November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

Father Muller Inaugurates Baandavya Child Development Centre – A New Dawn for Holistic Pediatric Care

The Father Muller Charitable Institutions (FMCI) marked a historic milestone with the inauguration of Baandavya Child Development Centre—a visionary initiative offering one-point, comprehensive care for children with developmental challenges. The centre was inaugurated by Rev. Fr Faustine Lucas Lobo Director of FMCI and Dr Rajesh Shetty Managing Director of First Neuro Hospital. Located on the […]

News

ಕೇಂಬ್ರಿಡ್ಜ್ ಶಾಲೆಯ ಕನ್ನಡ ಶಿಕ್ಷಕಿ ಸಪ್ನಾ ಕ್ರಾಸ್ತಾರವರಿಗೆ ಪರೀಕ್ಷಾ ಸ್ಫೂರ್ತಿ ಗುರು ಶ್ರೇಷ್ಠ ಪ್ರಶಸ್ತಿ

ಮಂಗಳೂರು ಪಾಲ್ದಾನೆ ಕೇಂಬ್ರಿಡ್ಜ್ ಶಾಲೆಯ ಕನ್ನಡ ಶಿಕ್ಷಕಿ ಸಪ್ನಾ ಕ್ರಾಸ್ತಾರವರಿಗೆ ಪರೀಕ್ಷಾ ಸ್ಪೂರ್ತಿ ಫೌಂಡೇಶನ್ ಹಾಗೂ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ 2025ನೇ ಸಾಲಿನ ಪರೀಕ್ಷಾ ಸ್ಫೂರ್ತಿ ಗುರು ಶ್ರೇಷ್ಠ ಪ್ರಶಸ್ತಿ ಪ್ರದಾನ ಮಾಡಲಾಗಿದೆ.   ಕೇಂದ್ರೀಯ ಪಠ್ಯಕ್ರಮ (ಸಿಬಿಎಸ್ಇ) ಶಾಲೆಯ ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಪ್ರೇಮ ಕಲಿಸಿ, ಹತ್ತನೆಯ ತರಗತಿ ಮುಖ್ಯ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಪೂರ್ಣಾಂಕ ಗಳಿಸಲು ಅತ್ಯುತ್ತಮ ಬೋಧನೆಯ ಜೊತೆಗೆ ಸೂಕ್ತ ಮಾರ್ಗದರ್ಶನ ಮಾಡಿದ್ದಕ್ಕಾಗಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

News

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಿಂದ ಗಣೇಶ ಹಬ್ಬದ ಶಾಂತಿ ಹಾಗೂ ಸೌಹಾರ್ದತೆಯಿಗಾಗಿ ವಿಶೇಷ ಸಭೆ

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 2025ರ ಗಣೇಶ ಹಬ್ಬದ ನಿಮಿತ್ತ ಶಾಂತಿ, ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಇಂದು ಆಗಸ್ಟ್ 11ರಂದು ಸೋಮವಾರ ವಿಶೇಷ ಸಭೆ ನಡೆಯಿತು. ಭಟ್ಕಳ ಗ್ರಾಮೀಣ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಮಂಜುನಾಥ ಅರ್ಜುನ ಲಿಂಗಾರೆಡ್ಡಿ, ಸಬ್ ಇನ್ಸ್ ಪೆಕ್ಟರ್‌ಗಳಾದ ರನ್ನಗೌಡ ಮತ್ತು ಭರಮಪ್ಪ ಅವರ ನೇತೃತ್ವದಲ್ಲಿ ಈ ಸಭೆ ನಡೆಯಿತು. ಸಭೆಯಲ್ಲಿ ವಿವಿಧ ಗ್ರಾಮಗಳ ಗಣೇಶೋತ್ಸವ ಸಮಿತಿಯ ಸದಸ್ಯರು, ಗ್ರಾಮಸ್ಥರು ಹಾಗೂ ವಿವಿಧ ಸಮುದಾಯದ ಮುಖಂಡರು ಭಾಗವಹಿಸಿದ್ದರು. ಪೊಲೀಸ್ ಇಲಾಖೆ […]

