲಿ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸುವ ಉದ್ದೇಶದಿಂದ ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಸಂತ ತೆರೆಸಾ ಚರ್ಚ್ ಪಾಲ್ದನೆ ಇದರ ICYM ಘಟಕವು ‘ಬುಕ್ ಡ್ರೈವ್’ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಯೋಜನೆಯಡಿ ICYM ಸದಸ್ಯರು ಚರ್ಚ್ ಸದಸ್ಯರಿಂದ ವಿವಿಧ ಪುಸ್ತಕಗಳನ್ನು ಸಂಗ್ರಹಿಸಿ ಅವುಗಳನ್ನು ಚರ್ಚ್ ನ ಆಸಕ್ತ ಸದಸ್ಯರಿಗೆ ಅವರವರಿಗೆ ಬೇಕಾಗಿರುವ ಪುಸ್ತಕಗಳನ್ನು ಉಚಿತವಾಗಿ ವಿತರಿಸಿದರು. ಈ ಕಾರ್ಯಕ್ರಮವನ್ನು ಚರ್ಚ್ ಪ್ರಧಾನ ಧರ್ಮಗುರು ವಂದನೀಯ ಫಾದರ್ ರಿಚ್ಚರ್ಡ್ ಅಲೋಶಿಯಸ್‌ ಕುವೆಲ್ಲೊರವರು ಉದ್ಘಾಟಿಸಿದರು. ಬಳಿಕ ಅವರು […]

News

ಧರ್ಮಸ್ಥಳ ನಿಗೂಢ ಪ್ರಕರಣಗಳ ತನಿಖೆಗೆ ಹಿರಿಯ ಐಪಿಎಸ್‌ ಅಧಿಕಾರಿ ಡಾ. ಪ್ರಣವ್ ಮೊಹಾಂತಿ ನೇತ್ರತ್ವದಲ್ಲಿ ನಾಲ್ಕು ಜನರ ಎಸ್‌ಐಟಿ ತಂಡ

ದೇಶಾದ್ಯಂತ ತೀವ್ರ ಕುತೂಹಲ ಮತ್ತು ಚರ್ಚೆಗೆ ಗ್ರಾಸವಾಗಿದ್ದ ಧರ್ಮಸ್ಥಳ ಪೊಲೀಸ್ ಠಾಣೆಯ ಅಪರಾಧ ಪ್ರಕರಣ ಸಂಖ್ಯೆ 39/2025 ರ ತನಿಖೆಯನ್ನು ಕರ್ನಾಟಕ ಸರ್ಕಾರವು ವಿಶೇಷ ತನಿಖಾ ತಂಡಕ್ಕೆ (SIT) ವರ್ಗಾಯಿಸಿ ಮಹತ್ವದ ಆದೇಶ ಹೊರಡಿಸಿದೆ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ನೀಡಿದ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಧರ್ಮಸ್ಥಳದ ಬಳಿ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ವ್ಯಕ್ತಿಯೊಬ್ಬರ ನ್ಯಾಯಾಲಯದಲ್ಲಿನ ಹೇಳಿಕೆ, ಮಾನವ ತಲೆಬುರುಡೆ ಪತ್ತೆಯಾದ ಬಗ್ಗೆ ಮಾಧ್ಯಮ ವರದಿಗಳು ಹಾಗೂ […]

News

ಕೈಬರಹದ ಭೂ ದಾಖಲೆಗೆ ವಿದಾಯ – ಇನ್ನು ಮುಂದೆ ಎಲ್ಲವೂ ಡಿಜಿಟಲ್

ಭೂ ದಾಖಲೆ ಪಡೆಯಲು ಹೊಸ ನಿಯಮ ಇನ್ನು ಮುಂದೆ ಭೂ ದಾಖಲೆಗಳ ದೃಢೀಕೃತ ನಕಲು ನಿಮಗೆ ಸಿಗುವುದಿಲ್ಲ. ಈ ಕೈಬರಹದ ಭೂ ದಾಖಲೆಗಳಿಗೆ ವಿದಾಯ ಹೇಳಲಾಗಿದೆ. ಇನ್ನು ಮುಂದೆ ಎಲ್ಲವೂ ಡಿಜಿಟಲ್. ಭೂ ದಾಖಲೆ ಪಡೆಯಲು ಹೊಸ ನಿಯಮವನ್ನು ಜಾರಿಗೊಳಿಸಲಾಗಿದೆ. ಕಂದಾಯ ಇಲಾಖೆ ಕೈಬರಹದ ಭೂದಾಖಲೆ ನೀಡುವ ವ್ಯವಸ್ಥೆಗೆ ತಿಲಾಂಜಲಿ ನೀಡಿದ್ದು, ಡಿಜಿಟಲ್ ರೂಪದಲ್ಲೇ ದಾಖಲೆಗಳ ವಿತರಣೆಯನ್ನು ಕಡ್ಡಾಯಗೊಳಿಸಿದೆ. ಈ ಪ್ರಕ್ರಿಯೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಶುರುವಾಗಿದೆ. ಇನ್ನು ಮುಂದೆ ಎ ಹಾಗೂ ಬಿ ವರ್ಗದ ಭೂ ದಾಖಲೆಗಳನ್ನು […]

News

ಕಟ್ಟಡ ನಿರ್ಮಾಣಕ್ಕೆ ಲೈಸೆನ್ಸ್ ಕಡ್ಡಾಯ – ತಪ್ಪಿದ್ದಲ್ಲಿ ಸೌಲಭ್ಯವಿಲ್ಲ – ಮಹಾನಗರಪಾಲಿಕೆ

ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸುವ ಮುನ್ನ ಕೆ.ಎಂ.ಸಿ. ಕಾಯ್ದೆಯಡಿ ಕಡ್ಡಾಯವಾಗಿ ಕಟ್ಟಡ ನಿರ್ಮಾಣ ಪರವಾನಿಗೆ ಪಡೆಯಬೇಕಾಗಿರುತ್ತದೆ. ಕಟ್ಟಡ ಪರವಾನಿಗೆಯನ್ನು ಪಡೆದ ನಂತರ ಅನುಮೋದಿತ ನಕ್ಷೆಯನ್ವಯ ಕಟ್ಟಡ ನಿರ್ಮಿಸಿ ಕಟ್ಟಡ ಪ್ರವೇಶ ಪತ್ರ ಪಡೆದ ನಂತರ ಕಟ್ಟಡವನ್ನು ಉಪಯೋಗಿಸಬೇಕಾಗಿರುತ್ತದೆ. ಸುಪ್ರೀಂ ಕೋರ್ಟ್ ಆದೇಶದಂತೆ ಕಟ್ಟಡ ಪ್ರವೇಶ ಪತ್ರ ಪಡೆಯದ ಕಟ್ಟಡಗಳಿಗೆ ಯಾವುದೇ ರೀತಿಯ ಸೇವಾ ಸಂಪರ್ಕಗಳಾದ (Service connections) ವಿದ್ಯುತ್ ಸಂಪರ್ಕ, ನೀರು ಸರಬರಾಜು, ಒಳಚರಂಡಿ ಸಂಪರ್ಕ, ಟ್ರೇಡ್ ಲೈಸೆನ್ಸ್ ನೀಡಬಾರದು […]

You cannot copy content of this page