November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸೂರಿಕುಮೇರು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಸಂಭ್ರಮ ಸಡಗರದ ಮೀಲಾದುನ್ನಬಿ ಆಚರಣೆ

ಮಾಣಿಯಲ್ಲಿ ಐಸ್ ಕ್ರೀಂ ನೀಡಿ ಸ್ವಾಗತಿಸಿದ ಹಿಂದೂ ಮುಖಂಡರು ಸೂರಿಕುಮೇರು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಲೋಕ ಪ್ರವಾದಿ ಮಹಮ್ಮದ್ ಮುಸ್ತಫಾ (ಸ.ಅ) ರವರ 1500ನೇ ಜನ್ಮ ದಿನ ಮೀಲಾದುನ್ನಬಿ ಕಾರ್ಯಕ್ರಮವನ್ನು ಇಂದು ಸೆಪ್ಟೆಂಬರ್ 5ರಂದು ಶುಕ್ರವಾರ ಬಹಳ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ಬೆಳಗ್ಗಿನ ಜಾವ 4 ಗಂಟೆಗೆ ಪ್ರಭಾತ ಮೌಲಿದ್ ನೊಂದಿಗೆ ಆರಂಭಗೊಂಡ ಕಾರ್ಯಕ್ರಮ 8 ಗಂಟೆಗೆ ಧ್ವಜಾರೋಹಣ ಮೂಲಕ ಮೀಲಾದ್ ಜಾಥಾಗೆ ಚಾಲನೆ ನೀಡಲಾಯಿತು, ಸೂರಿಕುಮೇರು, ಹಳೀರ, ಮಾಣಿ ಜಂಕ್ಷನ್, ದಾಸಕೋಡಿ, ಕಾಯರಡ್ಕ ಮೂಲಕ […]

News

MCC ಬ್ಯಾಂಕ್ ನ ಬೈಂದೂರು ನೂತನ ಶಾಖೆಯಲ್ಲಿ ಶಿಕ್ಷಕರ ದಿನ ಆಚರಣೆ

MCC ಬ್ಯಾಂಕ್ ಮಂಗಳೂರು ಇದರ ಬೈಂದೂರಿನ ನೂತನ ಶಾಖೆಯಲ್ಲಿ ಇಂದು ಸೆಪ್ಟೆಂಬರ್ 4ರಂದು ಶಿಕ್ಷಕರ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊರವರು ವಹಿಸಿದ್ದರು. ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಹೊಸಾಡು ರಾಮ ಶೇರಿಗಾರ್ ಮತ್ತು 2025ರ ಐಐಬಿಎಸ್ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಆಶಾ ವೀಣಾ ಡಯಾಸ್ ರವರು ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದ್ದರು. ಎಂಸಿಸಿ ಬ್ಯಾಂಕಿನ ನಿರ್ದೇಶಕ ಎಲ್ರಾಯ್ ಕೆ. ಕ್ರಾಸ್ಟೊ ಮತ್ತು ಶಾಖೆಯ ಹಿರಿಯ […]

