November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ರಂಗ ತರಬೇತಿ ಕೇಂದ್ರ ಆರಂಭಿಸಲು ಚಿಂತನೆ – ನಟ, ನಿರ್ದೇಶಕ ಡಾ. ದೇವದಾಸ್ ಕಾಪಿಕಾಡ್

ರಂಗಭೂಮಿಯ ಬಗ್ಗೆ ಈಗ ಸಮಾಜದಲ್ಲಿ ಗೌರವದ ಭಾವನೆ ಇದೆ. ಮಕ್ಕಳು ಸೇರಿದಂತೆ ಯುವ ಜನಾಂಗ ನಾಟಕದಲ್ಲಿ ಅಭಿನಯಿಸಲು ಆಸಕ್ತಿ ವಹಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ರಂಗಾಸಕ್ತರನ್ನು ಕಲಾವಿದರಾಗಿ ಬೆಳೆಸುವ ನಿಟ್ಟಿನಲ್ಲಿ ರಂಗ ತರಬೇತಿ ಕೇಂದ್ರವೊಂದನ್ನು ತೆರೆಯಲು ಸಿದ್ಧತೆ ನಡೆಸಲಾಗಿದೆ ಎಂದು ನಟ, ನಿರ್ದೇಶಕ ಡಾ. ದೇವದಾಸ್ ಕಾಪಿಕಾಡ್ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಮಂಗಳೂರು ಪ್ರೆಸ್ ಕ್ಲಬ್ ಆಯೋಜಿಸಿದ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ‘ಮುಂದಿನ ವರ್ಷ ರಂಗ ತರಬೇತಿ ಕೇಂದ್ರ ಕಾರ್ಯಾರಂಭಿಸಲಿದೆ’ ಎಂದರು. ಬಾಲ್ಯದಲ್ಲಿ ಬಡತನವಿತ್ತು. […]

News

ಸೆಪ್ಟೆಂಬರ್ 5ರಂದು ಕೃತರ್ಥ ಪ್ರೊಡಕ್ಷನ್ ನಿರ್ಮಾಣದ ನೂತನ ಚಲನಚಿತ್ರ ಕುಡ್ಲ ನಮ್ದು ಊರು ರಾಜ್ಯಾದ್ಯಂತ ಬಿಡುಗಡೆ

ಕೃತರ್ಥ ಪ್ರೊಡಕ್ಷನ್ ನಿರ್ಮಾಣದ ನೂತನ ಚಲನಚಿತ್ರ ಕುಡ್ಲ ನಮ್ದು ಊರು ಇದೇ ಸೆಪ್ಟೆಂಬರ್ 5ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಮೊದಲ ಹಂತದಲ್ಲಿ ರಾಜ್ಯದ 70 ಥಿಯೇಟರ್ ಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಚಿತ್ರದ ಪ್ರೇಮಿಯರ್ ಶೋ ಈಗಾಗಲೇ ಎರಡು ಕಡೆ ನಡೆದಿದ್ದು ಜನರ ಪ್ರತಿಕ್ರಿಯೆ ಚೆನ್ನಾಗಿದೆ. ಜನರ ಪ್ರತಿಕ್ರಿಯೆ ಕಂಡು ನಮಗೂ ಭರವಸೆ ಬಂದಿದೆ. ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲುಗಲ್ಲು ಮೂಡಿಸಿದೆ ಎಂಬುದು ಪ್ರೇಕ್ಷಕರ ಅಭಿಪ್ರಾಯಗಳಿಂದ ತಿಳಿದುಬಂದಿದೆ. ಈ ಚಿತ್ರದಲ್ಲಿ ಮನುಷ್ಯನ ಜೀವನದ ಮೂರು ಹಂತಗಳು ಹಾಗೂ ಪರಶುರಾಮ ಸೃಷ್ಟಿಯ […]

