November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮೈಸೂರು ಧರ್ಮಕ್ಷೇತ್ರದ ಸಹ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಗ್ರೇಶಿಯನ್ ರೊಡ್ರಿಗಸ್ ನೇಮಕ

ಮೈಸೂರು ಧರ್ಮಕ್ಷೇತ್ರದ ಸಹ ಸಾರ್ವಜನಿಕ ಸಂಪರ್ಕಾಧಿಕಾರಿ (Associate Public Relations Officer – APRO)ಯಾಗಿ ಗ್ರೇಶಿಯನ್ ರೊಡ್ರಿಗಸ್ ಅವರನ್ನು ನೇಮಕಗೊಳಿಸಲಾಗಿದೆ. ಈ ಕುರಿತು ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಫ್ರಾನ್ಸಿಸ್ ಸೆರಾವೊ ಎಸ್‌ಜೆ ಅವರು ಅಧಿಕೃತ ನೇಮಕಾತಿ ಆದೇಶ ಹೊರಡಿಸಿದ್ದು, ಆಗಸ್ಟ್ 1ರಿಂದ ಈ ನೇಮಕ ಜಾರಿಗೆ ಬಂದಿದೆ.   ಹೊಸ ಜವಾಬ್ದಾರಿಯಲ್ಲಿ ಗ್ರೆಶಿಯನ್ ರೊಡ್ರಿಗಸ್ ಅವರು ಧರ್ಮಕ್ಷೇತ್ರದ ವಿಕಾರ್ ಜನರಲ್ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಮೊನ್ಸಿಂಜ್ಞೊರ್ ಆಂಥಪ್ಪ ಎಂ. ಅವರ […]

News

ಯುನಿಕೋಡ್ ಪರಿವರ್ತನೆ – ಬಂಟ್ವಾಳ ಭೂಮಿ ಶಾಖೆಯ ಸೇವೆ ತಾತ್ಕಾಲಿಕ ಸ್ಥಗಿತ

ಭೂಮಿ ತಂತ್ರಾಂಶದಲ್ಲಿ ಯುನಿಕೋಡ್ ಪರಿವರ್ತನೆ (Unicode Conversion) ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕು ಭೂಮಿ ಶಾಖೆಯ ಕೆಲವು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತಹಶೀಲ್ದಾರ್ ಕಚೇರಿ ಹೊರಡಿಸಿರುವ ಪ್ರಕಟಣೆಯ ಪ್ರಕಾರ, 2026 ಆಗಸ್ಟ್ 3ರಿಂದ ಆಗಸ್ಟ್ 17ರವರೆಗೆ ಬಂಟ್ವಾಳ ತಾಲೂಕು ಭೂಮಿ ಶಾಖೆಯಲ್ಲಿ ಯಾವುದೇ ಹೊಸ ಅರ್ಜಿಗಳ ಸ್ವೀಕಾರ ಹಾಗೂ ಸಂಬಂಧಿತ ವ್ಯವಹಾರಗಳನ್ನು ನಡೆಸಲಾಗುವುದಿಲ್ಲ. ಇದೇ ಅವಧಿಯಲ್ಲಿ ಆರ್‌ಟಿಸಿ (RTC) ಮತ್ತು ಮ್ಯುಟೇಷನ್ (Mutation) ಪ್ರತಿಗಳನ್ನು ಸಾರ್ವಜನಿಕರಿಗೆ ವಿತರಿಸುವ ಸೇವೆಯೂ ಲಭ್ಯವಿರುವುದಿಲ್ಲ […]

News

ಸಾರ್ವಜನಿಕರ ಧ್ವನಿಗೆ ಸಿಕ್ಕ ಜಯ – ಕರಾವಳಿ ಸುದ್ದಿ ವರದಿ ಬಳಿಕ ಜೋಗಿಬೆಟ್ಟು ರಸ್ತೆಯಲ್ಲಿ ಕಾಮಗಾರಿ ಆರಂಭ

ಮಾಣಿ ಸಮೀಪದ ಪೆರಾಜೆ ಗ್ರಾಮದ ಜೋಗಿಬೆಟ್ಟು ರಸ್ತೆಯಲ್ಲಿ ಮಳೆ ಬಂದಾಗಲೆಲ್ಲ ಉಂಟಾಗುತ್ತಿದ್ದ ಕೃತಕ ನೆರೆ ಸಮಸ್ಯೆಗೆ ಕೊನೆಗೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆ ವಹಿಸಿಕೊಂಡಿರುವ ಕಂಪೆನಿ ಎಚ್ಚೆತ್ತುಕೊಂಡಿದೆ. ಕರಾವಳಿ ಸುದ್ದಿ ವೆಬ್‌ಸೈಟ್‌ನಲ್ಲಿ ಆಗಸ್ಟ್ 3ರಂದು “ಜೋಗಿಬೆಟ್ಟು ರಸ್ತೆಯಲ್ಲಿ ಕೃತಕ ನೆರೆ – ಜನರ ಆಕ್ರೋಶ” ಎಂಬ ಶೀರ್ಷಿಕೆಯಡಿ ಸಮಸ್ಯೆಯನ್ನು ಪ್ರಮುಖವಾಗಿ ಪ್ರಕಟಿಸಿದ ಬೆನ್ನಲ್ಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹಾರ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಳಿಕ ಮಳೆ ನೀರು ಸರಾಗವಾಗಿ ಹರಿದು […]