News

ಧರ್ಮಸ್ಥಳ ಪ್ರಕರಣದ SIT ತನಿಖೆಯ ಮಧ್ಯಂತರ ವರದಿಗೆ ಜೈನ ಸಮುದಾಯ ಮುಖಂಡರ ಆಗ್ರಹ

ಧರ್ಮಸ್ಥಳದಲ್ಲಿ ಶವಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ SIT ನಡೆಸುತ್ತಿರುವ ತನಿಖೆಯ ಮಧ್ಯಂತರ ವರದಿಯನ್ನು SIT ಪ್ರಕಟಿಸಬೇಕು ಎಂದು ಜೈನ ಸಮಾಜದ ಮುಖಂಡರು ಆಗ್ರಹಿಸಿದರು. ಹುಬ್ಬಳ್ಳಿಯ ವರೂರಿನ ನವಗ್ರಹತೀರ್ಥ ಕ್ಷೇತ್ರದಲ್ಲಿ ಗುಣಧರನಂದಿ ಮಹಾರಾಜರ ನೇತೃತ್ವದಲ್ಲಿ ಆಗಸ್ಟ್ 10ರಂದು ಭಾನುವಾರ ನಡೆದ ಜೈನ ಸಮಾಜದ ಮುಖಂಡರು, ಜೈನ ಮುನಿಗಳ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು ಈ ಕುರಿತಂತೆ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯ ಹಾಗೂ ಗೃಹ ಸಚಿವರಾದ ಸನ್ಮಾನ್ಯ ಜಿ. ಪರಮೇಶ್ವರ್ ಇವರನ್ನು ಭೇಟಿಯಾಗಿ ಮನವಿ ಸಲ್ಲಿಸಲು ನಿರ್ಣಯಿಸಲಾಯಿತು. ಪ್ರಕರಣದ ಸಾಕ್ಷಿ ದೂರುದಾರ […]

News

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯ ಬಂಧನ

ನ್ಯಾಯಾಲಯದ ವಾರಂಟ್ ಇದ್ದರೂ ಕೂಡ ಎಲ್ಲರ ಕಣ್ಣು ತಪ್ಪಿಸಿ ಓಡಾಡುತ್ತಿರುವ ರಾಯಚೂರು ಮೂಲದ ಆರೋಪಿಯೊಬ್ಬನನ್ನು 4 ವರ್ಷಗಳ ಬಳಿಕ ಕೊಪ್ಪಳ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿದ್ದ ಆರೋಪಿ 35 ವರ್ಷ ಪ್ರಾಯದ ನಾಗರಾಜ್ ನಾರಾಯಣ ನಾಯ್ಕ ನ್ಯಾಯಾಲಯಕ್ಕೆ ಹಾಜರಗಿರಲಿಲ್ಲ, ಈಗ ಕೊನೆಗೆ ಕೊಪ್ಪಳ ಜಿಲ್ಲೆ ಕಾರಟಗಿಯಲ್ಲಿ ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಈತನ ವಿರುದ್ಧ ಭಟ್ಕಳ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ 2016ರ ಪ್ರಕರಣ ಸಂಖ್ಯೆ 157/2016 ಅಡಿಯಲ್ಲಿ IPC ಸೆಕ್ಷನ್ 457 ಮತ್ತು 380 ಅನ್ವಯ ಆರೋಪ ದಾಖಲಾಗಿತ್ತು. […]

News

ನೀರ್ಮಾರ್ಗ ಚರ್ಚ್ ನಲ್ಲಿ ಸಾಂಪ್ರಾದಾಯಿಕ ಆಹಾರ ಉತ್ಸವ

ಮಹಿಳಾ ಆಯೋಗ ಮತ್ತು ಮದರ್ ಮೇರಿ ಮಹಿಳಾ ಸಂಘಟನೆಯ ಜಂಟಿ ಆಶ್ರಯ ಸೈಂಟ್ ಜೋಸೆಫ್ ದಿ ವರ್ಕರ್ ಚರ್ಚ್ ನೀರ್ಮಾರ್ಗದ ಮಹಿಳಾ ಆಯೋಗ ಮತ್ತು ಮದರ್ ಮೇರಿ ಮಹಿಳಾ ಸಂಘಟನೆಯ ಜಂಟಿ ಆಶ್ರಯದಡಿ ಆಗಸ್ಟ್ 3ರಂದು ಸಂಜೆ 5:00 ಗಂಟೆಗೆ ಸಾಂಪ್ರಾದಾಯಿಕ ಆಹಾರ ಉತ್ಸವವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಫಿಲೋಮಿನಾ ಸಾಜಿ ಅವರು ಗೌರವಾನ್ವಿತ ಅತಿಥಿಗಳನ್ನು ವೀಳ್ಯದೆಲೆ‌, ಅಡಿಕೆ ಮತ್ತು  ಜಲದೊಂದಿಗೆ  ಸ್ವಾಗತಿಸಿದರು. ಚರ್ಚ್ ಧರ್ಮಗುರು ವಂದನೀಯ ಫಾದರ್ ಪಾವ್ಲ್ ಪಿಂಟೊರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ […]

