ಮಂಗಳೂರು ಉಡುಪಿ ಮಧ್ಯೆ ಮೆಟ್ರೋ ರೈಲು ಯೋಜನೆಗೆ ರಾಜ್ಯ ಸರಕಾರ ಚಿಂತನೆ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ‘ನಮ್ಮಮೆಟ್ರೋ’ ಮಂಗಳೂರು-ಉಡುಪಿಗೂ ಬರುವ ಸಾಧ್ಯತೆ ಇದೆ. ಮಂಗಳೂರು ಮತ್ತು ಉಡುಪಿ ನಡುವೆ ಮೆಟ್ರೋ ಆರಂಭಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಅದಕ್ಕಾಗಿ ವಿಸ್ಕೃತ ಯೋಜನಾ ವರದಿ ಸಿದ್ದಪಡಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ಕರಾವಳಿ ನಗರಗಳಾಗಿರುವ ಮಂಗಳೂರು ಮತ್ತು ಉಡುಪಿ ನಡುವೆ ಮೆಟ್ರೋ ಕಾರಿಡಾರ್ ಹಂತ-1ನ್ನು ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ. ಉಭಯ ನಗರಗಳ ನಡುವೆ 60 ಕಿಲೋ ಮೀಟರ್ ಉದ್ದದ ಮೆಟ್ರೋ ಮಾರ್ಗ ಆರಂಭಿಸಲು ಚಿಂತನೆಗಳು ನಡೆದಿವೆ ಎಂದು ತಿಳಿದುಬಂದಿದೆ. ಯೋಜನೆ ಸಂಬಂಧ […]