News

5 ಕೋಟಿ ಹಣಕ್ಕಾಗಿ ಅಪ್ಪನಿಗೆ ಮಗನಿಂದ ಹನಿಟ್ರ್ಯಾಪ್

ಅಪ್ಪನ ಅಶ್ಲೀಲ ವಿಡಿಯೋ ಹರಿಬಿಟ್ಟು ಮಗನಿಂದಲೇ ಬ್ಲ್ಯಾಕ್ ಮೇಲ್ ‌ ಮಗನ ವಿರುದ್ಧ ರೊಚ್ಚಿಗೆದ್ದು ಪೊಲೀಸ್ ಠಾಣೆಗೆ ದೂರು ಕೊಟ್ಟ ತಂದೆ ಸಕ್ಕರೆಯ ನಾಡು, ಅಕ್ಕರೆಯ ಬೀಡು ಎಂದೇ ಹೆಸರಾದ ಮಂಡ್ಯ  ಜಿಲ್ಲೆಯಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿದೆ. ಇದು ಅಪ್ಪ- ಮಕ್ಕಳ ಕಿತ್ತಾಟದ ಸಾಮಾನ್ಯದ ಕೇಸ್ ಅಲ್ಲ. ಮಗನೇ ಅಪ್ಪನನ್ನು ಹನಿಟ್ರ್ಯಾಪ್ ಒಂದರಲ್ಲಿ ಕೆಡವಿ ಅದರ ವಿಡಿಯೋ, ಆಡಿಯೋ ರೆಕಾರ್ಡ್ ಮಾಡಿಕೊಂಡು ತಂದೆಯ ಮರ್ಯಾದೆ ಕಳೆದು ಬ್ಲ್ಯಾಕ್ ಮೇಲ್ ಮಾಡಿರುವ ವಿಚಿತ್ರ ಪ್ರಕರಣ ಇದಾಗಿದೆ. ಭೂಮಿಯ ಮೇಲೆ […]

News

ವಿಟ್ಲದ ತಾಳಿತ್ತನೂಜಿಯಲ್ಲಿ ಮಹಿಳೆಯ ಮೇಲೆ ಕತ್ತಿಯಿಂದ ದಾಳಿ – ಆರೋಪಿಯ ಬಂಧನ

ಜಾಗಕ್ಕೆ ಸಂಬಂಧಿಸಿದ ಕಲಹವೊಂದು ಭೀಕರ ರೂಪ ಪಡೆದು ಮಹಿಳೆಯೊಬ್ಬರ ಮೇಲೆ ಕತ್ತಿಯಿಂದ ದಾಳಿ ನಡೆಸಿದ ಘಟನೆ ವಿಟ್ಲ ಕೊಲ್ನಾಡು ಗ್ರಾಮದ ತಾಳಿತ್ತನೂಜಿಯಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ 32 ವರ್ಷ ಪ್ರಾಯದ ಮಹಮ್ಮದ್ ಅಶ್ರಫ್ ಎಂಬಾತನನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಾಳಿತ್ತನೂಜಿ ನಿವಾಸಿ 23 ವರ್ಷ ಪ್ರಾಯದ ಹಸೀನಾ ಗಂಭೀರ ಗಾಯಗೊಂಡವರು. ತಾಳಿತ್ತನೂಜಿಯ ಸುಲೈಮಾನ್ ಅವರ ಪತ್ನಿಯ ಪುತ್ರಿಯಾದ ಹಸೀನಾ ಮೇಲೆ, ಸುಲೈಮಾನ್ ರವರ ಎರಡನೇ ಪತ್ನಿಯ […]

News

ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘ (ರಿ.) ಇದರ ಅಧ್ಯಕ್ಷರಾಗಿ ಅಝೀಝ್ ಪರ್ತಿಪಾಡಿ ಅವಿರೋಧವಾಗಿ ಆಯ್ಕೆ

ಮಂಗಳೂರಿನ ಹಂಪನ್ ಕಟ್ಟೆಯಲ್ಲಿರುವ ಮಿಲಾಗ್ರಿಸ್ ಸೆನೆಟ್ ಹಾಲ್ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘದ ವಾರ್ಷಿಕ ಮಹಾಸಭೆಯು ನಡೆಯಿತು. ಈ ಸಭೆಯಲ್ಲಿ ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘದ ಅಧ್ಯಕ್ಷರಾಗಿ ಅಝೀಝ್ ಪರ್ತಿಪಾಡಿಯವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಇವರು ಸತತ ಮೂರನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇವರು ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿಯೂ, ಅಧ್ಯಕ್ಷರಾಗಿಯೂ ಹಾಗೂ ಪೂರ್ವ ವಲಯ ಬಸ್ ಮಾಲಕರ ಒಕ್ಕೂಟದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.

