ಬೆಳ್ತಂಗಡಿ ಧರ್ಮಕ್ಷೇತ್ರದಲ್ಲಿ ಹೊಸವರ್ಷದ ಪ್ರಯುಕ್ತ ಸೌಹಾರ್ದ ಕೂಟ
ಬೆಳ್ತಂಗಡಿ ಧರ್ಮಕ್ಷೇತ್ರದ ನೇತ್ರತ್ವದಲ್ಲಿ ಜನವರಿ 3ರಂದು ಜ್ಞಾನನಿಲಯ ಬೆಳ್ತಂಗಡಿಯಲ್ಲಿ ಬೆಳ್ತಂಗಡಿ ತಾಲೂಕಿನ ವಿವಿಧ ಗಣ್ಯ ವ್ಯಕ್ತಿಗಳನ್ನು, ವಿವಿಧ ಸಂಘ ಸಂಸ್ಥೆಗಳ ನಾಯಕರುಗಳನ್ನು ಹಾಗೂ ಧರ್ಮಕ್ಷೇತ್ರದ ವಿವಿಧ ಕಾರ್ಯಗಳಿಗೆ ಸಹಕರಿಸುತ್ತಿರುವರನ್ನು ಆಮಂತ್ರಿಸಿ ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಸೌಹಾರ್ದ ಕೂಟವನ್ನು ಏರ್ಪಡಿಸಲಾಗಿತ್ತು. ‘ಸಾಮಾಜಿಕ ಭಾವೈಕ್ಯತೆ ಕಾಪಾಡುವಲ್ಲಿ ನಮ್ಮ ಪಾತ್ರ’ ಎನ್ನುವ ವಿಷಯದ ಕುರಿತು ಮುಖ್ಯ ಸಂದೇಶವನ್ನು ಡಾ. ಟಿ. ಕೃಷ್ಣಮೂರ್ತಿ ರವರು ನೀಡಿದರು. ಕಾರ್ಯಕ್ರಮದ ಆಶಯದ ಕುರಿತು ಬೆಳ್ತಂಗಡಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಲಾರೆನ್ಸ್ ಮುಕ್ಕುಯಿ […]













