“ಗೆಜ್ಜೆ ನಾದದಲ್ಲಿ ಅರಳಿದ ಪ್ರತಿಭೆ – ಅರಂಗೇಟ್ರಂಗೆ ಶ್ರಾವ್ಯ ಬಿ.ಎಸ್. ಸಜ್ಜು”
ಬಾಲ್ಯದಲ್ಲೇ ಆರಂಭವಾದ ಭರತನಾಟ್ಯದ ಪಯಣ – ಹಲವು ಪ್ರತಿಷ್ಠಿತ ಪ್ರಶಸ್ತಿಗಳೊಂದಿಗೆ ಕಲಾಸಾಧನೆಯ ಹೊಸ ಅಧ್ಯಾಯಕ್ಕೆ ಹೆಜ್ಜೆ ಮಂಗಳೂರು: ಪುಟ್ಟ ಹೆಜ್ಜೆಗಳಲ್ಲಿ ಲಯವನ್ನು ಅರಿತು, ತಾಳಕ್ಕೆ ಹೆಜ್ಜೆ ಹಾಕುತ್ತಾ ಆರಂಭವಾದ ಭರತನಾಟ್ಯದ ಪಯಣ ಇಂದು ಅರಂಗೇಟ್ರಂನ ಮಹತ್ವದ ಘಟ್ಟವನ್ನು ತಲುಪಿದೆ. ಶ್ರಾವ್ಯ ಬಿ.ಎಸ್. ಅವರು ವರ್ಷಗಳ ಕಾಲ ಕಲಿತ ನೃತ್ಯ, ಸಂಗೀತ ಹಾಗೂ ಕಲಾನುಭವವನ್ನು ರಂಗದ ಮೇಲೆ ಸಮರ್ಪಿಸಲು ಸಜ್ಜಾಗಿದ್ದಾರೆ. 23 ಜನವರಿ 2005ರಂದು ಜನಿಸಿದ ಶ್ರಾವ್ಯ, ಶ್ರೀಕೃಷ್ಣ ಮಯ್ಯ ಹಾಗೂ ಬಬಿತಾ ಕೃಷ್ಣ ಮಯ್ಯ ಅವರ ಪುತ್ರಿ ಮತ್ತು […]













