November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬಂಟ್ವಾಳ ಕಚೇರಿಯ ಭೂಮಾಪಕ ರಾಮಚಂದ್ರರವರು ನಿಧನ

ಬಂಟ್ವಾಳ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಭೂಮಾಪಕರಾಗಿ ಕರ್ತವ್ಯ ಸಲ್ಲಿಸುತ್ತಿದ್ದ 48 ವರ್ಷ ಪ್ರಾಯದ ರಾಮಚಂದ್ರರವರು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಆಗಸ್ಟ್ 7ರಂದು ಗುರುವಾರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಮೃತರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಮೂಲತಃ ಚಾಮರಾಜನಗರ ಜಿಲ್ಲೆಯವರಾದ ಅವರು 2010ರಲ್ಲಿ ಇಲಾಖೆಗೆ ಕರ್ತವ್ಯಕ್ಕೆ ಸೇರಿದ್ದರು. ಅವರ ಪತ್ನಿ ಬೆಳ್ತಂಗಡಿ ನ್ಯಾಯಾಲಯದಲ್ಲಿ ಉದ್ಯೋಗಿಯಾಗಿದ್ದಾರೆ.

News

ಮೂಡಬಿದ್ರೆ ಅಲಂಗಾರ್ ಚರ್ಚ್ ಧರ್ಮಗುರುಗಳಾದ ಫಾದರ್ ಮೆಲ್ವಿನ್ ನೊರೊನ್ಹಾರವರಿಗೆ ಮಾತೃವಿಯೋಗ

ಆಗಸ್ಟ್ 10ರಂದು ಆದಿತ್ಯವಾರ ಸಂಜೆ 4:00 ಗಂಟೆಗೆ ತಾಕೊಡೆ ಚರ್ಚ್ ನಲ್ಲಿ ಅಂತ್ಯಕ್ರಿಯೆ ಮಂಗಳೂರು ಧರ್ಮಕ್ಷೇತ್ರದ ಮೂಡಬಿದ್ರೆ ಅಲಂಗಾರ್ ಚರ್ಚ್ ಧರ್ಮಗುರುಗಳಾದ ವಂದನೀಯ ಫಾದರ್ ಮೆಲ್ವಿನ್ ನೊರೊನ್ಹಾರವರ ತಾಯಿ 79 ವರ್ಷ ಪ್ರಾಯದ ಲೀನಾ ನೊರೊನ್ಹಾರವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ತಾಕೊಡೆಯ ದಿವಂಗತ ಪೀಟರ್ ನೊರೊನ್ಹಾರವರ ಪತ್ನಿಯಾಗಿರುವ ಲೀನಾ ನೊರೊನ್ಹಾರವರು ವಂದನೀಯ ಫಾದರ್ ಮೆಲ್ವಿನ್ ನೊರೊನ್ಹಾ ಸಹಿತ ನಾಲ್ವರು ಪುತ್ರರು, ಮೂವರು ಪುತ್ರಿಯರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಫಾದರ್ ಮೆಲ್ವಿನ್ ನೊರೊನ್ಹಾರವರು ಮಂಗಳೂರು ಧರ್ಮಕ್ಷೇತ್ರದ ಅತ್ಯಂತ ಗೌರವಾನ್ವಿತ ಹಾಗೂ […]

News

ನರ್ಸಿಂಗ್ ವಿದ್ಯಾರ್ಥಿ ಮೆಲ್ ರೊಯ್ ಶೋನ್ ಡಿಸೋಜ ಅಪಘಾತದಲ್ಲಿ ಮೃತ್ಯು

ದ್ವಿಚಕ್ರ ವಾಹನವೊಂದು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಂಟೇನರ್‌ಗೆ ಢಿಕ್ಕಿ ಹೊಡೆದ ಪರಿಣಾಮವಾಗಿ 24 ವರ್ಷ ಪ್ರಾಯದ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ಘಟನೆ ಬಲ್ಮಠದಲ್ಲಿ ನಡೆದಿದೆ. ಬಂಟ್ವಾಳ ಮೊಡಂಕಾಪು ನಿವಾಸಿ ಮೆಲ್ ರೊಯ್ ಶೋನ್ ಡಿಸೋಜ ಮೃತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಮೆಲ್ ರೊಯ್ ಶೋನ್ ಡಿಸೋಜ ಮಂಗಳೂರಿನ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ GNM ಮೂರನೇ ವರ್ಷ ವ್ಯಾಸಂಗ ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಸರ್ಕಾರಿ ಆಸ್ಪತ್ರೆಯಲ್ಲಿ ಇಂಟರ್ನ್ ಆಗಿಯೂ ಕೆಲಸ ಮಾಡುತ್ತಿದ್ದರು. ಘಟನೆಯ ಬಗ್ಗೆ ಕದ್ರಿ ಸಂಚಾರ ಪೊಲೀಸ್‌ ಠಾಣೆಯಲ್ಲಿ […]

