November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬಾಳ್ತಿಲ, ಕುದ್ರೆಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಗ್ರಂಥಾಲಯ ಕೊಠಡಿ ಮತ್ತು ಅಂಗನವಾಡಿ ಕೇಂದ್ರದ ಆಟಿಕಾವನ ಉದ್ಘಾಟನೆ

ಬಂಟ್ವಾಳ : ಬಾಳ್ತಿಲ, ಕುದ್ರೆಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಗ್ರಂಥಾಲಯ ಕೊಠಡಿ ಮತ್ತು ಅಂಗನವಾಡಿ ಕೇಂದ್ರದ ಆಟಿಕಾವನ ವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಇವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮಕ್ಕಳಿಗೆ ಶೈಕ್ಷಣಿಕ ಮನೋಭಾವವನ್ನು ಮೂಡಿಸುವ ಪ್ರಾರಂಭಿಕ ಹಂತವೇ ಅಂಗನವಾಡಿಯಾಗಿದೆ. ಇಲ್ಲಿ ಆಟ, ಪಾಠದ ಜೊತೆಗೆ ಸಂಸ್ಕಾರದ ಜೀವನಕ್ಕೆ ಮೂಲ ತಳಹದಿ ಎಂದ ಅವರು ಈ ನಿಟ್ಟಿನಲ್ಲಿ ಪರಿಪೂರ್ಣ ವ್ಯವಸ್ಥೆಯನ್ನು ಕಲ್ಪಿಸಲು ಇಲಾಖೆ ಜೊತೆ ಸಹಕಾರ ನೀಡಿದ ಕಂಪೆನಿ ಹಾಗೂ […]

News

ಉತ್ತಮ ಆರೋಗ್ಯ ಮತ್ತು ಉತ್ತಮ ಉದ್ಯೋಗ ದೊರೆತಾಗ ಆ ಮಗು ಸ್ವತಂತ್ರವಾಗಿ ಬದುಕಲು ಸಹಾಯವಾಗುತ್ತದೆ – ಅಶೋಕ್ ಕುಮಾರ್ ರೈ

ವಿಟ್ಲ : ಇಂದು ಸರಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿವೆ ಹಾಗೂ ರಾಜ್ಯ ಮತ್ತು ದೇಶದ ಪ್ರಗತಿಗೆ ಕಾರಣವಾಗಿದೆ, ಉತ್ತಮ ಆರೋಗ್ಯದ ಜೊತೆಗೆ ಶಿಕ್ಷಣವನ್ನು ನೀಡಿ ಸಮಾಜದ ಅಭಿವೃದ್ಧಿಗೆ ಕೆಲಸ ಮಾಡಬೇಕು. ಎರಡು ಗ್ರಾಮ ಪಂಚಾಯಿತಿಗೆ ಒಂದರಂತೆ ಕೆಪಿಎಸ್ ಶಾಲೆಗಳನ್ನು ತೆರೆಯುವಂತೆ ಪ್ರಯತ್ನಿಸಲಾಗುತ್ತದೆ, ಒಂದು ಉತ್ತಮ ಸಮಾಜದ ನಿರ್ವಹಣೆಗೆ ಜನರ ಭಾವನೆಗೆ ಸ್ಪಂದಿಸುವುದು ಮುಖ್ಯವಾಗಿದೆ. ಯಾವ ಮಗುವೂ ವಿದ್ಯಾಭ್ಯಾಸದಿಂದ ವಂಚಿತವಾಗಬಾರದು ಅಲ್ಲದೆ ಉತ್ತಮ ಆರೋಗ್ಯ ಮತ್ತು ಉತ್ತಮ ಉದ್ಯೋಗ ದೊರೆತಾಗ ಆ ಮಗು ಸ್ವತಂತ್ರವಾಗಿ ಬದುಕಲು ಸಹಾಯವಾಗುತ್ತದೆ. […]

News

ಮಂಗಳೂರಿನ ಮಣ್ಣಾಗುಡ್ಡೆಯ ಶ್ರೀ ಮಡಕೈ ನವದುರ್ಗಾ ಮಹಾಗಣಪತಿ ಕ್ಷೇತ್ರಕ್ಕೆ ಶ್ರೀ ವಿದ್ಯಾಧಿಶ ತೀರ್ಥ ಶ್ರೀಪಾದರ ಭೇಟಿ

