ಬಂಟ್ವಾಳ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿ ವಾಚನ – ಗಾಯನ – ಕುಂಚ ಕಾರ್ಯಕ್ರಮ
ಬಂಟ್ವಾಳ : ಮಂಚಿ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯುತ್ತಿರುವ ಬಂಟ್ವಾಳ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿ ವಾಚನ – ಗಾಯನ – ಕುಂಚ ಕಾರ್ಯಕ್ರಮ ಜನವರಿ 5ರಂದು ಭಾನುವಾರ ನಡೆಯಿತು. ಕವಿಗೋಷ್ಠಿಯ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಮುಳಿಯ ಶಂಕರ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಕವಿ ಅಥವಾ ಬರಹಗಾರ ಸಮಾಜದ ತಲ್ಲಣಗಳಿಗೆ ಸದಾ ಸ್ಪಂದಿಸುವ ತುಡಿತವನ್ನು ಹೊಂದಿದ್ದು ಸಾಮಾಜಿಕ ಬದಲಾವಣೆಗಳಿಗೆ ಬಹುಬೇಗನೆ ಪ್ರತಿಕ್ರಿಯಿಸುವ ಶಕ್ತಿ ಸಾಹಿತ್ಯದ ಇತರ ಪ್ರಕಾರಗಳಿಗಿಂತಲೂ ಕವನ, ವಚನಗಳಿಗೆ ಹೆಚ್ಚಿದೆ ಎಂದು ಆಶಯ […]













