November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕಲ್ಲುರ್ಟಿ ದೈವ ಮಹಿಮೆಯ ‘ಸತ್ಯ ದೇವತೆ’ ಭಕ್ತಿಗೀತೆ ಬಿಡುಗಡೆ

ಗಂಗಾ ಪ್ರತಿಷ್ಠಾನ ಕುಮಾರಪುರ ಅರ್ಪಿಸಿರುವ ‘ನಮ್ಮ ಕೊಂಬಾರು – ಸಂಸ್ಕೃತಿಯ ತೇರು’ ಯೂಟ್ಯೂಬ್ ವಾಹಿನಿಯಲ್ಲಿ ಕಾರಣೀಕದ ಕಲ್ಲುರ್ಟಿ ದೈವದ ಕುರಿತ ಹೊಸ ಭಕ್ತಿಗೀತೆ ‘ಸತ್ಯ ದೇವತೆ’ ಫೆಬ್ರವರಿ 1ರಂದು ಭಾನುವಾರ ಬಿಡುಗಡೆಗೊಂಡಿದೆ. ಈಗಾಗಲೇ ಕಲ್ಲುರ್ಟಿ ಕಥನ ಹಾಗೂ ಸಿಂಗಾರೊದ ಸಿರಿ ದೃಶ್ಯಕಾವ್ಯಗಳಿಗೆ ಸಾಹಿತ್ಯ ನೀಡಿರುವ ಲೇಖಕ ಹಾಗೂ ಜಾನಪದ ಚಿಂತಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರು ಈ ಗೀತೆಯ ಸಾಹಿತ್ಯ ರಚಿಸಿದ್ದಾರೆ. ಕರಾವಳಿ ಭಾಗದಲ್ಲಿ ಶಕ್ತಿದೇವತೆಯಾಗಿ ಅಪಾರ ಭಕ್ತಿಯಿಂದ ಪೂಜಿಸಲ್ಪಡುವ ಶ್ರೀ ಕಲ್ಲುರ್ಟಿ ದೈವದ ಮಹಿಮೆಯನ್ನು […]

News

ಅಜ್ಜ–ಅಜ್ಜಿ ಮತ್ತು ಪೋಷಕರಿಗೆ ಗೌರವ ಸಲ್ಲಿಸಿದ ಬಜ್ಪೆಯ ಬೆಥನಿ ಶಾಲೆ

“ಅಜ್ಜ–ಅಜ್ಜಿ ನಮ್ಮ ಕುಟುಂಬದ ಬೇರುಗಳು; ಪೋಷಕರು ನಮ್ಮ ಜೀವನದ ದಾರಿದೀಪಗಳು” ಎಂಬ ಸಾರ್ಥಕ ಸಂದೇಶದೊಂದಿಗೆ ಬಜ್ಪೆಯ ಬೆಥನಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಅಜ್ಜ–ಅಜ್ಜಿ ದಿನ ಹಾಗೂ ಪೋಷಕರ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಅಜ್ಜ–ಅಜ್ಜಿ ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಕಳೆ ತುಂಬಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕ್ಲೆಟ್ಟಾ ಟ್ರೆಸ್ಸಿ ಡಿಕುನ್ಹಾ ಅವರು ಭಾಗವಹಿಸಿ, ಮಕ್ಕಳ ಜೀವನದಲ್ಲಿ ಅಜ್ಜ–ಅಜ್ಜಿ ಮತ್ತು ಪೋಷಕರು ವಹಿಸುವ ಮಹತ್ವದ ಪಾತ್ರವನ್ನು ವಿವರಿಸಿದರು. ಕುಟುಂಬ ಮೌಲ್ಯಗಳ ಅಗತ್ಯತೆ ಹಾಗೂ ಸಂಸ್ಕಾರದ […]

