November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮುಸ್ಲಿಂ ಸ್ಟೂಡೆಂಟ್ ಫೆಡರೇಶನ್ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಮಂಗಳೂರು : ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಇದರ ವಿದ್ಯಾರ್ಥಿ ಸಂಘಟನೆಯಾದ ಮುಸ್ಲಿಂ ಸ್ಟೂಡೆಂಟ್ ಫೆಡರೇಶನ್ (ಎಮ್.ಎಸ್.ಎಫ್) ಇದರ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸದಸ್ಯತ್ವ ಅಭಿಯಾನಕ್ಕೆ ಎಮ್.ಎಸ್.ಎಫ್ ರಾಷ್ಟ್ರೀಯ ಅಧ್ಯಕ್ಷರಾದ ಪಿ.ವಿ ಅಹ್ಮದ್ ಸಾಜು ಅವರು ಮಂಗಳೂರಿನಲ್ಲಿ ಚಾಲನೆ ನೀಡಿದರು. ಉಪ್ಪಿನಂಗಡಿ ಕಾಲೇಜು ವಿದ್ಯಾರ್ಥಿ ಮುಹಾದ್ ಸರಳಿಕಟ್ಟೆ ಅವರಿಗೆ ಪ್ರಥಮ ಸದಸ್ಯತ್ವ ನೀಡುವ ಮೂಲಕ ಸದಸ್ಯತ್ವ ಅಭಿಯಾನವನ್ನು ಉದ್ಘಾಟಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಲೀಗ್ ಅಧ್ಯಕ್ಷರಾದ ಸಿ. ಅಬ್ದುರ್ರಹ್ಮಾನ್ ಮಂಗಳೂರು ಅವರು ಸಭೆಯ ಅಧ್ಯಕ್ಷತೆ […]

News

ಬಂಟ್ವಾಳ ತಾಲೂಕು ಮಕ್ಕಳ 18 ನೇ ಸಾಹಿತ್ಯ ಸಮ್ಮೇಳನದ ಸ್ವಯಂ ಸೇವಾ ವ್ಯವಸ್ಥೆಯಲ್ಲಿ ಗಮನಸೆಳೆದ ಶೌರ್ಯ ವಿಪತ್ತು ನಿರ್ವಹಣ ಘಟಕ ಶಂಬೂರ್ 

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣ ಘಟಕ ಶಂಬೂರ್ ಬಂಟ್ವಾಳ ತಾಲೂಕಿನ ಸರಕಾರಿ ಪ್ರಾಥಮಿಕ ಶಾಲೆ ಶಂಬೂರ್ ನಲ್ಲಿ ಜರಗಿದ ಬಂಟ್ವಾಳ ತಾಲೂಕು 18ನೇ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಸ್ವಯಂ ಸೇವಾ ಕೆಲಸದಲ್ಲಿ ಎಲ್ಲರ ಗಮನ ಸೆಲೆಯಿತು. ಅಚ್ಚು ಕಟ್ಟಾದ ಕಾರ್ಯಕ್ರಮದಲ್ಲಿ ತಂಡದ ಸದಸ್ಯರು ತಮಗೆ ನೀಡಿದ ಅತಿಥಿ ಸತ್ಕಾರ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿ ಪ್ರಸಂಶಕ್ಕೆ ಪಾತ್ರರಾಗಿದ್ದಾರೆ. ಶೌರ್ಯತಂಡದ ಸಂಯೋಜಕಿ ಲಕ್ಷ್ಮಿ, ಘಟಕ ಪ್ರತಿನಿಧಿ ಕೃಷ್ಣಪ್ಪ ನಾಯ್ಕ, ಸದಸ್ಯರಾದ ವಾಮನ […]

