November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬಿಜೈ ಕಾಪಿಕಾಡ್ ಅಂಗನವಾಡಿ ಪುಟಾಣಿಗಳಿಗೆ ನೆರವಿನ ಹಸ್ತ – ಬಟ್ಟೆ ಬ್ಯಾಗ್ ಹಾಗೂ ಸಿಹಿತಿಂಡಿ ವಿತರಣೆ

ಮಂಗಳೂರು: ಮುಂಬೈನ ಲೋಬೊ ಫೌಂಡೇಶನ್ ಹಾಗೂ ಗ್ಲೋಬಲ್ ಸಿಂಪಥಿ ಫೌಂಡೇಶನ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಿಶು ಅಭಿವೃದ್ಧಿ ಯೋಜನೆಯ ವ್ಯಾಪ್ತಿಯ ಬಿಜೈ ಕಾಪಿಕಾಡ್ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಬಟ್ಟೆ ಬ್ಯಾಗ್ ಹಾಗೂ ಸಿಹಿತಿಂಡಿಗಳನ್ನು ವಿತರಿಸಲಾಯಿತು. ಮಕ್ಕಳ ಶೈಕ್ಷಣಿಕ ಕಲಿಕೆಗೆ ಮತ್ತಷ್ಟು ಅನುಕೂಲವಾಗುವಂತೆ ಅಂಗನವಾಡಿ ಕೇಂದ್ರಕ್ಕೆ ಇಂಟರ್ನೆಟ್ ಸೌಲಭ್ಯ ಕಲ್ಪಿಸುವುದಾಗಿ ಗ್ಲೋಬಲ್ ಸಿಂಪಥಿ ಫೌಂಡೇಶನ್ ಅಧ್ಯಕ್ಷ ರೋನ್ಸ್ ಬಂಟ್ವಾಳ್ ತಿಳಿಸಿದರು. ಅಂಗನವಾಡಿ ಕೇಂದ್ರದ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿಯೂ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದ ಅಂತರಾಷ್ಟ್ರೀಯ ಜೂಡೋ […]

News

Father Muller Medical College Secures 2nd Rank in India for ADR Monitoring

Adverse Drug Reaction (AMC) Monitoring Centre, Department of Pharmacology, Father Muller Medical College, Mangaluru; Under Indian Pharmacopoeia Commission, National Co-ordination Centre -Pharmacovigilance Program of India, Ministry of Health and Family Welfare, Government of India, secured the 2nd best-performing ADR monitoring centre in India among 1000-plus centres under AMC with the Pharmacovigilance associate category for the […]

News

ಧರ್ಮಸ್ಥಳದಲ್ಲಿ ಗಾಂಧಿಸ್ಮೃತಿ ಮತ್ತು ನವಜೀವನ ಸಾಧನಾ ಸಮಾವೇಶ

ವ್ಯಸನಮುಕ್ತ ಬದುಕಿನಿಂದ ಕುಟುಂಬ–ಸಮಾಜದ ಪ್ರಗತಿ ಸಾಧ್ಯ- ಡಿ. ವೀರೇಂದ್ರ ಹೆಗ್ಗಡೆ ಮನುಷ್ಯ ಜನ್ಮ ಶ್ರೇಷ್ಠವಾಗಿದ್ದು, ದುಶ್ಚಟಗಳಿಂದ ದೂರವಿದ್ದು ಸತ್ಕಾರ್ಯಗಳನ್ನು ಮಾಡುವ ಮೂಲಕ ಜೀವನವನ್ನು ಪಾವನಗೊಳಿಸಬೇಕು. ಮನಸ್ಸು ಹಾಗೂ ಪಂಚೇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಸಾರ್ಥಕ ಜೀವನ ನಡೆಸಬೇಕು ಎಂದು ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು. ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ಗಾಂಧಿಸ್ಮೃತಿ ಮತ್ತು ನವಜೀವನ ಸಾಧನಾ ಸಮಾವೇಶದಲ್ಲಿ ಅವರು ಆಶೀರ್ವಚನ ನೀಡಿದರು. […]