News

ತಂದೆಯಿಂದಲೇ 18 ವರ್ಷದ ಮಗಳ ಹತ್ಯೆ  

ಮಂಜೇಶ್ವರದಲ್ಲಿ ದಾರುಣ ಘಟನೆ – ಆರೋಪಿ ಬಂಧನ ತಂದೆಯೊಬ್ಬನು ತನ್ನ 18 ವರ್ಷದ ಮಗಳನ್ನೇ ಕಡಿದು ಬರ್ಬರವಾಗಿ ಹತ್ಯೆಗೈದ ದಾರುಣ ಘಟನೆ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಸಮೀಪದ ಕುಂಜತ್ತೂರು ತೂಮಿನಾಡು ಎಂಬಲ್ಲಿ ನಡೆದಿದೆ. ಕೌಟುಂಬಿಕ ಕಲಹವೇ ಈ ಕೃತ್ಯಕ್ಕೆ ಕಾರಣ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ತೂಮಿನಾಡಿನ 18 ವರ್ಷ ಪ್ರಾಯದ ಜುಮೈಲಾ ಕೊಲೆಗೀಡಾದ ಯುವತಿ. ಈ ಕೃತ್ಯ ನಡೆಸಿದ ಆರೋಪದಲ್ಲಿ ಆಕೆಯ ತಂದೆ ಉಮ್ಮರ್ ಫಾರೂಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ವೇಳೆ ಕಿರುಚಾಟದ ಶಬ್ದ ಕೇಳಿ […]

News

ಅಂಗಡಿ, ಹೋಟೆಲ್ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ – ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ.

ಎಲ್ಲಾ ರೀತಿಯ ಅಂಗಡಿ, ಕಂಪನಿ, ಕಚೇರಿ, ಹೋಟೆಲ್ ಸೇರಿದಂತೆ ವಾಣಿಜ್ಯ ಸಂಸ್ಥೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆ ಕಡ್ಡಾಯವಾಗಿ ಬಳಸಬೇಕು ಎಂದು ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಸೂಚಿಸಿದ್ದಾರೆ. ಅವರು ಇಂದು ಫೆಬ್ರವರಿ 2ರಂದು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತ್‌ಗಳು ವಾಣಿಜ್ಯ ಸಂಸ್ಥೆಗಳಿಗೆ ಟ್ರೇಡ್ ಲೈಸೆನ್ಸ್ ಮಂಜೂರು ಮಾಡುವಾಗಲೇ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಎಂಬ ಶರತ್ತನ್ನು ವಿಧಿಸಬೇಕು. ಈ […]

News

CRI Mangalore Celebrates Day of Consecrated Life with Youth, Fostering Dialogue and Discernment

The Conference of Religious India (CRI), Mangalore, celebrated the Day of Consecrated Life with the Youth on February 1, 2026, at the Loyola Auditorium, Saint Aloysius College, Mangalore. The programme brought together consecrated persons and young people in a spirit of prayer, reflection, and dialogue, centred on the theme “A Day of Consecrated Life with […]

News

ದೇಶದ ಯಾವುದೇ ಭಾಗದಲ್ಲೂ ಕ್ರೈಸ್ತರ ಮೇಲಿನ ದಾಳಿಗಳನ್ನು ಸಹಿಸಲಾಗದು

ರಾಷ್ಟ್ರಮಟ್ಟದ ಹೋರಾಟಕ್ಕೆ ಸಿದ್ಧತೆ : ಸ್ಟ್ಯಾನಿ ಪಿಂಟೋ ಬೆಂಗಳೂರು ದೇಶದ ಯಾವುದೇ ಭಾಗದಲ್ಲಿಯೂ ಕ್ರೈಸ್ತ ಸಮುದಾಯದ ಮೇಲೆ ನಡೆಯುತ್ತಿರುವ ದಾಳಿಗಳನ್ನು ನಾನು ಯಾವತ್ತಿಗೂ ಸಹಿಸುವುದಿಲ್ಲ. ಇಂತಹ ಅನ್ಯಾಯಗಳ ವಿರುದ್ಧ ದೇಶದಾದ್ಯಂತ ಪ್ರವಾಸ ಕೈಗೊಂಡು, ವಿವಿಧ ಕ್ರೈಸ್ತ ಸಂಘಟನೆಗಳ ಸಹಕಾರದೊಂದಿಗೆ ನಿರಂತರ ಹೋರಾಟ ನಡೆಸಲು ನಾನು ಸಿದ್ಧನಿದ್ದೇನೆ ಎಂದು ಕ್ರೈಸ್ತ ಸಂಘಟನೆಯ ಅಧ್ಯಕ್ಷ ಸ್ಟ್ಯಾನಿ ಪಿಂಟೋ (ಬೆಂಗಳೂರು) ಅವರು ಕರಾವಳಿ ಸುದ್ದಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದರು. ಇತ್ತೀಚಿನ ದಿನಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಕ್ರೈಸ್ತ ಧರ್ಮದ ಅನುಯಾಯಿಗಳ […]

