November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಡಾ। ರಾಘವೇಂದ್ರ ಭಟ್ಟ, ಉಪ ಮಹಾ ನಿರ್ದೇಶಕ (ಪಶು ವಿಜ್ಞಾನ) ಅವರಿಗೆ ಪ್ರತಿಷ್ಠಿತ ಡಾ| ಪಿ. ಭಟ್ಟಾಚಾರ್ಯ ಪ್ರಶಸ್ತಿ ಪ್ರದಾನ

ರಾಷ್ಟೀಯ ಕೃಷಿ ವಿಜ್ಞಾನ ಅಕಾಡೆಮಿಯ ವತಿಯಿಂದ ನೀಡಲಾಗುವ ಪ್ರಸಿದ್ಧ ವಿಜ್ಞಾನಿ ಡಾ। ಪಿ. ಭಟ್ಟಾಚಾರ್ಯ ಮೆಮೋರಿಯಲ್ ಪ್ರಶಸ್ತಿಯನ್ನು ಭಾರತೀಯ ಕೃಷಿ ಸಂಶೋಧನೆ ಸಂಸ್ಥೆ, ದೆಹಲಿಯಲ್ಲಿ ಉಪ ಮಹಾ ನಿರ್ದೇಶಕ (ಪಶು ವಿಜ್ಞಾನ) ರಾಗಿ ಕಾರ್ಯನಿರತರಾಗಿರುವ ಡಾ| ರಾಘವೇಂದ್ರ ಭಟ್ಟ ಅವರಿಗೆ ಪ್ರದಾನ ಮಾಡಲಾಯಿತು.  ಡಾ| ಭಟ್ಟ ಅವರು ಈ ಪ್ರಶಸ್ತಿಯನ್ನು ಫೆಬ್ರವರಿ 20ರಂದು ಉತ್ತರಾಖಂಡ್ ನ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ ಗುರ್ಮಿತ್ ಸಿಂಗ್ ಅವರಿಂದ , ಜಿ.ಬಿ. ಪಂತ್ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ, ಪಂತ್ ನಗರ್ […]

News

ಪವಿತ್ರ ಶಿಲುಬೆಗೆ ಹಾನಿ – ಕಥೊಲಿಕ್ ಸಭಾ ಉಡುಪಿ ಮತ್ತು ಮಂಗಳೂರು ವತಿಯಿಂದ ಖಂಡನೆ

ಕೇಂದ್ರೀಯ ಅಧ್ಯಕ್ಷರಾದ ಸಂತೋಷ್ ಕರ್ನೆಲಿಯೋ ಮತ್ತು ಆಲ್ವಿನ್ ಡಿಸೋಜ ಇವರ ನಿಯೋಗದಿಂದ ಘಟನಾ ಸ್ಥಳಕ್ಕೆ ಭೇಟಿ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕಟ್ಟಿಂಗೇರಿ ಗ್ರಾಮದ ಕುದ್ರುಮಲೆ ಬೆಟ್ಟದ ಖಾಸಗಿ ಸ್ಥಳದಲ್ಲಿ ನಿರ್ಮಿಸಿದ್ದ ಪವಿತ್ರ ಶಿಲುಬೆಯನ್ನು ಅಪರಿಚಿತ ವ್ಯಕ್ತಿಗಳು ಹಾನಿ ಮಾಡಿ ಧ್ವಂಸಗೊಳಿಸಿರುವುದನ್ನು ಕಥೊಲಿಕ್ ಸಭಾ ಉಡುಪಿ ಹಾಗೂ ಮಂಗ್ಳುರ್ ಪ್ರದೇಶ್ ಇದರ ಕೇಂದ್ರೀಯ ಸಮಿತಿಗಳು ಖಂಡಿಸಿವೆ.   ಖಾಸಗಿ ಸ್ಥಳದಲ್ಲಿ ನಿರ್ಮಿಸಲಾಗಿದ್ದ ಶಿಲುಬೆಯನ್ನು ಯಾವುದೋ ದುರುದ್ದೇಶವಿಟ್ಟುಕೊಂಡು ಧ್ವಂಸಗೊಳಿಸಿರುವುದು ಜಿಲ್ಲೆಯ ಶಾಂತಿ ಮತ್ತು ಸೌಹಾರ್ಧತೆಯನ್ನು ಕೆಡಿಸುವ ಹುನ್ನಾರವಾಗಿದೆ. ಜಿಲ್ಲೆಯಲ್ಲಿ […]

