November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಧರ್ಮಸ್ಥಳದಲ್ಲಿ “ಜ್ಞಾನಪಥ” ಮತ್ತು “ಜ್ಞಾನರಥ” ಕೃತಿಗಳ ಲೋಕಾರ್ಪಣೆ, ಅಂಚೆ-ಕುಂಚ ಸ್ಪರ್ಧೆ ವಿಜೇತರಿಗೆ ಪುರಸ್ಕಾರ

ಪುಸ್ತಕಗಳು ಸಾರ್ಥಕ ಬದುಕಿಗೆ ದಾರಿದೀಪ. ನೈತಿಕ ಶಿಕ್ಷಣ ಪ್ರಸ್ತುತ ಸಮಾಜಕ್ಕೆ ತುರ್ತು ಅನಿವಾರ್ಯ- ಖ್ಯಾತ ಚಲನಚಿತ್ರ ನಿರ್ದೇಶಕ ವಿ. ನಾಗೇಂದ್ರ ಪ್ರಸಾದ್ ನೈತಿಕಶಿಕ್ಷಣ ಪ್ರಸ್ತುತ ಸಮಾಜಕ್ಕೆ ತುರ್ತು ಅನಿವಾರ್ಯವಾಗಿದ್ದು ಪುಸ್ತಕಗಳು ಸಾರ್ಥಕ ಬದುಕಿಗೆ ದಾರಿದೀಪವಾಗಿವೆ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ವಿ. ನಾಗೇಂದ್ರ ಪ್ರಸಾದ್ ಹೇಳಿದರು. ಅವರು ಆಗಸ್ಟ್ 19ರಂದು ಮಂಗಳವಾರ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಶಾಲೆಗಳಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿಯಲ್ಲಿ ಪ್ರಕಟಿಸಿದ “ಜ್ಞಾನಪಥ” ಮತ್ತು “ಜ್ಞಾನರಥ” ಕೃತಿಗಳನ್ನು ಲೋಕಾರ್ಪಣೆಗೊಳಿಸಿ […]

News

ಮೊಗರ್ನಾಡ್ ಚರ್ಚ್ ನ ಹೊಸಾನ್ನಾ ವಲಯದಲ್ಲಿ ಯುವ ಸಂಭ್ರಮಾಚರಣೆ

ಮೊಗರ್ನಾಡ್ ದೇವಮಾತ ಚರ್ಚ್ ನ 250ನೇ ವರ್ಷದ ಜುಬಿಲಿ ಪ್ರಯುಕ್ತ ಚರ್ಚ್ ಗೆ ಒಳಪಟ್ಟ ಹೊಸಾನ್ನ ವಲಯದಲ್ಲಿ ಯುವ ಸಂಭ್ರಮವನ್ನು ಆಗಸ್ಟ್ 17 ರಂದು ಭಾನುವಾರ ಸಂಜೆ 4 ಗಂಟೆಗೆ ಚರ್ಚ್ ಕಾನ್ಫರೆನ್ಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಯುವಕರ ಪ್ರಾರ್ಥನಾ ಕೂಟದ ತರವಾಯ ನಡೆದ ಸಭಾ ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿ ಸೈಂಟ್ ಮೊನಿಕಾ ಸ್ಕೂಲ್ ಕುಂಬ್ಳಾ ಇದರ ಪ್ರಾಂಶುಪಾಲರಾದ ವಂದನೀಯ ಫಾದರ್ ಸೂರಜ್ ಲೋಬೊರವರು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಇವರು ಮಾತನಾಡಿ “ಪ್ರತಿಯೊಬ್ಬರಲ್ಲಿಯೂ ಅವರದೇ ಆದ ಪ್ರತಿಭೆಗಳಿರುತ್ತವೆ. ಯಾರೂ ತಮ್ಮನ್ನು ಇತರರೊಂದಿಗೆ […]

