ಕೊಂಕಣಿ ಸಂಸ್ಕೃತಿ ಸಂರಕ್ಷಣೆಯ ಶಿಲ್ಪಿ – ಏರಿಕ್ ಓಜಾರಿಯೋ ಇನ್ನಿಲ್ಲ
ಕೊಂಕಣಿ ಸಂಗೀತ ಹಾಗೂ ಸಂಸ್ಕೃತಿ ಪರಂಪರೆಯ ಶ್ರೇಷ್ಠ ದೂತನಾದ 76 ವರ್ಷ ಪ್ರಾಯದ ಏರಿಕ್ ಅಲೆಕ್ಸಾಂಡರ್ ಓಜಾರಿಯೋರವರು ಕಿಡ್ನಿ ಸಂಬಂಧಿ ಅಸೌಖ್ಯದಿಂದ ಮಂಗಳೂರಿನ ಫಾದರ್ ಮಲ್ಲರ್ ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಆಗಸ್ಟ್ 29ರಂದು ಶುಕ್ರವಾರ ಇಹಲೋಕ ತ್ಯಜಿಸಿದರು. ಮಂಗಳೂರು ಜೆಪ್ಪುವಿನಲ್ಲಿ 1949ರ ಮೇ 18ರಂದು ಜನಿಸಿದ ಓಜಾರಿಯೋರವರು ಕೊಂಕಣಿ ಸಾಹಿತ್ಯ, ಸಂಗೀತ ಮತ್ತು ಸಮಾಜಮುಖಿ ಚಳವಳಿಗಳ ಮೂಲಕ ತನ್ನದೇ ಆದ ಗುರುತನ್ನು ನಿರ್ಮಿಸಿಕೊಂಡರು. ಅವರು ಖ್ಯಾತ ಸಂಗೀತ ನಿರ್ದೇಶಕ, ಸಂಸ್ಕೃತಿ ಹೋರಾಟಗಾರ ಹಾಗೂ ಕೊಂಕಣಿ […]