News

Daijiworld TV’s Tulu Comedy Hit ‘Private Challenge’ to Celebrate Landmark 200th Episode

Daijiworld Television’s immensely popular Tulu comedy show Private Challenge is all set to celebrate a historic milestone with the telecast of its 200th episode on Sunday, August 10, at 9:00 PM IST. The landmark episode will be broadcast on Daijiworld TV and will also stream simultaneously on YouTube and other social media platforms. Launched on […]

News

ಕರಾವಳಿ ಕರ್ನಾಟಕಕ್ಕೆ ವೃತ್ತಿಪರರನ್ನು ಆಕರ್ಷಿಸಲು ಎಸ್‌ಬಿಪಿ ‘ಹೋಮ್‌ಕಮಿಂಗ್’ ವೇದಿಕೆ ಪ್ರಾರಂಭ

ತಾಂತ್ರಿಕ ಪ್ರತಿಭೆಗಳ ಪುನರಾಗಮನದ ಮಂಚೂಣಿಯಲ್ಲಿ ಕರಾವಳಿ ಕರ್ನಾಟಕ ಸಿಲಿಕಾನ್ ಬೀಚ್ ಪ್ರೋಗ್ರಾಂ (SBP) ಆಗಸ್ಟ್ 9ರಂದು ಶನಿವಾರ ಯೆಯ್ಯಾಡಿಯ ಕ್ಯೂಬಾಯ್ಡ್, wrkwrk ಮೈಂಡ್‌ಸ್ಪೇಸ್‌ನಲ್ಲಿ ‘ಹೋಮ್‌ಕಮಿಂಗ್‘ ವೇದಿಕೆಯನ್ನು ಪ್ರಾರಂಭಿಸಿತು. ಈ ಕಾರ್ಯಕ್ರಮವನ್ನು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರವರು ಉದ್ಘಾಟಿಸಿದರು. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರವರು “‘ಹೋಮ್‌ಕಮಿಂಗ್‘ ಉಪಕ್ರಮಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತಾ ಮಂಗಳೂರಿನ ಬಗ್ಗೆ ಅನೇಕ ಪುರಾಣಗಳನ್ನು ಇಂದು ಹೊರಹಾಕಲಾಗಿದೆ. ಇತ್ತೀಚೆಗೆ, ಒಂದು ಸಮೀಕ್ಷೆಯು ಮಂಗಳೂರನ್ನು ಸುರಕ್ಷಿತ ನಗರಗಳಲ್ಲಿ ಒಂದೆಂದು ಶ್ರೇಣೀಕರಿಸಿದೆ. ದುರದೃಷ್ಟವಶಾತ್, ಇಲ್ಲಿ ವಾಸಿಸದವರು ಹೆಚ್ಚಾಗಿ ಸಣ್ಣ ಸಮಸ್ಯೆಗಳನ್ನು […]

News

ಭಟ್ಕಳದಲ್ಲಿ ಅಡಿಕೆ ಕಳ್ಳತನ – ಐವರು ಶಂಕಿತರ ಬಂಧನ, ಒಬ್ಬ ಪರಾರಿ

ಭಟ್ಕಳ ತಾಲೂಕಿನ ಮಾರುತೇರಿ ಗ್ರಾಮದ ಕೊಗೊಂಡದಲ್ಲಿ ನಡೆದ ಅಡಿಕೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಶಂಕಿತರನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿತ ಪರಾರಿಯಾಗಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಸ್ಥಳೀಯ ರೈತ 76 ವರ್ಷ ಪ್ರಾಯದ ನಾಗಪ್ಪಯ್ಯರವರು ನೀಡಿದ ದೂರಿನಂತೆ, ಜುಲಾಯಿ 16ರ ರಾತ್ರಿ 7 ಗಂಟೆಯಿಂದ ಜುಲಾಯಿ 17ರ ಬೆಳಿಗ್ಗೆ 7 ಗಂಟೆ ನಡುವಿನ ಅವಧಿಯಲ್ಲಿ, ಸುಮಾರು 250 ಕೆ.ಜಿ. ಅಡಿಕೆ (ಸಿಪ್ಪೆ ಸಮೇತ), ಅಂದಾಜು ₹70,000 ಮೌಲ್ಯದಷ್ಟು ಅಡಿಕೆಯನ್ನು ಅವರ ಹಳೆಯ ಮನೆಯಿಂದ ಕಳ್ಳರು […]

You cannot copy content of this page