ಮಂಗಳೂರಿನ ಮಣ್ಣಾಗುಡ್ಡೆಯ ಶ್ರೀ ಮಡಕೈ ನವದುರ್ಗಾ ಮಹಾಗಣಪತಿ ಕ್ಷೇತ್ರಕ್ಕೆ ನವಂಬರ್ 14ರಂದು ಸಂಜೆ 6:30ಕ್ಕೆ ಶ್ರೀ ಪರ್ಥಗಾಳಿ ಗೋಕರ್ಣ ಮಠಾಧೀಶರಾದ ಶ್ರೀ ವಿದ್ಯಾಧಿಶ ತೀರ್ಥ ಶ್ರೀಪಾದರು ಭೇಟಿ ನೀಡಿ, ಭಕ್ತಾದಿಗಳಿಗೆ ಪ್ರಸಾದ ವಿತರಿಸಿದರು. ಆ ಪ್ರಯುಕ್ತ ದೇವಾಲಯದ ಪರವಾಗಿ ನವದುರ್ಗಾ ಮಹಿಳಾ ಮಂಡಳಿಯ ಸದಸ್ಯರಿಂದ ಪೂರ್ಣಕುಂಭ, ವೇದಘೋಷ, ವಾದ್ಯ ಗೋಷ್ಟಿಗಳೊಂದಿಗೆ ಶ್ರೀ ಯುತರನ್ನು ಸ್ವಾಗತಿಸಲಾಯಿತು. ದೇವರಭೇಟಿ, ಮಂಗಳಾರತಿ, ಸಭಾಕಾರ್ಯಕ್ರಮ ಹಾಗೂ ಶ್ರೀಗಳಿಗೆ ದೇವಾಲಯದ ವತಿಯಿಂದ ಪಾದಪೂಜೆ ಜರುಗಿತು. ಸ್ವಾಮೀಜಿಯವರಿಂದ ಆಶೀರ್ವಾಚನ, ಬಂದಂತಹ ಭಕ್ತಭಿಮಾನಿಗಳಿಗೆ ಫಲಮಂತ್ರಕ್ಷತೆ ವಿತರಣಾ ಕಾರ್ಯಕ್ರಮ […]

News

ಶಂಭೂರಿನಲ್ಲಿ ತಾಲೂಕು ಮಟ್ಟದ 18ನೇ ಮಕ್ಕಳ ಸಾಹಿತ್ಯ ಸಮ್ಮೇಳನ

ಬಂಟ್ವಾಳ: ಮಕ್ಕಳ ಕಲಾ ಲೋಕ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕವು 18ನೇ ವರ್ಷದ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಬಂಟ್ವಾಳ ತಾಲೂಕಿನ ಶಂಭೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದೊಂದಿಗೆ ನವಂಬರ್ 19ರಂದು ಜರಗಿಸಲಿದೆ. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೇಡಿಗುರಿಯಿಂದ ಹೊರಡಲಿರುವ ಮೆರವಣಿಗೆಯನ್ನು ಉದ್ಘಾಟಿಸಲಿರುವರು. ಶಂಭೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಏಳನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಪ್ರೇಕ್ಷಾ ಸರ್ವಾಧ್ಯಕ್ಷತೆ ವಹಿಸಲಿರುವರು. 17ನೇ ವರ್ಷದ ಮಕ್ಕಳ ಸಾಹಿತ್ಯ ಸಮ್ಮೇಳನಾಧ್ಯಕ್ಷೆ […]

News

ಬಂಟ್ವಾಳ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನ – ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಮುಳಿಯ ಶಂಕರ ಭಟ್ ಆಯ್ಕೆ

ಬಂಟ್ವಾಳ:  ಮಂಚಿ-ಕೊಳ್ನಾಡು ಸರಕಾರಿ ನಡೆಸಲು ಉದ್ದೇಶಿಸಿರುವ ಬಂಟ್ವಾಳ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ‘ಎಳೆಯರ ಗೆಳೆಯ ಮುಳಿಯ’ ಎಂದೇ ಪ್ರಸಿದ್ಧರಾಗಿರುವ ಹಿರಿಯ ಸಾಹಿತಿ ಮುಳಿಯ ಶಂಕರ ಭಟ್ ಅವರನ್ನು ಆಯ್ಕೆಗೊಳಿಸಿ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಘೋಷಿಸಿದ್ದಾರೆ ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಅವರು, ಬಂಟ್ವಾಳ ತಾಲೂಕಿನ ಅಳಿಕೆ ಸಮೀಪ ಮುಳಿಯದಲ್ಲಿ ವಿಶ್ರಾಂತ ಜೀವನ ನಡೆಸುತ್ತಿರುವ 72ರ ಹರೆಯದ ನಿವೃತ್ತ ಅಧ್ಯಾಪಕ ಮುಳಿಯ […]

News

ವಿಸ್ಡಮ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಬುಡೋಳಿ ಆಶ್ರಫ್ ಕರಾವಳಿ  ನಿಧನ

