November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

AI ಯುಗದಲ್ಲಿ ಶಿಕ್ಷಣಕ್ಕೆ ಮಹತ್ವದ ರಿಸೆಟ್ ಅಗತ್ಯ – ಮಂಗಳೂರಿನಲ್ಲಿ ಸ್ಪೇನ್ ರಾಯಭಾರಿ ಜುವಾನ್ ಮಾರ್ಚ್ ಪುಜೋಲ್ ಕರೆ

‘ದ ಗ್ರೇಟ್ ರಿಸೆಟ್ [CTRL+ALT+HUMAN]’ ಕೃತಿ ಲೋಕಾರ್ಪಣೆ ಕೃತಕ ಬುದ್ಧಿಮತ್ತೆ (AI), ಶಿಕ್ಷಣ ವ್ಯವಸ್ಥೆ ಮತ್ತು ಜಾಗತಿಕ ರಾಜತಾಂತ್ರಿಕತೆಯ ಭವಿಷ್ಯವನ್ನು ಒಂದೇ ವೇದಿಕೆಯಲ್ಲಿ ಚರ್ಚಿಸಿದ ವಿಶಿಷ್ಟ ಸಮಾರಂಭ ಫೆಬ್ರವರಿ 3ರಂದು ಸೋಮವಾರ ಮಂಗಳೂರಿನ ತಾಜ್ ವಿವಂತಾ ಹೋಟೆಲ್‌ನ ಸೆನೆಟ್ ಹಾಲ್‌ನಲ್ಲಿ ನಡೆಯಿತು. ಭಾರತಕ್ಕೆ ಸ್ಪೇನ್ ದೇಶದ ರಾಯಭಾರಿಯಾದ ಗೌರವಾನ್ವಿತ ಜುವಾನ್ ಆಂಟೋನಿಯೊ ಮಾರ್ಚ್ ಪುಜೋಲ್ ಅವರು ತಮ್ಮ ನೂತನ ಕೃತಿ ‘ದ ಗ್ರೇಟ್ ರಿಸೆಟ್ [CTRL+ALT+HUMAN]’ ಅನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಿದರು. ಕರಾವಳಿ ನಗರಿಗೆ ನೀಡಿದ […]

News

ಬೆಳ್ತಂಗಡಿ ಒಡಿಲ್ನಾಳ ಸುಮಂತ್ ಸಾವು ಪ್ರಕರಣ – ಹತ್ಯೆ ಕಲಂ ಸೇರಿಸಿ ತನಿಖೆ ತೀವ್ರ

ಸುಳ್ಳು ಸುದ್ದಿ ಹಾಗೂ ವದಂತಿಗಳನ್ನು ಹರಡುವವರ ವಿರುದ್ಧ ಕಾನೂನು ಕ್ರಮ – ಜಿಲ್ಲಾ ಎಸ್.ಪಿ. ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಒಡಿಲ್ನಾಳ ಗ್ರಾಮದ ಸಂಬೋಳ್ಯದಲ್ಲಿ ದಿನಾಂಕ 14-01-2026 ರಂದು ನಡೆದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ, ಈ ಮೊದಲು ಹೊರಡಿಸಲಾಗಿದ್ದ ಪತ್ರಿಕಾ ಪ್ರಕಟಣೆಯಲ್ಲಿ ಮೃತ್ಯುವಿನ ಕಾರಣ ಮುಳುಗು (drowning) ಎಂದು ತಿಳಿಸಲಾಗಿತ್ತು. ಆದರೆ ಮೃತರ ತಲೆಯ ಭಾಗದಲ್ಲಿ ಗಾಯ ಕಂಡುಬಂದ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ಸಂಶಯ ಮೂಡಿದ್ದು, ಸಂಪೂರ್ಣ ಹಾಗೂ ಸಮಗ್ರ ತನಿಖೆ ನಡೆಸುವ ಉದ್ದೇಶದಿಂದ ಇದೀಗ ಪ್ರಕರಣಕ್ಕೆ […]

News

ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಫೆಬ್ರವರಿ 12ರಂದು ಅಖಿಲ ಭಾರತ ಮಹಾಮುಷ್ಕರ: ರೈತ–ಕಾರ್ಮಿಕರ ಎಚ್ಚರಿಕೆ