News

ಪಾನೀರ್ ಚರ್ಚ್ ನಲ್ಲಿ “ಲಾವ್ದಾತೊ ಸಿ” ಪರಿಸರ ದಿನಾಚರಣೆ

“ಒಂದು ಗಿಡ ನೆಡುವುದು ಕೇವಲ ಕೃತ್ಯವಲ್ಲ, ಅದು ಭವಿಷ್ಯದ ಪೀಳಿಗೆಗೆ ಕೊಡುವ ಜೀವದಾನ”– ಆಲ್ವಿನ್ ಡಿಸೋಜ ಪಾನೀರ್ AICU ರಾಜ್ಯಾಧ್ಯಕ್ಷ ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಪಾನೀರ್ ಮೆರ್ಸಿನ್ ಮಾತೆಯ ಚರ್ಚ್ ವಠಾರದಲ್ಲಿ ಆಗಸ್ಟ್ 24ರಂದು ಭಾನುವಾರ ಬೆಳಿಗ್ಗೆ ಭಾವಪೂರ್ಣವಾಗಿ ಪರಿಸರ ದಿನಾಚರಣೆ – ಲಾವ್ದಾತೊ ಸಿ ಹಾಗೂ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ ನಡೆಯಿತು. ಈ ಮಹತ್ವದ ಕಾರ್ಯಕ್ರಮವನ್ನು ಕಥೊಲಿಕ್ ಸಭಾ ಮಂಗಳೂರು ಪ್ರದೇಶ್ (ರಿ.), ಪರಿಸರ ಆಯೋಗ ಹಾಗೂ ಕೃಷಿ ಸಮಿತಿ ಸಂಯುಕ್ತವಾಗಿ ಆಯೋಜಿಸಿತ್ತು. ಚರ್ಚ್ ಧರ್ಮಗುರು […]

News

ಬೆಳ್ತಂಗಡಿಯಲ್ಲಿ “ಧರ್ಮ ವಿಜಯ ಸಮಾವೇಶ”ದ ಸಿದ್ಧತೆ ಬಗ್ಗೆ ಗಣ್ಯರ ಸಮಾಲೋಚನಾ ಸಭೆ

ಸೆಪ್ಟೆಂಬರ್ 5 ಕ್ಕೆ ಧರ್ಮಸ್ಥಳದಲ್ಲಿ ಉಭಯ ಜಿಲ್ಲಾ ಧರ್ಮಕ್ಷೇತ್ರಗಳ ಮುಖ್ಯಸ್ಥರ ಸಮಾವೇಶ ಧರ್ಮ ನಿಂದನೆ, ಕೋಟ್ಯಾಂತರ ಭಕ್ತರನ್ನು ಹೊಂದಿರುವ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅಪಚಾರ ಹಾಗೂ ಕ್ಷೇತ್ರದ ಧರ್ಮಾಧಿಕಾರಿ ಮತ್ತು ಅವರ ಕುಟುಂಬವರ್ಗದವರ ಮೇಲೆ ವಿನಾಕಾರಣ ಆರೋಪ ಎಸಗುತ್ತಿರುವ ಶಕ್ತಿಗಳ ಷಡ್ಯಂತ್ರವನ್ನು ಮಟ್ಟ ಹಾಕಿ ಅದಕ್ಕೆ ಕಾರಣಕರ್ತರಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಸೆಪ್ಟೆಂಬರ್ ಮೊದಲ ವಾರದಲ್ಲಿ ತಾಲೂಕಿನಲ್ಲಿ ಬೃಹತ್ “ಧರ್ಮ ವಿಜಯ ಸಮಾವೇಶ” ಹಮ್ಮಿಕೊಳ್ಳುವುದೆಂದು ತೀರ್ಮಾನಿಸಲಾಯಿತು. ಆಗಸ್ಟ್ 25ರಂದು ಬೆಳ್ತಂಗಡಿ ಪಿನಾಕಿ ಸಭಾಂಗಣದಲ್ಲಿ […]

News

ಭಟ್ಕಳ ಪೊಲೀಸ್ ಇಲಾಖೆಯಿಂದ ಪಥಸಂಚಲನ

ಗಣೇಶ ಚತುರ್ಥಿ ಹಬ್ಬ – ಸಾರ್ವಜನಿಕರಿಗೆ ಸೂಚನೆ ಗಣೇಶ ಹಬ್ಬದ ನಿಮಿತ್ತ ಭಟ್ಕಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮತ್ತು ಗಣೇಶ ಹಬ್ಬವನ್ನು ಶಾಂತಿಯಿಂದ ಆಚರಿಸುವ ಉದ್ದೇಶದಿಂದ ಪೊಲೀಸ್ ಇಲಾಖೆಯಿಂದ ಪಥಸಂಚಲನ ನಡೆಯಿತು. ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವ ದೃಷ್ಟಿಯಿಂದ ಸಾರ್ವಜನಿಕರಿಗೆ ಕೆಳಕಂಡ ಸೂಚನೆಗಳನ್ನು ನೀಡಲಾಗಿದೆ. ಸಾರ್ವಜನಿಕ ಶಾಂತಿ ಧಾರ್ಮಿಕ, ಜಾತಿ ಅಥವಾ ಸಮುದಾಯಗಳ ವಿರುದ್ಧ ಹಾಸ್ಯ, ನಿಂದನೆ, ಪ್ರಚೋದನಕಾರಿ […]

