November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಲೋಕಾಯುಕ್ತ ಪರಿಶೀಲನೆಯ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮಂಗಳೂರು ಮಹಾನಗರ ಪಾಲಿಕೆಗೆ ಭೇಟಿ ನೀಡಿ ಸುಧೀರ್ಘ ಚರ್ಚೆ

ಮಂಗಳೂರು ಮಹಾನಗರ ಪಾಲಿಕೆಯ ಅವ್ಯವಸ್ಥೆ ಹಾಗೂ ನ್ಯೂನ್ಯತೆಗಳ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.ರವರು ಜೂನ್ 23ರಂದು ಸೋಮವಾರ ಭೇಟಿ ನೀಡಿ ಪಾಲಿಕೆಯ ಅಧಿಕಾರಿಗಳೊಂದಿಗೆ ಸಭೆಯನ್ನೂ ನಡೆಸಿದರು. ಅನಂತರ ಮಂಗಳೂರು ಮಹಾನಗರ ಪಾಲಿಕೆ ಕಚೇರಿಗೆ ಭೇಟಿ ನೀಡಿ ವಿವಿಧ ವಿಭಾಗಗಳಿಗೆ ತೆರಳಿ ಪರಿಶೀಲಿಸಿದರು. ಪ್ರಸ್ತುತ ಮಂಗಳೂರು ನಗರದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ಪಡೆದರು. ಪ್ರವಾಹ ನಿಯಂತ್ರಣಕ್ಕೆ ನಡೆದಿರುವ ಕಾಮಗಾರಿಗಳ ಕುರಿತು ಸುದೀರ್ಘ ಚರ್ಚೆಯನ್ನೂ ನಡೆಸಿದರು. ಇದುವರೆಗೆ […]

News

ಅವ್ಯವಸ್ಥೆಯ ಹಾಗೂ ನ್ಯೂನ್ಯತೆಗಳ ಆಗರ – ಮಂಗಳೂರು ಮಹಾನಗರ ಪಾಲಿಕೆ – ಲೋಕಾಯುಕ್ತರಿಂದ ಪರಿಶೀಲನೆ

ನಿಯಮಗಳನ್ನು ಉಲ್ಲಂಪಿಸಿದ ಕಟ್ಟಡಗಳಿಗೆ ಕಾನೂನುಬಾಹಿರವಾಗಿ ಅನುಮತಿ ಮಂಗಳೂರು ಮಹಾನಗರ ಪಾಲಿಕೆಗೆ ಗೌರವಾನ್ವಿತ ಲೋಕಾಯುಕ್ತರಿಂದ ಸರ್ಚ್ ವಾರಂಟ್ ಪಡೆದು ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದ್ದು, ಪರಿಶೀಲನೆ ವೇಳೆ ಮಂಗಳೂರು ಮಹಾನಗರ ಪಾಲಿಕೆಯ ಕಂದಾಯ ವಿಭಾಗ, ಆರೋಗ್ಯ ವಿಭಾಗ, ಇಂಜಿನಿಯರ್ ವಿಭಾಗ, ಲೆಕ್ಕ ಪತ್ರ ವಿಭಾಗ, ನಗರ ಯೋಜನಾ ವಿಭಾಗ, ಆಯುಕ್ತರ ಕಛೇರಿಯಲ್ಲಿ ಕಡತ ವಿಲೇವಾರಿಯಲ್ಲಿ ಹಲವಾರು ನ್ಯೂನ್ಯತೆಗಳು ಕಂಡುಬಂದಿರುತ್ತದೆ. ಈ ಅವ್ಯವಸ್ಥೆ ಹಾಗೂ ನ್ಯೂನ್ಯತೆಗಳನ್ನು ಕಂಡು ಲೋಕಾಯುಕ್ತ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಮಂಗಳೂರು ಮಹಾನಗರಪಾಲಿಕೆಯ ಮೇಲೆ ಜೂನ್ 21ರಂದು ಶನಿವಾರ ಲೋಕಾಯುಕ್ತ […]