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕಾರ್ಮಿಕ ವಿರೋಧಿ ನೀತಿಗಳು, 29 ಪ್ರಮುಖ ಕಾರ್ಮಿಕ ಕಾನೂನುಗಳ ರದ್ದತಿ, ನಾಲ್ಕು ಕಾರ್ಮಿಕ ಸಂಹಿತೆಗಳು, ರೈತ ವಿರೋಧಿ ಬೀಜ ಮಸೂದೆ, ವಿದ್ಯುತ್ ತಿದ್ದುಪಡಿ ಮಸೂದೆ ಹಾಗೂ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಗೆ ತಂದಿರುವ ತಿದ್ದುಪಡಿಗಳ ವಿರುದ್ಧ ಫೆಬ್ರವರಿ 12ರಂದು ರೈತ–ಕಾರ್ಮಿಕರ ನೇತೃತ್ವದಲ್ಲಿ ಅಖಿಲ ಭಾರತ ಮಹಾಮುಷ್ಕರ ನಡೆಯಲಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ತಿಳಿಸಿದ್ದಾರೆ. ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2014ರಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ […]

News

ಉಳ್ಳಾಲ ಠಾಣೆಯ ಎನ್‌ಡಿಪಿಎಸ್ ಪ್ರಕರಣ

14 ವರ್ಷಗಳ ಬಳಿಕ ತಲೆಮಾರಿಕೊಂಡಿದ್ದ ಆರೋಪಿ ದಸ್ತಗಿರಿ ಉಳ್ಳಾಲ ಪೊಲೀಸ್ ಠಾಣೆಯ ಮೊ.ನಂ. 312/2011, ಕಲಂ 8(c)(ii) ಓದುಗ 20(b) ಎನ್‌ಡಿಪಿಎಸ್ ಕಾಯ್ದೆಯಡಿ ದಾಖಲಾಗಿದ್ದ ಹಾಗೂ ಮಾನ್ಯ ಜೆಎಂಎಫ್‌ಸಿ–II ನ್ಯಾಯಾಲಯದ ಸಿಸಿ ನಂ. 1757/2013 ಪ್ರಕರಣದಲ್ಲಿ ತಲೆಮಾರಿಕೊಂಡಿದ್ದ ಆರೋಪಿ ಮಂಗಳೂರಿನ ಉಳ್ಳಾಲದ ಮುಕ್ಕಚೇರಿ, ತೋಯಿಬ್ ಮಸೀದಿ ಎದುರುಗಡೆಯ ಶಾಜ್ಮೀನ್ ಅಪಾರ್ಟ್ಮೆಂಟ್ ರೂಂ ನಂ. 07, ರ ನಿವಾಸಿ  ಮೊಹಮ್ಮದ್ ಸಂಶೀರ್ ನನ್ನು ಪೊಲೀಸರು ಪತ್ತೆಹಚ್ಚಿ ಈ ದಿನ ದಸ್ತಗಿರಿ ಮಾಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಆರೋಪಿತನು ದೀರ್ಘಕಾಲದಿಂದ […]

News

World Cancer Day Commemorated at Father Muller with Message of Unity and Hope  

World Cancer Day was commemorated at Father Muller Medical College Hospital (FMMCH) on February 4 with a series of meaningful initiatives aimed at raising awareness, promoting prevention, and standing in solidarity with cancer patients and survivors. Observed globally, World Cancer Day emphasizes the importance of early detection, timely treatment, and collective responsibility in the fight […]

News

ಕನ್ನಡ ಗ್ರಾಮದಲ್ಲಿ ‘ಕಾಸರಗೋಡು ಗೋ-ಕುಟೀರ’ ನಿರ್ಮಾಣಕ್ಕೆ ಚಾಲನೆ

ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರಿಂದ ಭೂಮಿಪೂಜೆ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕನ್ನಡ ಗ್ರಾಮ, ಕಾಸರಗೋಡು ಇದರ 35ನೇ ಸಂಸ್ಥಾಪನಾ ವರ್ಷಾಚರಣೆ ಹಾಗೂ ಕನ್ನಡ ಗ್ರಾಮದ ಸಂಸ್ಥಾಪಕ ಶಿವರಾಮ ಕಾಸರಗೋಡು ಅವರ 60ನೇ ಜನ್ಮ ವರ್ಷಾಚರಣೆಯನ್ನು ಗೋಸೇವೆಯ ಮೂಲಕ ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ‘ಕಾಸರಗೋಡು ಗೋ-ಕುಟೀರ’ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. 2025ರ ನವೆಂಬರ್ 4ರಂದು ಕಾಸರಗೋಡು ಕನ್ನಡ ಗ್ರಾಮದ ಆವರಣದಲ್ಲಿ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಭೂಮಿಪೂಜೆ ನೆರವೇರಿಸಿ ಗೋ-ಕುಟೀರ […]

