November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಣ್ಣು ಮತ್ತು ನೀರಿನ ಸಂರಕ್ಷಣೆ ಆಗದೇ ಇದ್ದಲ್ಲಿ ಬದುಕು ಭಯಾನಕವಾಗಲಿದೆ – ಭೂಸಂಪನ್ಮೂಲ ತಜ್ಞ ರಾಜೇಶ್ ಎಚ್ಚರಿಕೆ

ಸಜಿಪಮೂಡಾಕ್ಕೆ ಬಂತು ಜಲಾನಯನ ಯಾತ್ರೆ ಬಂಟ್ವಾಳ; ಮಣ್ಣು ಮತ್ತು ನೀರಿನ ಸಂರಕ್ಷಣೆಗೆ ನಾವು ಆದ್ಯತೆ ನೀಡದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಬದುಕು ಭಯಾನಕವಾಗುವ ಸಾಧ್ಯತೆಗಳಿವೆ ಎಂದು ಕೇಂದ್ರ ಭೂಸಂಪನ್ಮೂಲ ಇಲಾಖೆಯ ತಜ್ಞರಾದ ಡಾ. ಎನ್.ಕೆ. ರಾಜೇಶ್ ಕುಮಾರ್ ಹೇಳಿದ್ದಾರೆ. ಕೇಂದ್ರ ಸರ್ಕಾರದ   ಡಿಪಾರ್ಟ್ಮೆಂಟ್‌  ಆಫ್‌  ಲ್ಯಾಂಡ್‌  ರಿಸೋರ್ಸಸ್‌  ಗ್ರಾಮೀಣ ಮಂತ್ರಾಲಯ ಕೃಷಿ ಇಲಾಖೆಯ  ಸಹಯೋಗದಲ್ಲಿ ಬಂಟ್ವಾಳ ತಾಲೂಕಿನ ಸಜಿಪಮೂಡ ಗ್ರಾಮದಲ್ಲಿ ಹಮ್ಮಿಕೊಂಡ ಜಲಾನಯನ ಯಾತ್ರೆ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನೀರಿನ ಸಂರಕ್ಷಣೆಯ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯೋನ್ಮುಖರಾಗಬೇಕು […]

News

ಸೂರಿಕುಮೇರು ಮಸೀದಿಯಲ್ಲಿ ಇಸಾಬಾ ಸ್ವಯಂ ಸೇವಕರಿಂದ ಸ್ವಚ್ಛತಾ ಕಾರ್ಯಕ್ರಮ

ಮಾಣಿ : ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್‌ವೈ‌ಎಸ್ ರಾಜ್ಯ ಸಮಿತಿಯ ನಿರ್ದೇಶನದಂತೆ ರಂಝಾನ್ ತಿಂಗಳನ್ನು ಸ್ವಾಗತಿಸುವ ಸಲುವಾಗಿ “ಮನೆ ಮನಗಳನ್ನು ಶುಚಿಗೊಳಿಸೋಣ ಪವಿತ್ರ ಮಾಸವನ್ನು ಸ್ವಾಗತಿಸೋಣ” ಎಂಬ ಧ್ಯೇಯ ವಾಕ್ಯದಡಿ ಸ್ವಚ್ಛತಾ ಕಾರ್ಯಕ್ರಮವನ್ನು ಕರ್ನಾಟಕ ಮುಸ್ಲಿಂ ಜಮಾ‌ಅತ್, ಎಸ್ಸೆಸ್ಸೆಫ್, ಎಸ್‌ವೈ‌ಎಸ್ ಸೂರಿಕುಮೇರು ಯುನಿಟ್ ವತಿಯಿಂದ ಸೂರಿಕುಮೇರು ಬದ್ರಿಯಾ ಜುಮ್ಮಾ ಮಸೀದಿಯ ಪರಿಸರದಲ್ಲಿ ಇಸಾಬಾ ಸ್ವಯಂ ಸೇವಕರು ಸ್ವಚ್ಛತಾ ಕಾರ್ಯ ನಡೆಸಿದರು. ಅಲ್ ಮುರ್ಶಿದ್ ಅಕಾಡೆಮಿ ಕೆದಿಲ ಇದರ ಮುಖ್ಯಸ್ಥರು ಹಾಗೂ ಸೂರಿಕುಮೇರು ಮಸೀದಿಯ ಅಧ್ಯಕ್ಷರೂ […]