News

ತಾಕೊಡೆ ಚರ್ಚ್ ಧರ್ಮಗುರುಗಳು ನೀಡಿದ ಪತ್ರದ ದುರುಪಯೋಗ

ಚರ್ಚ್ ಆರ್ಥಿಕ ಸಮಿತಿಯ ಸದಸ್ಯೆಯಿಂದ ಪೊಲೀಸ್ ಠಾಣೆಗೆ ದೂರು ವಿನೋದ್ ವಾಲ್ಟರ್ ಪಿಂಟೋ ವಿರುದ್ಧ ಪ್ರಕರಣ ದಾಖಲು ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಹೋಲಿ ಕ್ರಾಸ್ ಚರ್ಚ್ ತಾಕೊಡೆ ಇಲ್ಲಿನ ಕಿಡ್ನಿ ರೋಗಿಯೊಬ್ಬರಿಗೆ ಆರ್ಥಿಕ ನೆರವು ನೀಡುವಂತೆ ಕೋರಿ ಚರ್ಚ್ ಧರ್ಮಗುರುಗಳು ನೀಡಿದ್ದ ಪತ್ರವನ್ನು ದುರುಪಯೋಗ ಪಡಿಸಿಕೊಂಡು ಹಣ ವಸೂಲಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗಸ್ಟ್ 18 ರಂದು ಸೋಮವಾರ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೋಲಿ ಕ್ರಾಸ್ ಚರ್ಚ್ ತಾಕೊಡೆ ಇದರ ಚರ್ಚ್ ಆರ್ಥಿಕ ಸಮಿತಿ […]

News

ನಿಯಮ ಪಾಲಿಸದೇ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳನ್ನು ಮುಲಾಜಿಲ್ಲದೆ ಒಡೆದು ಹಾಕಲಾಗುತ್ತದೆ – ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್

ಸುರಕ್ಷಿತ ನಿಯಮಗಳನ್ನು ಪಾಲಿಸದೇ ಅಕ್ರಮವಾಗಿ ನಿರ್ಮಾಣ ಮಾಡಿರುವ ಕಟ್ಟಡಗಳನ್ನು ದುರಸ್ತಿ ಮಾಡಿಕೊಳ್ಳಬೇಕು. ಇಲ್ಲವಾದರೆ ಮುಲಾಜಿಲ್ಲದೆ ಒಡೆದು ಹಾಕುತ್ತೇವೆ ಎಂದು ನಗರಾಭಿವೃದ್ಧಿ ಸಚಿವರು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ನಗರ್ತಪೇಟೆಯಲ್ಲಿ ಅಗ್ನಿ ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ ಶೇಕಡಾ 70 ರಷ್ಟು ಕಟ್ಟಡಗಳ ನಿರ್ಮಾಣ ಅಕ್ರಮವಾಗಿದೆ. ಹಳೆಯ ಬಡಾವಣೆಗಳಷ್ಟೇ ಅಲ್ಲ, ಹೊಸ ಬಿಡಿಎ ಬಡಾವಣೆಗಳಲ್ಲೂ ಒಂದು ಮತ್ತು ನಾಲ್ಕು ಮಹಡಿಗಳನ್ನು ನಿರ್ಮಿಸುತ್ತಿದ್ದಾರೆ ಎಂದು […]

News

ICYM ಕೊಲ್ಲಂಗಾನ ಘಟಕದಿಂದ ಸೂಚಕ ಫಲಕ ಶುದ್ಧೀಕರಣ ಕಾರ್ಯ

ಭಾರತೀಯ ಕಥೊಲಿಕ್ ಯುವ ಸಂಚಾಲನ (ICYM) ಕೊಲ್ಲಂಗಾನ ಘಟಕ ಇದರ ವತಿಯಿಂದ ಆಗಸ್ಟ್ 17ರಂದು ಭಾನುವಾರ ಬೆಳಿಗ್ಗೆ ಬಿ.ಸಿ. ರೋಡ್ ಕಲೆಕ್ಟರೇಟ್‌ನಿಂದ ಮಾನ್ಯವರೆಗೆ ಸೂಚಕ ಫಲಕ ಶುಚಿಗೊಳಿಸುವ ಕಾರ್ಯಕ್ರಮ ನಡೆಯಿತು. ಸುಮಾರು 20 ಮಂದಿ ಸದಸ್ಯರು ಪಾಲ್ಗೊಂಡ ಈ ಕಾರ್ಯದಲ್ಲಿ ಹಾಳಾಗಿದ್ದ ಫಲಕಗಳನ್ನು ದುರಸ್ತಿ ಮಾಡಿ, ರಸ್ತೆಯ ಬದಿಯ ಸೂಚಕ ಫಲಕಗಳನ್ನು ಸ್ವಚ್ಛಗೊಳಿಸಲಾಯಿತು. ಕೊಲ್ಲಂಗಾನ ಸಂತ ತೋಮಸ್ ಚರ್ಚ್ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದ ಆರಂಭದಲ್ಲಿ ಚರ್ಚ್ ಧರ್ಮಗುರು ವಂದನೀಯ ಫಾದರ್ ರಿತೇಶ್ ರೊಡ್ರಿಗಸ್ ಎಲ್ಲರನ್ನೂ ಸ್ವಾಗತಿಸಿ […]