News

ನವಂಬರ್ 24 – 25ರಂದು ಬಂಟ್ವಾಳದಲ್ಲಿ ಎಐಸಿಸಿಟಿಯು ಪ್ರಥಮ ಕರ್ನಾಟಕ ರಾಜ್ಯ ಸಮ್ಮೇಳನ

ಬಂಟ್ವಾಳ : ಕರ್ನಾಟಕದಲ್ಲಿ ಹಲವು ದಶಕಗಳಿಂದಲೂ ಕಾರ್ಮಿಕರೊಡಗೂಡಿ ಕಾರ್ಮಿಕರ ಕಲ್ಯಾಣಕ್ಕಾಗಿ ಮತ್ತು ಶ್ರಮ ಜೀವಿಗಳ ಅಧಿಕಾರಕ್ಕಾಗಿ ಹೋರಾಟ ನಡೆಸುತ್ತಿರುವ ಎಐಸಿಸಿಟಿಯು ತನ್ನ ಮೊದಲನೇ ರಾಜ್ಯ ಸಮ್ಮೇಳನವನ್ನು ನವಂಬರ್ 24 – 25ರಂದು ಬಂಟ್ವಾಳ ತಾಲೂಕು ಬಿ.ಸಿ. ರೋಡಿನ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದೆ. ಎರಡು ದಿನಗಳ ಕಾಲ ನಡೆಯಲಿರುವ ಈ ಸಮ್ಮೇಳನವು ನವೆಂಬರ್ 24ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಬಿ.ಸಿ. ರೋಡ್ ಕೈಕಂಬದಿಂದ ಶ್ರಮಜೀವಿಗಳ ಅಧಿಕಾರದತ್ತ ಜಾಥಾದಿಂದ ಆರಂಭಗೊಳ್ಳಲಿದ್ದು ಡಾ। ಬಿ.ಆರ್. ಅಂಬೇಡ್ಕರ್ ಭವನದಲ್ಲಿ “ಕರ್ನಾಟಕದಲ್ಲಿ ಕ್ರಾಂತಿಕಾರಿ […]

News

ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ಗುರುತತ್ವವಾಹಿನಿ 21ನೇ ಮಾಲಿಕೆ

ನಾರಾಯಣಗುರುಗಳ ಜನಪರ ಕಾಳಜಿ ಯುವಕರಿಗೆ ಸ್ಪೂರ್ತಿ – ಪ್ರಜಿತ್ ಅಮೀನ್ ಬಂಟ್ವಾಳ : ನಾರಾಯಣ ಗುರುಗಳ ಬದುಕೇ ಸನಾತನ ಧರ್ಮದಂತಿದ್ದು, ಅವರ ಸೇವಾ ವ್ಯಾಪ್ತಿ ವಿಶಾಲವಾಗಿತ್ತು. ಚಿಂತನೆಗಳು ಅಮೂಲ್ಯವಾಗಿದ್ದವು. ಯಾವುದೇ ಲೋಪ ದೋಷಗಳಿರದ ಜನಪರ ಕಾಳಜಿ ಇಂದಿನ ಯುವಕರಿಗೆ ಸ್ಪೂರ್ತಿ. ಪೂಜೆಗಿಂತ ತನ್ನ ಸಂದೇಶ ಪಾಲಿಸುವುದೇ ಮುಖ್ಯ ಎಂದು ತಲಶ್ಯೇರಿಯದಲ್ಲಿ ಗುರುಗಳು ಜೀವಂತವಿರುವಾಗಲೆ ಅವರ ಶಿಷ್ಯರು ಪ್ರತಿಷ್ಟಾಪಿಸಿದ ಪಂಚಲೋಹದ ಮೂರ್ತಿಯನ್ನು ನೋಡಿ ಗುರುಗಳು ಅಭಿಪ್ರಾಯ ಪಟ್ಟರು ಎಂದು ಯುವವಾಹಿನಿ ಬಂಟ್ವಾಳ ಘಟಕದ ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ […]

News

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬಂಟ್ವಾಳ ತಾಲೂಕು ಶಾಖೆಯ 2024-29 ನೇ ಅವಧಿಯ ನೂತನ ಪದಾಧಿಕಾರಿಗಳ ಆಯ್ಕೆ