News

ವೃದ್ದಾಶ್ರಮ ನಿವಾಸಿಗಳಿಗೆ ಹೃದಯಸ್ಪರ್ಶಿ ಕೊಡುಗೆ – ಸ್ಪೀಕರ್ ಯು.ಟಿ. ಖಾದರ್ ಶ್ಲಾಘನೆ

79ನೇ ಸ್ವಾತಂತ್ರೋತ್ಸವದ ಅಂಗವಾಗಿ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ತೊಕ್ಕೊಟ್ಟು ಶಾಖೆಯ ವತಿಯಿಂದ ದೇರಳಕಟ್ಟೆ ಬೆಳ್ಳ, ಸೇವಾಶ್ರಮ ವೃದ್ದಾಶ್ರಮದಲ್ಲಿ ಹಿರಿಯರಿಗೆ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಸನ್ಮಾನ್ಯ ಯು.ಟಿ. ಖಾದರ್ ರವರು, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಸೈಂಟ್ ಮಿಲಾಗ್ರಿಸ್ ಕೋ-ಆಪರೇಟಿವ್ ಸೊಸೈಟಿ ಶಾಖೆಯ ಸೇವೆಯನ್ನು ಮೆಚ್ಚಿದರು. ವೃದ್ಧಾಶ್ರಮದಲ್ಲಿರುವ ಹಿರಿಯರ ಪಾಲಿಗೆ ಇಂತಹ ಕೊಡುಗೆಗಳು ದೊಡ್ಡ ನೆಮ್ಮದಿ ನೀಡುತ್ತವೆ. ಹಿರಿಯರು ಸಮಾಜದ ಅಮೂಲ್ಯ ಆಸ್ತಿ. ಅವರ ಆರೈಕೆಗೆ ಪ್ರತಿಯೊಬ್ಬರೂ […]

News

SBI ಬ್ಯಾಂಕ್ ದರೋಡೆ – 13 ಲಕ್ಷ ದೋಚಿ ಪರಾರಿ, ಪೊಲೀಸರಿಂದ ಶೋಧ

ಕಾಕನೂರ ಗ್ರಾಮದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಬ್ಯಾಂಕಿಗೆ ಸೆಪ್ಟೆಂಬರ್ 3ರಂದು ಸೋಮವಾರ ಮದ್ಯರಾತ್ರಿ ಕನ್ನ ಹಾಕಿದ ದುಷ್ಕರ್ಮಿಗ ಳು ದರೋಡೆ ಮಾಡಿ ಅಂದಾಜು 13 ಲಕ್ಷ ರೂಪಾಯಿ ದೋಚಿ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಗ್ರಾಮದ ಹೊರವಲಯದಲ್ಲಿರುವ SBI ಬ್ಯಾಂಕ್ ಸುತ್ತ ಕಬ್ಬಿನ ಗದ್ದೆ ಇದ್ದು ಯಾವ ಭಯವೂ ಇಲ್ಲದೆ ಕಳ್ಳತನ ಸಲಿಸಾಗಿ ನಡೆದಿದೆ. ಬ್ಯಾಂಕಿನಲ್ಲಿ ಭದ್ರ ತಾ ಸಿಬ್ಬಂದಿ ಇಲ್ಲದ ಕಾರಣವೇ ದರೋಡೆಗೆ ಮತ್ತಷ್ಟು ಅನಕೂಲವಾಗಿದೆ. ಬ್ಯಾಂಕಿನ ಹಿಂಬಾಗದಿಂದ ಬಂದು ಕನ್ನ ಹಾಕಿದ ಕಳ್ಳರು […]

