November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮೆಡಿಕಲ್ ಪಿಜಿ ವಿದ್ಯಾರ್ಥಿನಿ ಆತ್ಮಹತ್ಯೆ – ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡು ಜೀವಾಂತ್ಯ

ಮೆಡಿಕಲ್ ಪಿಜಿ ವಿದ್ಯಾರ್ಥಿನಿಯೋರ್ವಳು ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಧಾರವಾಡದಲ್ಲಿ ಸಂಭವಿಸಿದೆ. ಧಾರವಾಡದ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯ ಸೈಕಿಯಾಟ್ರಿಕ್ ಪಿಜಿ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿನಿ ಶಿವಮೊಗ್ಗ ಮೂಲದ ಡಾ. ಪ್ರಜ್ಞಾ ಪಾಲೇಗರ್ ಮೃತರಾಗಿದ್ದಾರೆ. ಡಾ. ಪ್ರಜ್ಞಾ ಅವರು ಕೇವಲ ಎರಡು ವಾರಗಳ ಹಿಂದಷ್ಟೇ ಪಿಜಿ ತರಬೇತಿಗಾಗಿ ಧಾರವಾಡಕ್ಕೆ ಆಗಮಿಸಿದ್ದರು. ನಿನ್ನೆ ಆಕೆಯ ಪೋಷಕರು ಸಂಸ್ಥೆಗೆ ಬಂದು ಪುತ್ರಿಯೊಂದಿಗೆ ಮಾತನಾಡಿಕೊಂಡು ಹಿಂತಿರುಗಿದ್ದರೆಂದು ತಿಳಿದುಬಂದಿದೆ. ಪೋಷಕರು ಹೊರಟ ಕೆಲವೇ ಗಂಟೆಗಳಲ್ಲಿ ಡಾ. […]

News

ಕುಳಾಯಿ ದೈವಸ್ಥಾನ ಮನೆ ಕಳ್ಳತನ ಪ್ರಕರಣ ಭೇದಿಸಿದ ಸುರತ್ಕಲ್ ಪೊಲೀಸರು

ರೂಪಾಯಿ 1.95 ಲಕ್ಷ ಮೌಲ್ಯದ ಪೂಜಾ ಸಾಮಗ್ರಿ ವಶ, ಇಬ್ಬರ ಬಂಧನ ಕುಳಾಯಿ ಗ್ರಾಮದ ಖಾಲಿ ಮನೆಯಲ್ಲಿದ್ದ ದೈವಗಳ ಮೂರ್ತಿಗಳು ಹಾಗೂ ಪೂಜಾ ಪರಿಕರಗಳನ್ನು ಕಳವು ಮಾಡಿದ್ದ ಪ್ರಕರಣವನ್ನು ಸುರತ್ಕಲ್ ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿತರನ್ನು ಬಂಧಿಸಿ ಸುಮಾರು ರೂಪಾಯಿ 1.95 ಲಕ್ಷ ಮೌಲ್ಯದ ಕಳ್ಳತನದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕುಳಾಯಿ ಗ್ರಾಮದ ಯಶೋದ ಕ್ಲಿನಿಕ್ ಸಮೀಪದ ಮನೆ ನಂ.6-177ರಲ್ಲಿ ವಾಸವಿರುವ 43 ವರ್ಷ ಪ್ರಾಯದ ಅಮಿತಾ, ಗಂಡ: ಸುರೇಶ್ ಅವರ ತಾಯಿ ಮನೆಯಲ್ಲಿದ್ದ ದೈವಗಳ ಮೂರ್ತಿಗಳು ಹಾಗೂ […]

News

ಜನವರಿ 17ರಂದು ಶಾಸಕ ಹರೀಶ್ ಪೂಂಜರಿಂದ ನಡೆದ ಸ್ವಾಗತ ಗೋಪುರ ಉದ್ಘಾಟನೆ ಅಧಿಕೃತವಲ್ಲ — ವ್ಯವಸ್ಥಾಪನ ಸಮಿತಿ ಸ್ಪಷ್ಟನೆ

ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಕೇಳ ಕಾಶಿಪಟ್ಣದಲ್ಲಿ ಜನವರಿ 17ರಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಸ್ವಾಗತ (ರಾಜ) ಗೋಪುರವನ್ನು ಉದ್ಘಾಟಿಸಿದ್ದಾಗಿ ಹೇಳಲಾಗಿರುವ ಘಟನೆ ಅಧಿಕೃತವಲ್ಲ ಎಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಬಾಲ್ಯ ಶಂಕರ್ ಭಟ್ ಸ್ಪಷ್ಟನೆ ನೀಡಿದ್ದಾರೆ. ಜನವರಿ 17ರಂದು ಬಿಜೆಪಿ ಪ್ರಾಯೋಜಕತ್ವದಲ್ಲಿ “ಜೋಡಿ ಜೀಟಿಗೆ” ಎಂಬ ತುಳು ನಾಟಕದ ಕಾರ್ಯಕ್ರಮವನ್ನು ದೇವಸ್ಥಾನ ಆವರಣದಲ್ಲಿ ಆಯೋಜಿಸಲಾಗಿದ್ದು, ಅದೇ ದಿನ ರಾತ್ರಿ ಸುಮಾರು 11.30ರ ವೇಳೆಗೆ ಶಾಸಕ ಹರೀಶ್ ಪೂಂಜರು ವ್ಯವಸ್ಥಾಪನ ಸಮಿತಿ ಹಾಗೂ ಊರ […]

News

ಅಲೋಶಿಯಸ್ ವಿವಿಯಲ್ಲಿ ‘ಸುಸ್ಥಿರ ಅಭಿವೃದ್ಧಿಗಾಗಿ ಶಾಂತಿಯುತ ಮತ್ತು ಅಂತರ್ಗತ ಸಮಾಜಗಳು’ ವಿಷಯದ ಅಂತರರಾಷ್ಟ್ರೀಯ ಸಮ್ಮೇಳನ

ಶಾಂತಿ, ಅಂತರ್ಗತತೆ ಮತ್ತು ನ್ಯಾಯಯುತ ಆಡಳಿತ ಪರಸ್ಪರ ಸಂಬಂಧಿತ: DC ದರ್ಶನ್ ಹೆಚ್.ವಿ. ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕಲಾ ಮತ್ತು ಮಾನವಿಕ ಶಾಲೆಯ ವತಿಯಿಂದ “ಸುಸ್ಥಿರ ಅಭಿವೃದ್ಧಿಗಾಗಿ ಶಾಂತಿಯುತ ಮತ್ತು ಅಂತರ್ಗತ ಸಮಾಜಗಳನ್ನು ಉತ್ತೇಜಿಸುವುದು” ಎಂಬ ವಿಷಯದ ಮೇಲೆ ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನವು ಜನವರಿ 28ರಂದು ಬುಧವಾರ ಎಲ್.ಎಫ್. ರಸ್ಕೀನ್ಹಾ ಸಭಾಂಗಣದಲ್ಲಿ ಆರಂಭವಾಯಿತು. ಉದ್ಘಾಟನಾ ಅಧಿವೇಶನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿ (ಡಿಸಿ) ದರ್ಶನ್ ಎಚ್.ವಿ. ಅವರು ಮಾತನಾಡಿ ಶಾಂತಿ, ಅಂತರ್ಗತತೆ ಮತ್ತು […]

News

ದೀಪಕ್ ಆತ್ಮಹತ್ಯೆ ಪ್ರಕರಣ: ಶಿಂಜಿತಾ ಮುಸ್ತಫಾ ಜಾಮೀನು ಅರ್ಜಿ ತಿರಸ್ಕೃತ

ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಆತಂಕ ಕೋಝಿಕ್ಕೋಡ್ ಮೂಲದ ದೀಪಕ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಶಿಂಜಿತಾ ಮುಸ್ತಫಾ ಅವರ ಜಾಮೀನು ಅರ್ಜಿಯನ್ನು ಕುನ್ನಮಂಗಲಂ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತಿರಸ್ಕರಿಸಿದೆ. ಜಾಮೀನು ನೀಡಿದಲ್ಲಿ ಆರೋಪಿಯು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ವೈದ್ಯಕೀಯ ಕಾಲೇಜು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಿದ್ದರು. ಪೊಲೀಸ್ ವರದಿ ಮತ್ತು ವಾದ-ವಿಚಾರಣೆಯನ್ನು ಪರಿಶೀಲಿಸಿದ ನಂತರ ನ್ಯಾಯಾಲಯ ಈ ತೀರ್ಪು ನೀಡಿದೆ. ಪೊಲೀಸರ ಪ್ರಕಾರ, ಪ್ರಕರಣದ ತನಿಖೆ ಇನ್ನೂ […]