News

ಬಾಲಕ ನಾಪತ್ತೆ ಪ್ರಕರಣ – ಮಾರ್ಚ್ 1ರಂದು ಶನಿವಾರ ಫರಂಗಿಪೇಟೆ ಬಂದ್ ಗೆ ಕರೆ

ಬಂಟ್ವಾಳ: ಇಲ್ಲಿನ ಫರಂಗಿಪೇಟೆ ಸಮೀಪದ ಕಿದೆಬೆಟ್ಟು ನಿವಾಸಿ ಪದ್ಮನಾಭ ಎಂಬವರ ಪುತ್ರ ದಿಗಂತ್ ನಾಪತ್ತೆಯಾಗಿ ದಿನ ಕಳೆದರೂ ಆತನ ಬಗ್ಗೆ ಇನ್ನೂ ಯಾವುದೇ ಸುಳಿವು ಸಿಗದಿರುವ ಕಾರಣ ಸ್ಥಳೀಯ ಗ್ರಾಮಸ್ಥರು ಫರಂಗಿಪೇಟೆಯಲ್ಲಿರುವ ಪೊಲೀಸ್ ಹೊರ ಠಾಣೆಗೆ ಗುರುವಾರ ಬೆಳಿಗ್ಗೆ ದಿಢೀರ್ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಈ ಸಂದರ್ಭ ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಿದ ಪ್ರತಿಭಟನಕಾರರು ಮುಂದಿನ‌ 24 ಗಂಟೆಯ ಒಳಗಾಗಿ ಬಾಲಕನನ್ನು ಪತ್ತೆ ಮಾಡಬೇಕು ತಪ್ಪಿದ್ದಲ್ಲಿ ಮತ್ತೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ಎಡಿಷನಲ್ ಎಸ್ಪಿ ರಾಜೇಂದ್ರ ಅವರ […]

News

ಪಂಚ ಗ್ಯಾರಂಟಿಗಳು ಜನಸಾಮಾನ್ಯರ  ಬದುಕಿನ ಜೀವಾಳ – MLC ಐವನ್‌ ಡಿಸೋಜಾ

ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದ  ರಾಜ್ಯ ಸರ್ಕಾರವು ಜನ ಸಾಮಾನ್ಯರ ಬದುಕಿನಲ್ಲಿ ಹಾಗೂ ಅರ್ಥಿಕ ಸ್ಸಿತಿಗತಿಗಳಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಪಂಚ ಗ್ಯಾರಂಟಿಗಳ ಮೂಲಕ ಅನೇಕ ಕುಟುಂಬಗಳು ನೆಮ್ಮದಿಯ ಜೀವನ ನಡೆಸುತ್ತಿವೆ. ಯಾರಿಗೆ ಪಂಚ ಗ್ಯಾರಂಟಿಗಳು ಸಿಗಲಿಲ್ಲವೋ ಅವರನ್ನು ಹುಡುಕಿ ರಾಜ್ಯದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯ ನೇತೃತ್ವದಲ್ಲಿ ಪಂಚ ಗ್ಯಾರಂಟಿಗಳ ಯೋಜನೆಯ ಅನುಷ್ಠಾನದ ವಿಲೇವಾರಿ ಶಿಬಿರವನ್ನು ಆಯೋಜಿಸಿ ಆ ಮೂಲಕ ಯೋಜನೆಗಳನ್ನು ಪಡೆಯಲು ಅಸಾಧ್ಯವಾಗಿರುವವರ ಮನೆ ಬಾಗಿಲಿಗೆ ತೆರಳಿ ಈ ಯೋಜನೆಯ ಸದುಪಯೋಗವನ್ನು ಪಡೆಯುವಂತೆ ಮಾಡಬೇಕು ಎಂದು […]

