November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

Saint Raymond Convent, Vamanjoor Celebrates Golden Jubilee of Faithful Service

Saint Raymond Convent, Vamanjoor, joyfully celebrated its Golden Jubilee, marking 50 years of dedicated service in faith, education and healing. The milestone commemorated the faithful presence and mission of the Congregation of the Sisters of the Little Flower of Bethany, Mangaluru, whose charism of compassionate love, simplicity and selfless service has touched countless lives. Founded […]

News

ಉಡುಪಿ ಧರ್ಮಕ್ಷೇತ್ರಕ್ಕೆ ನೂತನ ಬಿಷಪ್ ಆಗಿ ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜ ನೇಮಕ

ಉಡುಪಿ ಧರ್ಮಕ್ಷೇತ್ರದ ನೂತನ ಬಿಷಪ್ ಆಗಿ ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜ ಅವರನ್ನು ಪೋಪ್ ಲಿಯೋ XIV ನೇಮಕ ಮಾಡಿದ್ದಾರೆ. ಪ್ರಸ್ತುತ ಅವರು ಶಿರ್ವಾದ ಆರೋಗ್ಯ ಮಾತೆ ದೇವಾಲಯದ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ನೇಮಕಾತಿಯನ್ನು ಇಂದು ಜನವರಿ 31ರಂದು ಶನಿವಾರ ರೋಮ್‌ನಲ್ಲಿ ಮಧ್ಯಾಹ್ನ 12 ಗಂಟೆಗೆ (ಭಾರತೀಯ ಕಾಲಮಾನ ಸಂಜೆ 4.30) ಅಧಿಕೃತವಾಗಿ ಪ್ರಕಟಿಸಲಾಗಿದ್ದು, ಅದೇ ವೇಳೆ ಉಡುಪಿ ಕಲ್ಯಾಣ್ ಪುರದ ಮಿಲಾಗ್ರಿಸ್ ಮಾತೆ ದೇವಾಲಯದಲ್ಲಿಯೂ ಘೋಷಿಸಲಾಯಿತು. ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜ ಅವರು 1962 […]

News

ಅಡ್ಯಾರ್ ಗ್ರಾಮ ಪಂಚಾಯತ್ ಮಾನವೀಯ ಕಾರ್ಯ

ಅಡ್ಯಾರ್ ನ ಲ್ಯಾಂಡ್ ಫ್ಲೇವರ್ ಬೊಂಡ ಫ್ಯಾಕ್ಟರಿ ಸಹಯೋಗದಲ್ಲಿ 25 ಉಚಿತ ಹೊಲಿಗೆ ಯಂತ್ರಗಳ ವಿತರಣೆ ಲ್ಯಾಂಡ್ ಫ್ಲೇವರ್ ಬೊಂಡ ಫ್ಯಾಕ್ಟರಿ ಅಡ್ಯಾರ್ ಹಾಗೂ ಅಡ್ಯಾರ್ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಅರ್ಹ ಫಲಾನುಭವಿಗಳಿಗೆ ಉಚಿತವಾಗಿ 25 ಹೊಲಿಗೆ ಯಂತ್ರಗಳನ್ನು ವಿತರಿಸುವ ಕಾರ್ಯಕ್ರಮ ಇಂದು ಜನವರಿ 31ರಂದು ಶನಿವಾರ ಅಡ್ಯಾರ್‌ನ ಯಶಸ್ವಿ ಹಾಲ್‌ನಲ್ಲಿ ನಡೆಯಿತು.್ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಲಾಯಿತು. ನಂತರ ಮಾತನಾಡಿದ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕುಮಾರ್ ಹೊಳ್ಳ ಅವರು, “ಭಾರತೀಯ ಸಂಸ್ಕೃತಿಯ ಮೂಲ […]