News

ಕುಳೂರು ಚರ್ಚ್ ನ ಕಥೊಲಿಕ್ ಸಭಾ ಮತ್ತು ICYM ಸಂಘಟನೆಯ ವತಿಯಿಂದ ‘ಗದ್ದೆಯಲ್ಲಿ ಒಂದು ದಿನ’ ಸಂಭ್ರಮ

ಕುಳೂರಿನಲ್ಲಿರುವ ಸಂತ ಆಂತೋನಿ ಚರ್ಚ್ ನ ಕಥೊಲಿಕ್ ಸಭಾ ಹಾಗೂ ICYM ಸಂಘಟನೆಯ ವತಿಯಿಂದ ಕುಳೂರಿನ ಮೇಲ್ ಕೊಪ್ಪಲದಲ್ಲಿ ಆಯೋಜಿಸಿದ ‘ಗದ್ದೆಯಲ್ಲಿ ಒಂದು ದಿನ’ ಕಾರ್‍ಯಕ್ರಮವು ಜೂನ್ 22 ರಂದು ಆದಿತ್ಯವಾರ ಬಹಳ ಸಂಭ್ರಮದಿಂದ ಆಚರಿಸಲಾಯಿತು. ಚರ್ಚ್ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾದರ್ ವಿಕ್ಟರ್ ವಿಜಯ್ ಲೋಬೊ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಎಪಿಸ್ಕೋಪಲ್ ಸಿಟಿ ವಲಯದ ಕಥೊಲಿಕ್ ಸಭಾ ಅಧ್ಯಕ್ಷೆ ಐಡಾ ಫುರ್ಟಾಡೊ, ICYM ಕೇಂದ್ರೀಯ ಅಧ್ಯಕ್ಷ ವಿನ್ ಸ್ಟನ್ ಜೋಯೆಲ್ ಸಿಕ್ವೇರಾ […]

News

ಬಜ್ಪೆಯಲ್ಲಿನ ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ಲಬ್ ಉದ್ಘಾಟನೆ ಹಾಗೂ ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭ

ಬಜ್ಪೆಯಲ್ಲಿನ ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ಲಬ್ ಉದ್ಘಾಟನೆ ಹಾಗೂ ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭವನ್ನು ಆಚರಿಸಲಾಯಿತು. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆಗೆ ಸಮಾಜದಲ್ಲಿ ಅವರು ಉತ್ತಮ ನಾಯಕರಾಗುವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ವಿದ್ಯಾರ್ಥಿಗಳು ಸಾಮಾಜಿಕ ಬದ್ಧತೆಯ ಬದುಕಿಗೆ ಪೂರಕ ಮೌಲ್ಯಗಳನ್ನು ಅರಿಯುವತ್ತ ಗಮನ ಹರಿಸಬೇಕು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಹಲವಾರು ಮಗ್ಗುಲುಗಳಲ್ಲಿ ತಮ್ಮ ಮನಸ್ಸನ್ನು ಹರಿಯ ಬಿಟ್ಟು ಉತ್ತಮ ಮೌಲ್ಯಗಳನ್ನು ಸ್ವೀಕರಿಸಬೇಕು ವಿದ್ಯಾರ್ಥಿ ದೆಸೆಯಲ್ಲಿ ಸಮಾಜ ಪದ್ಧತಿಯ […]

News

Cracking Emergencies When Seconds Count – EMERGENCY NEUROCON at Father Muller

The Department of Emergency Medicine in collaboration with the Department of Neurology, Father Muller Medical College, hosted EMERGENCY NEUROCON on 21st June 2025 at the Decennial Memorial Hall, Father Muller Charitable Institutions (FMCI), Mangaluru. With the apt theme “Cracking Emergencies When Seconds Count,” the CME aimed to sharpen the decision-making skills of doctors and healthcare […]

News

ಪಾಲ್ದನೆ ಚರ್ಚ್ ನ ನೂತನ ಧರ್ಮಗುರುಗಳಾಗಿ ಫಾದರ್ ರಿಚ್ಚರ್ಡ್ ಅಲೋಶಿಯಸ್‌ ಕುವೆಲ್ಲೊ ಅಧಿಕಾರ ಸ್ವೀಕಾರ 

ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಪಾಲ್ದನೆ ಸಂತ ತೆರೆಸಾರವರಿಗೆ ಸಮರ್ಪಿತ ಚರ್ಚ್ ನ ನೂತನ ಧರ್ಮಗುರುಗಳಾಗಿ ನಿಯೋಜನೆಗೊಂಡಿರುವ ವಂದನೀಯ ಫಾದರ್ ರಿಚ್ಚರ್ಡ್ ಅಲೋಶಿಯಸ್‌ ಕುವೆಲ್ಲೊರವರು ಜೂನ್ 20ರಂದು ಶುಕ್ರವಾರ ಅಧಿಕಾರವನ್ನು ಸ್ವೀಕರಿಸಿದರು. ಅವರು ಕಳೆದ 17 ವರ್ಷಗಳಿಂದ ಕಂಕನಾಡಿ ಫಾದರ್‌ ಮುಲ್ಲರ್‌ ಸಮೂಹ ಸಂಸ್ಥೆಗಳ ನಿರ್ದೇಶಕರಾಗಿ ನಿಷ್ಠಾವಂತ ಸೇವೆ ಸಲ್ಲಿಸಿದ್ದರು. ಶುಕ್ರವಾರ ಪಾಲ್ದನೆ ಚರ್ಚ್ ಗೆ ಆಗಮಿಸಿದ ಸಂದರ್ಭ ಧರ್ಮಗುರು ವಂದನೀಯ ಫಾದರ್ ಆಲ್ಬನ್‌ ಡಿ’ಸೋಜ, ಸಿಟಿ ವಲಯದ ಶ್ರೇಷ್ಠಗುರು ಅತೀ ವಂದನೀಯ ಫಾದರ್ ಜೇಮ್ಸ್ ಡಿಸೋಜ, ಚರ್ಚ್‌ […]

News

ನಾಳೆ ಜೂನ್ 21ರಂದು ಪುತ್ತೂರಿನಲ್ಲಿ ವಿಶ್ವ ಯೋಗ ದಿನ ಆಚರಣೆ

ವಿಶ್ವ ಯೋಗ ದಿನದ ಸಂದರ್ಭದಲ್ಲಿ ಪುತ್ತೂರು ದೇವಾಲಯದ ಸಭಾಭವನ /ನಟರಾಜ ವೇದಿಕೆ, ಪುತ್ತೂರು ಇಲ್ಲಿ ನಾಳೆ ಜೂನ್ 21ರಂದು ಶನಿವಾರ ಬೆಳಿಗ್ಗೆ 5:30 ಗಂಟೆಯಿಂದ ಸಾಯಂಕಾಲ 7:00ರ ತನಕ ವಿಶ್ವ ಯೋಗ ದಿನಾಚರಣೆಯು ನಡೆಯಲಿದೆ.   ಯೋಗ ಕೇಂದ್ರ ಪುತ್ತೂರು, ಸುದ್ದಿ ಸಮೂಹ ಸಂಸ್ಥೆಗಳು, ಅರಣ್ಯ ಇಲಾಖೆ ಪುತ್ತೂರು, ಮಹಾಬಲ ಲಲಿತ ಕಲಾ ಸಭಾ (ರಿ.) ಮತ್ತು ಅನಿಕೇತನ ಎಜುಕೇಶನಲ್ ಟ್ರಸ್ಟ್ (ರಿ.) ಪುತ್ತೂರು ಇವರೆಲ್ಲರ ಸಹಕಾರದೊಂದಿಗೆ ನಡೆಯಲಿರುವ ಈ ಯೋಗ ದಿನಾಚರಣೆಯ ಅಧ್ಯಕ್ಷತೆಯನ್ನು ಈಶ್ವರ ಭಟ್ […]