News

4 ಲಾರಿಗಳಲ್ಲಿ ಕೆಂಪು ಕಲ್ಲು ಅಕ್ರಮ ಸಾಗಣೆ – ಸುಳ್ಯ ಪೊಲೀಸರ ಕ್ರಮ

ಆಗಸ್ಟ್ 24ರಂದು ಬೆಳಿಗ್ಗೆ ಸುಳ್ಯ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿಕೆಯಿಂದ 4 ಲಾರಿಗಳಲ್ಲಿ ‘ಕೆಂಪು ಕಲ್ಲು’(laterite stone) ಆಕ್ರಮವಾಗಿ ಸಾಗಣೆ ಮಾಡಲಾಗುತ್ತಿರುವುದು ಪತ್ತೆಯಾಯಿತು. ಮುರೂರು ಕಡೆಯಿಂದ ಸುಳ್ಯದ ಮೂಲಕ ಮಡಿಕೇರಿ ಮಾರ್ಗಕ್ಕೆ ತೆರಳುತ್ತಿರುವ ಈ ಲಾರಿಗಳನ್ನು ಠಾಣಾ ಉಪನಿರೀಕ್ಷಕರ ನೇತೃತ್ವದಲ್ಲಿ ಜಾಲ್ಸೂರು ಗ್ರಾಮದ ಅಡ್ಕಾರು ಬಳಿಯಲ್ಲಿ ತಡೆದು ಪರಿಶೀಲಿಸಲಾಯಿತು. ಯಾವುದೇ ಅನುಮತಿ ಇಲ್ಲದೆ ಕೆಂಪು ಕಲ್ಲನ್ನು ಸಾಗಿಸುತ್ತಿರುವುದು ತಡೆಹಿಡಿದ ಲಾರಿಗಳಲ್ಲಿ ಕಂಡುಬಂತು. ಆದುದರಿಂದ ನಾಲ್ಕೂ ಲಾರಿಗಳು, (₹45 ಲಕ್ಷದ ಅಂದಾಜು ಮೌಲ್ಯ) ಒಟ್ಟು 1750 ಕಲ್ಲುಗಳನ್ನು (ಮೌಲ್ಯ […]

News

ಪಾಲ್ದನೆ ಚರ್ಚ್ ನಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆ

ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ ಕೊಂಕಣಿ ಮಾನ್ಯತಾ ದಿನವನ್ನು ಆಚರಿಸಲಾಯಿತು. ಚರ್ಚ್ ಧರ್ಮಗುರು ವಂದನೀಯ ಫಾದರ್ ರಿಚ್ಚರ್ಡ್ ಅಲೋಶಿಯಸ್ ಕುವೆಲ್ಲೊರವರು ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ಕೊಂಕಣಿ ಮಾತೃ ಭಾಷೆಯವರು ತಮ್ಮ ಮನೆಗಳಲ್ಲಿ ಕೊಂಕಣಿಯಲ್ಲಿಯೇ ಮಾತನಾಡುವ ಮೂಲಕ ಈ ಭಾಷೆಯನ್ನು ಉಳಿಸಿ ಬೆಳೆಸಲು ಮುಂದಾಗಬೇಕು ಎಂದು ಕರೆ ನೀಡಿದರು. ಮುಖ್ಯ ಅತಿಥಿಯಾಗಿದ್ದ ಮಂಗಳೂರು ಧರ್ಮಕ್ಷೇತ್ರದ ಸಾರ್ವಜನಿಕ ಸಂಪರ್ಕ ಅಧಿಕಾರಿ ಹಾಗೂ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ರೋಯ್ ಕ್ಯಾಸ್ತೆಲಿನೊರವರು  […]

News

ಬಿ.ಎಲ್. ಸಂತೋಷ್ ವಿರುದ್ದ ಅವಹೇಳನಕಾರಿ ಹೇಳಿಕೆ – ತಿಮರೋಡಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ ನ್ಯಾಯಾಲಯ

ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದಲ್ಲಿ ಅರೆಸ್ಟ್ ಆಗಿರುವ ಸೌಜನ್ಯಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಗೆ ಉಡುಪಿ ಜಿಲ್ಲಾ ನ್ಯಾಯಾಲಯ ಇಂದು ಆಗಸ್ಟ್ 23ರಂದು ಶನಿವಾರ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ. ಬಿ.ಎಲ್. ಸಂತೋಷ್ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನಲೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಮಹೇಶ್‌ ತಿಮರೋಡಿ ವಿರುದ್ಧ ದೂರು ದಾಖಲಾಗಿತ್ತು. ಈ ಹಿನ್ನಲೆ ಬ್ರಹ್ಮಾವರ ಪೊಲೀಸರು ಉಜಿರೆಯ ತಿಮರೋಡಿ ನಿವಾಸಕ್ಕೆ ತೆರಳಿ ಅವರನ್ನು […]

News

ಧರ್ಮಸ್ಥಳ ಸಾಮೂಹಿಕ ಶವ ಹೂತ ಪ್ರಕರಣ – ಪ್ರಮುಖ ದೂರುದಾರನನ್ನೇ ಬಂದಿಸಿದ ಎಸ್‌ಐಟಿ

ಧರ್ಮಸ್ಥಳದಲ್ಲಿ ಹಲವು ಕೊಲೆ ಪ್ರಕರಣಗಳ ಶವಗಳನ್ನು ಹೂತು ಹಾಕಿದ್ದೇನೆ ಎಂದು ಆರೋಪಿಸಿದ್ದ ಹಳೆಯ ಶೌಚಾಲಯ ಕಾರ್ಮಿಕನನ್ನೇ ವಿಶೇಷ ತನಿಖಾ ತಂಡ (ಎಸ್‌ಐಟಿ) ಬಂಧಿಸಿದೆ ಎಂದು  ಆಗಸ್ಟ್ 23ರಂದು ಶನಿವಾರ ಪಿಟಿಐ ಮೂಲಗಳು ತಿಳಿಸಿವೆ. ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ ಅವರ ನೇತೃತ್ವದಲ್ಲಿ ನಿನ್ನೆ ಆಗಸ್ಟ್ 22ರಂದು ಶುಕ್ರವಾರ ದೂರುದಾರನನ್ನು ದೀರ್ಘಕಾಲ ವಿಚಾರಣೆ ನಡೆಸಲಾಗಿತ್ತು. ವಿಚಾರಣೆ ವೇಳೆ ನೀಡಿದ ಹೇಳಿಕೆಗಳು ಹಾಗೂ ದಾಖಲೆಗಳಲ್ಲಿ ತಾರತಮ್ಯ ಕಂಡುಬಂದ ಹಿನ್ನೆಲೆಯಲ್ಲಿ ಬಂಧನ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೀರ್ಘ ವಿಚಾರಣೆಯ ನಂತರ […]

News

ಪ್ರತಿಭಾವಂತ ಡಿ.ಜೆ. ಮರ್ವಿನ್ ರಸ್ತೆ ಅಪಘಾತದಲ್ಲಿ ದುರ್ಮರಣ

ಬೀದಿನಾಯಿಗಳು ಮತ್ತೆ ಕಸಿದುಕೊಂಡ ಜೀವ – ರಸ್ತೆ ಸುರಕ್ಷತೆಯ ಬಗ್ಗೆ ಎದ್ದ ಪ್ರಶ್ನೆ ಬೆಳ್ಮಣ್ ಮೂಲದ 35 ವರ್ಷ ಪ್ರಾಯದ ಮರ್ವಿನ್ ಮೆಂಡೊನ್ಸಾರವರು ಇಂದು ಆಗಸ್ಟ್ 23ರಂದು ಶನಿವಾರ ರಸ್ತೆ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ. ಉಡುಪಿ–ಮಂಗಳೂರು ಮಾರ್ಗದಲ್ಲಿ ಮೂಲೂರು ಹತ್ತಿರ ಕಾರು ಪಲ್ಟಿಯಾದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಆ ವೇಳೆ ಅವರು ವೀಡಿಯೋ ಎಡಿಟರ್ ಪ್ರಜ್ವಲ್ ಸುವರ್ಣ, ಪ್ರಸಾದ್, ವಿನೇಶ್ ಹಾಗೂ ಇನ್ನೊಬ್ಬರೊಂದಿಗೆ ಪ್ರಯಾಣಿಸುತ್ತಿದ್ದರು. ಮಧ್ಯ ರಾತ್ರಿ ಸುಮಾರು 3 ಗಂಟೆಯ ಸಮಯದಲ್ಲಿ ರಸ್ತೆ ಮಧ್ಯೆ ಓಡಿಬಂದಿದ್ದ […]

You cannot copy content of this page