News

ತ್ರಾಸಿ ರಾಜು ದೇವಾಡಿಗ ಅಗಲಿಕೆಯಿಂದ ಕಾಂಗ್ರೆಸ್ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟ – MLC ಮಂಜುನಾಥ ಭಂಡಾರಿ

ಉಡುಪಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಸಮಾಜಸೇವಕ ತ್ರಾಸಿ ರಾಜು ದೇವಾಡಿಗ ಅವರ ನಿಧನವು ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲದೆ ಇಡೀ ಸಮಾಜಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ  MLC  ಮಂಜುನಾಥ ಭಂಡಾರಿ ಅವರು ಕಂಬನಿ ಮಿಡಿದಿದ್ದಾರೆ. ತ್ರಾಸಿ ರಾಜು ದೇವಾಡಿಗ ಅವರು ಜನಸೇವೆ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಳು ಅಗ್ರಗಣ್ಯವಾಗಿದ್ದು, ಪಕ್ಷ ಸಂಘಟನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಆಸ್ಕರ್ ಫೆರ್ನಾಂಡಿಸ್ ಅವರು ಲೋಕಸಭಾ ಚುನಾವಣೆಗೆ […]

News

7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಕೊಲ್ಲಂನಲ್ಲಿ ಕಂಕನಾಡಿ ನಗರ ಪೊಲೀಸ್ ಕಾರ್ಯಾಚರಣೆ ಕಂಕನಾಡಿ ನಗರ ಪೊಲೀಸ್ ಠಾಣೆ ಅ.ಕ್ರ. 69/2019, ಐಪಿಸಿ ಸೆ. 409, 420, 507 ಹಾಗೂ 34ರಡಿ ದಾಖಲಾಗಿದ್ದ ಪ್ರಕರಣದಲ್ಲಿ ಕಳೆದ 7 ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ದಾಖಲಾದ ನಂತರದಿಂದಲೇ ಆರೋಪಿಯು ನ್ಯಾಯಾಲಯದ ಪ್ರಕ್ರಿಯೆಗೆ ಸಹಕರಿಸದೆ ಪರಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಲಯವು ದಸ್ತಗಿರಿ ವಾರಂಟ್ ಹೊರಡಿಸಿತ್ತು. ಆರೋಪಿಯು ದಸ್ತಗಿರಿಗೆ ಸಿಗದೆ ತಲೆಮರೆಸಿಕೊಂಡಿದ್ದರಿಂದ absconding charge sheet ಕೂಡ ದಾಖಲಿಸಲಾಗಿತ್ತು. […]

News

ನರೇಗಾ ಬಚಾವೋ ಸಂಗ್ರಾಮ – ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಕನ್ಯಾನದಲ್ಲಿ ಕಾಂಗ್ರೆಸ್‌ನಿಂದ ಬ್ರಹತ್ ಪ್ರತಿಭಟನೆ

ಕೇಂದ್ರ ಸರ್ಕಾರ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ)ಯ ಹೆಸರು ಹಾಗೂ ಅದರ ಮೂಲ ಸ್ವರೂಪವನ್ನು ಬದಲಾಯಿಸಿರುವ ಕ್ರಮವನ್ನು ಖಂಡಿಸಿ, ಕನ್ಯಾನ ವಲಯ ಕಾಂಗ್ರೆಸ್ ಸಮಿತಿಯ ವತಿಯಿಂದ “ನರೇಗಾ ಬಚಾವೋ ಸಂಗ್ರಾಮ” ದಡಿ ಕನ್ಯಾನ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಇಂದು ಬ್ರಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಅಬ್ದುಲ್ ಮಜೀದ್ ಕನ್ಯಾನ ಸ್ವಾಗತಿಸಿ ಮಾತನಾಡಿದರು. ನಂತರ ಮುಖ್ಯ ಭಾಷಣ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಜಿಲ್ಲಾ ಪಂಚಾಯತ್ […]

You cannot copy content of this page