November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

Father Muller Independence Tournament 2026 – PU Level Intercollegiate Kabaddi & Throwball Tournament

Father Muller Charitable Institutions successfully organized the Independence Tournament 2026, PU-level intercollegiate sports tournament featuring Men’s Kabaddi and Women’s Throwball, on 13 August 2026 at the Father Muller Indoor Stadium, Mangaluru. The tournament witnessed enthusiastic participation from PU colleges across Dakshina Kannada and Udupi districts. More than 16 Men’s Kabaddi teams and 8 Women’s Throwball teams […]

News

ಮಂಗಳೂರು ಧರ್ಮಕ್ಷೇತ್ರದ ಹಿರಿಯ ಧರ್ಮಗುರು ವಂದನೀಯ ಫಾದರ್ ವಿಕ್ಟರ್ ಮಚಾದೊ ನಿಧನ

ವಿವಿಧ ಚರ್ಚ್ ಗಳು, ಸೆಮಿನರಿ ಹಾಗೂ ಧರ್ಮಕ್ಷೇತ್ರದ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ ಹಿರಿಯ ಧರ್ಮಗುರು ಜೆಪ್ಪುವಿನ ಸಂತ ಜುಜೆ ವಾಝ್ ಹೋಮ್ ಇಲ್ಲಿ ವಾಸಿಸುತ್ತಿದ್ದ 81 ವರ್ಷ ಪ್ರಾಯದ ವಂದನೀಯ ಫಾದರ್ ವಿಕ್ಟರ್ ಮಚಾದೊ ಅವರು ಇಂದು ಆಗಸ್ಟ್ 17ರಂದು ಸೋಮವಾರ ನಿಧನರಾದರು. ಧರ್ಮಕ್ಷೇತ್ರದಲ್ಲಿ ಹಲವು ದಶಕಗಳ ಕಾಲ ಧರ್ಮಗುರುಗಳಾಗಿ, ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಸೇವೆ ಸಲ್ಲಿಸಿದ ಅವರು ತಮ್ಮ ಸರಳತೆ, ಸೇವಾ ಮನೋಭಾವ ಮತ್ತು ಧಾರ್ಮಿಕ ಬದ್ಧತೆಯಿಂದ ಗುರುತಿಸಿಕೊಂಡಿದ್ದರು. 1945ರ ಜುಲೈ 28ರಂದು ಬಂಟ್ವಾಳದಲ್ಲಿ ಜನಿಸಿದ […]

News

ಉಡುಪಿ ಜಿಲ್ಲೆಗೆ ನಿರ್ಬಂಧ: “ನನ್ನ ವಿರುದ್ಧದ ಕ್ರಮವನ್ನು ಖಂಡಿಸುತ್ತೇನೆ, ಹೈಕೋರ್ಟ್ ಮೊರೆ ಹೋಗುತ್ತೇನೆ” – ನರಸಿಂಹ ಮಾಣಿ

ಉಡುಪಿ ಜಿಲ್ಲೆಗೆ ಪ್ರವೇಶಿಸದಂತೆ ನನ್ನ ಮೇಲೆ ಪೊಲೀಸರು ಮೂರು ತಿಂಗಳ ಕಾಲ ನಿರ್ಬಂಧ ಹೇರಿರುವ ಕ್ರಮವನ್ನು ಹಿಂದೂ ಜಾಗರಣ ಮುಖಂಡ ನರಸಿಂಹ ಮಾಣಿ ತೀವ್ರವಾಗಿ ಖಂಡಿಸಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, “ಉಡುಪಿ ಜಿಲ್ಲೆಗೆ ನನ್ನನ್ನು ನಿರ್ಬಂಧಿಸಿರುವ ಕ್ರಮವನ್ನು ನಾನು ಖಂಡಿಸುತ್ತೇನೆ. ಈ ನಿರ್ಬಂಧದ ವಿರುದ್ಧ ಹೈಕೋರ್ಟ್ ಮೊರೆ ಹೋಗುತ್ತೇನೆ” ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಸರ್ಕಾರವು ಪೊಲೀಸರ ಮೂಲಕ ಹಿಂದೂ ಕಾರ್ಯಕರ್ತರು ಹಾಗೂ ಮುಖಂಡರನ್ನು ದಮನಿಸುವ ಕಾರ್ಯದಲ್ಲಿ ತೊಡಗಿದೆ ಎಂದು ಅವರು ಆರೋಪಿಸಿದರು. ನನ್ನ ಮೇಲೆ ಯಾವುದೇ ರೀತಿಯ […]