News

ರಿಶೆಲ್ ಡಿಸೋಜ ಸಾವಿಗೆ ನ್ಯಾಯದ ಹೆಜ್ಜೆ – ತಿಂಗಳುಗಳ ಪರಾರಿಯ ಬಳಿಕ ಚಿರಾಗ್ ಬಂಧನ

AICU ರಾಜಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಹಾಗೂ ಕ್ರೈಸ್ತ ಸಂಘಟನಾ ಅಧ್ಯಕ್ಷ ಸ್ಟ್ಯಾನಿ ಪಿಂಟೊ ಅವರ ನಿರಂತರ ಹೋರಾಟದ ಒತ್ತಡಕ್ಕೆ ಮಣಿದ ಪೊಲೀಸ್ ಯಂತ್ರ ಹೆಚ್ಚಿನ ವಿಚಾರಣೆಗಾಗಿ ಆರೋಪಿ ಪೊಲೀಸ್ ಕಸ್ಟಡಿಗೆ ಕದ್ರಾದ ಯುವತಿ ರಿಶೆಲ್ ಡಿಸೋಜ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಆರೋಪಿತನಾಗಿದ್ದ ಚಿರಾಗ್ ಕೊನೆಗೂ ಬಂಧನಕ್ಕೊಳಗಾಗಿದ್ದಾನೆ. ತಿಂಗಳುಗಳಿಂದ ಪೊಲೀಸರ ಕೈಗೆ ಸಿಗದೆ ಬೆಂಗಳೂರು, ಪುಣೆ, ಮಹಾರಾಷ್ಟ್ರ ಹಾಗೂ ಹೈದರಾಬಾದ್‌ನಲ್ಲಿ ಪರಾರಿಯಾಗಿದ್ದ ಆರೋಪಿಯನ್ನು ಚೆನೈನಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗೆ ಪೊಲೀಸ್ ವಶಕ್ಕೆ ಪಡೆಯಲಾಗಿದೆ ಎಂದು […]

News

ಫೆಬ್ರವರಿ 1ರಂದು ಬಂಟ್ವಾಳದಲ್ಲಿ ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ – ವಿಶ್ರಾಂತ ನೌಕರರು, ಸಾಧಕರಿಗೆ ಅಭಿನಂದನೆ

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬಂಟ್ವಾಳ ತಾಲೂಕು ಶಾಖೆಯ 2023–24 ಹಾಗೂ 2024–25ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ವಿಶ್ರಾಂತ ಸರಕಾರಿ ನೌಕರರು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನೌಕರರಿಗೆ ಅಭಿನಂದನಾ ಸಮಾರಂಭವು ಫೆಬ್ರವರಿ 1ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಬಿ.ಸಿ. ರೋಡಿನ ಸರಕಾರಿ ನೌಕರರ ಸಭಾ ಭವನದಲ್ಲಿ ನಡೆಯಲಿದೆ. ಸಮಾರಂಭವನ್ನು ಬಂಟ್ವಾಳ ಶಾಸಕ ಯು. ರಾಜೇಶ್ ನಾಯಕ್ ಉದ್ಘಾಟಿಸಲಿದ್ದು, ಮಾಜಿ ಸಚಿವ ಬಿ. ರಮಾನಾಥ ರೈ ಗಣ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕರ್ನಾಟಕ […]

News

ಬಸ್ ನಿಲ್ದಾಣಗಳಲ್ಲಿ ಸರಣಿ ಬ್ಯಾಗ್ ಕಳ್ಳತನ – ಅಂತರ್‌ಜಿಲ್ಲಾ ಕಳ್ಳನ ಬಂಧನ

₹6.47 ಲಕ್ಷ ಮೌಲ್ಯದ ಚಿನ್ನಾಭರಣ ವಶ ಬಸ್ ನಿಲ್ದಾಣಗಳಲ್ಲಿ ಮಹಿಳೆಯರು ಹಾಗೂ ಹಿರಿಯ ನಾಗರಿಕರನ್ನು ಗುರಿಯಾಗಿಸಿಕೊಂಡು ಬ್ಯಾಗ್ ಕಳ್ಳತನ ಮಾಡುತ್ತಿದ್ದ ಅಂತರ್‌ಜಿಲ್ಲಾ ಸರಣಿ ಕಳ್ಳನನ್ನು ಮಂಗಳೂರು ಬರ್ಕೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಬಿಜೈ KSRTC ಬಸ್ ನಿಲ್ದಾಣದಲ್ಲಿ ದಿನಾಂಕ 23-01-2026 ರಂದು ಸಂಜೆ 7 ಗಂಟೆಯ ಸುಮಾರಿಗೆ, ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಇಬ್ಬರು ಮಹಿಳೆಯರು ಹಾಗೂ ಹಿರಿಯ ನಾಗರಿಕರು ಕುಳಿತಿದ್ದ ಬಸ್ಸಿನಿಂದ ಸುಮಾರು 45 ಗ್ರಾಂ ಚಿನ್ನಾಭರಣ ಮತ್ತು ₹20,000 ನಗದು ಹೊಂದಿದ್ದ ಟ್ರಾಲಿ […]