News

ಚುನಾವಣಾ ಪೂರ್ವ ಪ್ರಣಾಳಿಕೆಯ ಭರವಸೆಯಂತೆ ಸಾರಿಗೆ ನೌಕರರಿಗೂ, ಸರ್ಕಾರಿ ನೌಕರರಂತೆ ಸರಿಸಮಾನ ವೇತನ – ಜೀವನ್ ಮಾರ್ಟಿಸ್ ಒತ್ತಾಯ

ಪುತ್ತೂರು : ಚುನಾವಣಾ ಪೂರ್ವ ಸರ್ಕಾರದ ಪ್ರಣಾಳಿಕೆಯ ಭರವಸೆಯಂತೆ ಸಾರಿಗೆ ನೌಕರರಿಗೂ, ಸರ್ಕಾರಿ ನೌಕರರಂತೆ ಸರಿಸಮಾನ ವೇತನ ನೀಡುವ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಬೇಕೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಪುತ್ತೂರು ವಿಭಾಗದ ಅಧ್ಯಕ್ಷ ಜೀವನ್ ಸಂತೋಷ್‌ ಮಾರ್ಟಿಸ್ ಒತ್ತಾಯಿಸಿದ್ದಾರೆ. ಈ ಕುರಿತು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಇವರಿಗೆ ಮನವಿ ನೀಡಿದ್ದು, ಕಳೆದ ಬಾರಿ ತಮ್ಮ ಸರ್ಕಾರ ನೀಡಿದ ಪ್ರಣಾಳಿಕೆ ಭರವಸೆಯಲ್ಲಿ 97ಶೇಕಡಾ ದಷ್ಟು ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆಯುವ ಸರ್ಕಾರ […]

News

ಕಾರು ಡಿಕ್ಕಿ – ವೃದ್ಧೆ ಸಾವು

ಮಗನ ಅಂಗಡಿ ಎದುರು ಕುಳಿತಲ್ಲಿಗೇ ಬಂದು ಜೀವತೆಗೆದ ಜವರಾಯ ಬಂಟ್ವಾಳ: ಮಗನ ಅಂಗಡಿ ಹೊರಗೆ ಕುಳಿತುಕೊಂಡಿದ್ದ ವೃದ್ದೆಯೋರ್ವರಿಗೆ ಕಾರೊಂದು ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಪಾಲೆದಮರ ಎಂಬಲ್ಲಿ ಫೆಬ್ರವರಿ 23ರಂದು ನಡೆದಿದೆ. ವಾಮದಪದವು ನಿವಾಸಿ 91 ವರ್ಷ ಪ್ರಾಯದ ಸುಮತಿ ಎಂಬವರು ಮೃತಪಟ್ಟ ಮಹಿಳೆಯಾಗಿದ್ದಾರೆ. ಸುಮತಿಯವರು ತನ್ನ ಮಗನಾದ ಮಂಜುನಾಥ್ ರವರ ದಿನಸಿ ಅಂಗಡಿಯ ಹೊರಗಡೆ ಕುರ್ಚಿಯಲ್ಲಿ ಕುಳಿತುಕೊಂಡಿದ್ದರು. ಫೆಬ್ರವರಿ 23 ಆದಿತ್ಯವಾರದಂದು ಸುಮಾರು 6.45ರ ಸಮಯದಲ್ಲಿ ಬಂಟ್ವಾಳ ಮಣಿಹಳ್ಳ ಕಡೆಯಿಂದ ವಾಮದಪದವು […]

News

ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಾಡಬೆಟ್ಟು ವಗ್ಗ ವತಿಯಿಂದ ಮನೆ ದುರಸ್ತಿ ಶ್ರಮದಾನ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ  ಘಟಕ ಕಾಡಬೆಟ್ಟು ವಗ್ಗ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಬಂಟ್ವಾಳ ತಾಲೂಕಿನ ಮಿತ್ತಟ್ಟು ಕಂದಾಡಿ ಮನೆ ಕಾಡಬೆಟ್ಟು ವಗ್ಗ  ಸುಂದರಿಯವರ  ತೀರಾ ದುರಸ್ತಿಯಲ್ಲಿದ್ದ ಮನೆಯನ್ನು ಶ್ರಮದಾನ ಕಾರ್ಯದ ಮೂಲಕ ರಿಪೇರಿ ಮಾಡಿದರು. ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯನಂದ ಪಿ., ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ತುಂಗಪ್ಪ ಬಂಗೇರ, ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರು ಆದ ಚಂದಪ್ಪ ಕುಲಾಲ್, ಭೇಟಿ […]