News

ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಸಮಾಲೋಚನಾ ಸಭೆ – ಅಧ್ಯಕ್ಷರಾಗಿ ಶಶಿಧರ್ ಶೆಟ್ಟಿ, ಸಂಚಾಲಕರಾಗಿ ಶಾಸಕ ಹರೀಶ್ ಪೂಂಜಾ

ತೆಕ್ಕಾರು: ಏಳುನೂರು ವರುಷಗಳ ಪುರಾತನವಾದ ದೇವಸ್ಥಾನ ಕಾರಣಾಂತರಗಳಿಂದ ಭೂಗರ್ಭದಲ್ಲಿ ಲೀನವಾಗಿ ಸಂಪೂರ್ಣ ಕುರುಹು ಇಲ್ಲವಾಗಿದ್ದ ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರ ಮುತುವರ್ಜಿ ವಹಿಸಿ ಜಮೀನಿನ ದಾಖಲೆ ಪತ್ರ ಮಾಡಿಸಿಕೊಟ್ಟಿದ್ದರಿಂದ ಪುರಾತನ ದೇವಾಲಯ ಇದ್ದ ಜಮೀನು ವಶಕ್ಕೆ ಪಡೆಯಲಾಗಿ, 2023 ಅಕ್ಟೋಬರ್ 30ರಂದು ಮಾಡವು ವೆಂಕಟ್ರಮಣ ಭಟ್ ದೈವಜ್ಞರ ನಿರ್ದೇಶನದಂತೆ 2023 ನವಂಬರ್ 5ರಂದು ಭೂಮಿಪೂಜೆ ವೈದಿಕ ವಿಧಿ ವಿಧಾನಗಳನ್ನು ನೆರವೇರಿಸಿ ಭೂ ಉತ್ಖನನ ಮಾಡಿದಾಗ ಬಾವಿ ಇದ್ದ ಜಾಗದಲ್ಲಿ 15 ಅಡಿ […]

News

ಸುಳ್ಯದಲ್ಲಿ ಗಾಂಜಾ ಪ್ರಕರಣಗಳ ತೀವ್ರ ಹೆಚ್ಚಳ – ಒಂದೇ ದಿನ ಎರಡು ಪ್ರಕರಣ ದಾಖಲು

ಮಂಗಳೂರು ಫೆಬ್ರವರಿ 27: ಮಂಗಳೂರು ಆಸುಪಾಸು ಅಮಲು ಪಧಾರ್ಥ ಮಾರಾಟ ಹಾಗೂ ಸೇವನೆಯ ಜಾಲ ದಿನನಿತ್ಯ ಹೆಚ್ಚಾಗುತ್ತಾ ಇದೆ. ಇದಕ್ಕೆ ಪೂರಕವೆಂಬಂತೆ ಫೆಬ್ರವರಿ 26ರಂದು ಒಂದೇ ದಿನ ಗಾಂಜಾ ಪೂರೈಕೆ ಮತ್ತು ಸೇವನೆಯ 2 ಪ್ರಕರಣಗಳು ದಾಖಲಾಗಿವೆ. ನಿನ್ನೆ ಸುಳ್ಯದ ಕೆವಿಜಿ ವೃತ್ತದ ಬಳಿ ನಿಂತಿದ್ದ ವ್ಯಕ್ತಿಯೊಬ್ಬನನ್ನು ಸಂಶಯದ ಮೇಲೆ ತಡೆದು ವಿಚಾರಿಸಿದಾಗ ಆತ ಗಾಂಜಾ ಸೇವನೆ ಮಾಡಿದ್ದು ತಿಳಿದುಬಂದಿದೆ. ಕೂಡಲೆ ಸುಳ್ಯ ಠಾಣಾ ಪೋಲಿಸ್ ಉಪನಿರೀಕ್ಶಕ ಸಂತೋಷ್ ಬಿ.ಪಿ. ರವರು ವ್ಯಕ್ತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ […]