ಬಂಟ್ವಾಳ: ಮಾಣಿ ಸಮೀಪದ ಬುಡೋಳಿ ನಿವಾಸಿ ವಿಸ್ಡಮ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಆಶ್ರಫ್ ಕರಾವಳಿ (52) ಹೃದಯಾಘಾತದಿಂದ ಇಂದು ನವಂಬರ್ 15ರಂದು ಶುಕ್ರವಾರ ಮಧ್ಯಾಹ್ನ ನಿಧನರಾದರು. ಅಶ್ರಫ್ ಅವರು ಶುಕ್ರವಾರದ ನಮಾಜಿಗೆ ಗಡಿಯಾರ ಮಸೀದಿಗೆ ತೆರಳಿದ್ದು, ನಮಾಜ್ ನಿರ್ವಹಿಸಿ ಮಸೀದಿಯಲ್ಲಿ ಕುಳಿತಿದ್ದ ವೇಳೆ ಅವರಿಗೆ ಹೃದಯಾಘಾತ ಸಂಭವಿಸಿತು. ತಕ್ಷಣ ಅವರನ್ನು ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಅಶ್ರಫ್ ಅವರು ಬುಡೋಳಿ ವಿಸ್ಡಮ್ ಆಂಗ್ಲ ಮಾಧ್ಯಮ ಶಾಲೆಯ ಅದ್ಯಕ್ಷರಾಗಿದ್ದಾರೆ. […]

News

ಮಿತ್ತಬೈಲ್ : ಮುಹಿಯ್ಯುದ್ದೀನ್ ಮದರಸ ಮೆನೇಜ್ಮೆಂಟ್ ಕಮಿಟಿಗೆ ಪದಾದಿಕಾರಿಗಳ ಆಯ್ಕೆ.

ಬಂಟ್ವಾಳ : ಬಿ.ಸಿ. ರೋಡ್ ಸಮೀಪದ ಮಿತ್ತಬೈಲ್ ಮುಹಿಯ್ಯುದ್ದೀನ್ ಜುಮಾ ಮಸೀದಿ ಇದರ ಅದೀನದ ಮುಹಿಯ್ಯುದ್ದೀನ್ ಮದರಸ ಅಭಿವೃದ್ಧಿ ಸಮಿತಿ ರಚನಾ ಸಭೆಯು ಮಿತ್ತಬೈಲ್ ಮಸೀದಿ ಕಮಿಟಿ ಕಛೇರಿಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಮಿತ್ತಬೈಲ್ ಜಮಾತ್ ಅಧ್ಯಕ್ಷ ಅದ್ದೇಡಿ ಮುಹಮ್ಮದ್ ಮಾತನಾಡಿ, ಮದರಸವನ್ನು ಆದುನಿಕ ತಂತ್ರ ಜ್ಞಾನದೊಂದಿಗೆ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸ್ಮಾರ್ಟ್ ಕ್ಲಾಸ್ ರೂಮ್, ಮಕ್ಕಳ ಪ್ರತಿಭೆಗಳಿಗೆ ಪ್ರೋತ್ಸಾಹ, ಪೋಷಕರ ಹಾಗೂ ಮದರಸ ಅಧ್ಯಾಪಕರಿಗೆ ತರಬೇತಿ ಕಾರ್ಯಕ್ರಮ, ಮದರಸ ಶಿಕ್ಷಣದೊಂದಿಗೆ ಮಕ್ಕಳಿಗೆ ವ್ಯಕ್ತಿತ್ವ ವಿಕಸನ […]

News

ಕಥೊಲಿಕ್ ಸಭಾ ವಿಟ್ಲ ವಲಯದ ವತಿಯಿಂದ ಬೆಳ್ತಂಗಡಿಯ ಸಿಯೋನ್ ಆಶ್ರಮಕ್ಕೆ ಭೇಟಿ

ವಿಟ್ಲ: ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಸಂತ ಜೋನ್ ಪಾವ್ಲ್ ದ್ವಿತೀಯ ಸಮರ್ಪಿತ ವಿಟ್ಲ ವಲಯದ ವತಿಯಿಂದ ಬೆಳ್ತಂಗಡಿಯ ಕಕ್ಕಿಂಜೆ ಗಂಡಿಬಾಗಿಲುನಲ್ಲಿರುವ ಸಿಯೋನ್ ಆಶ್ರಮಕ್ಕೆ ನವಂಬರ್ 13ರಂದು ಬುಧವಾರ ಭೇಟಿ ನೀಡಲಾಯಿತು. ವಿಟ್ಲ ವಲಯದ ಪ್ರಧಾನ ಆಧ್ಯಾತ್ಮಿಕ ನಿರ್ದೇಶಕರಾದ ಅತೀ ವಂದನೀಯ ಫಾದರ್ ಐವನ್ ಮೈಕಲ್ ರೊಡ್ರಿಗಸ್ ರವರ ಮಾರ್ಗದರ್ಶನದಂತೆ, ನಿಕಟ ಪೂರ್ವ ವಲಯ ಅಧ್ಯಕ್ಷ ಆ್ಯಂಟನಿ ಡಿಸೋಜ ಹಾಗೂ ಪ್ರಸ್ತುತ ವಲಯ ಅಧ್ಯಕ್ಷ ರೋಷನ್ ಬೊನಿಫಾಸ್ ಮಾರ್ಟಿಸ್ ಇವರ ಮುಂದಾಳತ್ವದಲ್ಲಿ ಸುಮಾರು 56 ಸದಸ್ಯರ […]