News

ಐಟಿ ದಾಳಿ ವೇಳೆ ಕಚೇರಿಯಲ್ಲೇ ಗುಂಡು ಹಾರಿಸಿಕೊಂಡ ಉದ್ಯಮಿ ಸಿಜೆ ರಾಯ್‌ – ಬೆಂಗಳೂರನ್ನು ಬೆಚ್ಚಿಬೀಳಿಸಿದ ದುರಂತ

ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಸಾಮ್ರಾಜ್ಯದ ಒಡೆಯ ಇನ್ನಿಲ್ಲ ಕೋಟ್ಯಂತರ ರೂಪಾಯಿ ಆಸ್ತಿ, ಐಷಾರಾಮಿ ಜೀವನ, ದೇಶ–ವಿದೇಶಗಳಲ್ಲಿ ವ್ಯಾಪಾರ ಸಾಮ್ರಾಜ್ಯ ಕಟ್ಟಿದ್ದ ಖ್ಯಾತ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಡಾ. ಸಿಜೆ ರಾಯ್‌ ದುರಂತ ಅಂತ್ಯ ಕಂಡಿದ್ದಾರೆ. ಬೆಂಗಳೂರಿನ ರಿಚ್ಮಂಡ್ ಸರ್ಕಲ್ ಬಳಿಯ ಕಾನ್ಫಿಡೆಂಟ್ ಗ್ರೂಪ್ ಕಚೇರಿಯಲ್ಲಿ ನಡೆದ ಐಟಿ ದಾಳಿಯ ಸಂದರ್ಭದಲ್ಲೇ ಅವರು ತಮಗೆ ತಾವೇ ಗುಂಡು ಹಾರಿಸಿಕೊಂಡ ಘಟನೆ ರಾಜಧಾನಿಯನ್ನು ಬೆಚ್ಚಿಬೀಳಿಸಿದೆ. ಲಭ್ಯವಾದ ಮಾಹಿತಿಯಂತೆ, ಐಟಿ ಅಧಿಕಾರಿಗಳಿಗೆ ದಾಖಲೆ ತರುತ್ತೇನೆ ಎಂದು ಕಚೇರಿಯೊಳಗೆ ತೆರಳಿದ್ದ […]

News

ಅಂಗನವಾಡಿ ಶಿಕ್ಷಕಿಯರಿಗೆ ವಿಕಲಚೇತನರ ಕುರಿತು ಅರಿವು ಕಾರ್ಯಕ್ರಮ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ – ಮಂಗಳೂರು ನಗರ ಪದವು ಇವರ ಆಶ್ರಯದಲ್ಲಿ ಶಕ್ತಿನಗರ ಅಂಗನವಾಡಿ ಕೇಂದ್ರದಲ್ಲಿ ವಿಕಲಚೇತನರ ಕುರಿತು ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಯಿತು. ವೆರೋನಿಕಾ ವಿಹಾರ್ ಘಟಕ (ವಿಶೇಷ ಚೇತನ ಹಿರಿಯ ನಾಗರಿಕರ ಪುನರ್ವಸತಿ ನಿಲಯ) ಹಾಗೂ ಕಾರ್ಮೆಲ್ ಸೇವಾ ಟ್ರಸ್ಟ್, ಮಂಗಳೂರು ಇವರ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು. ಜನವರಿ 27ರಂದು ಮಂಗಳವಾರ ಶಕ್ತಿನಗರ ವಲಯದ 28 ಮಂದಿ ಹಾಗೂ ಜನವರಿ 28ರಂದು ಬುಧವಾರ ಕೊಟ್ಟಾರ ಚೌಕಿ ವಲಯದ […]