News

ಕಾಸರಗೋಡು ಕನ್ನಡ ಗ್ರಾಮದಲ್ಲಿ 2025 ಮಾರ್ಚ್ 27ರಂದು ಕರ್ನಾಟಕ ಗಡಿನಾಡ ಉತ್ಸವ, ಸುಗಮ ಸಂಗೀತ ಗಾಯನ, ವಿಶ್ವ ರಂಗಭೂಮಿ ದಿನಾಚರಣೆ, ಬೆಂಗಳೂರು ಕನ್ನಡ ನಾಟಕೋತ್ಸವ

ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಕನ್ನಡ ಗ್ರಾಮ, ಕಾಸರಗೋಡು ಇದರ ಸಹಕಾರದಲ್ಲಿ ಕರ್ನಾಟಕ ರಾಜ್ಯದ ಹಿರಿಯ ನಾಟಕ ಮತ್ತು ಸಾಂಸ್ಕೃತಿಕ ಸಂಘಟನೆಯಾದ ವಿ.ಕೆ.ಎಂ. ಕಲಾವಿದರು (ರಿ.) ಬೆಂಗಳೂರು ಇದರ 44ನೇ ಸಂಸ್ಥಾಪನಾ ವರ್ಷಾಚರಣೆಯ ಅಂಗವಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು ಇದರ ಸಹಯೋಗದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ 2025 ಮಾರ್ಚ್ 27ರಂದು ಅಪರಾಹ್ನ ಗಂಟೆ 4.30ರಿಂದ ಕರ್ನಾಟಕ ಗಡಿನಾಡ ಉತ್ಸವ, ವಿಶ್ವರಂಗ ಭೂಮಿ ದಿನಾಚರಣೆಯ ಅಂಗವಾಗಿ ಹಳೆ ನಾಟಕಗಳ ಸವಿನೆನಪು, ಬೆಂಗಳೂರು ಕನ್ನಡ […]

News

ಸುರತ್ಕಲ್ 2ನೇ ವಾರ್ಡ್ ನಲ್ಲಿ 3.5 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ

ಸುರತ್ಕಲ್ ಪೂರ್ವ 2ನೇ ವಾರ್ಡ್ ದುರ್ಗಾಂಬಾ ದೇವಸ್ಥಾನದ ಬಳಿ 3 ಕೋಟಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ವಾರ್ಡಿನ ವಿವಿಧ ಭಾಗದಲ್ಲಿ ನಡೆಯಲಿರುವ ರಸ್ತೆ ಕಾಂಕ್ರೀಟಿಕರಣ, ರಸ್ತೆ ಡಾಮರೀಕರಣ, ಮಳೆ ನೀರಿನ ಚರಂಡಿ ಕಾಮಗಾರಿ ಹಾಗೂ ವಿದ್ಯುತ್ಕರಣ ಕಾಮಗಾರಿಗಳಿಗೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ. ಅವರು ಫೆಬ್ರವರಿ 26ರಂದು ಬುಧವಾರ ಸಂಜೆ ಗುದ್ದಲಿಪೂಜೆ ನೆರವೇರಿಸಿ ಚಾಲನೆ ನೀಡಿದರು. ಬಳಿಕ ಮಾತಾಡಿದ ಅವರು, “ಮಂಗಳೂರು ಉತ್ತರ ಕ್ಷೇತ್ರದಲ್ಲಿ ಈ ಅವಧಿಯಲ್ಲಿ ನಮ್ಮ ಸರಕಾರ […]