News

ಮೊಗರ್ನಾಡ್ ಚರ್ಚ್‌ನ ಶಾಂತಿ ಡಿಸೋಜ ನಿಧನ

ಮೊಗರ್ನಾಡ್ ಚರ್ಚ್‌ನ 51 ವರ್ಷ ಪ್ರಾಯದ ಶಾಂತಿ ಡಿಸೋಜ, ಆಲ್ಬರ್ಟ್ ಡಿಸೋಜ ಅವರ ಪತ್ನಿ ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆಗಸ್ಟ್ 16ರಂದು ಭಾನುವಾರ ನಿಧನ ಹೊಂದಿದರು. ಮೃತರು ಪತಿ ಆಲ್ಬರ್ಟ್ ಡಿಸೋಜ, ಪುತ್ರಿಯರಾದ ಶೆಲ್ಮಾ ಟ್ರೀಜಾ ಡಿಸೋಜ ಹಾಗೂ ಶೈನಿ ಆಶ್ಲಿನ್ ಡಿಸೋಜ, ಅಳಿಯಂದಿರಾದ ಹ್ಯಾರಿಸನ್ ಅಲ್ಬುಕರ್ಕ್ ಮತ್ತು ರೆನ್‌ಸನ್ ಸೆರಾವೊ, ಮೊಮ್ಮಗ ಹೈಜೆನ್ ಶೆಲ್ಟನ್ ಅಲ್ಬುಕರ್ಕ್ ಅವರನ್ನು ಅಗಲಿದ್ದಾರೆ. ಪೀಟರ್ ಲೋಬೊ ಮತ್ತು ಬೆನ್ನಿ ಡಿಸೋಜ ಅವರ ಪುತ್ರಿಯಾಗಿದ್ದ ಅವರು, ಶಿವಮೊಗ್ಗ ಧರ್ಮಕ್ಷೇತ್ರದ […]

News

ಚಾಮರಾಜನಗರ ಶೂಟೌಟ್‌ಗೆ AICU ಖಂಡನೆ – ಅರಣ್ಯಾಧಿಕಾರಿಗಳ ವಿರುದ್ಧದ ಎಫ್‌ಐಆರ್‌ ಸ್ವಾಗತಿಸಿ ನಿಷ್ಪಕ್ಷಪಾತ ತನಿಖೆಗೆ ಆಗ್ರಹ

ಪೀಟರ್, ಆಂತೋನಿಸ್ವಾಮಿ ಹಾಗೂ ಕುಮಾರ್‌ ಸಾವಿನ ಸತ್ಯಾಸತ್ಯತೆ ಹೊರಬರಲು ಸಮಗ್ರ ತನಿಖೆಗೆ ಆಲ್ವಿನ್ ಡಿಸೋಜ ಪಾನೀರ್ ಒತ್ತಾಯ ಕಾವೇರಿ ವನ್ಯಜೀವಿಧಾಮದ ಶಾಗ್ಯ ಅರಣ್ಯ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿಯ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿರುವ ಘಟನೆ ತೀವ್ರ ಕಳವಳಕ್ಕೆ ಕಾರಣವಾಗಿದ್ದು, ಪ್ರಕರಣದ ಸತ್ಯಾಸತ್ಯತೆ ನಿಷ್ಪಕ್ಷಪಾತ ತನಿಖೆಯ ಮೂಲಕ ಹೊರಬರಬೇಕು ಎಂದು AICU ರಾಜ್ಯಾಧ್ಯಕ್ಷರಾದ ಆಲ್ವಿನ್ ಡಿಸೋಜ ಪಾನೀರ್ ಆಗ್ರಹಿಸಿದ್ದಾರೆ. ಆಗಸ್ಟ್ 14ರಂದು ಶುಕ್ರವಾರ ಕಾಡಿಗೆ ಮೇಯಲು ಬಿಟ್ಟಿದ್ದ ಜಾನುವಾರುಗಳನ್ನು ಹುಡುಕಿಕೊಂಡು ತೆರಳಿದ್ದ ಆಂತೋಣಿಸ್ವಾಮಿ, ಜೋನ್ ರೋಸ್ ಪೀಟರ್ ಹಾಗೂ […]

News

ಬಂಟ್ವಾಳ ಕಡೇಶಿವಾಲಯ ಗ್ರಾಮದ ಅಮೈಯಲ್ಲಿ ಭಾರಿ ಕಾರ್ಯಾಚರಣೆ – ಕೋಟಿ ಮೌಲ್ಯದ MDMA ಹಾಗೂ ಕೊಕೇನ್ ವಶ