News

ಒಡಿಶಾ ರಾಜ್ಯದಲ್ಲಿ ನಡೆದ ಕ್ರೈಸ್ತ ಧರ್ಮಗುರುಗಳ ಹಾಗೂ ಸನ್ಯಾಸಿನಿಯರ ಮೇಲಿನ ಹಿಂಸಾತ್ಮಕ ದಾಳಿಗೆ AICU ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ತೀವ್ರ ಖಂಡನೆ

ಜಲೇಶ್ವರ (ಒಡಿಶಾ) ಧರ್ಮಕ್ಷೇತ್ರದ ವ್ಯಾಪ್ತಿಯ ಗಂಗಾಧರ ಮಿಷನ್‌ ಕೇಂದ್ರದಲ್ಲಿ ನಿನ್ನೆ ಆಗಸ್ಟ್ 6ರಂದು ಬುಧವಾರ ನಡೆದ ಕ್ರೂರ, ಕಲ್ಪಿತ ಹಾಗೂ ಪೂರ್ವನಿಯೋಜಿತ ದಾಳಿಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಈ ಹೀನಕೃತ್ಯವನ್ನು ಸುಮಾರು 70ಕ್ಕೂ ಹೆಚ್ಚು ಬಜರಂಗದಳದ ಕಾರ್ಯಕರ್ತರು ಕೈಗೊಂಡಿದ್ದು, ಇಬ್ಬರು ಕಥೊಲಿಕ್ ಧರ್ಮಗುರುಗಳು, ಇಬ್ಬರು ಕ್ರೈಸ್ತ ಸನ್ಯಾಸಿನಿಯರು ಮತ್ತು ಅವರ ಒಬ್ಬ ಹಿಂಬಾಲಕರ ಮೇಲೆ ತೀವ್ರವಾಗಿ ಹಲ್ಲೆ ನಡೆಸಲಾಗಿದೆ ಎಂದು AICU ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಹೇಳಿದರು. ದುಃಖಿತ ಕುಟುಂಬಗಳ ಮರಣ ವಾರ್ಷಿಕ ಪ್ರಾರ್ಥನೆಗಾಗಿ ಹೋಗಿದ್ದ […]

News

ಧರ್ಮಗುರು ಅತೀ ವಂದನೀಯ ಫಾದರ್ ಎಲೋಶಿಯಸ್ ಡಿಸೋಜ ಇನ್ನಿಲ್ಲ

ಮಂಗಳೂರು ಧರ್ಮಕ್ಷೇತ್ರದಲ್ಲಿ ನೂರು ವರ್ಷ ಜೀವಿಸಿದ ಮೊದಲ ಧರ್ಮಗುರು ಮಂಗಳೂರು ಧರ್ಮಕ್ಷೇತ್ರದ ಅತ್ಯಂತ ಗೌರವಾನ್ವಿತ ಮತ್ತು ಹಿರಿಯ ಧರ್ಮಗುರುಗಳಲ್ಲಿ ಒಬ್ಬರಾದ ಅತೀ ವಂದನೀಯ ಫಾದರ್ ಎಲೋಶಿಯಸ್ ಡಿಸೋಜರವರು ವಿಧಿವಶರಾಗಿದ್ದಾರೆ. ಅವರು ಇಂದು ಆಗಸ್ಟ್ 7ರಂದು ಗುರುವಾರ ಬೆಳಿಗ್ಗೆ ಜೆಪ್ಪುಸಂತ ಜುಜೆ ವಾಸ್ ಹೋಂನಲ್ಲಿ ತಮ್ಮ 100 ವರ್ಷ 7 ತಿಂಗಳ ಜೀವನವನ್ನು ಕೊನೆಗೊಳಿಸಿದರು. ಅವರ ಅಂತ್ಯಕ್ರಿಯಾ ಪೂಜೆ ಹಾಗೂ ಇತರ ವಿಧಿವಿಧಾನಗಳು ಆಗಸ್ಟ್ 8ರಂದು ಶುಕ್ರವಾರ ಸಂಜೆ 4:00 ಗಂಟೆಗೆ ಮಂಗಳೂರಿನ ವೆಲೆನ್ಸಿಯಾ ಚರ್ಚ್‌ನಲ್ಲಿ ನಡೆಯಲಿದೆ. ಧರ್ಮಪಥದ 72 […]