News

ಇಚ್ಛಾಶಕ್ತಿ ಇದ್ದರೆ ಮಾತ್ರ ಜೀವನದಲ್ಲಿ ಸಾಧನೆ ಸಾಧ್ಯ – ಡಾ. ಯು.ಕೆ. ಮೋನು

ಮಂಗಳೂರು : ನಮ್ಮ ದೇಶದಲ್ಲಿ ಸಾಧನೆ ಮಾಡಲು ವಿಪುಲ ಅವಕಾಶವಿದೆ. ಎಲ್ಲ ವರ್ಗದ ಜನರಿಗೆ ಇಲ್ಲಿ ಬೆಳೆಯಲು ಅವಕಾಶವಿದೆ. ಆದರೆ ಇಚ್ಛಾಶಕ್ತಿ ಬೇಕು. ಹಾಗಿದ್ದರೆ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಕಣಚೂರು ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಡಾ.ಯು.ಕೆ. ಮೋನು ಹೇಳಿದರು. ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಫೆಬ್ರವರಿ 26ರಂದು ಬುಧವಾರ ಮಂಗಳೂರು ಪ್ರೆಸ್‌ಕ್ಲಬ್ ಗೌರವ ಅತಿಥಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ‘ಕೆಲಸ ಮಾಡಬೇಕೆಂಬ ಛಲವಿತ್ತು. ಹಾಗಾಗಿ ವಿದ್ಯಾಭ್ಯಾಸ ಕಡಿಮೆ ಇದ್ದರೂ ಸಾಧನೆ ಮಾಡಲು […]

News

ಮೊಗರ್ನಾಡ್ ದೇವ ಮಾತ ಚರ್ಚ್ ನಲ್ಲಿ ಸಂಭ್ರಮದ ಚರ್ಚ್ ವಾರ್ಷಿಕ ಹಬ್ಬ ಆಚರಣೆ

ವಿಶ್ವಾಸದ ಜೀವನದ ಪಯಣದಲ್ಲಿ ದೇವರ ಮಾತೆಯು ಭರವಸೆಯ ಕಿರಣ – ಫಾದರ್ ಐವನ್ ಮೈಕಲ್ ರೊಡ್ರಿಗಸ್ ಮೊಗರ್ನಾಡ್ ಕರಿಂಗಾನ ದೇವ ಮಾತ ಚರ್ಚ್ ನಲ್ಲಿ ಚರ್ಚ್ ವಾರ್ಷಿಕ ಹಬ್ಬವನ್ನು ಬಹಳ ಸಡಗರದಿಂದ ಆಚರಿಸಲಾಯಿತು. ಮಂಗಳೂರು ಧರ್ಮಕ್ಷೇತ್ರದ ವಿಟ್ಲ ವಲಯದ ಪ್ರಧಾನ ಧರ್ಮಗುರು ಅತೀ ವಂದನೀಯ ಫಾದರ್ ಐವನ್ ಮೈಕಲ್ ರೊಡ್ರಿಗಸ್ ಇವರು ದಿವ್ಯ ಬಲಿಪೂಜೆಯ ನೇತೃತ್ವವನ್ನು ವಹಿಸಿದ್ದರು. ದೇವರು ಕನ್ಯಾ ಮಾತೆಯ ಮುಖಾಂತರ ಭಕ್ತಾಧಿಗಳಿಗೆ ವರ್ಷವಿಡೀ ನೀಡಿದ ಆಶೀರ್ವಾದಗಳನ್ನು ಸ್ಮರಿಸುತ್ತಾ ಇತರ ಧರ್ಮಗುರುಗಳೊಂದಿಗೆ ದೇವರಿಗೆ ಕೃತಜ್ಞತೆಗಳನ್ನು ಸಲ್ಲಿಸಿ, […]

You cannot copy content of this page