ಬಂಟ್ವಾಳ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬಂಟ್ವಾಳ ತಾಲೂಕು ಶಾಖೆಯ 2024-29 ನೇ ಅವಧಿಯ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಬಿ.ಸಿ. ರೋಡ್ ಸಂಘದ ಸಭಾಭವನದಲ್ಲಿ ನವಂಬರ್ 20ರಂದು ಬುಧವಾರ ನೆರವೇರಿತು. ಅಧ್ಯಕ್ಷರಾಗಿ ಶಿವಪ್ರಸಾದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಕುಮಾರ್, ಖಜಾಂಚಿಯಾಗಿ ಬಸಯ್ಯ ಆಲಿಮಟ್ಟಿ, ರಾಜ್ಯ ಪರಿಷತ್ ಸದಸ್ಯರಾಗಿ ಜನಾರ್ಧನ್ ಜೆ. ಇವರು ಆಯ್ಕೆಯಾಗಿರುತ್ತಾರೆ. ಗೌರವಾಧ್ಯಕ್ಷರಾಗಿ ಶಮಂತ್ ಕುಮಾರ್, ಹಿರಿಯ ಉಪಾಧ್ಯಕ್ಷರಾಗಿ ನಂದನ್ ಶೆಣೈ, ಯಮನಪ್ಪ ಹಾಗೂ ಉಪಾಧ್ಯಕ್ಷರಾಗಿ ಲಕ್ಷ್ಮಣ ಹೆಚ್.ಕೆ., ರಮಾನಂದ, […]

News

ಪತ್ರಕರ್ತ ಭುವನೇಂದ್ರ ಪುದುವೆಟ್ಟು ಇವರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶ್ರದ್ಧಾಂಜಲಿ ಸಭೆ

ಮಂಗಳೂರು : ಅಸೌಖ್ಯದಿಂದ ಇತ್ತೀಚೆಗೆ ನಿಧನರಾದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ, ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯ ಮುಖ್ಯ ವರದಿಗಾರ ಭುವನೇಂದ್ರ ಪುದುವೆಟ್ಟು  ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶ್ರದ್ಧಾಂಜಲಿ ಸಭೆ ನಗರದ ಪತ್ರಿಕಾ ಭವನದಲ್ಲಿ ನವಂಬರ್ 21ರಂದು ಗುರುವಾರ ನಡೆಯಿತು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಪತ್ರಕರ್ತರ ಸಂಘದ ಪ್ರಧಾನ […]

News

First Province BES Convention – A Memorable Gathering of Educational Excellence

The Bethany Educational Society (BES) Mangalore Province proudly organized its First Province BES Convention at Maryvale High School, Kinnigoli and Sacred Hearts’ High School, Kulshekar, on November 19 & 20, 2024. The event saw an overwhelming participation of 436 employees from various BES institutions across the Province. The convention was inaugurated by Rev. Sr Sandhya […]

News

ನೇರಳಕಟ್ಟೆ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿ ಟಿ.ಕೆ. ರಶೀದ್ ಪರ್ಲೊಟ್ಟು ಆಯ್ಕೆ

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ  ಹಿರಿಯ ಪ್ರಾಥಮಿಕ ಶಾಲೆ ನೇರಳಕಟ್ಟೆ ಇದರ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾಗಿ ಪಿ.ಕೆ. ರಶೀದ್ ಪರ್ಲೊಟ್ಟು ಆಯ್ಕೆಯಾದರು. ನವಂಬರ್ 20ರಂದು ಬುಧವಾರ ಶಾಲಾ ಉರ್ದಿಲಗುತ್ತು ಕೆ. ಇಂದುಹಾಸ ರೈ ಸಭಾಂಗಣದಲ್ಲಿ ನಡೆದ ಎಸ್.ಡಿ.ಎಂ.ಸಿ. ರಚನಾ ಸಭೆಯಲ್ಲಿ ಈ ಆಯ್ಕೆ ನಡೆಯಿತು. ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಕೆ. ಶ್ರೀಧರ ರೈ ಸಭೆಯನ್ನು ಉದ್ಘಾಟಿಸಿದರು. ಸದಸ್ಯರಾದ ಲತೀಫ್ ನೇರಳಕಟ್ಟೆ, ಪ್ರೇಮಾ ಮತ್ತು ಲಕ್ಷ್ಮೀ ಉಪಸ್ಥಿತರಿದ್ದರು. ನೂತನ ಅಧ್ಯಕ್ಷರಾಗಿ […]