News

SIT ತನಿಖೆಯ ಭರದಲ್ಲಿ ಧರ್ಮಸ್ಥಳದ ಬಗ್ಯೆ ಅಪಪ್ರಚಾರಕ್ಕೆ ರಾಜ್ಯ ಸರ್ಕಾರ ತಕ್ಷಣ ಕಡಿವಾಣ ಹಾಕಬೇಕು – ಬಿ.ಜೆ.ಪಿ. ರಾಜ್ಯಾಧ್ಯಾಕ್ಷ ಬಿ.ವೈ. ವಿಜಯೇಂದ್ರ

ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ನಾಡಿನ ಪವಿತ್ರ ಕ್ಷೇತ್ರ ಹಾಗೂ ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳದ ಬಗ್ಗೆ ಕಳೆದ ಕೆಲವು ದಿನಗಳಿಂದ ಸಮೂಹ ಮಾಧ್ಯಮಗಳಲ್ಲಿ SIT ತನಿಖೆಯ ನೆಪದಲ್ಲಿ ನಡೆಯುತ್ತಿರುವ ಅಪಪ್ರಚಾರದ ಬಗ್ಗೆ ಸರ್ಕಾರ ತಕ್ಷಣ ಕಡಿವಾಣ ಹಾಕಬೇಕು ಎಂದು ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಒತ್ತಾಯಿಸಿದರು. ಅವರು ಆಗಸ್ಟ್ 17ರಂದು ಭಾನುವಾರ ಧರ್ಮಸ್ಥಳಕ್ಕೆ  ಭೆಟಿ ನೀಡಿ, ದೇವರ ದರ್ಶನ ಪಡೆದು, ವಿಶೇಷ ಸೇವೆ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಧರ್ಮಸ್ಥಳ, ಅಣ್ಣಪ್ಪಸ್ವಾಮಿ […]

News

ವನಿತಾ ಪಾರ್ಕ್ ನಲ್ಲಿ ‘ಹಸಿರೇ ಉಸಿರು’ ವನಮಹೋತ್ಸವ

ಸ್ವಾತಂತ್ರ್ಯ ಹೋರಾಟಗಾರ ಮಟ್ಟಾರು ವಿಠಲ ಕಿಣಿ ವನಿತಾ ಪಾರ್ಕ್ ನಲ್ಲಿ ಗಿಡ ನೆಡುವ ಮೂಲಕ ಲಯನ್ಸ್ ಕ್ಲಬ್ ಪಾಂಡೇಶ್ವರ ಮತ್ತು ಗ್ಲೋಬಲ್ ಗ್ರೀನ್ ಇಕೋ ಫೌಂಡೇಶನ್ ಮಂಗಳೂರು ಇದರ ಆಶ್ರಯದಲ್ಲಿ ನಡೆದ ಹಸಿರೇ ಉಸಿರು ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಂಗಳೂರು ಉಪ ಪೊಲೀಸ್ ಆಯುಕ್ತ ಎಚ್.ಎನ್. ಮಿಥುನ್ ರವರು, ಗಿಡ ಮರಗಳಿಂದ ತುಂಬಿದ ಪರಿಸರವನ್ನು ರಕ್ಷಿಸಿ ಮುಂದಿನ ತಲೆ ಮಾರಿಗೆ ಬಳಸಲು ಅನುವು ಮಾಡಿಕೊಡುವ ಜವಾಬ್ದಾರಿ ನಮ್ಮ ಮೇಲಿದೆ. ಪ್ರಾಣಿ ಪಕ್ಷಿ […]

News

ಧರ್ಮಸ್ಥಳ ವಿಚಾರಕ್ಕೆ ಕ್ರೈಸ್ತರ ದಫನ ಭೂಮಿಯನ್ನು ಎಳೆದು ತರುವ ಅಗತ್ಯವಿತ್ತೇ?