News

ಮಿಲಾಗ್ರಿಸ್ ಕಾಲೇಜಿನಲ್ಲಿ ವಿದ್ಯಾರ್ಥಿ ಪರಿಷತ್‌, ಸಂಘಗಳು, ಆಡ್-ಆನ್ ಕೋರ್ಸ್‌ಗಳಿಗೆ ಚಾಲನೆ

ಮಂಗಳೂರು ನಗರದ ಮಿಲಾಗ್ರಿಸ್ ಕಾಲೇಜಿನಲ್ಲಿ ವಿದ್ಯಾರ್ಥಿ ಪರಿಷತ್‌, ವಿವಿಧ ವಿದ್ಯಾರ್ಥಿ ಸಂಘಗಳು ಹಾಗೂ ಆಡ್-ಆನ್ ಕೋರ್ಸ್‌ಗಳ ಉದ್ಘಾಟನಾ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ನಗರ ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ನಜ್ಮಾ ಫಾರೂಕಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳು ಕೇವಲ ಶೈಕ್ಷಣಿಕ ಸಾಧನೆಗೆ ಸೀಮಿತವಾಗದೆ ನಾಯಕತ್ವ, ಶಿಸ್ತು, ಸಾಮಾಜಿಕ ಜವಾಬ್ದಾರಿ ಹಾಗೂ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ವಿದ್ಯಾರ್ಥಿ ಪರಿಷತ್ತು ಹಾಗೂ ವಿವಿಧ ಸಂಘಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಸಂಘಟನಾ ಕೌಶಲ್ಯ, […]

News

ICYM ಮಿಯಪದವು ಘಟಕದಿಂದ ‘ಮಳೆಯಲ್ಲಿ ಮಸ್ತಿ’ ಕ್ರೀಡೋತ್ಸವ ಸಂಭ್ರಮ

ICYM ಮಿಯಪದವು ಘಟಕದ ಆಶ್ರಯದಲ್ಲಿ ‘ಮಳೆಯಲ್ಲಿ ಮಸ್ತಿ’ ವಿನೂತನ ಮಳೆಯ ಆಟಗಳ ಕಾರ್ಯಕ್ರಮವು ಫಾತಿಮಾ ಆಂಗ್ಲ ಮಾಧ್ಯಮ ಶಾಲೆಯ ಮೈದಾನದಲ್ಲಿ ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮವು ಪ್ರಾರ್ಥನಾ ಗೀತೆಯೊಂದಿಗೆ ಆರಂಭಗೊಂಡಿತು. ಐಸಿವೈಎಂ ಕಾರ್ಯದರ್ಶಿ ರೀಶನ್ ಮೊಂತೇರೊ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಂದನೀಯ ಡೇನಿಯಲ್ ಡಿಸೋಜ ಕ್ರೀಡಾಕೂಟವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಸಿಸ್ಟರ್ ಅಲ್ವಿನಾ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಲುವಿಸ್ ಮೊಂತೆರೊ, ಕಾರ್ಯದರ್ಶಿ ಸಿಲ್ವಿಯಾ ಸಂತಾನಾಜ್, ಆಯೋಗಗಳ ಸಂಚಾಲಕ ಪ್ರದೀಪ್ ಡಿಸೋಜ, ಐಸಿವೈಎಂ ಸಂಯೋಜಕ ವಿನೋದ್ ಡಿಸೋಜ, ಅಧ್ಯಕ್ಷ ಮೆಲ್ವಿನ್ […]

News

ಮಂಗಳೂರು ಧರ್ಮಕ್ಷೇತ್ರದ ಸಿಟಿ ವಲಯದ ಸ್ತ್ರೀ ಸಂಘಟನೆಯಿಂದ ‘ಬೆಂಕಿ ಇಲ್ಲದ ಅಡುಗೆ’ ಸ್ಪರ್ಧೆ – ಶಕ್ತಿನಗರ ಘಟಕಕ್ಕೆ ಪ್ರಥಮ ಬಹುಮಾನ