News

ಪುತ್ತೂರು ಬಳಿ ಕಾರು ತಡೆಗೋಡೆಗೆ ಡಿಕ್ಕಿ – ಬೆಂಕಿಗೆ ಆಹುತಿಯಾದ ವಾಹನ

ಪ್ರಾಣಾಪಾಯದಿಂದ ತಪ್ಪಿದ ಪ್ರಯಾಣಿಕರು ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ನೀರಕಟ್ಟೆ ಬಳಿ ಕಾರೊಂದು ರಸ್ತೆ ಬದಿ ಕಾಂಕ್ರೀಟ್ ತಡೆಗೋಡೆಗೆ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡು ಸಂಪೂರ್ಣವಾಗಿ ಸುಟ್ಟು ಹೋಗಿರುವ ಘಟನೆ ಜನವರಿ 30ರಂದು ಶುಕ್ರವಾರ ಮಧ್ಯಾಹ್ನ ನಡೆದಿದೆ. ದಿನಾಂಕ 30.01.2026 ರಂದು ಮಧ್ಯಾಹ್ನ 1.30 ಗಂಟೆ ಸುಮಾರಿಗೆ KA-05-NN-8222 ಸಂಖ್ಯೆಯ ಕಾರನ್ನು ಬೆಂಗಳೂರಿನ ರಾಜಾಜಿನಗರದ 29 ವರ್ಷ ಪ್ರಾಯದ ಹರ್ಷಿತ್ ಜಿ. ಅವರು ಚಾಲನೆ ಮಾಡುತ್ತಿದ್ದರು. ಅಜಾಗರೂಕ ಹಾಗೂ ನಿರ್ಲಕ್ಷ್ಯದಿಂದ ವಾಹನ ಚಾಲನೆ ಮಾಡಿದ […]

News

ಪುತ್ತೂರಿನಲ್ಲಿ ನೂತನ ನ್ಯಾಯಾಲಯ ಸಂಕೀರ್ಣದ ಉದ್ಘಾಟನೆ

ನ್ಯಾಯಾಲಯಗಳು ಜನಸಾಮಾನ್ಯರ ನ್ಯಾಯದ ಆಶ್ರಯ ಕೇಂದ್ರಗಳು – ರಾಜ್ಯಪಾಲ ನ್ಯಾಯಮೂರ್ತಿ ಅಬ್ದುಲ್ ನಝೀರ್ ಜನಸಾಮಾನ್ಯರಿಗೆ ನ್ಯಾಯ ಒದಗಿಸುವುದೇ ನ್ಯಾಯಾಲಯಗಳ ಮೂಲ ಕರ್ತವ್ಯವಾಗಿದ್ದು, ನ್ಯಾಯಾಂಗ ವ್ಯವಸ್ಥೆ ಸಂವಿಧಾನಾತ್ಮಕ ಮೌಲ್ಯಗಳ ರಕ್ಷಣೆಗೆ ಬದ್ಧವಾಗಿದೆ ಎಂದು ಆಂಧ್ರಪ್ರದೇಶದ ರಾಜ್ಯಪಾಲ ನ್ಯಾಯಮೂರ್ತಿ ಅಬ್ದುಲ್ ನಝೀರ್ ಹೇಳಿದರು. ಅವರು ಜನವರಿ 31ರಂದು ಶನಿವಾರ ಪುತ್ತೂರಿನಲ್ಲಿ ನೂತನ ನ್ಯಾಯಾಲಯ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದರು. ನ್ಯಾಯಾಲಯವು ಕಾನೂನಿನ ಆಡಳಿತದ ಸಂಕೇತವಾಗಿದ್ದು, ಸಮಾಜದಲ್ಲಿ ಅನ್ಯಾಯದ ವಿರುದ್ಧ ಪ್ರತಿಯೊಬ್ಬರಿಗೂ ನ್ಯಾಯ ಸಿಗುವಂತೆ ಕಾರ್ಯನಿರ್ವಹಿಸುತ್ತದೆ ಎಂದರು. ಜನರಿಗೆ ತ್ವರಿತ ಹಾಗೂ ಸುಲಭವಾಗಿ ನ್ಯಾಯ […]