News

ಭಟ್ಕಳದಲ್ಲಿ ಈದ್ ಮಿಲಾದ್ ಶಾಂತಿ ಸಭೆ ಆಯೋಜನೆ

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಬಾಂಧವರು, ಸಾಮಾಜಿಕ ಮುಖಂಡರು ಹಾಗೂ ಸ್ಥಳೀಯರನ್ನು ಸೇರಿಸಿ ಪೋಲೀಸರು ಈದ್ ಮಿಲಾದ್ ಶಾಂತಿ ಸಭೆ ನಡೆಸಿದರು. ಈ ಸಭೆಯ ಮೂಲಕ ಎರಡೂ ಸಮುದಾಯದ ನಡುವಿನ ಶಾಂತಿ, ಭದ್ರತೆ ಮತ್ತು ಪರಸ್ಪರ ಸಹಾನುಭೂತಿಯನ್ನು ಹರಡಲು ವಿಶೇಷವಾಗಿ ಕಾಳಜಿ ವಹಿಸಲಾಗಿದೆ. ಭಟ್ಕಳ ಗ್ರಾಮೀಣ ಠಾಣಾ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ್ ಲಿಂಗರೆಡ್ಡಿರವರು ಭಟ್ಕಳದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಸಾರ್ವಜನಿಕರಿಗೆ ನೀಡಿದ ಐದು ಮುಖ್ಯ ಸೂಚನೆಗಳು: 1️⃣ ಸಮುದಾಯದ ಎಲ್ಲಾ […]

News

ವ್ಯಕ್ತಿಯ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ನಿರ್ಣಾಯಕ ಮತ್ತು ಅತೀವ ಮಹತ್ವದ್ದಾದದ್ದು – ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ

ಕಥೊಲಿಕ ಶಿಕ್ಷಣ ಮಂಡಳಿಯಿಂದ ಶಿಕ್ಷಕರ ದಿನಾಚರಣೆ ಮತ್ತು ಪ್ರತಿಭಾನ್ವಿತರಿಗೆ ಸನ್ಮಾನ ವಿದ್ಯಾರ್ಥಿಗಳ ಶೈಕ್ಷಣಿಕ ಶ್ರೇಷ್ಠತೆ ಮತ್ತು ಶಿಕ್ಷಕರ ಸಮರ್ಪಿತ ಸೇವೆಯನ್ನು ಗೌರವಿಸಲು, ಕಥೊಲಿಕ ಶಿಕ್ಷಣ ಮಂಡಳಿ (CBE) ಇಂದು ಸೆಪ್ಟೆಂಬರ್ 3ರಂದು ಬುಧವಾರ ಬಜ್ಪೆ ಶಾಂತಿ ಕಿರಣ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಅಭಿನಂದನಾ ಸಮಾರಂಭವನ್ನು ಹಮ್ಮಿಕೊಂಡಿತ್ತು. ಸಮಾರಂಭದಲ್ಲಿ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಣ ಕ್ಷೇತ್ರದ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು. ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಹಾಗೂ ಕಥೊಲಿಕ ಶಿಕ್ಷಣ ಮಂಡಳಿಯ ಅಧ್ಯಕ್ಷರಾದ ಪರಮಪೂಜ್ಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾರವರು […]

News

ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಪ್ರತೀಕ್ಷ ಶೆಟ್ಟಿ

ಕರ್ನಾಟಕ ರಾಜ್ಯ ಡಾಕ್ಟರ್ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾನಿಲಯದ ವತಿಯಿಂದ ಕಳೆದ ಮೇ ತಿಂಗಳಲ್ಲಿ ನಡೆದಿರುವ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ನೃತ್ಯಂಜಲಿ ನಾಟ್ಯ ಶಾಲೆಯ ವಿದುಷಿ ವಿನುತ ಪ್ರವೀಣ್ ಗಟ್ಟಿಯ ಶಿಷ್ಯೆಯಾದ ಪ್ರತೀಕ್ಷ ಶೆಟ್ಟಿಯವರು 400 ರಲ್ಲಿ 395 ಅಂಕ ಪಡೆದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಹಾಗೂ ರಾಜ್ಯದಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿರುತ್ತಾರೆ. ಇವರು ಬಸ್ತಿ ಕೋಡಿ ನಿವಾಸಿ ಹರಿಶ್ಚಂದ್ರ ಶೆಟ್ಟಿ ಮತ್ತು ಶಕುಂತಲಾ ದಂಪತಿಯ ಪುತ್ರಿ. ಇವರು ಚೆನ್ನೈ ತೋಡಿ ಉನ್ನತಿಕರಿಸಿದ […]

You cannot copy content of this page