News

ರಾಜ್ಯ ವಕ್ಪ್ ಸದಸ್ಯರಾಗಿ ಅನ್ವರ್ ಪಾಷಾ ಪುನಾರಾಯ್ಕೆ – ದಕ್ಷಿಣ ಕನ್ನಡ ಜಿಲ್ಲಾ ಮದ್ರಸ ಮೆನೇಜ್ಮೆಂಟ್ ವತಿಯಿಂದ ಅಭಿನಂದನೆ

ಬಂಟ್ವಾಳ  :   ರಾಜ್ಯ ವಕ್ಪ್ ಸಮಿತಿಯ ಸದಸ್ಯರಾಗಿ  ಪುನಾರಾಯ್ಕೆಗೊಂಡ ಅನ್ವರ್ ಪಾಷಾ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಮದ್ರಸ ಮೆನೇಜ್ಮೆಂಟ್ ವತಿಯಿಂದ ಬೆಂಗಳೂರಿನಲ್ಲಿ ಅಭಿನಂದಿಸಲಾಯಿತು.   ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಎಂ.ಎಚ್. ಮ್ಯೊದಿನ್ ಹಾಜಿ ಪ್ರಧಾನ ಕಾರ್ಯದರ್ಶಿ ರಫೀಕ್ ಹಾಜಿ ನೇರಳಕಟ್ಟೆ,  ಫರಂಗಿಪೇಟೆ ರೇಂಜ್ ಅಧ್ಯಕ್ಷ ಹಸನಬ್ಬ, ಮೂಡಬಿದ್ರೆ ರೇಂಜ್ ಅಧ್ಯಕ್ಷ ಮುಹಿಯುದ್ದೀನ್, ಮಿತ್ತಬೈಲ್ ರೇಂಜ್ ಅಧ್ಯಕ್ಷ  ಯೂಸುಫ್ ಬದ್ರಿಯಾ, ಗುರುಪುರ ರೇಂಜ್ ಅಧ್ಯಕ್ಷ ಶಾಹುಲ್ ಹಮೀದ್ ಹಾಜಿ ಮೆಟ್ರೋ, […]

News

ಯಶಸ್ಸಿನ ನಗೆ ಬೀರಿದ ಬಂಟ್ವಾಳ ತಾಲೂಕು 18ನೇ ಮಕ್ಕಳ ಸಾಹಿತ್ಯ ಸಮ್ಮೇಳನ

ಮಕ್ಕಳ ಕಲಾ ಲೋಕವು ಕಡೇಶಿವಾಲಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಹಯೋಗದಲ್ಲಿ ಜರಗಿಸಿದ 17ನೇ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿ ಆ ಸಮ್ಮೇಳನದ ಮಹಾ ಯಶಸ್ಸಿನ ನೆನಪುಗಳು ಮಾಸುವ ಮುನ್ನವೇ ಶಂಭೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಹಯೋಗದಲ್ಲಿ 18ನೇ ಸಾಹಿತ್ಯ ಸಮ್ಮೇಳನವನ್ನು ನವಂಬರ್ 19ರಂದು ಅತ್ಯಂತ ವ್ಯವಸ್ಥಿತವಾಗಿ ಸಂಘಟಿಸಿ ಮತ್ತೊಮ್ಮೆ ಯಶಸ್ಸಿನ ನಗೆ ಬೀರಿರುವುದು ಸಾಹಿತ್ಯ ಮತ್ತು ಕಲಾ ವಲಯಕ್ಕೆ  ಸಂತಸದಾಯಕವಾಗಿದೆ.  ಕಾರ್ಯಕ್ರಮಗಳಲ್ಲಿ ಸಮಯ ಪ್ರಜ್ಜೆ, ಶಿಸ್ತು ಹಾಗೂ ಸಂಯಮ ಹೇಗಿರ ಬೇಕೆಂಬುದನ್ನು ಸಮಾಜಕ್ಕೆ […]

You cannot copy content of this page