News

ಚಿರಾಂತನ ಚಾರಿಟೇಬಲ್ ಟ್ರಸ್ಟ್ ಉಕ್ಕುಡದ ವೃದ್ಧಾಶ್ರಮ ಕಟ್ಟಡಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ₹10 ಲಕ್ಷ ಅನುದಾನ – ಮಂಜೂರಾತಿ ಪತ್ರ ಹಸ್ತಾಂತರ

ಚಿರಾಂತನ ಚಾರಿಟೇಬಲ್ ಟ್ರಸ್ಟ್, ಉಕ್ಕುಡ ವತಿಯಿಂದ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ವೃದ್ಧಾಶ್ರಮ ಕಟ್ಟಡಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂಪಾಯಿ 10 ಲಕ್ಷ ಮೊತ್ತದ ಅನುದಾನ ಮಂಜೂರಾಗಿದ್ದು, ಅದರ ಮಂಜೂರಾತಿ ಪತ್ರವನ್ನು ಜನವರಿ 29ರಂದು ಗುರುವಾರ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಮಂಜೂರಾತಿ ಪತ್ರವನ್ನು ವಿಟ್ಲ ಜೈನ ಬಸದಿ ಅಧ್ಯಕ್ಷರಾದ ಜೇತೇಶ್ ಜೈನ್ ಅವರು ಟ್ರಸ್ಟ್‌ಗೆ ಹಸ್ತಾಂತರ ಮಾಡಿದರು. ಕಾರ್ಯಕ್ರಮದಲ್ಲಿ ಚಿರಾಂತನ ಸೇವಾ ಟ್ರಸ್ಟ್‌ನ ಅಧ್ಯಕ್ಷರಾದ ತೇಜಸ್ವಿ ಶಂಕರ್ ಜೂನಿಯರ್, ವಿಟ್ಲ ವಲಯದ ಜನಜಾಗೃತಿ ಅಧ್ಯಕ್ಷರಾದ ಕೃಷ್ಣಯ್ಯ ಬಳ್ಳಾಳ್, ಶ್ರೀ ಕ್ಷೇತ್ರ […]

News

ಸಾಧಕ ಶಿಕ್ಷಕಿ ಸಂಗೀತ ಶರ್ಮ ಪಿ.ಜಿ. ಅವರು “ಗಿರಿಜಾ ರತ್ನ” ರಾಜ್ಯ ಪ್ರಶಸ್ತಿಗೆ ಆಯ್ಕೆ

ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಮಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸಂಗೀತ ಶರ್ಮ ಪಿ.ಜಿ. ಅವರು ವಾಸ್ತಲ್ಯ ಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ರಿ.), ಬಾಳ್ತಿಲ ವತಿಯಿಂದ ಸಾಧಕ ಮಹಿಳೆಯರಿಗೆ ನೀಡಲಾಗುವ ಪ್ರತಿಷ್ಠಿತ “ಗಿರಿಜಾ ರತ್ನ” ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಶಾಲಾ ಶಿಕ್ಷಣ ಹಾಗೂ ಶಾಲೆಯ ಭೌತಿಕ ಅಭಿವೃದ್ಧಿಯಲ್ಲಿ ಅವರು ಸಲ್ಲಿಸಿದ ವಿಶಿಷ್ಟ ಸೇವೆಯನ್ನು ಪರಿಗಣಿಸಿ ಈ ಗೌರವ ಲಭಿಸಿದೆ. ಸಂಗೀತ ಶರ್ಮ ಪಿ.ಜಿ. ಅವರು ಈಗಾಗಲೇ “ಜಿಲ್ಲಾ ಮಟ್ಟದ ಉತ್ತಮ […]

You cannot copy content of this page