News

ಕಿಲ್ಪಾಡಿ ಮುಲ್ಕಿ ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚಿಂತನ ದಿನಾಚರಣೆ

ಸರ್ವತೋಮುಖ ಅಭಿವೃದ್ಧಿಗೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ – ಸಿಸ್ಟರ್ ರೀಟಾ ಶರಲ್ ಕಿಲ್ಪಾಡಿ ಮುಲ್ಕಿ ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚಿಂತನ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು. ಗೈಡ್ಸ್ ವಿದ್ಯಾರ್ಥಿಗಳು ಸರ್ವಧರ್ಮ ಪ್ರಾರ್ಥನೆಯೊಂದಿಗೆ ಆರಂಭಿಸಿದರು. ಗೈಡ್ ವಿದ್ಯಾರ್ಥಿನಿಯಾಗಿರುವ ಅನಿಷ್ಕ ಎಲ್ಲರನ್ನು ಸ್ವಾಗತಿಸಿದರು. ಸ್ಕೌಟ್ ವಿದ್ಯಾರ್ಥಿಗಳಾಗಿರುವ ಇಸ್ಥಿಯಾಕ್ ಹಾಗೂ ರಿಯಾನ್ ಚಿಂತನ ದಿನಾಚರಣೆ ಮಹತ್ವವನ್ನು ತಿಳಿಸಿಕೊಟ್ಟರು. ಪಾಠದ ಜೊತೆಗೆ ಕಬ್ ಬುಲ್ ಬುಲ್ ಹಾಗೂ ಸ್ಕೌಟ್ ಗೈಡ್ಸ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ವಿದ್ಯಾರ್ಥಿಗಳು ಕ್ರಿಯಾಶೀಲರಾಗಿರಬೇಕೆಂದು […]

News

ಹೆರಿಗೆ ಬಳಿಕ ಬಾಣಂತಿ ಹೊಟ್ಟೆಯೊಳಗೆ ಬಾಕಿಯಾದ ಬಟ್ಟೆ – ವೈದ್ಯರ ನಿರ್ಲಕ್ಷ್ಯಕ್ಕೆ ಪತಿ ಆಕ್ರೋಶ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಸಿಝೇರಿಯನ್ ಹೆರಿಗೆಯಾದ ಬಳಿಕ ಬಾಣಂತಿಯ ಹೊಟ್ಟೆಯೊಳಗೆ ಬಟ್ಟೆಯ ತುಂಡು ಬಾಕಿಯಾಗಿದ್ದು, ಇದೀಗ ವೈದ್ಯರ ನಿರ್ಲಕ್ಷ್ಯದ ಬಗ್ಗೆ ಬಾಣಂತಿಯ ಪತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಬಾಣಂತಿ ಮಹಿಳೆ ಶರಣ್ಯಾ ಲಕ್ಷ್ಮೀ ಅವರ ಪತಿ ಗಗನ್ ದೀಪ್ ಬಿ. ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸೂಕ್ತ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡಲು ಆಗ್ರಹಿಸಿದ್ದಾರೆ. ಹೆರಿಗೆ ಸಂದರ್ಭ ಪುತ್ತೂರಿನ ಸಿಟಿ ಆಸ್ಪತ್ರೆಯ ವೈದ್ಯ ಡಾ. ಅನಿಲ್‌ರವರ ನಿರ್ಲಕ್ಷ್ಯದಿಂದ ಹೊಟ್ಟೆಯಲ್ಲಿ ಬಟ್ಟೆ ಬಾಕಿಯಾಗಿದ್ದು, ಈ ವಿಚಾರ ಅವರ […]

News

Twin Jubilee Celebration Honors the Legacy of Servant of God Raymond Francis Camillius Mascarenhas in Vamanjoor

On February 23, Saint Joseph the Worker Church in Vamanjoor Mangalore, became the focal point of a deeply significant celebration: the Twin Jubilee of Servant of God Raymond Francis Camillus Mascarenhas. This momentous occasion marked the 150th anniversary of his birth and the 125th anniversary of his priestly ordination, a testament to his enduring impact […]