News

ಕುತ್ಲುರು ಸರ್ಕಾರಿ ಶಾಲೆಗೆ ಗ್ಲೋಬಲ್ ಸಿಂಪತಿ ಫೌಂಡೇಶನ್ ಆರ್ಥಿಕ ನೆರವು

ಗ್ರಾಮೀಣ ಮಕ್ಕಳಿಗೆ ಉಚಿತ ಜೂಡೋ ತರಬೇತಿ ನೀಡುವ ಭರವಸೆ – ಶಾಲೆಯ ಪರಿಸರ ಪ್ರೇಮಕ್ಕೆ ಮೆಚ್ಚುಗೆ ಬೆಳ್ತಂಗಡಿ ತಾಲೂಕಿನ ಕುತ್ಲುರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಗ್ಲೋಬಲ್ ಸಿಂಪತಿ ಫೌಂಡೇಶನ್ ವತಿಯಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡಲಾಯಿತು. ಅಂತರಾಷ್ಟ್ರೀಯ ಜೂಡೋ ತರಬೇತುದಾರ ಹಾಗೂ ಕರ್ನಾಟಕ ಸ್ಟೇಟ್ ಜೂಡೋ ಅಸೋಸಿಯೇಷನ್ ಅಧ್ಯಕ್ಷ ಯತೀಶ್ ಎನ್. ಬಂಗೇರಾ ಹಾಗೂ ಗ್ಲೋಬಲ್ ಸಿಂಪತಿ ಫೌಂಡೇಶನ್ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಈ […]

News

ಬೆಳ್ತಂಗಡಿ ಧರ್ಮಕ್ಷೇತ್ರದ ಶ್ರೇಷ್ಠ ಗುರು ಅತೀ ವಂದನೀಯ ಡಾ. ಮಾಣಿ ವೆಳುತ್ತೇಡತ್ತು ಪರಂಬಿಲ್ ನಿಧನ

ಧರ್ಮ, ಶಿಕ್ಷಣ ಹಾಗೂ ಧರ್ಮಸಭೆಯ ಸೇವೆಯಲ್ಲಿ ಸ್ಮರಣೀಯ ಕೊಡುಗೆ ಬೆಳ್ತಂಗಡಿ ಸೀರೋ ಮಲಬಾರ್ ಧರ್ಮಕ್ಷೇತ್ರದ ಶ್ರೇಷ್ಠ ಗುರು ಆಗಿ ಸೇವೆ ಸಲ್ಲಿಸುತ್ತಿದ್ದ 64 ವರ್ಷ ಪ್ರಾಯದ ಅತೀ ವಂದನೀಯ ಡಾ. ಮಾಣಿ ವೆಳುತ್ತೇಡತ್ತು ಪರಂಬಿಲ್ ಅವರು ಅಲ್ಪಕಾಲದ ಅನಾರೋಗ್ಯದಿಂದ ಅಕ್ಟೋಬರ್ 1ರಂದು ಗುರುವಾರ ನಿಧನರಾದರು. ಉದನೆ ಸಮೀಪದ ನೆಲ್ಯಡ್ಕ ನಿವಾಸಿಯಾಗಿದ್ದ ಅವರು ಧರ್ಮಗುರುಗಳಾಗಿ, ಶಿಕ್ಷಣ ಕ್ಷೇತ್ರದಲ್ಲಿ ಹಾಗೂ ಧರ್ಮಸಭೆಯ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುವ ಮೂಲಕ ಸಮರ್ಪಿತ ಸೇವೆ ಸಲ್ಲಿಸಿದ್ದರು. ಅವರ ನಿಧನದಿಂದ ಬೆಳ್ತಂಗಡಿ ಧರ್ಮಕ್ಷೇತ್ರ ಹಾಗೂ ಭಕ್ತ […]