ಬೆಂಗಳೂರು ಮೂಲದ ಡ್ರಗ್ಸ್ ಪೆಡ್ಲರ್ ಬಂಧನ! ಬಂಟ್ವಾಳ ಗ್ರಾಮಾಂತರ PSI ಮಂಜುನಾಥ್ ಟಿ. ತಂಡಕ್ಕೆ ಸಾರ್ವಜನಿಕರಿಂದ ಭಾರಿ ಶ್ಲಾಘನೆ ಹಾಸನದಿಂದ ಮಂಗಳೂರಿಗೆ ಕಾರಿನಲ್ಲಿ ಬೃಹತ್ ಪ್ರಮಾಣದ ಮಾದಕವಸ್ತು ರವಾನಿಸುತ್ತಿದ್ದ ಅಂತಾರಾಜ್ಯ ಜಾಲವನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಭೇದಿಸಿದ್ದಾರೆ. ಬಂಟ್ವಾಳ ತಾಲೂಕಿನ ಕಡೇಶಿವಾಲಯ ಗ್ರಾಮದ ಅಮೈ ಎಂಬಲ್ಲಿ ತಡರಾತ್ರಿ ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ MDMA ಹಾಗೂ ಕೊಕೇನ್ ಸಹಿತ ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಬೆಂಗಳೂರು ಕೆಂಗೇರಿ ನಿವಾಸಿ 35 ವರ್ಷ ಪ್ರಾಯದ ಮಹಮ್ಮದ್ […]

News

ಸೆಪ್ಟೆಂಬರ್ 12ರಂದು ಬಂಟ್ವಾಳದಲ್ಲಿ ರಾಷ್ಟ್ರೀಯ ಲೋಕ ಅದಾಲತ್ – ರಾಜಿ ಮೂಲಕ ಪ್ರಕರಣಗಳ ಇತ್ಯರ್ಥಕ್ಕೆ ಅವಕಾಶ

ಬಾಕಿ ಉಳಿದಿರುವ ರಾಜಿಯಾಗಬಹುದಾದ ಪ್ರಕರಣಗಳನ್ನು ತ್ವರಿತವಾಗಿ ಮತ್ತು ಸೌಹಾರ್ದಯುತವಾಗಿ ಇತ್ಯರ್ಥಪಡಿಸುವ ಉದ್ದೇಶದಿಂದ ಸೆಪ್ಟೆಂಬರ್ 12ರಂದು ಬಂಟ್ವಾಳ ನ್ಯಾಯಾಲಯ ಸಂಕೀರ್ಣದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಲೋಕ ಅದಾಲತ್‌ನ ಪೂರ್ವಭಾವಿ ಸಭೆ ಬಂಟ್ವಾಳ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆಯಿತು. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಬಂಟ್ವಾಳ ನ್ಯಾಯಾಲಯಗಳ ವ್ಯಾಪ್ತಿಯಲ್ಲಿ ವಿಚಾರಣೆಯ ಹಂತದಲ್ಲಿರುವ ರಾಜಿಯಾಗಬಹುದಾದ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ಲೋಕ ಅದಾಲತ್ ಮೂಲಕ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು […]

News

27 ವರ್ಷಗಳ ಸೇವೆಯ ಬಳಿಕ ಜೀವನ್ ಸಂತೋಷ್ ಮಾರ್ಟಿಸ್‌ ಅವರು KSRTC ಟ್ರಾಫಿಕ್ ಕಂಟ್ರೋಲರ್ ಹುದ್ದೆಗೆ ಬಡ್ತಿ

KSRTC ಪುತ್ತೂರು ವಿಭಾಗದಲ್ಲಿ ಸುದೀರ್ಘ ಸೇವೆ ಸಲ್ಲಿಸಿರುವ ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಮಾರ್ಟಿಸ್ ಕುಟುಂಬದ ಜೀವನ್ ಸಂತೋಷ್ ಮಾರ್ಟಿಸ್ ಅವರು ಟ್ರಾಫಿಕ್ ಕಂಟ್ರೋಲರ್ (ಸಂಚಾರ ನಿಯಂತ್ರಕ) ಹುದ್ದೆಗೆ ಪದೋನ್ನತಿ ಪಡೆದಿದ್ದಾರೆ. 1999ರ ಜನವರಿಯಲ್ಲಿ KSRTC ಯಲ್ಲಿ ನಿರ್ವಾಹಕರಾಗಿ ಸೇವೆಗೆ ಸೇರ್ಪಡೆಗೊಂಡ ಜೀವನ್ ಸಂತೋಷ್ ಮಾರ್ಟಿಸ್ ಅವರು ಸುಮಾರು 15 ವರ್ಷಗಳ ಕಾಲ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಕರ್ತವ್ಯದಲ್ಲಿದ್ದ ವೇಳೆ ಸಂಭವಿಸಿದ ಅಪಘಾತದ ಹಿನ್ನೆಲೆಯಲ್ಲಿ ವೈದ್ಯಕೀಯ ಕಾರಣಗಳಿಂದ ಸುಮಾರು 12 ವರ್ಷಗಳ ಕಾಲ ಪರ್ಯಾಯ ಹುದ್ದೆಯಲ್ಲಿ ನಿಯೋಜನೆಗೊಂಡು […]