ಯಾವುದೇ ಪುರಾವೆಗಳಿಲ್ಲದೆ ಬಾಲಿಶವಾಗಿ ಹೇಳಿಕೆ ನೀಡಬಾರದು ಮಂಗಳೂರು ಧರ್ಮಕ್ಷೇತ್ರದ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ಫಾದರ್ ಜೆ.ಬಿ. ಸಲ್ದಾನ್ಹಾ ಮತ್ತು ರೋಯ್ ಕ್ಯಾಸ್ಟಲಿನೊರವರಿಂದ ಜಂಟಿ ಪತ್ರಿಕಾ ಹೇಳಿಕೆ ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ನೆಲ ಅಗೆಯ ಬೇಕು ಎಂಬುದಾಗಿ ಹೇಳಿಕೆ ನೀಡಿರುವ ಅನಾಮಿಕ ಮುಸುಕುಧಾರಿ ವ್ಯಕ್ತಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿಯಾಗಿರುತ್ತಾನೆ. ಇದಕ್ಕಾಗಿ ವಿದೇಶದಿಂದ ಹಣ ಬರುತ್ತದೆ ಎಂಬ ಗಾಳಿ ಸುದ್ದಿಯನ್ನು ಆಧರಿಸಿ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನೀಡಿದ ಹೇಳಿಕೆಗೆ ಮಂಗಳೂರು ಧರ್ಮಕ್ಷೇತ್ರದ ಸಾರ್ವಜನಿಕ […]

News

ಕ್ರೈಸ್ತ ಸಮುದಾಯದ ದಫನ ಪದ್ಧತಿ ಬಗ್ಗೆ ಜನಾರ್ಧನ ಪೂಜಾರಿಯವರ ಹೇಳಿಕೆಗೆ ಕ್ರೈಸ್ತ ಸಮುದಾಯದ ವ್ಯಾಪಕ ಆಕ್ರೋಶ

ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ವತಿಯಿಂದ ಖಂಡನೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಕ್ರೈಸ್ತ ಸಮುದಾಯದವರು ಶಾಂತಿ ಪ್ರೀಯರಾಗಿದ್ದು, ತಮ್ಮ ಧರ್ಮದ ಆಚರಣೆಗಳನ್ನು ದೇವಾಲಯಗಳಲ್ಲಿ ಹಾಗೂ ಮನೆಗಳಲ್ಲಿ ಮಾತ್ರ ನಡೆಸುತ್ತಾ ಬಂದಿದ್ದಾರೆ. ಇತರ ಧರ್ಮಗಳನ್ನು ಗೌರವಿಸುತ್ತಾ, ಸಾಮಾಜಿಕ, ಆರೋಗ್ಯ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಅಪಾರ ಕೊಡುಗೆಯನ್ನು ನೀಡುತ್ತಿರುವ ಕ್ರೈಸ್ತ ಸಮುದಾಯವು ಇತ್ತೀಚೆಗೆ ಮಾಜಿ ಕೇಂದ್ರ ಸಚಿವ ಹಾಗೂ ಮಾಜಿ ಲೋಕಸಭಾ ಸದಸ್ಯರಾದ ಜನಾರ್ಧನ ಪೂಜಾರಿಯವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೂಜಾರಿಯವರು ದಕ್ಷಿಣ ಕನ್ನಡದಲ್ಲಿ […]

News

ಭಟ್ಕಳದಲ್ಲಿ ಬಾಲಕಿಯ ಅಪಹರಣ – 6 ಗಂಟೆಯೊಳಗೆ ಪತ್ತೆ

ಪೊಲೀಸರ ತ್ವರಿತ ಕಾರ್ಯಾಚರಣೆಗೆ ಶ್ಲಾಘನೆ ಭಟ್ಕಳದ ಹನಿಫಾಬಾದ ಪ್ರದೇಶದಿಂದ ಅಪಹರಣಕ್ಕೊಳಗಾದ ಬಾಲಕಿಯನ್ನು ಪೊಲೀಸರು ಕೇವಲ 6 ಗಂಟೆಗಳಲ್ಲೇ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಹಾವೇರಿ ಜಿಲ್ಲೆಯ ಶಿವಪುರ ನಿವಾಸಿ ಆಸೀಫ್ (ತಂದೆ ಜಮಾಲಸಾಬ) ಮತ್ತು ಭಟ್ಕಳದ ಜಾಲಿ ಗ್ರಾಮದ ಟಗ್ಗರಗೋಡ ನಿವಾಸಿ ಮೊಹಮ್ಮದ್ ಮೌಸೀನ (ತಂದೆ ಮೊಹಮ್ಮದ್ ರಿಜ್ವಾನ) ಎಂಬ ಇಬ್ಬರು ಆರೋಪಿಗಳು, ಬುಲೆರೋ ಪಿಕಪ್ ವಾಹನ (ನಂ. KA-47/8198) ಮೂಲಕ 14 ವರ್ಷ 11 ತಿಂಗಳ ಬಾಲಕಿಯನ್ನು ನಿನ್ನೆ ರಾತ್ರಿ ಭಟ್ಕಳದ ಹನಿಪಾಬಾದನಿಂದ […]

You cannot copy content of this page