News

ದಸರಾ ಪ್ರವಾಸಕ್ಕೆ KSRTC ವಿಶೇಷ ಪ್ಯಾಕೇಜ್ – 5 ಧಾರ್ಮಿಕ ಪ್ರವಾಸ ಮಾರ್ಗಗಳಿಗೆ ಅವಕಾಶ

6ರಿಂದ 12 ವರ್ಷದ ಮಕ್ಕಳಿಗೆ ವಿಶೇಷ ದರ – ಊಟದ ವ್ಯವಸ್ಥೆಯೂ ಲಭ್ಯ ದಸರಾ ಹಬ್ಬದ ಪ್ರಯುಕ್ತ ಮಂಗಳೂರು KSRTC ವಿಭಾಗವು ಸಾರ್ವಜನಿಕರ ಅನುಕೂಲಕ್ಕಾಗಿ ಮಂಗಳೂರು ಹಾಗೂ ಸುತ್ತಮುತ್ತಲಿನ ಪ್ರಮುಖ ಧಾರ್ಮಿಕ ಕ್ಷೇತ್ರಗಳು ಮತ್ತು ಪ್ರವಾಸಿ ತಾಣಗಳಿಗೆ ಐದು ವಿಶೇಷ ಪ್ಯಾಕೇಜ್ ಪ್ರವಾಸಗಳನ್ನು ಆಯೋಜಿಸಿದೆ. ಅಕ್ಟೋಬರ್ 11ರಿಂದ 20ರ ತನಕ ಈ ವಿಶೇಷ ಪ್ರವಾಸಗಳು ಕಾರ್ಯಾಚರಿಸಲಿದ್ದು, ಕುಟುಂಬ ಸಮೇತರಾಗಿ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಲು ಅನುಕೂಲವಾಗುವಂತೆ ಪ್ಯಾಕೇಜ್‌ಗಳನ್ನು ರೂಪಿಸಲಾಗಿದೆ. ಈ ವಿಶೇಷ ಪ್ರವಾಸಗಳಲ್ಲಿ ವಯಸ್ಕರು ಹಾಗೂ 6ರಿಂದ […]

News

ಮಂಗಳೂರು ಧರ್ಮಕ್ಷೇತ್ರದ ಹಿರಿಯ ಧರ್ಮಗುರು ವಂದನೀಯ ಫಾದರ್ ಜೋನ್ ನೊರೊನ್ಹಾ ನಿಧನ

ಮಂಗಳೂರು ಧರ್ಮಕ್ಷೇತ್ರದ ಹಿರಿಯ ಧರ್ಮಗುರು 82 ವರ್ಷ ಪ್ರಾಯದ ವಂದನೀಯ ಫಾದರ್ ಜೋನ್ ನೊರೊನ್ಹಾ ಅವರು ಇಂದು ಅಕ್ಟೋಬರ್ 1ರಂದು ಗುರುವಾರ ಜೆಪ್ಪುವಿನ ಸೈಂಟ್ ಜೂಜೆ ವಾಜ್ ಹೋಮ್ ನಲ್ಲಿ ನಿಧನರಾದರು. 1944ರ ಏಪ್ರಿಲ್ 2ರಂದು ಪಾಂಬೂರಿನಲ್ಲಿ ಮಥಿಯಾಸ್ ಮತ್ತು ಆಂಜೆಲಿನ್ ನೊರೊನ್ಹಾ ದಂಪತಿಯ ಪುತ್ರರಾಗಿ ಜನಿಸಿದ ಅವರು, ಧಾರ್ಮಿಕ ಸೇವೆಯ ಕರೆಗೆ ಓಗೊಟ್ಟು 1969ರ ಡಿಸೆಂಬರ್ 3ರಂದು ಮಂಗಳೂರು ಧರ್ಮಕ್ಷೇತ್ರದ ಧರ್ಮಗುರುಗಳಾಗಿ ದೀಕ್ಷೆ ಪಡೆದಿದ್ದರು. ನಾಲ್ಕು ದಶಕಗಳಿಗೂ ಹೆಚ್ಚು ಕಾಲದ ಧರ್ಮಸೇವೆಯಲ್ಲಿ ಅವರು ಅಗ್ರಾರ್, ಕಿರೆಂ […]

News

ಪ್ರಮೋದ್ ಮುತಾಲಿಕ್ ಪ್ರಚಾರಪ್ರಿಯ, ಸಮಾಜ ಒಡೆಯುವ ದ್ವೇಷ ರಾಜಕಾರಣಿ – AICU ಮಾಜಿ ರಾಜ್ಯಾಧ್ಯಕ್ಷ ಅಲ್ವಿನ್ ಡಿಸೋಜ ಪಾನೀರ್ ಕಿಡಿ

ದಸರಾ ರಜೆ ವಿವಾದ – ಮುತಾಲಿಕ್ ಹೇಳಿಕೆಗೆ ತಿರುಗೇಟು ಮಂಗಳೂರು: ದಸರಾ ರಜೆ ಹಾಗೂ ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಕುರಿತು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೀಡಿರುವ ಹೇಳಿಕೆಗಳಿಗೆ ಅಖಿಲ ಭಾರತ ಕಥೊಲಿಕ್ ಯೂನಿಯನ್ (AICU) ಮಾಜಿ ರಾಜ್ಯಾಧ್ಯಕ್ಷ ಅಲ್ವಿನ್ ಡಿಸೋಜ ಪಾನೀರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುತಾಲಿಕ್ ಅವರು ಸಪ್ಟೆಂಬರ್ 28ರಂದು ಮಂಗಳೂರಿನಲ್ಲಿ ಕ್ರೈಸ್ತ ಕಾನ್ವೆಂಟ್ ಶಾಲೆಗಳಲ್ಲಿ ದಸರಾ ರಜೆ ವೇಳೆ ತರಗತಿ ಅಥವಾ ಪರೀಕ್ಷೆ ನಡೆಸುವುದನ್ನು ವಿರೋಧಿಸಿ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದರು. ಅಲ್ವಿನ್ ಡಿಸೋಜ […]