News

ಬೀ ಗುಡ್ ಡು ಗುಡ್ ರಾಷ್ಟ್ರವ್ಯಾಪಿ ಅಭಿಯಾನದಲ್ಲಿ ಮೂಡುಬಿದಿರೆಯ ಲೇಖಕಿ ರೆಶೆಲ್ ಫೆರ್ನಾಂಡಿಸ್ ಉಪನ್ಯಾಸ

ಮೂಡುಬಿದಿರೆಯ ಖ್ಯಾತ ಲೇಖಕಿ, ಎಬಿವಿಪಿ ಸದಸ್ಯೆ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತೆ ರೆಶೆಲ್ ಫೆರ್ನಾಂಡಿಸ್ ಅವರು ಇತ್ತೀಚೆಗೆ ಸಮರ್ಥ ಭಾರತ ಸಂಸ್ಥೆ ಆಯೋಜಿಸಿರುವ ಸ್ವಾಮಿ ವಿವೇಕಾನಂದರ ಕುರಿತಾದ ರಾಷ್ಟ್ರವ್ಯಾಪಿ ಯುವ ಅಭಿಯಾನದ ಅಂಗವಾಗಿ ನಡೆದ ‘ಬೀ ಗುಡ್ ಡು ಗುಡ್’ ಆನ್‌ಲೈನ್ ಉಪನ್ಯಾಸ ಸರಣಿಯಲ್ಲಿ ಮಾತನಾಡಿದರು. ನೇರ ಪ್ರಸಾರದಲ್ಲಿ ಮಾತನಾಡಿದ ರೆಶೆಲ್ ಫೆರ್ನಾಂಡಿಸ್ ಅವರು, ಸ್ವಾಮಿ ವಿವೇಕಾನಂದರ ಆದರ್ಶಗಳು ದೇಶದ ಯುವಜನತೆಗೆ ಹೇಗೆ ಮಾರ್ಗದರ್ಶಿಯಾಗಬಲ್ಲವು ಎಂಬುದನ್ನು ವಿವರಿಸಿದರು. ವ್ಯಕ್ತಿತ್ವ ವಿಕಾಸ, ದೇಶಭಕ್ತಿ, ಆತ್ಮವಿಶ್ವಾಸ, […]

News

ನಿಯಮ ಉಲ್ಲಂಘನೆ ಸಾಬೀತು – ಅಂಡಿಂಜೆ ಗ್ರಾಮ ಪಂಚಾಯತ್ ಸದಸ್ಯ ಜಗದೀಶ ಹೆಗ್ಡೆ ಅನರ್ಹ

6 ವರ್ಷ ಚುನಾವಣೆಗೆ ನಿಷೇಧ ಗ್ರಾಮ ಪಂಚಾಯತ್ ಆಡಳಿತದಲ್ಲಿ ಶುದ್ಧತೆಗೆ ಕಠಿಣ ಸಂದೇಶ ನಿಯಮ ಬಾಹಿರವಾಗಿ ಸಹೋದರನಿಗೆ ಗ್ರಾಮ ಪಂಚಾಯತ್ ಕಾಮಗಾರಿಗಳ ಗುತ್ತಿಗೆ ನಿರ್ವಹಿಸಲು ಅವಕಾಶ ಕಲ್ಪಿಸಿದ ಆರೋಪ ಸಾಬೀತಾದ ಹಿನ್ನೆಲೆ, ಅಂಡಿಂಜೆ ಗ್ರಾಮ ಪಂಚಾಯತ್ ಸದಸ್ಯ ಜಗದೀಶ ಹೆಗ್ಡೆ ಅವರ ಸದಸ್ಯತ್ವವನ್ನು ರದ್ದುಗೊಳಿಸಿ, ಮುಂದಿನ ಆರು ವರ್ಷಗಳ ಕಾಲ ಯಾವುದೇ ಪಂಚಾಯತ್ ಚುನಾವಣೆಗೆ ಸ್ಪರ್ಧಿಸದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪೀಠಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ–1993ರ […]