News

ಕಲಾಸಾಧನ ಮಂಗಳೂರು ಇದರ ವತಿಯಿಂದ ಆಗಸ್ಟ್ 10ರಂದು ಕಲಾಸಾಧನ ‘ಸ್ವರಧಾರ’ ಸಂಗೀತ ಉತ್ಸವ

ಮಂಗಳೂರು ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿಯವರಿಂದ ಕಾರ್ಯಕ್ರಮದ ಉದ್ಘಾಟನೆ ಕಲಾಸಾಧನ ಮಂಗಳೂರು ಇದರ ವತಿಯಿಂದ ಸ್ವರಧಾರಾ ಸಂಗೀತ ಉತ್ಸವ ಆಗಸ್ಟ್ 10ರಂದು ಆದಿತ್ಯವಾರ ಸಂಜೆ 5ಗಂಟೆಯಿಂದ ನಗರದ ಓಶಿಯನ್ ಪರ್ಲ್  ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿಯವರು ನೆರವೇರಿಸಲಿದ್ದಾರೆ. ಉತ್ಸವದಲ್ಲಿ ಪ್ರಸಿದ್ಧ ಹಿಂದೂಸ್ತಾನಿ ಗಾಯಕ ಸಂಗೀತ ನಾಟಕ ಅಕಾಡೆಮಿ ನವದೆಹಲಿಯಿಂದ ಭಾರತರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ ಪಂಡಿತ್ ಕುಮಾರ್ ಮರ್ದೂರ್ ಭಾಗವಹಿಸಲಿದ್ದಾರೆ.  ಕುಮಾರ್ […]

News

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ (ರಿ.) ಇದರ ಸುವರ್ಣ ಸಂಭ್ರಮ

ವಾಸ್ತವಾಂಶಕ್ಕೆ ಮಾತ್ರ ಮಾಧ್ಯಮ ಆದ್ಯತೆ ನೀಡಲಿ – ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಆಶಯ ಡಾ.ಎಂ. ಮೋಹನ ಆಳ್ವರಿಗೆ ಸುವರ್ಣ ಸಂಭ್ರಮ ಗೌರವ ಪ್ರಶಸ್ತಿ ತಂತ್ರಜ್ಞಾನ ಬೆಳೆದ ಬಳಿಕ ಮಾಧ್ಯಮ ಕ್ಷೇತ್ರ ವಿಸ್ತಾರವಾಗಿದೆ. ಸಮಾಜದ ವಾಸ್ತವದ ಸತ್ಯ ಸಂಗತಿಗಳನ್ನು ಜನರ ಮುಂದಿಡುವ ಕೆಲಸ ಆಗಬೇಕು. ಮಾಧ್ಯಮ ಶಕ್ತಿಯ ಸದ್ಭಳಕೆ ಇಂದಿನ ಅಗತ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿದರು. ಅವರು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಗಸ್ಟ್ 6ರಂದು ಬುಧವಾರ ನಡೆದ ದಕ್ಷಿಣ […]

News

ರಾಜ್ಯದಲ್ಲಿ ಶಾಲಾ ವೇಳೆಯಲ್ಲಿ ಶಿಕ್ಷಕರು ಮೊಬೈಲ್ ಬಳಸುವಂತಿಲ್ಲ – ಶಿಕ್ಷಣ ಇಲಾಖೆಯ ಮಹತ್ವದ ಆದೇಶ

ರಾಜ್ಯದಲ್ಲಿ ಶಾಲಾ ವೇಳೆಯಲ್ಲಿ ಶಿಕ್ಷಕರ ಮೊಬೈಲ್ ಬಳಕೆಯನ್ನು ನಿಯಂತ್ರಣಕ್ಕೆ ಒಳವಡಿಸುವ ಕುರಿತು ಶಾಲಾ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಶಿಕ್ಷಕರು ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಶಾಲೆಗಳಲ್ಲಿ ಮೊಬೈಲ್ ಉಪಯೋಗಿಸುತ್ತಿರುವುದರಿಂದ ಬೋಧನಾ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವುದು ತಿಳಿದುಬಂದಿದೆ. ಶಾಲೆಗಳಲ್ಲಿ ಉತ್ತಮ ವಾತಾವರಣವನ್ನು ಕಲ್ಪಿಸುವ ಸಲುವಾಗಿ ಮೊಬೈಲ್ ಗಳ ಬಳಕೆಯನ್ನು ಉಲ್ಲೇಖಿತ ಆದೇಶಗಳ ರೀವಾ ಈಗಾಗಲೇ ನಿಷೇದಿಸಲಾಗಿರುತ್ತದೆ. ಶಾಲಾ ಮುಖ್ಯಶಿಕ್ಷಕರಿಗೆ ವಿನಾಯಿತಿ ನೀಡಲಾಗಿದ್ದರೂ ಸಹ ಅವರು ತಮ್ಮ ಬೋಧನಾ ಕಾರ್ಯದ ಅವಧಿಯಲ್ಲಿ ಮೊಬೈಲ್ ಗಳನ್ನು ಬಳಸುವುದನ್ನು ನಿಷೇಧಿಸಿದೆ […]