News

ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘದ ವಾರ್ಷಿಕೋತ್ಸವ ಪೂರ್ವ ಸಿದ್ಧತಾ ಸಭೆ

ಪುತ್ತೂರು ಬೊಳುವಾರಿನ ಆಂಜನೇಯ ಯಕ್ಷಗಾನ ಕಲಾ ಸೇವಾ ಸಂಘದ 56ನೇ ವಾರ್ಷಿಕೋತ್ಸವ ಮತ್ತು ಆಂಜನೇಯ ಮಹಿಳಾ ಯಕ್ಷಗಾನ ಸಂಘದ ವಿಂಶತಿ ವರ್ಷಾಚರಣೆಯನ್ನು ವಿಶಿಷ್ಟವಾಗಿ, ಅರ್ಥಪೂರ್ಣವಾಗಿ ಆಚರಿಸಲು ಪೂರ್ವ ಸಿದ್ಧತಾ ಸಭೆಯು ಪರ್ಲಡ್ಕ ಅಗಸ್ತ್ಯ ನಿವಾಸದಲ್ಲಿ ಜರಗಿತು. ಯಕ್ಷಗಾನ ಸಂಘದ   ಅಧ್ಯಕ್ಷ ಭಾಸ್ಕರ ಬಾರ್ಯ ಅಧ್ಯಕ್ಷತೆ ವಹಿಸಿದ್ದರು. ತಾಳಮದ್ದಳೆಯಾಗಿ ಉಭಯಸಂಘದ ಸದಸ್ಯರಿಂದ ಋಷಿ ಪತ್ನಿಯರ ಸಂವಾದ ಸರಣಿ, ಹಿರಿಯ ಕಲಾವಿದರ ತಾಳಮದ್ದಳೆ, ಸಭಾ ಕಾರ್ಯಕ್ರಮದಲ್ಲಿ ಗಣ್ಯರ ಸಮ್ಮುಖದಲ್ಲಿ  ಸಾಧಕರಿಗೆ ಯಕ್ಷಾಆಂಜನೇಯ ಪ್ರಶಸ್ತಿ, ಮಹಿಳಾ ಭಾಗವತರಿಗೆ ವಿಂಶತಿ ಪ್ರಶಸ್ತಿ ಮತ್ತು […]

News

ಯುವವಾಹಿನಿ (ರಿ.) ಬಂಟ್ವಾಳ ವತಿಯಿಂದ ನಾರಾಯಣಗುರು ವಸತಿ ಶಾಲೆ ಪೂಂಜಲಕಟ್ಟೆಯಲ್ಲಿ ಮಕ್ಕಳ‌ ದಿನಾಚರಣೆಯ ಸಂಭ್ರಮ

ಬಂಟ್ವಾಳ : ಯುವವಾಹಿನಿ (ರಿ.) ಬಂಟ್ಟಾಳ ಘಟಕದ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಹಾಗೂ ಗುರುತತ್ವವಾಹಿನಿ ವಿಶೇಷ ಮಾಲಿಕೆ ಕಾರ್ಯಕ್ರಮ ಪೂಂಜಲಕಟ್ಟೆಯ ನಾರಾಯಣ ವಸತಿ ಶಾಲೆಯಲ್ಲಿ ನವಂಬರ್ 14ರಂದು ಗುರುವಾರ  ನಡೆಸಲಾಯಿತು. ಮಕ್ಕಳ ದಿನಾಚರಣೆ ಪ್ರಯುಕ್ತ ವಸತಿ ಶಾಲೆಯ ಮಕ್ಕಳಿಗೆ ವಿವಿಧ ಮನರಂಜನಾ ಸ್ಪರ್ಧೆಗಳನ್ನು ಆಯೋಜಿಸಿ, ಶಾಲಾ ಮಕ್ಕಳಿಂದಲೇ ದೀಪ ಬೆಳಗಿಸಿ ಉದ್ಘಾಟಿಸಿ, ಸಭಾ ಕಾರ್ಯಕ್ರಮ ನಡೆಸಲಾಯಿತು ಹಾಗೂ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಾರಾಯಣ ಗುರುಗಳು ಆಧ್ಯಾತ್ಮಿಕದ ಜೊತೆಗೆ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಔದ್ಯೋಗಿಕ ಕ್ರಾಂತಿಗೆ ಮುನ್ನುಡಿ ಬರೆದ ಲೋಕ […]

You cannot copy content of this page