ಮಂಗಳೂರು ಧರ್ಮಕ್ಷೇತ್ರದ ಸಿಟಿ ವಲಯದ ಸ್ತ್ರೀ ಸಂಘಟನೆಯ ವತಿಯಿಂದ ವಲಯ ಮಟ್ಟದ ಎಲ್ಲಾ ಸದಸ್ಯರಿಗಾಗಿ ಆಯೋಜಿಸಲಾಗಿದ್ದ “ಬೆಂಕಿ ಇಲ್ಲದ ಅಡುಗೆ” (Cooking Without Fire) ಸ್ಪರ್ಧೆಯು ಆಗಸ್ಟ್ 2 ರಂದು ಭಾನುವಾರ ಯಶಸ್ವಿಯಾಗಿ ನಡೆಯಿತು. ವಿವಿಧ ಘಟಕಗಳ ಮಹಿಳೆಯರು ತಮ್ಮ ವೈವಿಧ್ಯಮಯ ಮತ್ತು ನವೀನ ಪಾಕಕಲೆಯ ಪ್ರತಿಭೆಯನ್ನು ಪ್ರದರ್ಶಿಸಿದರು. ಈ ರೋಚಕ ಸ್ಪರ್ಧೆಯಲ್ಲಿ ವಲಯ ವ್ಯಾಪ್ತಿಯ ಒಟ್ಟು 7 ಪ್ರಮುಖ ಘಟಕಗಳು ಭಾಗವಹಿಸಿದ್ದವು. ಸ್ಪರ್ಧೆಯಲ್ಲಿ ಭಾಗವಹಿಸಿದ ಘಟಕಗಳು:  ಫೆರ್ಮೈ, ನೀರುಮಾರ್ಗ, ಕೆಲರೈ, ಕುಲಶೇಖರ, ಶಕ್ತಿನಗರ, ಬಜ್ಜೋಡಿ, ಆಂಜೆಲೋರ್. […]

News

ಕರ್ನಾಟಕ ಶಾಸಕಾಂಗಕ್ಕೆ ಹೊಸ ಸಾರಥಿಗಳು – ಸ್ಪೀಕರ್ ಆಗಿ ಜಿ.ಎಸ್. ಪಾಟೀಲ್, ಡೆಪ್ಯೂಟಿ ಸ್ಪೀಕರ್ ಆಗಿ ಎ.ಎಸ್. ಪೊನ್ನಣ್ಣ

ಕರ್ನಾಟಕ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಪ್ರಮುಖ ಹುದ್ದೆಗಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ರಾಜ್ಯ ಶಾಸಕಾಂಗದ ಕಾರ್ಯಚಟುವಟಿಕೆಗಳಿಗೆ ಹೊಸ ನಾಯಕತ್ವ ಲಭಿಸಿದೆ. ಗದಗ ಜಿಲ್ಲೆಯ ರೋಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಎಸ್. ಪಾಟೀಲ್ ಅವರನ್ನು ವಿಧಾನಸಭೆಯ ನೂತನ ಸಭಾಧ್ಯಕ್ಷ (ಸ್ಪೀಕರ್) ಆಗಿ ಆಯ್ಕೆ ಮಾಡಲಾಗಿದೆ. ಅದೇ ವೇಳೆ, ಕೊಡಗು ಜಿಲ್ಲೆಯ ವಿರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕರಾದ ಎ.ಎಸ್. ಪೊನ್ನಣ್ಣ ಅವರನ್ನು ಉಪಸಭಾಧ್ಯಕ್ಷ (ಡೆಪ್ಯೂಟಿ ಸ್ಪೀಕರ್) ಆಗಿ ನೇಮಕ ಮಾಡಲಾಗಿದೆ. ವಿಧಾನ ಪರಿಷತ್ತಿನಲ್ಲಿಯೂ ಪ್ರಮುಖ ಬದಲಾವಣೆ ನಡೆದಿದ್ದು, […]