News

ಅಜಾಗರೂಕತೆ ಹಾಗೂ ಮದ್ಯಪಾನದ ಚಾಲನೆ ಸಲ್ಲದು – ಪೊಲೀಸ್ ಕಮಿಷನರ್ ಎಚ್ಚರಿಕೆ

ಮದ್ಯಪಾನ ಮಾಡಿ ವಾಹನ ಚಲಾಯಿಸುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀ‌ರ್ ಕುಮಾರ್ ರೆಡ್ಡಿ ಸಾರ್ವಜನಿಕರಿಗೆ ಕೆಲವು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಮದ್ಯ ಸೇವನೆ ಮಾಡಿ ವಾಹನ ಚಲಾಯಿಸಿದಲ್ಲಿ ಭಾರತೀಯ ಮೋಟರ್ ವಾಹನ ಕಾಯ್ದೆ ಕಲಂ 185ರ ಅನ್ವಯ ಪ್ರಕರಣ ದಾಖಲಿಸಿ 10 ಸಾವಿರ ರೂಪಾಯಿವರೆಗೆ ದಂಡ ಪಾವತಿಸಬೇಕಾಗುತ್ತದೆ. ಅತೀವೇಗದಿಂದ ವಾಹನ ಚಲಾಯಿಸಿದರೆ ಭಾರತೀಯ ಮೋಟರ್ ವಾಹನ ಕಾಯ್ದೆ ಕಲಂ 183ರ ಅನ್ವಯ ಪ್ರಕರಣ ದಾಖಲಿಸಿ 2/3/ಎಲ್‌ಎಂವಿ ವಾಹನಗಳಿಗೆ 1,000 ರೂಪಾಯಿ, ಎಚ್ಎಂವಿ/ಎಚ್‌ಜಿವಿ/ಇತರ […]

News

ಉಡುಪಿ ಜಿಲ್ಲೆಯ ಎಲ್ಲಾ ಶಾಲಾ ವಾಹನಗಳ ದಾಖಲೆಗಳನ್ನು ಸರಿಪಡಿಸಲು 7 ದಿನಗಳ ಕಾಲಾವಕಾಶ ನೀಡಿದ ಉಡುಪಿ SP

ಇತ್ತೀಚಿನ ದಿನಗಳಲ್ಲಿ ಶಾಲಾ ಮಕ್ಕಳ ವಾಹನಗಳನ್ನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಉಪ ವಿಭಾಗಗಳಲ್ಲೂ ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳ ತಪಾಸಣೆ ನಡೆಸಿದ್ದೇವೆ. ನಿಯಮಗಳನ್ನು ಉಲ್ಲಂಘಿಸಿರುವ 208ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಎಲ್ಲಾ ವಾಹನಗಳಿಗೆ ಇನ್ನೊಂದು ವಾರದ ಕಾಲಾವಕಾಶ ನೀಡಲಿದ್ದು, ದಾಖಲೆಗಳು ಸೇರಿದಂತೆ ಎಲ್ಲವನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ. ಉಡುಪಿ ಜಿಲ್ಲೆಯಾದ್ಯಂತ ಜೂನ್ 19ರಂದು […]

News

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯಲ್ಲಿ ಎಎಸ್‌ಐ, ಹೆಡ್‌ ಕಾನ್‌ಸ್ಟೇಬಲ್ ಸಹಿತ 116 ಪೊಲೀಸ್ ಸಿಬ್ಬಂದಿಗಳ ವರ್ಗಾವಣೆ

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 116 ಪೊಲೀಸ್ ಸಿಬ್ಬಂದಿಯನ್ನು ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ವರ್ಗಾವಣೆ ಮಾಡಲಾಗಿದೆ. ಈ ವರ್ಗಾವಣೆ ಆದೇಶವನ್ನು 2025ರ ಜೂನ್ 10 ರಂದು ಹೊರಡಿಸಲಾಗಿದೆ. ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಿಗೆ ವರ್ಗಾವಣೆಗೊಂಡವರಲ್ಲಿ 7 ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ಗಳು 31 ಸಿವಿಲ್ ಪೊಲೀಸ್ ಹೆಡ್ ಕಾನ್‌ಸ್ಟೆಬಲ್‌ಗಳು ಮತ್ತು 78 ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್‌ಗಳು ಸೇರಿದ್ದಾರೆ. ಈ ವರ್ಗಾವಣೆಯು ಜಿಲ್ಲೆಯ ಕಾನೂನು ಸುವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಮತ್ತು […]

You cannot copy content of this page