News

ಕನ್ನಡ ಪತ್ರಿಕಾ ಸಂಸ್ಕೃತಿ ಉಳಿವಿಗಾಗಿ ಕಾಸರಗೋಡಿನಲ್ಲಿ ಐತಿಹಾಸಿಕ ಹೆಜ್ಜೆ – “ಮನೆಗೊಂದು, ಶಾಲೆಗೊಂದು ಕನ್ನಡ ಪತ್ರಿಕಾ ಅಭಿಯಾನ”ಕ್ಕೆ ಚಾಲನೆ

ಕನ್ನಡ ಪತ್ರಿಕೋದ್ಯಮದ 183ನೇ ಸಂಸ್ಥಾಪನಾ ವರ್ಷಾಚರಣೆಯ ಸುಸಂದರ್ಭದಲ್ಲಿ, ಪತ್ರಿಕಾ ಓದುಗರನ್ನು ಪ್ರೋತ್ಸಾಹಿಸಲು ಹಾಗೂ ಭಾಷಾಭಿಮಾನವನ್ನು ಜಾಗೃತಗೊಳಿಸಲು “ನಮ್ಮ ಪತ್ರಿಕೆ – ನಮ್ಮ ಹೆಮ್ಮೆ” ಎಂಬ ಘೋಷಣೆಯೊಂದಿಗೆ “ಮನೆಗೊಂದು, ಶಾಲೆಗೊಂದು ಕನ್ನಡ ಪತ್ರಿಕಾ ಅಭಿಯಾನ”ವನ್ನು ಹಮ್ಮಿಕೊಳ್ಳಲಾಗಿದೆ. 2026 ಜುಲೈ 1 ರಿಂದ 2027 ಜುಲೈ 1ರವರೆಗೆ ದೇಶದಲ್ಲೇ ಪ್ರಪ್ರಥಮ ಬಾರಿಗೆ ಇಂತಹ ಬೃಹತ್ ಸ್ವಯಂಪ್ರೇರಿತ ರಾಜ್ಯಮಟ್ಟದ ಅಭಿಯಾನ ಆಯೋಜನೆಗೊಳ್ಳುತ್ತಿದೆ. ಕೇರಳ ರಾಜ್ಯ ಕನ್ನಡ ಭಾಷಾ ಅಲ್ಪಸಂಖ್ಯಾತರ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕನ್ನಡ […]

News

18 ವರ್ಷಗಳ ಹಳೆಯ ಕಳವು ಪ್ರಕರಣ – ತಲೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಪೊಲೀಸರ ಬಲೆಗೆ

ಮಾನ್ಯ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ದೀರ್ಘಕಾಲದಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯೊಬ್ಬನನ್ನು ವೇಣೂರು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ. ಬಂಧಿತ ಆರೋಪಿಯನ್ನು 46 ವರ್ಷ ಪ್ರಾಯದ ಮಹಮ್ಮದ್ ಶರೀಪ್ ಎಂದು ಗುರುತಿಸಲಾಗಿದೆ. ಪ್ರಕರಣದ ಹಿನ್ನೆಲೆ: ವೇಣೂರು ಪೊಲೀಸ್ ಠಾಣೆಯಲ್ಲಿ 2008ರಲ್ಲಿ ದಾಖಲಾಗಿದ್ದ ಕಳವು ಪ್ರಕರಣಕ್ಕೆ (ಅಕ್ರ 71/2008, ಕಲಂ: 457, 380 ಐಪಿಸಿ) ಸಂಬಂಧಿಸಿದಂತೆ ಈತ ಆರೋಪಿಯಾಗಿದ್ದ. ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹಾಜರಾಗದೇ ನಿರಂತರವಾಗಿ ತಲೆಮರೆಸಿಕೊಂಡಿದ್ದರಿಂದ, ಮಾನ್ಯ ನ್ಯಾಯಾಲಯವು ಈತನ ವಿರುದ್ಧ ಸಿ.ಸಿ. ಸಂಖ್ಯೆ: 535/2016 ರಂತೆ ಜಾಮೀನು […]

You cannot copy content of this page