News

ತಾಕೊಡೆಯಲ್ಲಿ ಮಹಿಳೆಯರಿಗಾಗಿ 5 ದಿವಸಗಳ ಕೌಶಲ್ಯ ತರಬೇತಿಯ ಉದ್ಘಾಟನೆ

ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಬ್ಯಾಂಕ್ ಒಫ್ ಬರೋಡ ಮೂಡಬಿದ್ರಿ ಶಾಖೆ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಪವಿತ್ರ ಶಿಲುಬೆಯ ದೇವಾಲಯ ತಾಕೊಡೆ  ಹಾಗೂ ಸ್ತ್ರೀ ಸಂಘಟನೆ ತಾಕೊಡೆ ಘಟಕ ಇವರ ಜಂಟಿ ಆಶ್ರಯದಲ್ಲಿ ಆಗಸ್ಟ್ 4 ಸೋಮವಾರದಿಂದ ಆಗಸ್ಟ್ 8 ಗುರುವಾರದ ತನಕ 5 ದಿವಸಗಳ ಸೀರೆಗೆ ಗೊಂಡೆ ಹಾಕುವ ಕೌಶಲ್ಯ ತರಬೇತಿಯ ಉದ್ಘಾಟನಾ ಸಮಾರಂಭ ತಾಕೊಡೆ ಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಮೊದಲಿಗೆ ಮಹಿಳೆಯರು ಪ್ರಾರ್ಥನಾ ಗೀತೆ ಹಾಡಿ ದೇವರ ಅನುಗ್ರಹ ಬೇಡಿದರು. […]

News

ಬೈಂದೂರಿನಲ್ಲಿ ಎಂ.ಸಿ.ಸಿ. ಬ್ಯಾಂಕಿನ 20ನೇ ಶಾಖೆ ಉದ್ಘಾಟನೆ

ತನ್ನ ಬೆಳವಣಿಗೆಯ ಪಯಣದಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುವ ಮೂಲಕ, ಎಂ.ಸಿ.ಸಿ. ಬ್ಯಾಂಕ್ ತನ್ನ 20ನೇ ಶಾಖೆಯನ್ನು ಬೈಂದೂರಿನ ಪೆಟ್ರೋಲ್ ಬಂಕ್ ಬಳಿಯ ಮುಖ್ಯ ರಸ್ತೆಯ ದೀಪಾ ಕಾಂಪ್ಲೆಕ್ಸ್ ನ ನೆಲ ಮಹಡಿಯಲ್ಲಿ ಆಗಸ್ಟ್ 3ರಂದು ಆದಿತ್ಯವಾರ  ಉದ್ಘಾಟಿಸಿತು. ಈ ಶಾಖೆಯನ್ನು ಎಂ.ಸಿ.ಸಿ. ಬ್ಯಾಂಕಿನ ಅಧ್ಯಕ್ಷ ‘ಸಹಕಾರ ರತ್ನ’  ಅನಿಲ್ ಲೋಬೊರವರು ಗಣ್ಯ ಅತಿಥಿಗಳು, ಸಮುದಾಯದ ಸದಸ್ಯರು ಮತ್ತು ಬ್ಯಾಂಕ್ ಅಧಿಕಾರಿಗಳ ಸಮ್ಮುಖದಲ್ಲಿ ಉದ್ಘಾಟಿಸಿದರು. ಬೈಂದೂರಿನ ಹೋಲಿ ಕ್ರಾಸ್ ಚರ್ಚ್’ನ ಧರ್ಮಗುರುಗಳಾದ ವಂದನೀಯ ಫಾದರ್ ವಿನ್ಸೆಂಟ್ ಕುವೆಲ್ಲೊರವರು ಆಶೀರ್ವದಿಸಿ, ಹೊಸ […]

You cannot copy content of this page