News

ಸೈಂಟ್ ಅಲೋಶಿಯಸ್ ವಿವಿಯಲ್ಲಿ ‘ಸ್ವರಾಂಜಲಿ’ ಸಂಗೀತ ಕಚೇರಿ

ಫೆಬ್ರವರಿ 1ರಂದು ಆಧ್ಯಾತ್ಮಿಕ–ಸಮಕಾಲೀನ ಸಂಗೀತ ಸಂಭ್ರಮ ಮಂಗಳೂರಿನ ಸೈಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದಲ್ಲಿ ಫೆಬ್ರವರಿ 1ರಂದು ಭಾನುವಾರ ಸಂಜೆ 5 ಗಂಟೆಗೆ ವಿಶ್ವವಿದ್ಯಾಲಯದ ಎಲ್.ಎಫ್. ರಸ್ಕಿನ್ಹಾ ಸಭಾಂಗಣದಲ್ಲಿ ‘ಸ್ವರಾಂಜಲಿ’ — ಆಧ್ಯಾತ್ಮಿಕ ಮತ್ತು ಸಮಕಾಲೀನ ಸಂಗೀತದ ಗಾಯನ ಹಾಗೂ ವಾದ್ಯವೃಂದದ ಭವ್ಯ ಸಂಗೀತ ಕಚೇರಿ ಆಯೋಜಿಸಲಾಗುತ್ತಿದೆ. ಕಾರ್ಯಕ್ರಮದ ಪೋಷಕರಾಗಿ ಸಂತ ಅಲೋಶಿಯಸ್ ಸಂಸ್ಥೆಗಳ ರೆಕ್ಟರ್ ರೆ. ಫಾ. ಮೆಲ್ವಿನ್ ಜೋಸೆಫ್ ಪಿಂಟೊ, ಎಸ್.ಜೆ. ಹಾಗೂ ಅಲೋಶಿಯಸ್ ವಿಶ್ವವಿದ್ಯಾಲಯದ ಕುಲಪತಿ ವಂದನೀಯ ಡಾ. ಪ್ರವೀಣ್ ಮಾರ್ಟಿಸ್, ಎಸ್.ಜೆ. ಉಪಸ್ಥಿತಲಿರುವರು. […]

News

ಅರಣ್ಯ ಇಲಾಖೆಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ಚಿಣ್ಣರ ವನದರ್ಶನ’ ಪ್ರವಾಸ

ಕರ್ನಾಟಕ ಅರಣ್ಯ ಇಲಾಖೆ ವತಿಯಿಂದ ಜನವರಿ 27 ಮತ್ತು 28ರಂದು ಕರ್ನಾಟಕ ಪಬ್ಲಿಕ್ ಸ್ಕೂಲ್, ಪುಂಜಾಲಕಟ್ಟೆ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿ–ವಿದ್ಯಾರ್ಥಿನಿಯರಿಗೆ ‘ಚಿಣ್ಣರ ವನದರ್ಶನ’ ಪ್ರವಾಸವನ್ನು ಆಯೋಜಿಸಲಾಗಿತ್ತು. ಪ್ರವಾಸದ ಭಾಗವಾಗಿ ವಿದ್ಯಾರ್ಥಿಗಳನ್ನು ಮೂಡುಬಿದಿರೆಯ ಕಡಲಕೆರೆ, ಸಾಮಾಜಿಕ ಅರಣ್ಯ ವಿಭಾಗದ ಸಸ್ಯಕ್ಷೇತ್ರ, ಹೆಬ್ರಿ ವಲಯದ ಕೇಂದ್ರ ಮರಮುಟ್ಟು ಸಂಗ್ರಹಾಲಯ, ಸಾಲುಮರದ ತಿಮ್ಮಕ್ಕ ಉದ್ಯಾವನ (ಹೆಬ್ರಿ) ಹಾಗೂ ಕೂಡ್ಲು ಜಲಪಾತಗಳಿಗೆ ಕರೆದುಕೊಂಡು ಹೋಗಲಾಯಿತು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಕಾರ್ಯವಿಧಾನಗಳು, ಅರಣ್ಯ ಸಂರಕ್ಷಣೆ ಹಾಗೂ ಅರಣ್ಯ ಪ್ರದೇಶಗಳ ಮಹತ್ವದ ಕುರಿತು […]

You cannot copy content of this page