News

ಮಂಗಳೂರು ಧರ್ಮಕ್ಷೇತ್ರದಲ್ಲಿ ಸಂತ ವಿನ್ಸೆಂಟ್ ದಿ ಪೌಲ್ ಸೊಸೈಟಿಯ ಶತಮಾನೋತ್ಸವ ಸಮಾರೋಪ

SSVP ಸೇವೆಗೆ ಸಮಾಜದ ಗೌರವ ಹಾಗೂ ದೇವರ ಆಶೀರ್ವಾದ ಸದಾ ಇರುತ್ತದೆ – ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಡಯಾಲಿಸಿಸ್ ರೋಗಿಗಳಿಗೆ ಶೇಕಡಾ 50ರಷ್ಟು ವೆಚ್ಚ ಭರಿಸುವ ಮಹತ್ವದ ಯೋಜನೆ ಉದ್ಘಾಟನೆ   ಮಂಗಳೂರು ಧರ್ಮಕ್ಷೇತ್ರದಲ್ಲಿ ಸಂತ ವಿನ್ಸೆಂಟ್ ದಿ ಪೌಲ್ ಸೊಸೈಟಿಯ (SSVP) ಸ್ಥಾಪನಾ ಶತಮಾನೋತ್ಸವ ಸಮಾರೋಪ ಕಾರ್ಯಕ್ರಮವು ನಗರದ ಫಾದರ್ ಮುಲ್ಲರ್ ಕನ್ವೆನ್ಶನ್ ಸೆಂಟರ್‌ನಲ್ಲಿ ಭವ್ಯವಾಗಿ ಜನವರಿ 25ರಂದು ಭಾನುವಾರ ಜರುಗಿತು.   ಸ್ಪೇಯ್ನ್‌ನಿಂದ ಆಗಮಿಸಿದ ಸಂತ ವಿನ್ಸೆಂಟ್ ದಿ ಪೌಲ್ ಸೊಸೈಟಿಯ […]

News

ತಾಳ್ಮೆಯ ಮೂಲಕ ಪಡೆಯುವ ಯಶಸ್ಸನ್ನು ಯಾರೂ ತಡೆಯಲು ಸಾಧ್ಯವಿಲ್ಲ – ಸ್ಪೀಕರ್ ಯು.ಟಿ. ಖಾದರ್

ಕಾಜೂರು ಮಖಾಂ ಶರೀಫ್ ಉರೂಸ್ ಸಮಾರೋಪ ಸಮಾರಂಭದಲ್ಲಿ ಸಂದೇಶ ತಾಳ್ಮೆಯ ಮೂಲಕ ನಾವು ಸಾಧಿಸುವ ಯಶಸ್ಸನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಹಿರಿಯರು ತೋರಿದ ತ್ಯಾಗ ಮತ್ತು ಸಹನಶೀಲತೆಯನ್ನು ಯುವಜನತೆ ಅರಿತು ಬದುಕಬೇಕು ಎಂದು ವಿಧಾನಸಭೆಯ ಸಭಾಪತಿ ಯು.ಟಿ. ಖಾದರ್ ಹೇಳಿದರು. ಜನವರಿ 25ರಂದು ಭಾನುವಾರ ನಡೆದ ಕಾಜೂರು ಮಖಾಂ ಶರೀಫ್ ಉರೂಸ್ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಧಾರ್ಮಿಕ ನಂಬಿಕೆಗಳು ದೌರ್ಬಲ್ಯವಲ್ಲ; ಅವು ನಮ್ಮ ಮಣ್ಣಿನ ಶಕ್ತಿ. ಪ್ರತಿಯೊಬ್ಬರ ಧರ್ಮವೂ ಇನ್ನೊಬ್ಬರಿಗೆ ನೋವು ನೀಡುವ ಕತ್ತಿಯಾಗದೆ, ಗಾಯಗಳನ್ನು […]

News

ಪರವಾನಿಗೆ ಇಲ್ಲದೇ ಅಕ್ರಮ  ಕಟ್ಟಡ ನಿರ್ಮಾಣ ಆರೋಪ

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು ಬೆಳ್ತಂಗಡಿ ತಾಲೂಕಿನಲ್ಲಿ ಸರ್ಕಾರಕ್ಕೆ ವಂಚನೆ ಮಾಡಿ, ಸಂಬಂಧಪಟ್ಟ ಯಾವುದೇ ಇಲಾಖೆಯಿಂದ ಪರವಾನಿಗೆ ಪಡೆಯದೇ ಅನಧಿಕೃತವಾಗಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಶೇಖರ್ ಲಾಯಿಲ ಅವರು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ಇಂದು ಜನವರಿ 26ರಂದು ಸೋಮವಾರ ಕುಕ್ಕೇಡಿ ಡಾ. ಬಿ.ಆರ್. ಅಂಬೇಡ್ಕರ್ ಭವನದ ನವೀಕೃತ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಈ ಕುರಿತು ಅವರು ಮನವಿ […]

You cannot copy content of this page