News

7 ವರ್ಷ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಉಮ್ಮರ್ ನವಾಫ್ ಬಂಧನ

ಸುಮಾರು 7 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಾಗೂ 30ಕ್ಕೂ ಹೆಚ್ಚು ವಾರಂಟ್‌ಗಳು ಜಾರಿಯಾಗಿದ್ದ ವಾರಂಟ್ ಆರೋಪಿ 33 ವರ್ಷ ಪ್ರಾಯದ ಉಮ್ಮರ್ ನವಾಫ್ ಅವರನ್ನು ಮಂಗಳೂರು ದಕ್ಷಿಣ ಉಪವಿಭಾಗದ ವಿಶೇಷ ಕರ್ತವ್ಯ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಕ್ರಮ ಕೈಗೊಂಡಿದೆ. ಬಂಧಿತ ಆರೋಪಿ ಉಮ್ಮರ್ ನವಾಫ್, ಮೂಲತಃ ಮಾರ್ಗತಲೆ, ಉಳ್ಳಾಲ ತಾಲೂಕು ನಿವಾಸಿಯಾಗಿದ್ದು, ಪ್ರಸ್ತುತ ನಾಜಿಯಾ ಮಂಜೀಲ್, ಗೇರುಕಟ್ಟೆ, ಕುಂಡಪ್ಪು, ಮಂಜೇಶ್ವರ, ಪಾವೂರು ಅಂಚೆ, ಕಾಸರಗೋಡು ಜಿಲ್ಲೆಯಲ್ಲಿ (ಕೇರಳ)  ವಾಸವಾಗಿದ್ದಾನೆ. ಆರೋಪಿಯ ವಿರುದ್ಧ 13ಕ್ಕೂ […]

News

ತೋಡಿನಲ್ಲಿ ಕೊಚ್ಚಿಹೋದ ಜೀವನ್ ಪಿಂಟೋ ಮೃತದೇಹ ಪತ್ತೆ

ರಾಯಿ ಗ್ರಾಮದ ಪಾಂಚಕೋಡಿ ನಿವಾಸಿ ಜೋಸೆಫ್ ಪಿಂಟೋ ಅವರ ಪುತ್ರ 48 ವರ್ಷ ಪ್ರಾಯದ ಜೀವನ್ ಪಿಂಟೋ ಅವರು ನಾಪತ್ತೆಯಾಗಿದ್ದ ಪ್ರಕರಣ ದುಃಖಾಂತ್ಯ ಕಂಡಿದ್ದು, ಇಂದು ಆಗಸ್ಟ್ 3ರಂದು ಸೋಮವಾರ ಬೆಳಿಗ್ಗೆ ಅರಳ ಗ್ರಾಮದ ಪಂಬದಗದ್ದೆ ಸಮೀಪ ಅವರ ಮೃತದೇಹ ಪತ್ತೆಯಾಗಿದೆ. ಆಗಸ್ಟ್‌ 1ರ ಶನಿವಾರ ರಾತ್ರಿ ಸುಮಾರು 7.30ರ ವೇಳೆಗೆ ಜೀವನ್ ಪಿಂಟೋ ಅವರು ತಮ್ಮ ಮನೆಯಿಂದ ಸಮೀಪದ ಮಾವನ ಮನೆಗೆ ತೆರಳುವುದಾಗಿ ಹೇಳಿ ಹೊರಟಿದ್ದರು. ಧಾರಾಕಾರ ಮಳೆ ಹಾಗೂ ಕತ್ತಲೆ ಇದ್ದ ಕಾರಣ ಟಾರ್ಚ್ […]

News

ಜೋಗಿಬೆಟ್ಟು ರಸ್ತೆಯಲ್ಲಿ ಕೃತಕ ನೆರೆ – ಜನರ ಆಕ್ರೋಶ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಆಗಸ್ಟ್ 3ರಂದು ಸೋಮವಾರ ಬೆಳಗ್ಗೆಯಿಂದ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದ ಬುಡೋಳಿ ಸಮೀಪದ ಗಡಿಯಾರ–ಜೋಗಿಬೆಟ್ಟು ರಸ್ತೆಯಲ್ಲಿ ಮಳೆನೀರು ರಸ್ತೆಯಲ್ಲೇ ನಿಂತು ಕೃತಕ ನೆರೆ ಪರಿಸ್ಥಿತಿ ನಿರ್ಮಾಣವಾಗಿದ್ದು, ವಾಹನ ಸವಾರರು ಹಾಗೂ ಸ್ಥಳೀಯ ನಿವಾಸಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಇತ್ತೀಚೆಗೆ ಈ ಭಾಗದಲ್ಲಿ ಸರ್ವಿಸ್ ರಸ್ತೆ ನಿರ್ಮಿಸಲಾಗಿದ್ದರೂ, ಸಮರ್ಪಕ ಚರಂಡಿ ವ್ಯವಸ್ಥೆ ಕಲ್ಪಿಸದಿರುವುದರಿಂದ ಪ್ರತಿ ಮಳೆಯ ಸಂದರ್ಭದಲ್ಲೂ ನೀರು ರಸ್ತೆಯಲ್ಲೇ ಸಂಗ್ರಹವಾಗುತ್ತಿದೆ. ಪರಿಣಾಮ ರಸ್ತೆ ಸಂಚಾರ ಅಸ್ತವ್ಯಸ್ತವಾಗುವುದರ […]

You cannot copy content of this page