News

ಧರ್ಮಸ್ಥಳದಲ್ಲಿ 28ನೇ ವರ್ಷದ ಭಜನಾ ಕಮ್ಮಟ: ಭಜನೆಯಿಂದ ಆರೋಗ್ಯ, ಸಾಮರಸ್ಯ ಹಾಗೂ ಸದ್ಗುಣ ವೃದ್ಧಿ – ವಿವೇಕ್ ಪಾಯಸ್

ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಆಯೋಜಿಸಲಾಗಿರುವ 28ನೇ ವರ್ಷದ ಭಜನಾ ಕಮ್ಮಟದ ಎರಡನೇ ದಿನದ ಶಿಬಿರ ಸೆಪ್ಟೆಂಬರ್ 29ರಂದು ಮಂಗಳವಾರ ನಡೆಯಿತು. ಸಂಗೀತ ವಿದುಷಿ ಉಷಾ ಹೆಬ್ಬಾರ್, ಮಣಿಪಾಲ ಅವರು ಶಿಬಿರಾರ್ಥಿಗಳಿಗೆ ಭಜನಾ ತರಬೇತಿ ನೀಡಿದರು. ಈ ಸಂದರ್ಭದಲ್ಲಿ ಭಜನಾ ಕಮ್ಮಟ ಪರಿಷತ್‌ನ ಅಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಉಪಾಧ್ಯಕ್ಷೆ ಡಾ. ಹೇಮಾವತಿ ಅಮ್ಮನವರು, ಸುಪ್ರಿಯಾ ಹರ್ಷೇಂದ್ರ ಕುಮಾರ್ ಹಾಗೂ ಐಶ್ವರ್ಯ ನಿಶ್ಚಲ್ ಜೈನ್ ಉಪಸ್ಥಿತರಿದ್ದರು. […]

News

ಸುರತ್ಕಲ್ MRPL ನಲ್ಲಿ ಭಾರಿ ಅವಘಡ – ಕೋಕರ್ ಹೈಡ್ರೋ ಟ್ರೀಟರ್ ಯುನಿಟ್‌ನಲ್ಲಿ ಸ್ಫೋಟ, ಓರ್ವ ಸಾವು, ಹಲವರಿಗೆ ಗಾಯ!

ಸುರತ್ಕಲ್ ಪೊಲೀಸ್ ಠಾಣೆಯಲ್ಲಿ FIR ದಾಖಲು ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಸಂಸ್ಥೆಯ 3ನೇ ಹಂತದ (Phase 3) ‘ಕೋಕರ್ ಹೈಡ್ರೋ ಟ್ರೀಟರ್ ಯುನಿಟ್’ನಲ್ಲಿ (Coker Hydro Treater Unit) ಭಾರಿ ಸ್ಫೋಟ ಸಂಭವಿಸಿದ್ದು, ಓರ್ವ ಕಾರ್ಮಿಕ ಮೃತಪಟ್ಟು ಹಲವರು ಗಾಯಗೊಂಡಿರುವ ದಾರುಣ ಘಟನೆ ವರದಿಯಾಗಿದೆ. ಘಟನೆಯ ವಿವರ: ಇಂದು ಸೆಪ್ಟೆಂಬರ್ 30ರಂದು ಬುಧವಾರ ಮಧ್ಯಾಹ್ನ ಸುಮಾರು 12:15 ಗಂಟೆಯ ವೇಳೆಗೆ ಈ ದುರಂತ ಸಂಭವಿಸಿದೆ. ಘಟಕದ ಯಂತ್ರೋಪಕರಣ ಹಾಗೂ ಬಿಡಿಭಾಗಗಳು ಏಕಾಏಕಿ ಸ್ಪೋಟಗೊಂಡಿದ್ದರಿಂದ […]

You cannot copy content of this page