News

ಕ್ಯಾಥೊಲಿಕ್ ಕ್ರಿಶ್ಚಿಯನ್ ಜಗತ್ ಗುರು ಪೋಪ್ ಫ್ರಾನ್ಸಿಸ್ ಆರೋಗ್ಯ ಸ್ಥಿತಿ ಗಂಭೀರ – ಪ್ರಪಂಚದಾದ್ಯಂತ ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆ

ವ್ಯಾಟಿಕನ್ :  ದೀರ್ಘಕಾಲದ ಅಸ್ತಮ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಕ್ರಿಶ್ಚಿಯನ್ ಜಗತ್ ಗುರು ಪೋಪ್ ಫ್ರಾನ್ಸಿಸ್ ಅವರ ಸ್ಥಿತಿ ಗಂಭೀರವಾಗಿದೆ. ಇನ್ನೂ ಪ್ರಜ್ಞಾಹೀನರಾಗಿರುವ 88 ಪ್ರಾಯದ ಪೋಪ್ ಫ್ರಾನ್ಸಿಸ್ ಅವರಿಗೆ ಉಸಿರಾಡಲಿಕ್ಕೆ ಸಹಾಯ ಮಾಡಲು ಹೆಚ್ಚಿನ ಪ್ರಮಾಣದ ಆಮ್ಲಜನಕವನ್ನು ನೀಡಲಾಗಿದೆ. ರಕ್ತ ಹೆಪ್ಪುಗಟ್ಟುವಿಕೆಗೆ ಮುಖ್ಯವಾದ ಪ್ಲೇಟ್‌ಲೆಟ್ ಎಣಿಕೆಗಳು ಕಡಿಮೆ ಇದ್ದ ಕಾರಣ ಅವರಿಗೆ ರಕ್ತ ವರ್ಗಾವಣೆಯನ್ನೂ ಮಾಡಲಾಯಿತು. “ಪೋಪ್ ರವರು ನಿನ್ನೆಗಿಂತ ಇಂದು ಹೆಚ್ಚು ನೋವಿನಿಂದ ಬಳಲುತ್ತಿದ್ದರೂ ದಿನವನ್ನು ತೋಳುಕುರ್ಚಿಯಲ್ಲಿ ಕಳೆದರು” ಎಂದು ವ್ಯಾಟಿಕನ್ ಹೇಳಿದೆ. ಫೆಬ್ರವರಿ 14 […]

News

ಜೇಸಿಐ ವಿಟ್ಲ ಆಶ್ರಯದಲ್ಲಿ ಬಂಟ್ವಾಳದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ “ಪರೀಕ್ಷೆ ಒಂದು ಹಬ್ಬ, ಬನ್ನಿ ಸಂಭ್ರಮಿಸೋಣ” ಕಾರ್ಯಕ್ರಮ

ಜೇಸಿಐ ವಿಟ್ಲ ಆಶ್ರಯದಲ್ಲಿ ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಬಂಟ್ವಾಳದಲ್ಲಿ “ಪರೀಕ್ಷೆ ಒಂದು ಹಬ್ಬ, ಬನ್ನಿ ಸಂಭ್ರಮಿಸೋಣ” ಕಾರ್ಯಕ್ರಮದಡಿಯಲ್ಲಿ ತರಬೇತಿಯನ್ನು ಫೆಬ್ರವರಿ 22ರಂದು ಶನಿವಾರ  ನಡೆಸಲಾಯಿತು. ಈ ಕಾರ್ಯಕ್ರಮವನ್ನು ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಎಚ್. ನರಸಿಂಹ ಭಟ್ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ಅತಿಥಿಯಾಗಿ ಆಗಮಿಸಿದ NSS ಅಧಿಕಾರಿ ಭಾಸ್ಕರ್ ಎಲ್. ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ರಾಷ್ಟ್ರೀಯ ತರಬೇತುದಾರರದ Jc Sen. ದೀಪಕ್ ರಾಜ್ ತರಬೇತಿಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಕಾರ್ಯಕ್ರದಲ್ಲಿ ಜೆಸಿ ಸದಸ್ಯರಾದ ಜೆಸಿ ಮಹೇಶ್, […]

You cannot copy content of this page